ಇಂಟರ್‌ನೆಟ್‌ ಇಲ್ಲದೇ ಮೊಬೈಲ್‌‌ನಲ್ಲಿ ಟ್ವೀಟ್‌ ಮಾಡಿ!

Written By:

ಭಾರತದಲ್ಲಿ ಟ್ವೀಟರ್‌ ತನ್ನತ್ತ ಬಳಕೆದಾರರನ್ನು ಆಕರ್ಷಿಸಲು ಮುಂದಾಗಿದ್ದು, ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಇಲ್ಲದೇ ಟ್ವೀಟರ್‌ ಸೇವೆ ಮಾಡುವ ಹೊಸ ಪ್ರಯತ್ನಕ್ಕೆ ಮುಂದಾಗಲಿದೆ.

ಟ್ವೀಟರ್‌ ಈ ಹೊಸ ಯೋಜನೆಗೆ ಸಂಬಂಧಿಸಿದಂತೆ U2opia ಮೊಬೈಲ್‌ ಜೊತೆ ಮಾತುಕತೆ ನಡೆಸಿದ್ದು ಮೊದಲ ತ್ರೈಮಾಸಿಕದೊಳಗಡೆ ಈ ಹೊಸ ಸೇವೆ ಆರಂಭವಾಗಲಿದೆ. ಮೆಸೇಜ್‌ ರೂಪದಲ್ಲಿರುವ ಯುಎಸ್‌ಎಸ್‌ಡಿ ಸೇವೆಯ ಮೂಲಕ ಬಳಕೆದಾರರು ಟ್ವೀಟರ್‌ನ್ನು ಬಳಕೆ ಮಾಡಬಹುದಾಗಿದೆ.

 ಇಂಟರ್‌ನೆಟ್‌ ಇಲ್ಲದೇ ಮೊಬೈಲ್‌‌ನಲ್ಲಿ ಟ್ವೀಟ್‌ ಮಾಡಿ!

ಏನಿದು ಯುಎಸ್‌ಎಸ್‌ಡಿ?
ಜಿಎಸ್‌ಎಂ( ಗ್ಲೋಬಲ್‌ ಸಿಸ್ಟಂ ಫಾರ್‌ ಮೊಬೈಲ್‌ ಕಮ್ಯೂನಿಕೇಷನ್‌) ಮೊಬೈಲ್‌‌ ಸೇವೆ ನೀಡುವ ಕಂಪೆನಿಗಳ ಕಂಪ್ಯೂಟರ್‌ಗಳು ತಮ್ಮ ಬಳಕೆದಾರರ ಜೊತೆ ಸಂವಹನ ನಡೆಸಲು ಯುಎಸ್‌ಎಸ್‌ಡಿ ಶಿಷ್ಟತೆಯನ್ನು ಬಳಸಿಕೊಳ್ಳುತ್ತವೆ.ವ್ಯಾಪ್‌ ಬ್ರೌಸಿಂಗ್‌,ಮೆನು ಆಧಾರಿತ ಸೇವೆ,ಪ್ರಿಪೇಡ್‌ ಕಾಲ್‌ ಬ್ಯಾಕ್‌ ಸೇವೆಗಳು ಈ ಯುಎಸ್‌ಎಸ್‌ಡಿ ಪ್ರೊಟೋಕಾಲ್ ಅಡಿಯಲ್ಲಿ ನಡೆಯುತ್ತದೆ. ಈ ಯುಎಸ್‌ಎಸ್‌ಡಿ ಮೆಸೇಜ್‌ಗಳು 182 ಅಕ್ಷರದ ಮಿತಿಯಲ್ಲಿರುತ್ತದೆ.


ಫೇಸ್‌ಬುಕ್‌ ಇಂಡಿಯಾ ಎಡಿಆರ್‌ ಸಂಸ್ಥೆಯೊಂದಿಗೆ ಕೈ ಜೋಡಿಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಕ್ರಿಮಿನಲ್‌,ಆರ್ಥಿಕ,ಶೈಕ್ಷಣಿಕ‌, ವೃತ್ತಿ ಮಾಹಿತಿಯನ್ನು ಎಸ್‌ಎಸ್‌ಡಿ(Unstructured Supplementary Service Data)ಮೆಸೇಜ್‌ ರೂಪದಲ್ಲಿ ಬಳಕೆದಾರನಿಗೆ ನೀಡುವ ಹೊಸ ಸೇವೆಯನ್ನು ನವೆಂಬರ್‌ನಲ್ಲಿ ಆರಂಭಿಸಿತ್ತು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot