ಮೈಕ್ರೋಸಾಫ್ಟ್ ಟೀಮ್‌ನಲ್ಲಿ ಹೊಸ ಫೀಚರ್ಸ್; ಬಳಕೆದಾರರಿಗೆ ಮತ್ತಷ್ಟು ಅನುಕೂಲ

|

ಕಂಪ್ಯೂಟರ್ ಸಾಫ್ಟ್‌ವೇರ್, ಗ್ರಾಹಕ ಎಲೆಕ್ಟ್ರಾನಿಕ್ಸ್, ಪರ್ಸನಲ್ ಕಂಪ್ಯೂಟರ್‌ ಕ್ಷೇತ್ರದಲ್ಲಿ ಮೈಕ್ರೋಸಾಫ್ಟ್ ಕಾರ್ಪೊರೇಶನ್ ಜನಪ್ರಿಯತೆ ಗಳಿಸಿಕೊಂಡಿದ್ದು, ಇದೀಗ ಮೈಕ್ರೋಸಾಫ್ಟ್ ಕಾರ್ಪೊರೇಶನ್‌ ಮೈಕ್ರೋಸಾಫ್ಟ್ ಟೀಮ್‌ನಲ್ಲಿ ಟುಗೆದರ್ ಮೋಡ್, ವಿಡಿಯೋ ಕ್ಲಿಪ್‌ಗಳನ್ನು ರಚಿಸುವ ಸಾಮರ್ಥ್ಯ ಸೇರಿದಂತೆ ಇನ್ನಿತರೆ ಫೀಚರ್ಸ್ ಅನ್ನು ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್‌ಗಳು ಪ್ಲಾಟ್‌ಫಾರ್ಮ್‌ ಅನ್ನು ಇನ್ನಷ್ಟು ಆಕರ್ಷಕವಾಗವಂತೆ ಮಾಡಲಿವೆ.

ಮೈಕ್ರೋಸಾಫ್ಟ್

ಹೌದು, ಮೈಕ್ರೋಸಾಫ್ಟ್ ತನ್ನ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಮೈಕ್ರೋಸಾಫ್ಟ್ ಟೀಮ್‌ಗೆ ಹೊಸ ನವೀಕರಣವನ್ನು ಬಿಡುಗಡೆ ಮಾಡಿದೆ. ಈ ನವೀಕರಣವು ಟುಗೆದರ್ ಮೋಡ್‌ಗೆ ಸುಧಾರಣೆಗಳು, ಟೀಮ್‌ನಲ್ಲಿ ವಿಡಿಯೋ ಕ್ಲಿಪ್‌ಗಳನ್ನು ರಚಿಸುವ ಸಾಮರ್ಥ್ಯ, ಮೈಕ್ರೋಸಾಫ್ಟ್ 365 ನ ಸಂಪರ್ಕಿತ ಟೆಂಪ್ಲೇಟ್‌ಗಳಿಗೆ ಬೆಂಬಲವನ್ನು ನೀಡುವ ಜೊತೆಗೆ ಪ್ರಮುಖ ಫೀಚರ್ಸ್‌ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಎಲ್ಲಾ ಹೊಸ ಫೀಚರ್ಸ್‌ನಲ್ಲಿ ಬಳಕೆದಾರರು ಪರಸ್ಪರ ಉತ್ತಮವಾಗಿ ಸಂಯೋಜಿಸಲು ಮತ್ತು ಸಹಭಾಗಿಗಳಾಗಲು ಸಹಾಯ ಮಾಡುವ ಗುರಿಯನ್ನು ಮೈಕ್ರೋಸಾಫ್ಟ್ ಹೊಂದಿದೆ ಎಂದು ತಿಳಿಸಿದೆ.

ಟುಗೆದರ್ ಮೋಡ್‌ನಲ್ಲಿ ಸುಧಾರಣೆ

ಟುಗೆದರ್ ಮೋಡ್‌ನಲ್ಲಿ ಸುಧಾರಣೆ

ಟುಗೆದರ್ ಮೋಡ್ ಫೀಚರ್ಸ್‌ನಲ್ಲಿ AI ವಿಭಜನಾ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಸಭೆ ಅಥವಾ ತರಗತಿಯಲ್ಲಿ ಎಲ್ಲರೊಂದಿಗೆ ಒಂದೇ ಕೋಣೆಯಲ್ಲಿ ಕುಳಿತಿರುವಂತೆ ಭಾಸವಾಗುವ ಅನುಭವನ್ನು ನೀಡಲಿದೆ. ಟುಗೆದರ್ ಮೋಡ್‌ನ ಹೊಸ ಫೀಚರ್ಸ್‌ನಲ್ಲಿ ಸಭೆಯಲ್ಲಿ ಭಾಗವಹಿಸುವವರಿಗೆ ಸ್ಥಳವನ್ನು ನಿಯೋಜಿಸಲು ಅನುವು ಮಾಡಿಕೊಡುತ್ತದೆ. ಇನ್ನು ಬಳಕೆದಾರರು ಈ ಮಾರ್ಗವನ್ನು ಅನುಸರಿಸುವ ಮೂಲಕ ಟುಗೆದರ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು.

ಪ್ಲಾಟ್‌ಫಾರ್ಮ್‌

ಮೊದಲು ಟೀಮ್‌ ಪ್ಲಾಟ್‌ಫಾರ್ಮ್‌ನಲ್ಲಿ 'ಪ್ರೊಫೈಲ್' ಐಕಾನ್ ಕ್ಲಿಕ್ ಮಾಡಿ ನಂತರ 'ಸೆಟ್ಟಿಂಗ್‌' ವಿಭಾಗ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿದರೆ 'ಟರ್ನ್ ಆನ್ ನ್ಯೂ ಮೀಟಿಂಗ್ ಎಕ್ಸ್ಪೀರಿಯೆನ್ಸ್' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಹೊಸ ಫೀಚರ್ಸ್ ಲಭ್ಯವಾಗುತ್ತದೆ.

ವಿಡಿಯೋ ಕ್ಲಿಪ್‌ಗಳ ರಚನೆ

ವಿಡಿಯೋ ಕ್ಲಿಪ್‌ಗಳ ರಚನೆ

ಈ ಹಿಂದೆ ಮೈಕ್ರೋಸಾಫ್ಟ್ ಟೀಮ್‌ ಬಳಕೆದಾರರು ಚಾಟ್‌ ಮಾಡುವಾಗ ಹಾಗೂ ಸಭೆಗಳಲ್ಲಿ ಹಾಜರಿರುವಾಗ ಫೋಟೋಗಳು, ವಿಡಿಯೋ, GIF ಗಳು ಮತ್ತು ಸ್ಟಿಕ್ಕರ್‌ಗಳನ್ನು ಶೇರ್‌ ಮಾಡಿಕೊಳ್ಳಬಹುದಾಗಿತ್ತು. ಆದರೆ, ವಿಡಿಯೋಗಳನ್ನು ಶೇರ್‌ ಮಾಡಲು ಅವಕಾಶ ಇರಲಿಲ್ಲ. ಈಗ ಬಳಕೆದಾರರು ವಿಡಿಯೋ ಕ್ಲಿಪ್‌ಗಳನ್ನು ರಚಿಸಬಹುದಾದ ಆಯ್ಕೆಯನ್ನು ಪಡೆಯಲಿದ್ದಾರೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ಡೆಸ್ಕ್‌ಟಾಪ್‌ನಲ್ಲಿ ಮಾತ್ರ ಲಭ್ಯ

ಡೆಸ್ಕ್‌ಟಾಪ್‌ನಲ್ಲಿ ಮಾತ್ರ ಲಭ್ಯ

ಇನ್ನು ಈ ಫೀಚರ್ಸ್‌ ಮೂಲಕ ಚಾಟ್‌ನಲ್ಲಿ ವಿಡಿಯೋ ಕ್ಲಿಪ್ ಅನ್ನು ರೆಕಾರ್ಡ್ ಮಾಡಲು, ಕಳುಹಿಸಲು ಮತ್ತು ವೀಕ್ಷಿಸಲು ಸಾಧ್ಯವಾಗುತ್ತದೆ. ಮತ್ತೊಂದೆಡೆ, ವಿಡಿಯೋ ಕ್ಲಿಪ್ ಸ್ವೀಕರಿಸುವವರು ಚಾಟ್ ಸಂದೇಶ ಅಥವಾ ಅವರ ಸ್ವಂತ ವಿಡಿಯೋ ಕ್ಲಿಪ್‌ನೊಂದಿಗೆ ಪ್ರತ್ಯುತ್ತರಿಸಲು ಅನುವು ಮಾಡಿಕೊಡಲಾಗಿದೆ. ಹಾಗೆಯೇ ಮೈಕ್ರೋಸಾಫ್ಟ್‌ನ ಈ ಫೀಚರ್ಸ್‌ ಪ್ರಸ್ತುತವಾಗಿ ಡೆಸ್ಕ್‌ಟಾಪ್‌ನಲ್ಲಿ ಲಭ್ಯವಿದ್ದು, ಈ ವರ್ಷದ ಅಂತ್ಯದ ವೇಳೆಗೆ ಮೊಬೈಲ್‌ಗೂ ಅನ್ವಯಿಸಲಾಗುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ.

ಶೇರ್‌ ಮಾಡಿದ ಕಂಟೆಂಟ್‌ಅನ್ನು ಪ್ರತ್ಯೇಕ ವಿಂಡೋದಲ್ಲಿ ನೋಡಿ

ಶೇರ್‌ ಮಾಡಿದ ಕಂಟೆಂಟ್‌ಅನ್ನು ಪ್ರತ್ಯೇಕ ವಿಂಡೋದಲ್ಲಿ ನೋಡಿ

ಹೊಸ ಅಪ್‌ಡೇಟ್‌ ನಲ್ಲಿ ಶೇರ್‌ ಮಾಡಲಾದ ಮೀಟಿಂಗ್‌ನ ವಿಷಯವನ್ನು ಪ್ರತ್ಯೇಕ ವಿಂಡೋದಲ್ಲಿ ಪಾಪ್ ಔಟ್ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಈ ಫೀಚರ್ಸ್‌ನಿಂದಾಗಿ ಶೇರ್‌ ಮಾಡಲಾದ ಕಂಟೆಂಟ್‌ ಹಾಗೂ ಮೀಟಿಂಗ್‌ನಲ್ಲಿ ಭಾಗವಹಿಸುವವರನ್ನು ಸುಲಭವಾಗಿ ವೀಕ್ಷಣೆ ಮಾಡಬಹುದಾಗಿದೆ.

ಮೈಕ್ರೋಸಾಫ್ಟ್ 365 ಯ ಸಂಪರ್ಕಿತ ಟೆಂಪ್ಲೇಟ್‌ಗಳಿಗೆ ಬೆಂಬಲ

ಮೈಕ್ರೋಸಾಫ್ಟ್ 365 ಯ ಸಂಪರ್ಕಿತ ಟೆಂಪ್ಲೇಟ್‌ಗಳಿಗೆ ಬೆಂಬಲ

ಮೈಕ್ರೋಸಾಫ್ಟ್ 365 ಯ ಸಂಪರ್ಕಿತ ಟೆಂಪ್ಲೇಟ್‌ಗಳಿಗೆ ಮೈಕ್ರೋಸಾಫ್ಟ್ ಬೆಂಬಲ ನೀಡಲು ಮುಂದಾಗಿದೆ. ಅದರಂತೆ ಬಳಕೆದಾರರು ಡೀಫಾಲ್ಟ್ ಟೆಂಪ್ಲೇಟ್ ಅನ್ನು ಬಳಸಿಕೊಂಡು ಹೊಸ ತಂಡವನ್ನು ರಚಿಸಿದಾಗ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಚಾನಲ್‌ಗಳು ಮತ್ತು ಆಪ್‌ಗಳು, ಸಂಪರ್ಕಿತ ಶೇರ್‌ಪಾಯಿಂಟ್‌ನ ಟೆಂಪ್ಲೇಟ್ ಸ್ವಯಂಚಾಲಿತವಾಗಿ ಅನ್ವಯ ಆಗುತ್ತವೆ.

Best Mobiles in India

English summary
Microsoft Corporation is a multinational technology corporation. Meanwhile, Microsoft has introduced new features to Microsoft Teams.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X