ಟ್ರೂ ಕಾಲರ್‌ನಿಂದ ಹೊಸ ಅಪ್ಲಿಕೇಶನ್‌ ಬಿಡುಗಡೆ! ಪ್ರಯೋಜನಗಳೇನು?

|

ಜನಪ್ರಿಯ ಕಾಲರ್‌ ಐಡಿ ಎನಿಸಿಕೊಂಡಿರುವ ಟ್ರೂ ಕಾಲರ್‌ ಅಪ್ಲಿಕೇಶನ್‌ ಐಒಎಸ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಐಒಎಸ್‌ ಬಳಕೆದಾರರಿಗಾಗಿ ತನ್ನ ಅಪ್ಲಿಕೇಶನ್‌ ಅನ್ನು ಸಂಪೂರ್ಣವಾಗಿ ಪರಿಷ್ಕರಿಸಿದೆ. ಇದರಿಂದ ಟ್ರೂ ಕಾಲರ್‌ ಅಪ್ಲಿಕೇಶನ್‌ನಲ್ಲಿ ಹೊಸ ಫೀಚರ್ಸ್‌ಗಳು ಲಭ್ಯವಾಗುವುದಲ್ಲೆ ಅಗತ್ಯವಿರುವ ಭದ್ರತೆಯನ್ನು ಕೂಡ ನೀಡಲಿದೆ. ಇನ್ನು ಐಫೋನ್‌ಗಾಗಿ ಪರಿಚಯಿಸಿರುವ ಹೊಸ ಟ್ರೂ ಕಾಲರ್‌ ಅಪ್ಲಿಕೇಶನ್‌ ಸ್ಪ್ಯಾಮ್‌, ಸ್ಕ್ಯಾಮ್‌ ಮತ್ತು ವೆರಿಫೈಡ್‌ ಬ್ಯುಸಿನೆಸ್‌ ಅನ್ನು ಗುರುತಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಟ್ರೂ ಕಾಲರ್‌

ಹೌದು, ಐಒಎಸ್‌ ಬಳಕೆದಾರರಿಗಾಗಿ ಟ್ರೂ ಕಾಲರ್‌ ಅಪ್ಲಿಕೇಶನ್‌ ಹೊಸ ರೀತಿಯಲ್ಲಿ ಎಂಟ್ರಿ ನೀಡಿದೆ. ತನ್ನ ಆವೃತ್ತಿಯನ್ನು ಸಂಪೂರ್ಣವಾಗಿ ಅಪ್ಡೇಟ್‌ ಮಾಡಿದ್ದು, ಹೆಚ್ಚಿನ ಭದ್ರತೆಯ ಭರವಸೆ ನೀಡಿದೆ. ಇದರಿಂದ ಐಫೋನ್ ಬಳಕೆದಾರರಿಗೆ ತೊಂದರೆಗೊಳಗಾದ ಕರೆ ಮಾಡುವವರಿಂದ ತಪ್ಪಿಸಿಕೊಳ್ಳಲು ಸುಲಭವಾಗುತ್ತದೆ. ಅಲ್ಲದೆ ಐಫೋನ್ ಬಳಕೆದಾರರು ಅಪ್ಲಿಕೇಶನ್ ತೆರೆಯದೆ ಸಂಖ್ಯೆಗಳನ್ನು ಸರ್ಚ್‌ ಮಾಡಲು ಸಾಧ್ಯವಾಗಲಿದೆ. ಹಾಗಾದ್ರೆ ಟ್ರೂ ಕಾಲರ್‌ನ ಹೊಸ ಅಪ್ಡೇಟ್‌ ಆವೃತ್ತಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಐಫೋನ್‌ಗಾಗಿ ಅಪ್ಡೇಟ್‌ ಮಾಡಿರುವ ಹೊಸ ಟ್ರೂ ಕಾಲರ್‌ ಅಪ್ಲಿಕೇಶನ್‌ ಸಾಕಷ್ಟು ಸುರಕ್ಷತೆಯನ್ನು ನೀಡಲಿದೆ. ಇದು ಕಾಲರ್ ಐಡಿ ಜೊತೆಗೆ ಎಮೋಜಿಗಳನ್ನು ಸಹ ಪ್ರದರ್ಶಿಸುವ ಸಾಮರ್ಥ್ಯವನ್ನು ಹೊಂದಿದೆ. ಆಪಲ್‌ ಐಫೋನ್‌ ಬಳಕೆದಾರರು ಸ್ಪ್ಯಾಮ್ ಮತ್ತು ಸ್ಕ್ಯಾಮ್‌ ಕರೆಗಳನ್ನು ಸುಲಭವಾಗಿ ಗುರುತಿಸುವುದಕ್ಕೆ ಇದರಿಂದ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಸ್ಕ್ಯಾಮ್‌ ಕರೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ತಮ್ಮ ಸ್ನೇಹಿತರೊಂದಿಗೆ ಸಂವಹನ ನಡೆಸುವುದಕ್ಕೆ ಸಹಾಯಕವಾಗಿದೆ.

10x ಉತ್ತಮ ಸ್ಪ್ಯಾಮ್ ಪತ್ತೆ, ಕಾಲರ್ ಐಡಿ

10x ಉತ್ತಮ ಸ್ಪ್ಯಾಮ್ ಪತ್ತೆ, ಕಾಲರ್ ಐಡಿ

ಹೊಸ ಅಪ್ಡೇಟ್‌ ಟ್ರೂ ಕಾಲರ್‌ ಸ್ಪ್ಯಾಮ್ ಕರೆಗಳ ವಿರುದ್ಧ ರಕ್ಷಣೆಯನ್ನು ನೀಡಲಿದೆ. ಜೊತೆಗೆ ವೆರಿಫೈಡ್‌ ಬ್ಯುಸಿನೆಸ್‌ ಅನ್ನು ಗುರುತಿಸಲಿದೆ. ಇದಲ್ಲದೆ ಸ್ಪ್ಯಾಮ್ ಸಂಖ್ಯೆಗಳನ್ನು ನೈಜ ಸಮಯದಲ್ಲಿ ವರದಿ ಮಾಡಲು ಅವಕಾಶ ನೀಡಲಿದೆ. ಸ್ಪ್ಯಾಮ್‌ ಕರೆಗಳ ಬಗ್ಗೆ ರಿಪೋರ್ಟ್‌ ಮಾಡುವುದಕ್ಕೆ ಕೂಡ ಅವಕಾಶ ದೊರೆಯಲಿದೆ. ನಿಖರ ಮತ್ತು ಸಂಪೂರ್ಣ ಕರೆ ಮಾಡುವ ಐಡಿ ಮತ್ತು ಸ್ಪ್ಯಾಮ್ ಪತ್ತೆಹಚ್ಚುವಿಕೆಯನ್ನು ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.

ಅಪ್ಲಿಕೇಶನ್

ಇನ್ನು ಈ ಹೊಸ ಅಪ್ಲಿಕೇಶನ್ ಪ್ರವೇಶಿಸುವುದು ತುಂಬಾ ಸರಳವಾಗಿದೆ. ಬಳಕೆದಾರರು ಈಗ ಸುಲಭವಾಗಿ ಲಾಗ್ ಇನ್ ಮಾಡಬಹುದಾಗಿದೆ. ಅಪ್ಲಿಕೇಶನ್ ಮೂಲಕ ತ್ವರಿತವಾಗಿ ನ್ಯಾವಿಗೇಟ್ ಮಾಡಬಹುದಾಗಿದೆ. ಇದಲ್ಲದೆ ಅಪ್ಲಿಕೇಶನ್‌ ತೆರೆಯದೆ ನಂಬರ್‌ಗಳನ್ನು ಸರ್ಚ್‌ ಮಾಡಲು ಸಹಾಯ ಮಾಡಲಿದೆ. ಒಂದು ವೇಳೆ ನೀವು ಅಪರಿಚಿತ ಸಂಖ್ಯೆಯಿಂದ ಕರೆಯನ್ನು ಸ್ವಿಕರಿಸಿದರೆ , ನೀವು ನಿಮ್ಮ ಕರೆ ಲಾಗ್‌ಗೆ ಹೋಗಬಹುದು, ಮಾಹಿತಿ ಬಟನ್ ಟ್ಯಾಪ್ ಮಾಡಬಹುದು. ಇದರಿಂದ ನಿಮಗೆ ಕರೆ ಮಾಡಿದವರ ಹೆಸರನ್ನು ತಿಳಿಯಬಹುದು.

ಅಪ್ಲಿಕೇಶನ್‌

ಇದಲ್ಲದೆ ಟ್ರೂ ಕಾಲರ್‌ ಅಪ್ಲಿಕೇಶನ್‌ ಹೊಸ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ಲಾಂಚ್‌ ಮಾಡಿದೆ. ಇದು ಆಡಿಯೋ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಆಗಿರುವ ಕ್ಲಬ್‌ಹೌಸ್‌ ಮಾದರಿಯನ್ನೇ ಹೋಲುತ್ತದೆ ಎನ್ನಲಾಗಿದೆ. ಟ್ರೂ ಕಾಲರ್‌ ಪರಿಚಯಿಸಿರುವ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ಕೂಡ ಕಮ್ಯೂನಿಕೇಟ್‌ ಪ್ಲಾಟ್‌ಫಾರ್ಮ್‌ ಆಗಿದ್ದು, ಆಡಿಯೋ ಸಂಭಾಷಣೆಗಳನ್ನು ಪ್ರಾರಂಭಿಸಲು ಮತ್ತು ಸೇರಲು ಟ್ರೂಕಾಲರ್ ಬಳಕೆದಾರರಿಗೆ ಅವಕಾಶ ಸಿಗಲಿದೆ.

ಓಪನ್‌

ಟ್ರೂ ಕಾಲರ್‌ನ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ನಲ್ಲಿ ಆಡಿಯೋ ಸಂಭಾಷಣೆಗಳನ್ನು ನಡೆಸಬಹುದು. ಅಲ್ಲದೆ ಆಡಿಯೋ ಸಂಭಾಷಣೆಗಳಿಗೆ ಟ್ರೂ ಕಾಲರ್‌ ಬಳಕೆದಾರರು ಸೇರ್ಪಡೆಯಾಗಬಹುದಾಗಿದೆ. ಅಲ್ಲದೆ ಈ ಆಡಿಯೋ ಸಂಭಾಷಣೆಗಳು ಟ್ರೂಕಾಲರ್ ಕರೆಗಳು, 'ನೆಟ್‌ವರ್ಕ್ ಎಫೆಕ್ಟ್' ಮೂಲಕ ಹೆಚ್ಚಿನ ಜನರನ್ನು ಆಹ್ವಾನಿಸುತ್ತವೆ. ಇದರಲ್ಲಿ ಒಮ್ಮೆ ನೀವು ನಿಮ್ಮ ಸ್ನೇಹಿತರನ್ನು ಸಂಭಾಷಣೆಗೆ ಸೇರ್ಪಡೆ ಮಾಡಿದರೆ, ಅವರು ಅವರ ಸ್ನೇಹಿತರನ್ನು ಸೇರ್ಪಡೆ ಮಾಡುವುದಕ್ಕೆ ಅವಕಾಶವಿದೆ.

ಅಪ್ಲಿಕೇಶನ್‌

ಓಪನ್‌ ಡೋರ್ಸ್‌ ಅಪ್ಲಿಕೇಶನ್‌ ವಿಶೇಷತೆ ಎಂದರೆ ಆಡಿಯೋ ಸಂಭಾಷಣೆಯಲ್ಲಿ ಭಾಗವಹಿಸುವವರು ಯಾರು ಕೂಡ ಪರಸ್ಪರರ ಫೋನ್ ಸಂಖ್ಯೆಗಳನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಫೋನ್‌ ನಂಬರ್‌ಗಳು ಬೇರೆಯವರಿಗೆ ದೊರಕುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಆಡಿಯೋ ಸಂಭಾಷಣೆಯ ಸಮಯದಲ್ಲಿ ನಿಮ್ಮ ಹೆಸರುಗಳು ಮತ್ತು ಪ್ರೊಫೈಲ್ ಚಿತ್ರಗಳು ಮಾತ್ರ ಗೋಚರಿಸುತ್ತವೆ. ಅಲ್ಲದೆ ಓಪನ್‌ ಡೋರ್ಸ್‌ ಅಪ್ಲಿಕೇಶನ್‌ಗೆ ಕೇವಲ ಎರಡು ಅನುಮತಿಗಳ ಅಗತ್ಯವಿರುವುದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಡೇಟಾದ ಮೇಲೆ ಕಂಪ್ಲೀಟ್‌ ಕಂಟ್ರೋಲ್‌ ಹೊಂದಿರುತ್ತಾರೆ.

Best Mobiles in India

Read more about:
English summary
The new Truecaller app for iPhone has gotten 10x better at identifying spam, scam & verified businesses.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X