ಟ್ವಿಟ್ಟರ್‌ ಬಳಕೆದಾರರಿಗೆ ಶಾಕಿಂಗ್‌... ಕಣ್ಮರೆಯಾಯ್ತು ಟ್ವಿಟರ್ ಬ್ಲೂ ಚಂದಾದಾರಿಕೆ!?

|

ಎಲಾನ್ ಮಸ್ಕ್ ಅವರ ಒಡೆತನದ ಟ್ವಿಟ್ಟರ್‌ನಲ್ಲಿ ನವೀಕರಣಗಳ ಜೊತೆಗೆ ಕೆಲವು ಶಾಕಿಂಗ್‌ ಸಂಗತಿ ಸಹ ಹೊರ ಬರುತ್ತಿವೆ. ಶೀಘ್ರಗತಿಯಲ್ಲಿ ಆಗುತ್ತಿರುವ ಕೆಲವು ಬದಲಾವಣೆಯಿಂದ ಟ್ವಿಟ್ಟರ್‌ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದು, ಇದೀಗ ಮತ್ತೇ ಬಳಕೆದಾರರಲ್ಲಿ ಗೊಂದ ನಿರ್ಮಾಣ ಮಾಡಿದೆ. ಅದರಂತೆ ಇನ್ಮುಂದೆ ಟ್ವಿಟ್ಟರ್‌ ಬ್ಲೂ ಚಂದಾದಾರಿಕೆ ಲಭ್ಯವಿಲ್ಲ ಎನ್ನಲಾಗಿದೆ. ಪರಿಣಾಮ ಯಾವ ಬಳಕೆದಾರರು ಸಹ ಇನ್ನು ಬ್ಲೂ ಟಿಕ್ ಅನ್ನು ಖರೀದಿಸಲು ಸಾಧ್ಯವಿಲ್ಲದಂತಾಗಿದೆ.

ಟ್ವಿಟ್ಟರ್‌

ಹೌದು, ಇಂದಿನಿಂದ ಟ್ವಿಟ್ಟರ್‌ನಲ್ಲಿ ಟ್ವಿಟ್ಟರ್‌ ಬ್ಲೂಗೆ ಸೈನ್ ಅಪ್ ಮಾಡುವ ಆಯ್ಕೆಯು ಲಭ್ಯವಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ಬಳಕೆದಾರರಿಗೆ ಈ ಫೀಚರ್ಸ್‌ ಕಾಣಿಸುತ್ತಿಲ್ಲ. ಅದರಲ್ಲೂ ಪ್ರಮುಖ ವಿಷಯ ಏನೆಂದರೆ ಈ ನೂತನ ಪ್ಲ್ಯಾನ್ ಭಾಗವಾಗಿ ಚಂದಾದಾರಿಕೆಯನ್ನು ಈ ತಿಂಗಳ ಆರಂಭದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಈ ಫೀಚರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಕಾಣದಿರುವುದು ಬಳಕೆದಾರರಿಗೆ ಹಲವಾರು ಅನುಮಾನ ಉಂಟಾಗುವಂತೆ ಮಾಡಿದೆ.

ಐಓಎಸ್‌ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು

ಐಓಎಸ್‌ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು

ಈ ತಿಂಗಳು ಆರಂಭವಾಗ ಈ ಪ್ಲ್ಯಾನ್‌ ಆರಂಭಿಕವಾಗಿ ಐಓಎಸ್‌ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಹಾಗೆಯೇ ಶೀಘ್ರದಲ್ಲಿ ಈ ಫೀಚರ್ಸ್‌ ಅನ್ನು ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿತ್ತು. ಆದರೆ, ಚಂದಾದಾರಿಕೆಗಾಗಿ ಸೈನ್‌ಅಪ್ ಮಾಡಲು ಮುಂದಾಗುವವರಿಗೆ ಈ ಫೀಚರ್ಸ್‌ ಕಾಣದೆ ಇರುವುದರಿಂದ ಬಹಳಷ್ಟು ಚರ್ಚೆಗಳು ಸಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ.

ಟ್ವಿಟರ್ ಬ್ಲೂ ಚಂದಾದಾರಿಕೆ ಸ್ಥಗಿತ?

ಟ್ವಿಟರ್ ಬ್ಲೂ ಚಂದಾದಾರಿಕೆ ಸ್ಥಗಿತ?

ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಟ್ವಿಟರ್ ತನ್ನ ಬ್ಲೂ ಚಂದಾದಾರಿಕೆ ಫೀಚರ್ಸ್‌ ಅನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆದಿದೆ ಎಂದು ತಿಳಿದುಬರುತ್ತಿದೆ. ಪರಿಣಾಮ ಟ್ವಿಟ್ಟರ್ ಬ್ಲೂ ಫೀಚರ್ಸ್‌ಗೆ ಸೈನ್ ಅಪ್ ಮಾಡುವ ಆಯ್ಕೆಯು ಕಾಣದಾಗಿದ್ದು, ಈ ಸಂಬಂಧ ಸಾಕಷ್ಟು ಬಳಕೆದಾರರು ಇತರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ತನ್ನ ಅಭಿಪ್ರಾಯ ಹೊರಹಾಕಿದ್ದಾರೆ. ಇದರ ನಡುವೆ ಟ್ವಿಟರ್ ಪ್ರತಿ ದಿನ ವಿಭಿನ್ನ ಫೀಚರ್ಸ್‌ಗಳನ್ನು ಹೊರತರುವ ಮೂಲಕ ಹಾಗೂ ಕೆಲವು ಫೀಚರ್ಸ್‌ ಅನ್ನು್ ಕೆಲವೇ ದಿನಗಳಲ್ಲಿ ಕಣ್ಮರೆ ಮಾಡುವ ಮೂಲಕ ಬಳಕೆದಾರರಲ್ಲಿ ಸಾಕಷ್ಟು ಗೊಂದಲ ನಿರ್ಮಾಣ ಮಾಡುತ್ತಿದೆ.

ಸೈನ್‌ ಆಪ್‌ ಮಾಡುವಾಗ ಉಂಟಾಗುವ ತೊಂದರೆ ಏನು?

ಸೈನ್‌ ಆಪ್‌ ಮಾಡುವಾಗ ಉಂಟಾಗುವ ತೊಂದರೆ ಏನು?

ಇನ್ನು ಚಂದಾದಾರಿಕೆಗೆ ಹಲವರು ಪ್ರಯತ್ನಿಸಿದ್ದಾರೆ. ಆದರೆ, ಇಂದು ಬೆಳಗ್ಗೆಯಿಂದ ಈ ಫೀಚರ್ಸ್ ಕಾಣದಾಗಿದ್ದು, ಹಲವರು ಟ್ವಿಟ್ಟರ್‌ ಅನ್ನು ದೂರಿದ್ದಾರೆ. ಹಾಗೆಯೇ ಚಂದಾದಾರಿಕೆಗೆ ಸೈನ್ ಅಪ್ ಮಾಡಲು ಮುಂದಾಗುವ ವೇಳೆ ಆಪ್ ಒಂದು ಸಂದೇಶವನ್ನು ನೀಡುತ್ತದೆ ಎಂದು ದಿ ವರ್ಜ್ ವರದಿ ಮಾಡಿದೆ. ಆ ಸಂದೇಶದಲ್ಲಿ 'ನಿಮ್ಮ ಆಸಕ್ತಿಗೆ ಧನ್ಯವಾದಗಳು. ಟ್ವಿಟ್ಟರ್‌ ಬ್ಲೂ ಭವಿಷ್ಯದಲ್ಲಿ ನಿಮ್ಮ ದೇಶದಲ್ಲಿ ಲಭ್ಯವಿರುತ್ತದೆ. ದಯವಿಟ್ಟು ನಂತರ ಮತ್ತೆ ಪರಿಶೀಲಿಸಿ' ಎಂದು ತೋರಿಸಲಾಗುತ್ತಿದೆ.

ಟ್ವಿಟ್ಟರ್‌ ಯಾಕೆ ಈ ರೀತಿ ಮಾಡಿದೆ?

ಟ್ವಿಟ್ಟರ್‌ ಯಾಕೆ ಈ ರೀತಿ ಮಾಡಿದೆ?

ಟ್ವಿಟರ್ ತನ್ನ ಪ್ಲಾಟ್‌ಫಾರ್ಮ್‌ನಿಂದ ಈ ಬ್ಲೂ ಚಂದಾದಾರಿಕೆ ಫೀಚರ್ಸ್‌ ಅನ್ನು ಯಾವ ಕಾರಣಕ್ಕಾಗಿ ತೆಗೆದು ಹಾಕಲಾಗಿದೆ ಎಂಬ ಬಗ್ಗೆ ಈವರೆಗೆ ಯಾವುದೇ ಮಾಹಿತಿಯನ್ನೂ ಸಹ ನೀಡಿಲ್ಲ. ಆದರೆ, ಕೆಲವು ನೆಟ್ಟಿಗರು ಹಾಗೂ ತಂತ್ರಜ್ಞರ ಪ್ರಕಾರ ಈ ಫೀಚರ್ಸ್‌ ಅನ್ನು ತೆಗೆದುಹಾಕಲಾಗಿದೆ ಎನ್ನುವ ಮಾಹಿತಿ ಮಾತ್ರ ಲಭ್ಯವಾಗುತ್ತಿದೆ.

ಯಾಕಿರಬಹುದು?

ಯಾಕಿರಬಹುದು?

ಈ ಫೀಚರ್ಸ್‌ ಅನ್ನು ಭಾರತದಲ್ಲಿ ಪರಿಚಯಿಸಿದಾಗಿನಿಂದ ಟ್ವಿಟ್ಟರ್‌ ಬಹಳಷ್ಟು ಗೊಂದಲಕ್ಕೆ ಒಳಗಾಗಿತ್ತು. ಬಳಕೆದಾರರು ಸಾಮಾನ್ಯವಾಗಿ ಈ ಟ್ವಿಟ್ಟರ್‌ ಬ್ಲೂ ಚಂದಾದಾರಿಕೆಯನ್ನು ಖರೀದಿಸುವ ಹೊರತಾಗಿ ಹಲವರು ನಕಲಿ ಖಾತೆ ಮೂಲಕ ಹಾಗೂ ಗಣ್ಯ ವ್ಯಕ್ತಿಗಳು ಎಂಬಂತೆ ಬಿಂಬಿಸಿಕೊಳ್ಳಲು ಈ ಫೀಚರ್ಸ್‌ ಅನ್ನು ಬಳಕೆ ಮಾಡಿಕೊಂಡಿರುವುದು ಟ್ವಿಟ್ಟರ್‌ ಗಮನಕ್ಕೆ ಬಂದಿದೆ. ಈ ಕಾರಣಕ್ಕಾಗಿಯೇ ಹಾಗೂ ನಕಲಿ ಖಾತೆಗಳನ್ನು ನಿರ್ಬಂಧಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿರಬಹುದೆಂದು ಅನುಮಾನಿಸಲಾಗಿದೆ.

Best Mobiles in India

English summary
Along with the updates, some shocking things are also coming out on Twitter owned by Elon Musk. Meanwhile, Twitter Blue subscription is now missing from the platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X