ಫೋನ್ ಚಾರ್ಜಿಂಗ್ ಸಮಸ್ಯೆಯೇ ಇಲ್ಲಿದೆ ಪರಿಹಾರಗಳು

Posted By:

ಫೋನ್ ಚಾರ್ಜ್ ಮಾಡುವುದು ಎಂದರೆ ಅದಕ್ಕಿಂತ ತಲೆನೋವಿನ ಸಂಗತಿ ಬೇರೊಂದಿಲ್ಲ ಎಂದೇ ಹೇಳಬಹುದು. ಇನ್ನು ನೀವು ಪ್ರಯಾಣದಲ್ಲಿರುವಾಗ ಚಾರ್ಜಿಂಗ್ ಸಮಸ್ಯೆ ನಿಮ್ಮನ್ನು ಅಗಾಧವಾಗಿ ಕಾಡುತ್ತದೆ. ಪವರ್ ಬ್ಯಾಕಪ್‌ಗಳು ನಿಮ್ಮ ಈ ಸಮಸ್ಯೆಯನ್ನು ದೂರಾಗಿಸುವುದು ಖಂಡಿತ. ಅದಾಗ್ಯೂ ಫೋನ್ ಚಾರ್ಜಿಂಗ್ ಮಾಡುವುದು ತಲೆನೋವಿನ ಸಂಗತಿ ಎಂದು ನೀವು ಭಾವಿಸಿಕೊಂಡಿದ್ದಲ್ಲಿ ನಿಮ್ಮ ತಲೆನೋವನ್ನು ಕಡಿಮೆಗೊಳಿಸುವ ಕೆಲವು ಪರಿಹಾರಗಳೊಂದಿಗೆ ನಾವು ಬಂದಿರುವೆವು.

ಓದಿರಿ: ನಿಮ್ಮನ್ನು ಫೇಸ್‌ಬುಕ್ ತ್ಯಜಿಸುವಂತೆ ಮಾಡುವ ಅಂಶಗಳು

ಫೋನ್ ಚಾರ್ಜ್ ಮಾಡುವಾಗ ನೀವು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಫೋನ್ ಚಾರ್ಜ್ ಮಾಡುವುದನ್ನು ಬಹುಬೇಗನೇ ನಿಮಗೆ ಮುಗಿಸಬಹುದಾಗಿದೆ ಮತ್ತು ಯಾವುದೇ ತೊಂದರೆಯಿಲ್ಲದೆ ಫೋನ್ ಚಾರ್ಜಿಂಗ್ ಕೆಲಸವನ್ನು ಮುಗಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಚಾರ್ಜ್

ಫೋನ್ ಚಾರ್ಜ್

ವಾಲ್‌ ಸಾಕೆಟ್

ನೀವು ತುರ್ತಾಗಿ ಎಲ್ಲಿಗಾದರೂ ಹೋಗಬೇಕು ಎಂದಾದಲ್ಲಿ ಫೋನ್ ಚಾರ್ಜ್ ಮಾಡಲು ವಾಲ್ ಸಾಕೆಟ್ ಅನ್ನೇ ಬಳಸಿ ಲ್ಯಾಪ್‌ಟಾಪ್‌ನಿಂದ ಚಾರ್ಜ್ ಮಾಡಬೇಡಿ.

ಯುಎಸ್‌ಬಿ ಅಡಾಪ್ಟರ್

ಯುಎಸ್‌ಬಿ ಅಡಾಪ್ಟರ್

ಹೆಚ್ಚು ಪವರ್ ಉಳ್ಳ ಯುಎಸ್‌ಬಿ ಅಡಾಪ್ಟರ್ ಬಳಸಿ

ಉತ್ತಮ ಗುಣಮಟ್ಟದ ಯುಎಸ್‌ಬಿ ಅಡಾಪ್ಟರ್ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎಂದಾದಲ್ಲಿ ನಿಮ್ಮ ಫೋನ್‌ ಎಷ್ಟು ಪವರ್ ಹ್ಯಾಂಡಲ್ ಮಾಡಬಲ್ಲುದೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇನ್ನು ಅಡಾಪ್ಟರ್ ವಿಶೇಷತೆಗಳನ್ನು ಕುರಿತು ತಿಳಿದುಕೊಳ್ಳಿ. ಮತ್ತು ಅತ್ಯುತ್ತಮವಾದುದನ್ನು ಆರಿಸಿಕೊಳ್ಳಿ.

ಬ್ಯಾಟರಿ ಪ್ಯಾಕ್

ಬ್ಯಾಟರಿ ಪ್ಯಾಕ್

ಬ್ಯಾಟರಿ ಪ್ಯಾಕ್ ಚಾರ್ಜ್ ಮಾಡಿಕೊಳ್ಳಿ

ನಿರ್ದಿಷ್ಟ ಪೋರ್ಟೇಬಲ್ ಬ್ಯಾಟರಿ ಪ್ಯಾಕ್ಸ್ ಹೆಚ್ಚು ವೇಗವಾಗಿ ಚಾರ್ಜ್ ಮಾಡಬಲ್ಲುದು.

ಫ್ಲೈಟ್ ಮೋಡ್‌

ಫ್ಲೈಟ್ ಮೋಡ್‌

ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿರಿಸಿ

ಇನ್ನು ತಕ್ಷಣವೇ ನಿಮ್ಮ ಫೋನ್ ಚಾರ್ಜ್ ಆಗಬೇಕು ಎಂದಾದಲ್ಲಿ ಅದನ್ನು ಫ್ಲೈಟ್ ಮೋಡ್‌ನಲ್ಲಿರಿಸಿ.

ಇಂಟರ್ನೆಟ್

ಇಂಟರ್ನೆಟ್

ಇಂಟರ್ನೆಟ್ ಕಡಿತಗೊಳಿಸಿ

ಫೋನ್ ಚಾರ್ಜಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಇಂಟರ್ನೆಟ್ ಕಡಿತಗೊಳಿಸಿ ಅಂತೆಯೇ ವೈಫೈ ಸೇವೆಯನ್ನು ನಿಲ್ಲಿಸಿ.

ಪರಿಶೀಲನೆ ಬೇಡ

ಪರಿಶೀಲನೆ ಬೇಡ

ಚಾರ್ಜ್ ಹಂತ ಪರಿಶೀಲನೆ ಬೇಡ

ಇನ್ನು ಫೋನ್‌ಗೆ ಚಾರ್ಜ್ ಎಷ್ಟಾಗಿದೆ ಎಂಬುದನ್ನು ಪರಿಶೀಲಿಸುವುದನ್ನು ನಿಲ್ಲಿಸಿ. ಆಗಾಗ್ಗೆ ಫೋನ್‌ನ ದೊಡ್ಡ ಪರದೆಯನ್ನು ಪರಿಶೀಲಿಸುವುದರಿಂದ ಚಾರ್ಜಿಂಗ್ ವೇಗ ಕುಗ್ಗಬಹುದು.

ಕೀಬೋರ್ಡ್

ಕೀಬೋರ್ಡ್

ಕೀಬೋರ್ಡ್ ಬಳಸಿ ಚಾರ್ಜ್ ಮಾಡಬೇಡಿ

ನಿಮ್ಮ ಕಂಪ್ಯೂಟರ್‌ನ ಯುಎಸ್‌ಬಿ ಪೋರ್ಟ್‌ಗೆ ಚಾರ್ಜರ್ ಅನ್ನು ಸಂಪರ್ಕಪಡಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are hacks for getting more charge in your phone when you're short on time...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot