ಟ್ವಿಟರ್‌ನಿಂದ ಹೊಸ ಫೀಚರ್ಸ್‌ ಬಿಡುಗಡೆ!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಟ್ವಿಟರ್‌ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ಟ್ವಿಟರ್ ವಿಶ್ವಾದ್ಯಂತ 'ಫ್ಲೀಟ್ಸ್' ಎಂಬ ಹೊಸ ಫೀಚರ್ಸ್‌ ಅನ್ನು ಬಿಡುಗಡೆ ಮಾಡಿದೆ. ಇದು ಈಗಾಗಲೇ ಸ್ನ್ಯಾಪ್‌ಚಾಟ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಲಭ್ಯವಿರುವ ಡಿಸ್‌ಅಫಿಯರಿಂಗ್‌ ಫೀಚರ್ಸ್‌ ಅನ್ನು ಹೋಲುತ್ತದೆ. ಈ ಫೀಚರ್ಸ್‌ನಿಂದಾಗಿ ಇನ್ಮುಂದೆ ಟ್ವಿಟ್ಟರ್‌ನಲ್ಲಿ ಟ್ವೀಟ್‌ಗಳು 24 ಗಂಟೆಗಳ ನಂತರ ಕಣ್ಮರೆಯಾಗುತ್ತವೆ.

ಟ್ವಿಟರ್

ಹೌದು, ಟ್ವಿಟರ್‌ ಡಿಸ್‌ಅಫಿಯರಿಂಗ್‌ ಮಾದರಿಯ ಹೊಸ ಫೀಚರ್ಸ್‌ ಫ್ಲೀಟ್ಸ್‌ ಅನ್ನು ಪರಿಚಯಿಸಿದೆ. ಇನ್ಮುಂದೆ ಟ್ವಿಟರ್‌ನಲ್ಲಿರುವ ಟ್ವೀಟ್‌ಗಳು 24 ಗಂಟೆಯ ನಂತರ ಆಟೋಮ್ಯಾಟೀಕ್‌ ಕಣ್ಮರೆಯಾಗಲಿದೆ. ಇನ್ನು ಟ್ವಿಟರ್‌ನಲ್ಲಿ ಒಂದು ದಿನದ ನಂತರ ಟ್ವೀಟ್‌ ವೀಕ್ಷಣೆಯಿಂದ ಕಣ್ಮರೆಯಾಗುವುದರಿಂದ, ವೈಯಕ್ತಿಕ ಮತ್ತು ಪ್ರಾಸಂಗಿಕ ಆಲೋಚನೆಗಳು, ಅಭಿಪ್ರಾಯಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಜನರು ಹೆಚ್ಚು ಆರಾಮದಾಯಕವಾಗಲು ಫ್ಲೀಟ್‌ಗಳು ಸಹಾಯ ಮಾಡುತ್ತವೆ ಎನ್ನಲಾಗಿವೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೀಚರ್ಸ್‌

ಫ್ಲೀಟ್ಸ್‌ ಫೀಚರ್ಸ್‌ ಟ್ವಿಟರ್‌ನಲ್ಲಿ ಲಭ್ಯವಾಗುವುದರಿಂದ ಇನ್ಮುಂದೆ ನೀವು ಯಾವುದೇ ಟ್ವೀಟ್‌ ಅನ್ನು ಮುಕ್ತವಾಗಿ ಮಾಡಬಹುದಾಗಿದೆ. ಏಕೆಂದರೆ ನೀವು ಮಾಡುವ ಟ್ವಿಟ್‌ ಕೇವಲ 24 ಗಂಟೆಗಳ ತನಕ ಮಾತ್ರವೇ ಉಳಿಯಲಿದ್ದು, ನಂತರ ಕಣ್ಮರೆಯಾಗಲಿದೆ. ಅಲ್ಲದೆ ಫ್ಲೀಟ್ ಲೇಖಕರನ್ನು ನಿರ್ಬಂಧಿಸಿದ ಜನರನ್ನು ಟ್ಯಾಗ್ ಮಾಡಲು ಇದು ಅವಕಾಶ ಮಾಡಿಕೊಡಲಿದೆ. ಇನ್ನು ಫ್ಲೀಟ್‌ಗಳು ಪಠ್ಯ, ಫೋಟೋಗಳು ಮತ್ತು ವೀಡಿಯೊಗಳನ್ನು ಒಳಗೊಂಡಿರಲಿವೆ. ಇದು ಟ್ವಿಟ್ಟರ್ ಮತ್ತು ಕಳುಹಿಸುವವರ ಪ್ರೊಫೈಲ್‌ನಲ್ಲಿ ಬಳಕೆದಾರರ ಹೋಮ್ ಟೈಮ್‌ಲೈನ್‌ಗಳ ಮೇಲ್ಭಾಗದಲ್ಲಿ ಲಭ್ಯವಿರಲಿದೆ.

ಟ್ವೀಟರ್‌

ಟ್ವೀಟರ್‌ ಮೂಲಕ ಹಲವು ಜನರು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಾರೆ. ತಮ್ಮದೇ ಆದ ಭಾವನೆಗಳ ವ್ಯಕ್ತಪಡಿಸುತ್ತಾರೆ. ಇದರಲ್ಲಿ ಕೆಲವರು ನಿಮದಾನಾತ್ಮಕ ಪದಗಳನ್ನು ಬಳಸುವುದು, ಅಸಭ್ಯ ಪಠ್ಯಗಳನ್ನ ಕಳುಹಿಸುವುದು ಕೂಡ ಇರುತ್ತೆ. ಆದರೆ ಫ್ಲೀಟ್ಸ್‌ ಫೀಚರ್ಸ್‌ನಿಂದಾಗಿ ಇಂತಹ ಸಮಸ್ಯೆಗಳು ತಪ್ಪಲಿವೆ. ಅಲ್ಲದೆ ಈಗಾಗಲೇ ವಾಟ್ಸಾಪ್‌, ಇನ್‌ಸ್ಟಾಗ್ರಾಮ್‌ನಲ್ಲಿಯತೂ ಡಿಸ್‌ಅಫಿಯರಿಂಗ್‌ ಫೀಚರ್ಸ್‌ ಪರಿಚಯಿಸಲಾಗಿದ್ದು, ಇದೀ ಟ್ವಟರ್‌ನಲ್ಲಿಯೂ ಈ ಫೀಚರ್ಸ್‌ ಲಭ್ಯವಾಗುತ್ತಿರೋದು ಸಾಕಷ್ಟು ಉಪಯುಕ್ತವಾಗಲಿದೆ.

ಟ್ವೀಟರ್‌

ಇನ್ನು ಟ್ವೀಟರ್‌ ತನ್ನ ಬಳಕೆದಾರರಿಗೆ 'ಸ್ಪೇಸಸ್' ಎಂದು ಕರೆಯಲ್ಪಡುವ ಲೈವ್ ಆಡಿಯೊ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ದತೆ ಕೂಡ ನಡೆಸಿದೆ. ಇದು ಬಳಕೆದಾರರಿಗೆ ಸಾರ್ವಜನಿಕ, ಗುಂಪು ಸಂಭಾಷಣೆಗಳಲ್ಲಿ ಮಾತನಾಡಲು ಅನುವು ಮಾಡಿಕೊಡುತ್ತದೆ. ಇದು ಕ್ಲಬ್‌ಹೌಸ್‌ನೊಂದಿಗೆ ಸಾಮಾಜಿಕ ಸಾಮ್ಯತೆಯನ್ನು ಹೊಂದಿದೆ. ಅಲ್ಲದೆ ಇದರಲ್ಲಿ ಬಳಕೆದಾರರನ್ನು ಧ್ವನಿ ಚಾಟ್ ರೂಮ್‌ಗಳಲ್ಲಿ ಮಾತನಾಡಲು ಆಹ್ವಾನಿಸಬಹುದಾಗಿದೆ. ಆಡಿಯೊ ಸ್ಥಳಗಳಲ್ಲಿನ ದುರುಪಯೋಗದ ಎಲ್ಲ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಈ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದ್ದೇವೆ ಎಂದು ಟ್ವಟ್ಟರ್‌ ಹೇಳಿಕೊಂಡಿದೆ.

Best Mobiles in India

English summary
Twitter has launched a new feature worldwide called ‘fleets’: tweets that disappear after 24 hours, similar to the stories feature on Snapchat and Instagram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X