ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್‌: ಈ 5 ಸ್ಮಾರ್ಟ್‌ಟಿವಿಗಳಿಗೆ ಬೆಸ್ಟ್‌ ಡೀಲ್‌!

|

ಭಾರತದಲ್ಲಿ ಜಹುತೇಕ ಗ್ರಾಹಕರು ಗ್ಯಾಜೆಟ್ಸ್‌ ಉತ್ಪನ್ನಗಳನ್ನು ಹೆಚ್ಚಾಗಿ ಹಬ್ಬದ ಸಮಯದಲ್ಲಿಯೇ ಖರೀದಿಸುತ್ತಾರೆ. ಹೀಗಾಗಿ ಹಬ್ಬದ ವೇಳೆಯಲ್ಲಿ ಡಿಸ್ಕೌಂಟ್‌ಗಳನ್ನು ಘೋಷಿಸುತ್ತವೆ. ಅದರಲ್ಲಿಯೂ ಇತ್ತೀಚಿಗೆ ಆನ್‌ಲೈನ್ ಮಾರುಕಟ್ಟೆ ವಿಸ್ತರಿಸಿದ್ದು, ಇ-ಕಾಮರ್ಸ್‌ ತಾಣಗಳು ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿವೆ. ಹಬ್ಬದ ಪ್ರಯುಕ್ತ ಸದ್ಯ 'ಫ್ಲಿಪ್‌ಕಾರ್ಟ್‌' ತಾಣದಲ್ಲಿಗ 'ಬಿಗ್‌ ಬಿಲಿಯನ್ ಡೇಸ್‌' ಸೇಲ್ ನಡೆಯುತ್ತಿದೆ.

ಫ್ಲಿಪ್‌ಕಾರ್ಟ್‌ ತಾಣ

ಹೌದು, ಇದೇ ಸೆಪ್ಟೆಂಬರ್‌ 29ರಿಂದ ಶುರುವಾಗಿರುವ 'ಫ್ಲಿಪ್‌ಕಾರ್ಟ್‌ ತಾಣದಲ್ಲಿಗ 'ಬಿಗ್‌ ಬಿಲಿಯನ್ ಡೇಸ್‌' ಸೇಲ್' ಇದೇ ಅಕ್ಟೋಬರ್ 4ರ ವರೆಗೂ ಚಾಲ್ತಿ ಇರಲಿದೆ. ಈ ಮೇಳದಲ್ಲಿ ಗ್ಯಾಜೆಟ್ಸ್‌ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗುತ್ತಿದ್ದು, ಗ್ರಾಹಕರು ಉತ್ಪನ್ನಗಳನ್ನು ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ. 4K ಸ್ಮಾರ್ಟ್‌ಟಿವಿಗಳಿಗೂ ಸಹ ಅತ್ಯುತ್ತಮ ಆಫರ್‌ ನೀಡಿದ್ದು, ಸ್ಮಾರ್ಟ್‌ಟಿವಿ ಖರೀದಿಸುವ ಯೋಜನೆ ಇದ್ರೆ ಖರೀದಿಸಿಬಿಡಿ.

ಸ್ಮಾರ್ಟ್‌ಟಿವಿಗಳು

ಸದ್ಯ 4K ಮಾದರಿಯ ಸ್ಮಾರ್ಟ್‌ಟಿವಿಗಳು ಟ್ರೆಂಡಿಂಗ್‌ನಲ್ಲಿದ್ದು, ಇವುಗಳು ಗೂಗಲ್ ಆಂಡ್ರಾಯ್ಡ್‌ ಓಎಸ್‌ ಸೌಲಭ್ಯದೊಂದಿಗೆ ಮೊಬೈಲ್ ಫೋನ್‌ಗೆ ಕನೆಕ್ಟ್‌ ಮಾಡುವ ಕಾಸ್ಟಿಂಗ್ ಆಯ್ಕೆಯನ್ನು ಸಹ ಒಳಗೊಂಡಿರುತ್ತವೆ. ಹಾಗೆಯೇ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳು ಸಹ ಇರಲಿವೆ. ಹಾಗಾದರೇ ಫ್ಲಿಪ್‌ಕಾರ್ಟ್‌ನ 'ಬಿಗ್‌ ಬಿಲಿಯನ್ ಡೇಸ್‌' ಸೇಲ್' ಮೇಳದಲ್ಲಿ ಬೆಸ್ಟ್‌ ಆಫರ್‌ ಪಡೆದಿರುವ ಐದು 4K ಸ್ಮಾರ್ಟ್‌ ಟಿವಿಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಶಿಯೋಮಿ ಮಿ ಟಿವಿ (MI 4A Pro 32-inch)

ಶಿಯೋಮಿ ಮಿ ಟಿವಿ (MI 4A Pro 32-inch)

ಶಿಯೋಮಿ ಕಂಪನಿಯ 'ಮಿ 4A Pro ಸ್ಮಾರ್ಟ್‌ಟಿವಿಯು ಫ್ಲಿಪ್‌ಕಾರ್ಟ್‌ನ 'ಬಿಗ್‌ ಬಿಲಿಯನ್ ಡೇಸ್‌' ಸೇಲ್ನಲ್ಲಿ ಭರ್ಜರಿ ಬೆಲೆ ಇಳಿಕೆ ಕಂಡಿದ್ದು, ಕೇವಲ 10,999ರೂ.ಗಳಿಗೆ ದೊರೆಯಲಿದೆ. ಈ ಟಿವಿಯು 32 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ರೋಮ್‌ಕಾಸ್ಟ್‌ ಆಯ್ಕೆಯನ್ನು ಸಹ ಒಳಗೊಂಡಿದೆ. ಇದರೊಂದಿಗೆ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್ ಪ್ರೈಮ್ ವಿಡಿಯೊ ಬೆಂಬಲವನ್ನು ಪಡೆದಿದೆ. ಎಕ್ಸ್‌ಚೇಂಜ್‌ ರಿಯಾಯಿತಿಯೂ ಲಭ್ಯವಿದ್ದು, ಗ್ರಾಹಕರು ಸೌಲಭ್ಯ ಪಡೆಯಬಹುದು.

ಐಫಾಲ್ಕೊನ್ 40 (iFFALCON by TCL 40-inch)

ಐಫಾಲ್ಕೊನ್ 40 (iFFALCON by TCL 40-inch)

ಅಗ್ಗದ ಬೆಲೆಯಲ್ಲಿ ಬಿಗ್ ಸ್ಕ್ರೀನ್ ಬೇಕು ಎನ್ನುವುದಾದರೇ, ಐಫಾಲ್ಕೋನ್ ಕಂಪನಿಯ 40 ಇಂಚಿನ ಪೂರ್ಣ ಹೆಚ್‌ಡಿ ಎಲ್‌ಇಡಿ ಡಿಸ್‌ಪ್ಲೇಯ ಟಿವಿ ಪ್ಲ್ಯಾನ್‌ ಮಾಡಬಹುದು. ಈ ಸ್ಮಾರ್ಟ್‌ಟಿವಿ ಬೆಲೆಯು 16,499ರೂ.ಗಳು ಆಗಿದ್ದು, ಜೊತೆಗೆ ಎಕ್ಸ್‌ಚೇಂಜ್‌ ರಿಯಾಯಿತಿಯೂ ಲಭ್ಯವಿದೆ. ಹಾಟ್‌ಸ್ಟಾರ್, ಯೂಟ್ಯೂಬ್, ನೆಟ್‌ಫ್ಲಿಕ್ಸ್‌ ಸೌಲಭ್ಯಗಳನ್ನು ಒಳಗೊಂಡಿದೆ. ಗೂಗಲ್‌ನ ಆಂಡ್ರಾಯ್ಡ್ ಓಎಸ್‌ ಪಡೆದಿದೆ.

ಸ್ಯಾಮ್‌ಸಂಗ್ ಫ್ರೇಮ್‌ (Samsung 55-inch 4K QLED TV)

ಸ್ಯಾಮ್‌ಸಂಗ್ ಫ್ರೇಮ್‌ (Samsung 55-inch 4K QLED TV)

ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯ ಈ ಟಿವಿಯು 55 ಇಂಚಿನ 4K QLED ಡಿಸ್‌ಪ್ಲೇ ಫ್ರೇಮ್‌ ಮಾದರಿಯಲ್ಲಿದ್ದು, 120Hz ಡಿಸ್‌ಪ್ಲೇ ರೀಫ್ರೆಶ್‌ ರೇಟ್‌ ಹೊಂದಿದೆ. ಕಂಪನಿಯ ಟೈಜನ್ ಓಎಸ್‌ ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಟಿವಿಯು ಗೂಗಲ್ ಅಸಿಸ್ಟಂಟ್ ವಾಯಿಸ್‌ ಸೌಲಭ್ಯವನ್ನು ಹೊಂದಿದೆ. ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್, ಯೂಟ್ಯೂಬ್ ಸೇರಿದಂತೆ ಇತರೆ ಪ್ರಮುಖ ವಿಡಿಯೊ ಸ್ಟೀಮಿಂಗ್ ಆಪ್ಸ್‌ ಸಪೋರ್ಟ್‌ ಪಡೆದಿದೆ. ಈ ಟಿವಿಯ ಬೆಲೆಯು 84,999ರೂ.ಗಳು ಆಗಿದೆ.

ಓದಿರಿ : ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಎರಡರಲ್ಲೂ ಆಫರ್‌ ಇದೆ, ಆದ್ರೆ ಯಾವುದು ಬೆಸ್ಟ್‌!ಓದಿರಿ : ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಎರಡರಲ್ಲೂ ಆಫರ್‌ ಇದೆ, ಆದ್ರೆ ಯಾವುದು ಬೆಸ್ಟ್‌!

ಐಫಾಲ್ಕೊನ್ (iFFALCON by TCL K31 55-inch)

ಐಫಾಲ್ಕೊನ್ (iFFALCON by TCL K31 55-inch)

ಐಫಾಲ್ಕೋನ್ ಕಂಪನಿಯ ಇನ್ನೊಂದು ಬಿಗ್ ಸ್ಕ್ರೀನ್ ಸ್ಮಾರ್ಟ್‌ಟಿವಿ ಆಯ್ಕೆ ಎಂದರೇ ಅದು 55 ಇಂಚಿನ 4K ಆಂಡ್ರಾಯ್ಡ್ ಟಿವಿ ಆಗಿದೆ. ಈ ಸ್ಮಾರ್ಟ್‌ಟಿವಿಯು 27,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿದೆ. ಗೂಗಲ್ ಅಸಿಸ್ಟಂಟ್, ಹೆಚ್‌ಆರ್‌ಡಿ 10, 4K ಪ್ಯಾನೆಲ್, ಕ್ರೋಮ್‌ಕಾಸ್ಟ್‌ ಸೌಲಭ್ಯ, ಗೂಗಲ್‌ ಆಪ್ಸ್‌ ಸೇರಿದಂತೆ ಹಾಟ್‌ಸ್ಟಾರ್, ಯೂಟ್ಯೂಬ್, ನೆಟ್‌ಫ್ಲಿಕ್ಸ್‌ ಸೌಲಭ್ಯಗಳನ್ನು ಒಳಗೊಂಡಿದೆ.

ಶಿಯೋಮಿ (Mi TV 4X Pro 55-inch)

ಶಿಯೋಮಿ (Mi TV 4X Pro 55-inch)

ಶಿಯೋಮಿ ಕಂಪನಿಯ ಈ ಸ್ಮಾರ್ಟ್‌ಟಿವಿಯು 55 ಇಂಚಿನಲ್ಲಿದ್ದು, 4K ಪ್ಯಾನೆಲ್ ಜೊತೆಗೆ ಹೆಚ್‌ಆರ್‌ಡಿ 10 ಮಾದರಿಯಲ್ಲಿದೆ. ಆಂಡ್ರಾಯ್ಡ್ ಟಿವಿ ಓಎಸ್‌ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಅಪ್‌ಡೇಟ್‌ ಬೆಂಬಲಿಸಲಿದೆ. OTT ಸೌಲಭ್ಯಗಳನ್ನು ನೀಡಲಾಗಿದ್ದು, ಅತ್ಯುತ್ತಮ ಸಾಫ್ಟ್‌ವೇರ್‌ ಸಪೋರ್ಟ್‌ ಪಡೆದಿದೆ. ಬಿಗ್‌ ಬಿಲಿಯನ್ ಡೇಸ್‌' ಸೇಲ್ನಲ್ಲಿ ಈ ಸ್ಮಾರ್ಟ್‌ಟಿವಿಯ ಬೆಲೆಯು 37,999ರೂ.ಗಳಾಗಿದೆ.

ಓದಿರಿ : ಬಿಎಸ್‌ಎನ್‌ಎಲ್‌ನಿಂದ ಗ್ರಾಹಕರಿಗೆ ಭರ್ಜರಿ ಗಿಫ್ಟ್‌!..ಪ್ರತಿದಿನ 3GB ಡೇಟಾ!ಓದಿರಿ : ಬಿಎಸ್‌ಎನ್‌ಎಲ್‌ನಿಂದ ಗ್ರಾಹಕರಿಗೆ ಭರ್ಜರಿ ಗಿಫ್ಟ್‌!..ಪ್ರತಿದಿನ 3GB ಡೇಟಾ!

Best Mobiles in India

English summary
The Flipkart Big Billion Days Sale is offering sweet discounts on smart TVs. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X