ಟೆಕ್ ಈವೆಂಟ್ IFA 2015 ರ ವಿಶೇಷತೆಗಳೇನು?

Written By:

ಅತಿ ದೊಡ್ಡ ಟೆಕ್ ಈವೆಂಟ್ - IFA 2015 ನೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಬರ್ಲಿನ್‌ನಲ್ಲಿ ಸಪ್ಟೆಂಬರ್ 4 ರಿಂದ 9 ರವರೆಗೆ ನಡೆಯಲಿರುವ ಈ ಅತಿದೊಡ್ಡ ಟೆಕ್ ಈವೆಂಟ್‌ನಲ್ಲಿ ಬ್ರ್ಯಾಂಡ್ ಫೋನ್‌ಗಳು ಹೊಸ ಇತಿಹಾಸವನ್ನು ಬರೆಯಲಿರುವುದು ಖಾತ್ರಿಯಾಗಿದೆ. ಸೋನಿ, ಸ್ಯಾಮ್‌ಸಂಗ್, ಆಪಲ್, ಮೈಕ್ರೋಸಾಫ್ಟ್ ಹೀಗೆ ಹೆಚ್ಚಿನ ಬ್ರ್ಯಾಂಡ್ ಫೋನ್‌ಗಳು ಈ ಈವೆಂಟ್‌ನಲ್ಲಿ ತಮ್ಮ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಲಾಂಚ್ ಮಾಡಲಿವೆ.

ಓದಿರಿ:ಹೊಸ ಫೋನ್ ಖರೀದಿಯೇ? ಇಲ್ಲಿದೆ ಸಲಹೆಗಳು

ಕೆಳಗಿನ ಸ್ಲೈಡರ್‌ಗಳಲ್ಲಿ ಆ ಡಿವೈಸ್‌ಗಳು ಯಾವುದು ಎಂಬುದನ್ನು ಅವಲೋಕಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಎಕ್ಸ್‌ಪೀರಿಯಾ Z5

IFA 2015

ಪ್ರತೀ ವರ್ಷವೂ ಸೋನಿಯಿಂದ IFA ಗಾಗಿ ನಾವು ಏನಾದರೂ ನಿರೀಕ್ಷಿಸಬಹುದು. ಎಕ್ಸ್‌ಪೀರಿಯಾ Z5 ವನ್ನು ಸೋನಿ ಅನ್ನು ಈವೆಂಟ್‌ನಲ್ಲಿ ಲಾಂಚ್ ಮಾಡುವ ಉದ್ದೇಶವನ್ನು ಸೋನಿ ಹೊಂದಿದ್ದು ಇದರೊಂದಿಗೆ ಇತರ ಉತ್ಪನ್ನಗಳನ್ನು ಕಂಪೆನಿಯಿಂದ ನಿರೀಕ್ಷಸಬಹುದಾಗಿದೆ.

ಎಲ್‌ಜಿ ಜಿ4 ನೋಟ್

IFA 2015

"ಸೂಪರ್ ಪ್ರೀಮಿಯಮ್ ಸ್ಮಾರ್ಟ್‌ಫೋನ್" ನಲ್ಲಿ ಎಲ್‌ಜಿ ಕಾರ್ಯನಿರ್ವಹಿಸುತ್ತಿದೆ. ಎಲ್‌ಜಿ ಜಿ4 ಅನ್ನು 2015 ರ ಕೊನೆಯಲ್ಲಿ ಘೋಷಿಸಲಾಗುತ್ತಿದೆ.

ಸ್ಯಾಮ್‌ಸಂಗ್ ಒ ಲೈನ್‌ಅಪ್

IFA 2015

IFA 2015 ಕ್ಕೆ ಯಾವುದೇ ಯೋಜನೆಯನ್ನು ಸ್ಯಾಮ್‌ಸಂಗ್ ಹಾಕಿಕೊಂಡಿಲ್ಲ, ಸಪ್ಟೆಂಬರ್ 3 ರಂದು ಪ್ರೆಸ್ ಬರ್ಲಿನ್‌ನ IFA ದಲ್ಲಿ ಪ್ರೆಸ್ ಕಾನ್ಫರೆನ್ಸ್ ನಡೆಸುವ ಮೂಲಕ ತನ್ನ ಯೋಜನೆಯನ್ನು ಇದು ಪ್ರಸ್ತುತಪಡಿಸಲಿದೆ.

ಎಚ್‌ಟಿಸಿ 02

IFA 2015

ಎಚ್‌ಟಿಸಿ ಗಂಭೀರ ಸಮಯವನ್ನು ಎದುರಿಸುತ್ತಿದೆ. ಇದೇ ಸಮಯದಲ್ಲಿ ಎಚ್‌ಟಿಸಿ 02 IFA ದಲ್ಲಿ ಬಿಡುಗಡೆಗೊಳ್ಳುತ್ತಿದೆ.

ಮೈಕ್ರೋಸಾಫ್ಟ್ ಲೂಮಿಯಾ

IFA 2015

ಮೈಕ್ರೋಸಾಫ್ಟ್ ಇತ್ತೀಚೆಗೆ ತಾನೇ ಡೆಸ್ಕ್‌ಟಾಪ್‌ಗೆ ಅತ್ಯಾಧುನಿಕ ವಿಂಡೋಸ್ ಪ್ಲಾಟ್‌ಫಾರ್ಮ್ ಅನ್ನು ಲಾಂಚ್ ಮಾಡಿದೆ. ಇನ್ನು ವಿಂಡೋಸ್ 10 ಇರುವ ಸ್ಮಾರ್ಟ್‌ಫೋನ್‌ಗಳನ್ನು IFA ದಲ್ಲಿ ಅನಾವರಣಗೊಳಿಸಬಹುದು ಎಂಬುದು ನಮ್ಮ ನಂಬಿಕೆಯಾಗಿದೆ.

ಹುವಾಯಿ ಮೇಟ್ ಎಸ್

IFA 2015

IFA ದಲ್ಲಿ ಭಾಗವಹಿಸುವ ಕಂಪೆನಿ ಹುವಾಯಿ ಕೂಡ ಆಗಿದ್ದು ಮೇಟ್ 7ಎಸ್ ಮತ್ತು ಮೇಟ್ 8ಎಸ್ ಮೂಲಕ ಹುವಾಯಿ ಈವೆಂಟ್‌ನಲ್ಲಿ ಕಂಗೊಳಿಸಲಿದೆ.

ಲೆನೊವೊ ವೈಬ್

IFA 2015

ವೈಬ್ ಎಸ್1 ಹೆಸರಿನ ಸ್ಮಾರ್ಟ್‌ಫೋನ್‌ನೊಂದಿಗೆ ಲೆನೊವೊ ಕಾರ್ಯನಿರ್ವಹಿಸುತ್ತಿದೆ. ಇದು ಮುಂಭಾಗ ಕ್ಯಾಮೆರಾವನ್ನು ಕೂಡ ಹೊಂದಿದೆ.

ಏಸರ್ ವಿಂಡೋಸ್ 10

IFA 2015

ಪ್ರಸಿದ್ಧ ಟೆಕ್ ದೈತ್ಯರುಗಳಲ್ಲಿ ಒಂದಾಗಿರುವ ಏಸರ್ IFA ದಲ್ಲಿ ಮೋಡಿ ಮಾಡುವ ಉತ್ಪನ್ನಗಳನ್ನು ಲಾಂಚ್ ಮಾಡಲಿದೆ. ವಿಂಡೋಸ್ 10 ಚಾಲನೆಯಲ್ಲಿರುವ ಫೋನ್‌ಗಳನ್ನು ಏಸರ್ ಬಿಡುಗಡೆ ಮಾಡಬಹುದು ಎಂಬ ನಂಬಿಕೆ ಕೂಡ ಇದೆ.

ಆಪಲ್ ಐಫೋನ್ 6ಎಸ್

IFA 2015

ವಾರ್ಷಿಕ ಕೀನೋಟ್ ಈವೆಂಟ್ ಅನ್ನು ಸಪ್ಟೆಂಬರ್ 9 ಕ್ಕೆ ಆಪಲ್ ನಿರ್ಧರಿಸಿದೆ. ಮುಂದಿನ ಜನರೇಶನ್ ಐಫೋನ್ 6ಎಸ್ ಅನ್ನು ಕಂಪೆನಿ ಈ ಈವೆಂಟ್‌ನಲ್ಲಿ ಬಿಡುಗಡೆ ಮಾಡಲಿದೆ.

ಆಪಲ್ ಐಫೋನ್ 6 ಎಸ್ ಪ್ಲಸ್

IFA 2015

ಸಪ್ಟೆಂಬರ್ 9 ರ ಈವೆಂಟ್‌ನಲ್ಲಿಯೇ, ದೊಡ್ಡ ಮಾಡೆಲ್‌ನೊಂದಿಗೆ ಹೆಚ್ಚು ಸುಧಾರಿತ ಕಾರ್ಯಕ್ಷಮತೆ ಮತ್ತು ಉತ್ತಮ ಬ್ಯಾಟರಿ ಬ್ಯಾಕಪ್ ಉಳ್ಳ ಐಫೋನ್ 6ಎಸ್ ಪ್ಲಸ್‌ ಅನ್ನು ಕಂಪೆನಿ ಘೋಷಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We have seen many great smartphone launched so far this year and smartphone makers like Sony, Samsung, Apple, Microsoft and many others are expected to announce most exciting in September. We have jotted down all the smartphone that are planned to be launched next month.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot