ಭಾರತದಲ್ಲಿ ಈ ಟೆಕ್ನಾಲಜಿಯಿಂದ 70,000 ಉದ್ಯೋಗಗಳು ಲಾಸ್‌

By Suneel
|

ಭಾರತದಲ್ಲೂ ಸಹ ಐಟಿ ಸಂಸ್ಥೆಗಳ ಶೀಘ್ರ ಬೆಳವಣಿಗೆ ಮತ್ತು ಇಂಟರ್ನೆಟ್‌ ಸೇವೆಗೆ ಸಂಬಂಧಿಸಿದ ಚಟುವಟಿಕೆಗಳಿಂದ ದೇಶವು 69,000 ಉದ್ಯೋಗಗಳನ್ನು ಕಳೆದುಕೊಳ್ಳಲಿದೆ ಎಂದು ಸಲಹಾ ಸಂಸ್ಥೆ ಜಿನ್ನೋವ್‌ ಹೇಳಿದೆ.

ಕೇವಲ ನೂರು ಉದ್ಯೋಗಗಳು ಮಾತ್ರವಲ್ಲ ಸಾವಿರಾರು ಉದ್ಯೋಗಗಳನ್ನು ದೇಶವು ಕಳೆದುಕೊಳ್ಳಲಿದ್ದು, 'ಮಾಹಿತಿ ತಂತ್ರಜ್ಞಾನ ಕಾರಣದಿಂದ ಮತ್ತು ಪ್ರಧಾನವಾಗಿ ಕೌಶಲ್ಯ ರಹಿತ ಕಾರ್ಮಿಕರ ಮೇಲೆ ಪರಿಣಾಮ ಬೀರಲಿದೆ' ಎಂದು ತಜ್ಞರು ಹೇಳಿದ್ದಾರೆ. ಅಂತೂ ಇಂತೂ ಟೆಕ್ನಾಲಜಿಯ ಹೆಚ್ಚು ಅವಲಂಬನೆಯಿಂದ ಒಂದು ದೇಶದ ಜನರ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಭಾರತ ದೇಶವು 70,000 ಉದ್ಯೋಗಗಳನ್ನು ಕಳೆದುಕೊಳ್ಳುತ್ತಿರುವುದು ಸಾಕ್ಷಿಯಾಗಿದೆ. ಈ ಬಗ್ಗೆ ಸಲಹಾ ಸಂಸ್ಥೆ ಮತ್ತು ಜಜ್ಞರು ಹೇಳಿರುವ ಮುಖ್ಯ ಅಂಶಗಳು ಏನು ಎಂಬುದನ್ನು ಪ್ರತಿಯೊಬ್ಬರು ತಿಳಿಯಲೇ ಬೇಕಿದೆ. ಮಾಹಿತಿಗಾಗಿ ಫೋಟೋ ಕ್ಲಿಕ್‌ ಮಾಡಿ ಲೇಖನ ಓದಿರಿ.

ಮೊಬೈಲ್‌ ನಂಬರ್‌ಗಳು ನೆನಪಾಗದಿರಲು ಕಾರಣ ಏನು ಗೊತ್ತೇ?

ಇಂಟರ್ನೆಟ್ ಆಫ್‌ ಥಿಂಗ್ಸ್‌ ಟೆಕ್ನಾಲಜಿ

ಇಂಟರ್ನೆಟ್ ಆಫ್‌ ಥಿಂಗ್ಸ್‌ ಟೆಕ್ನಾಲಜಿ

ಪ್ರಸ್ತುತದಲ್ಲಿ ಬೆಳವಣಿಗೆ ಹೊಂದುತ್ತಿರುವ ಇಂಟರ್ನೆಟ್‌ ಆಫ್‌ ಥಿಂಗ್ಸ್‌ ಟೆಕ್ನಾಲಜಿಯಿಂದ ಭಾರತ ದೇಶದಲ್ಲಿ 2021 ರ ವೇಳೆಗೆ 120,000 ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ.

ಉದ್ಯೋಗಗಳು

ಉದ್ಯೋಗಗಳು

'5 ಅವಧಿಯಲ್ಲಿ 94,000 ಉದ್ಯೋಗಗಳು ನಿರ್ಮೂಲನಗೊಳ್ಳಲಿದ್ದು, ಕೇವಲ 25,000 ಉದ್ಯೋಗಗಳು ಮಾತ್ರ ಕ್ರಿಯೇಟ್‌ ಆಗಲಿವೆ' ಎಂದು ಸಲಹಾ ಸಂಸ್ಥೆ ಜಿನ್ನೋವ್‌ನ ಪ್ರಧಾನರಾದ 'ಹಾರ್ದಿಕ್‌ ತಿವಾರಿ' ರವರು ಹೇಳಿದ್ದಾರೆ.

ಇಂಟರ್ನೆಟ್‌ ಆಫ್‌ ಥಿಂಗ್ಸ್‌

ಇಂಟರ್ನೆಟ್‌ ಆಫ್‌ ಥಿಂಗ್ಸ್‌

'ಇಂಟರ್ನೆಟ್‌ ಆಫ್‌ ಥಿಂಗ್ಸ್' ಎಂಬುದು ಸೆನ್ಸಾರ್‌ ಮತ್ತು ಚಿಪ್‌ಗಳ ಯಂತ್ರೋಪಕರಣಗಳ ಬಗ್ಗೆ ವಿವರಿಸಲು ಬಳಸುವ ಪದವಾಗಿದ್ದು, ಇವುಗಳು ಇಂಟರ್ನೆಟ್‌ ಮೂಲಕ ನಿಯಂತ್ರಣ ಹೊಂದಲು ಅವಕಾಶ ನೀಡುತ್ತವೆ.

ಉದ್ಯೋಗಿಗಳು

ಉದ್ಯೋಗಿಗಳು

ಆಫೀಸ್‌ ಆಡಳಿತ, ಸಹಾಯಕ ಸಿಬ್ಬಂದಿ ಮತ್ತು ನಿರ್ವಹಣೆ ಉದ್ಯೋಗವನ್ನು ನಿರ್ವಹಿಸುತ್ತಿರುವ ಜನರ ಬದಲಾಗಿ ಅವರ ಕೆಲಸವನ್ನು ಟೆಕ್ನಾಲಜಿ ನಿರ್ವಹಿಸಲಿದೆ. ಹೊಸ ಉದ್ಯೋಗಗಳು 'ಇಂಟರ್ನೆಟ್‌ ಆಫ್‌ ಥಿಂಗ್ಸ್' ಪ್ರಾಡಕ್ಟ್‌ ಮ್ಯಾನೇಜರ್‌, ರೊಬೋಟ್ ಸಂಯೋಜಕರು, ಕೈಗಾರಿಕಾ ಪ್ರೋಗ್ರಾಮರ್ ಮತ್ತು ನೆಟ್‌ವರ್ಕ್‌ ಎಂಜಿನಿಯರ್‌ಗಳಿಗಾಗಿ ಕ್ರಿಯೇಟ್‌ ಆಗಲಿವೆ.

ಹೊಸ ಟೆಕ್ನಾಲಜಿ

ಹೊಸ ಟೆಕ್ನಾಲಜಿ

ಹೊಸ ಟೆಕ್ನಾಲಜಿಗಳು ಕೆಲವು ಪ್ರದೇಶಗಳಲ್ಲಿ ಉದ್ಯೋಗವನ್ನು ಹೆಚ್ಚಾಗಿ ಕುಗ್ಗಿಸಲಿವೆ. ಕಳೆದ ಜುಲೈನಲ್ಲಿ ಸಂಶೋಧನಾ ಸಂಸ್ಥೆ ಎಚ್‌ಎಫ್‌ಎಸ್‌ 'ಮಾಹಿತಿ ತಂತ್ರಜ್ಞಾನ ಸೇವೆಯ ಉದ್ಯಮವು 5 ವರ್ಷಗಳಲ್ಲಿ 6.4 ಲಕ್ಷ ಕಡಿಮೆ ಕೌಶಲ್ಯದ ಉದ್ಯೋಗಗಳನ್ನು ಕುಗ್ಗಿಸುತ್ತದೆ ಎಂದು ಭವಿಷ್ಯದ ಬಗ್ಗೆ ಹೇಳಿತ್ತು.

ಎಚ್‌ಎಫ್‌ಎಸ್‌

ಎಚ್‌ಎಫ್‌ಎಸ್‌

ಸಂಶೋಧನಾ ಸಂಸ್ಥೆ ಎಚ್‌ಎಫ್‌ಎಸ್‌ ವರದಿ ಪ್ರಕಾರ 'ಕಡಿಮೆ ಕೌಶಲ್ಯ'ದ ಉದ್ಯೋಗಳು ಶೇಕಡ 30 ಕುಗ್ಗಲಿವೆ, 'ಮಧ್ಯಮ ಕೌಶಲ್ಯ' ಉದ್ಯೋಗಗಳು ಶೇಕಡ 8 ರಷ್ಟು ಮಾತ್ರ ಹೆಚ್ಚಾಗಲಿವೆ ಹಾಗೂ 'ಉನ್ನತ ಕೌಶಲ್ಯ'ದ ಉದ್ಯೋಗಗಳು ಶೇಕಡ 56 ರಷ್ಟು ಹೆಚ್ಚಾಗಲಿವೆ".

ಭಾರತೀಯ ಸಂಸ್ಥೆಗಳು

ಭಾರತೀಯ ಸಂಸ್ಥೆಗಳು

ಉದ್ಯೋಗಗಳನ್ನು ಕಳೆದುಕೊಳ್ಳುವಿಕೆ ಬಗ್ಗೆ ಒಟ್ಟಾರೆ ಹೇಳುವುದಾದರೆ, ಭಾರತೀಯ ಸಂಸ್ಥೆಗಳು 'ಇಂಟರ್ನೆಟ್‌ ಆಫ್‌ ಥಿಂಗ್ಸ್‌' ಟೆಕ್ನಾಲಜಿಯ ಉಪಯೋಗಗಳನ್ನು ಪಡೆಯಲು ನಿರೀಕ್ಷೆ ಹೊಂದಿವೆ. ಪ್ರಸ್ತುತದಲ್ಲಿ ಈಗಾಗಲೇ ಭಾರತೀಯ ಸಂಸ್ಥೆಗಳು ಶೇಕಡ 40 ರಷ್ಟು 'ಇಂಟರ್ನೆಟ್‌ ಆಫ್‌ ಥಿಂಗ್ಸ್‌' ಸೇವೆ ಮಾರುಕಟ್ಟೆಯನ್ನು ಹೊಂದಿದ್ದು, 2021 ರ ವೇಳೆಗೆ ಶೇಕಡ 44 ಮಾರುಕಟ್ಟೆ ಶೇರ್‌ನ ನೀರಿಕ್ಷೆ ಹೊಂದಿದೆ.

ಸರ್ಕಾರದ ಕೊಡುಗೆ

ಸರ್ಕಾರದ ಕೊಡುಗೆ

ಅಂದಹಾಗೆ ಸರ್ಕಾರದ ಕೊಡುಗೆ ಶೇಕಡ 20 ದೇಶಿಯ 'ಇಂಟರ್ನೆಟ್‌ ಆಫ್‌ ಥಿಂಗ್ಸ್‌' ಮಾರುಕಟ್ಟೆಯಲ್ಲಿದೆ. ಆದರೆ ಭಾರತೀಯ ಸಂಸ್ಥೆಗಳು ಶೇಕಡ 80 ರಷ್ಟು ವೆಚ್ಚವನ್ನು ಬರಿಸುತ್ತಿವೆ.

Best Mobiles in India

Read more about:
English summary
This tech will kill almost 70,000 jobs in India. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X