ಬಳಕೆದಾರರಿಗೆ ಕೋ ಟ್ವೀಟ್ಸ್‌ ಫೀಚರ್ಸ್‌ ಪರಿಚಯಿಸಿದ ಟ್ವಿಟರ್? ವಿಶೇಷತೆ ಏನು?

|

ಪ್ರಸ್ತುತ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳು ಟ್ರೆಂಡಿಂಗ್‌ನಲ್ಲಿವೆ. ಟ್ವಿಟರ್‌, ಫೇಸ್‌ಬುಕ್‌ ಅಪ್ಲಿಕೇಶನ್‌ಗಳು ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಾಗಿ ಗುರುತಿಸಿಕೊಂಡಿವೆ. ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ನಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಕೂಡ ಟ್ರೆಂಡಿಂಗ್‌ನಲ್ಲಿರುತ್ತೆ. ಶಿಕ್ಷಣ, ಕ್ರೀಡೆ, ರಾಜಕೀಯ, ಸಂಸ್ಕೃತಿ ಸೇರಿದಂತೆ ಅನೇಕ ವಲಯದ ವಿಚಾರಗಳ ಬಗ್ಗೆ ಟ್ವಿಟರ್‌ನಲ್ಲಿ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಇದೇ ಕಾರಣಕ್ಕೆ ಟ್ವಿಟರ್‌ ಕೂಡ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕೋ ಟ್ವೀಟ್ಸ್ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕೋ ಟ್ವೀಟ್ಸ್ ಫೀಚರ್ಸ್‌ ಸೇರ್ಪಡೆ ಮಾಡಿದೆ. ಟ್ವಿಟರ್‌ ಅಂತಿಮವಾಗಿ ತನ್ನ ಬಳಕೆದಾರರಿಗೆ ಕೋ ಟ್ವೀಟ್ಸ್ ಫೀಚರ್ಸ್‌ ಅನ್ನು ಲೈವ್‌ ಮಾಡಿದೆ. ಇನ್ನು ಈ ಹೊಸ ಫೀಚರ್ಸ್‌ ಇಬ್ಬರು ಬಳಕೆದಾರರು ಒಟ್ಟಿಗೆ ಪೋಸ್ಟ್ ಮಾಡುವುದಕ್ಕೆ ಅನುಮತಿಸಲಿದೆ. ಅಂದರೆ ಇಬ್ಬರು ಬಳಕೆದಾರರು ಟ್ವೀಟ್‌ನಲ್ಲಿ ಪರಸ್ಪರ ಸಹಕರಿಸುವುದಕ್ಕೆ ಸಹಾಯ ಮಾಡಲಿದೆ. ಕೋ ಟ್ವೀಟ್ಸ್‌ ಫೀಚರ್ಸ್‌ನಲ್ಲಿ ಒಬ್ಬ ಬಳಕೆದಾರ ಪೋಸ್ಟ್‌ ಅನ್ನು ಟ್ವೀಟ್‌ ಮಾಡಬೇಕು, ನಂತರ ಅದೇ ಟ್ವೀಟ್‌ಗೆ ಎರಡನೇ ಟ್ವಿಟರ್‌ ಬಳಕೆದಾರರನ್ನು ಕೋ ಆಥರ್‌ ಆಗಿ ಸೇರಿಸಬಹುದಾಗಿದೆ.

ಟ್ವಿಟರ್‌

ಟ್ವಿಟರ್‌ನಲ್ಲಿ ಹೆಚ್ಚು ಜನರನ್ನು ಆಕರ್ಷಿಸುವುದಕ್ಕೆ ಹಾಗೂ ಟ್ವಿಟರ್‌ ಬಳಕೆದಾರರ ಅನುಭವ ಸುಧಾರಿಸುವುದಕ್ಕೆ ಟ್ವಿಟರ್‌ ಮುಂದಾಗಿದೆ. ಅದರಂತೆ ಬಹು ದಿನಗಳಿಂದ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕೋ ಟ್ವೀಟ್ಸ್‌ ಫೀಚರ್ಸ್‌ ಅಂತಿಮವಾಗಿ ಲೈವ್‌ ಆಗಿದೆ. ಪ್ರಸ್ತುತ ಈ ಫೀಚರ್ಸ್‌ ಯುಎಸ್, ಕೆನಡಾ ಮತ್ತು ಕೊರಿಯಾದಂತಹ ಕೆಲವು ಆಯ್ದ ಪ್ರದೇಶಗಳಲ್ಲಿ ಕೆಲವು ಬಳಕೆದಾರರಿಗೆ ಮಾತ್ರ ಲೈವ್ ಆಗುತ್ತಿದೆ. ಹಾಗಾದ್ರೆ ಕೋ ಟ್ವೀಟ್ಸ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ವಿಟರ್‌

ಟ್ವಿಟರ್‌ನ ಕೋ ಟ್ವೀಟ್ಸ್‌ ಫೀಚರ್ಸ್‌ ಕೆಲವೇ ದೇಶಗಳಲ್ಲಿ ಕೆಲವು ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಫೀಚರ್ಸ್‌ ಇನ್ನು ಕೂಡ ಪರೀಕ್ಷಿಸಲ್ಪಡುತ್ತಿರುವುದರಿಂದ ಇನ್ನೂ ವ್ಯಾಪಕವಾದ ರೋಲ್‌ಔಟ್ ಆಗಿಲ್ಲ ಎಂದು ಹೇಳಲಾಗಿದೆ. ಇನ್ನು ಟ್ವಿಟರ್‌ನಲ್ಲಿ ಜನರು ಸಹಯೋಗಿಸಲು ನಾವು ಹೊಸ ಮಾರ್ಗಗಳನ್ನು ಅನ್ವೇಷಿಸುವುದನ್ನು ಮುಂದುವರಿಸುತ್ತಿದ್ದೇವೆ ಎಂದು ಟ್ವಿಟರ್‌ ಹೇಳಿಕೊಂಡಿದೆ. ಅಲ್ಲದೆ ಹೊಸ ಪ್ರೇಕ್ಷಕರನ್ನು ಬೆಳೆಯಲು ಮತ್ತು ತಲುಪಲು ಮತ್ತು ಇತರ ಖಾತೆಗಳೊಂದಿಗೆ ಅವರ ಸಹಯೋಗವನ್ನು ಬಲಪಡಿಸಲು ಕೋ ಟ್ವೀಟ್ಸ್‌ ಸಹಾಯ ಮಾಡಲಿದೆ ಎಂದು ಹೇಳಿದೆ.

ಕೋ ಟ್ವೀಟ್‌ ಅನ್ನು ಪೋಸ್ಟ್‌ ಮಾಡುವುದು ಹೇಗೆ?

ಕೋ ಟ್ವೀಟ್‌ ಅನ್ನು ಪೋಸ್ಟ್‌ ಮಾಡುವುದು ಹೇಗೆ?

ಟ್ವಿಟರ್‌ನಲ್ಲಿ ಕೋ ಟ್ವಿಟ್‌ ಮಾಡುವುದು ಕೂಡ ಸಾಮಾನ್ಯ ಟ್ವೀಟ್‌ ಮಾದರಿಯಲ್ಲಿಯೇ ಇರಲಿದೆ. ಆದರೆ ಬಳಕೆದಾರರು ಪೋಸ್ಟ್‌ಗೆ ಕೋ-ಆಥರ್‌ ಆಗುವ ಇನ್ನೊಬ್ಬ ಬಳಕೆದಾರರನ್ನು ಇನ್ವೈಟ್‌ CoTweet ಐಕಾನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ನೀವು ಕೋ-ಟ್ವೀಟ್‌ಗೆ ಆಯ್ಕೆ ಮಾಡುವ ಇತರ ಬಳಕೆದಾರರು ನಿಮ್ಮನ್ನು ಅನುಸರಿಸುವ ಮತ್ತು ಸಾರ್ವಜನಿಕ ಖಾತೆಯನ್ನು ಹೊಂದಿರುವವರಾಗಿರಬೇಕು. ಇನ್ನು ನೀವು ಕೋ-ಟ್ವೀಟ್‌ ಮಾಡುವ ಸಮಯದಲ್ಲಿ ನೀವು ಕೇವಲ ಒಬ್ಬ ಇತರ ಬಳಕೆದಾರರೊಂದಿಗೆ ಕೋ-ಟ್ವೀಟ್‌ ಮಾಡಬಹುದು.

ಕೋ-ಟ್ವೀಟ್‌

ಕೋ-ಟ್ವೀಟ್‌ ಅನ್ನು ಮಾಡಿದ ನಂತರ ಈ ಟ್ವೀಟ್ ಅನ್ನು ನೋಡಬಹುದಾದ ಯಾವುದೇ ಬಳಕೆದಾರರು ರೀಟ್ವೀಟ್ ಮಾಡಬಹುದು. ಅಲ್ಲದೆ ಮೆನ್ಶನ್‌ ಅನ್ನು ಕೂಡ ಟ್ವೀಟ್ ಮಾಡಬಹುದು ಮತ್ತು ಕಾಮೆಂಟ್ ಮಾಡಬಹುದು. ಆದರೆ ಕೋ ಟ್ವೀಟ್ಸ್‌ ಅನ್ನು ಪ್ರಮೋಷನ್‌ ಮಾಡಲಾಗುವುದಿಲ್ಲ. ಹಾಗೆಯೇ ಕೋ-ಟ್ವೀಟ್‌ ಇನ್ವೈಟ್‌ ಕಳುಹಿಸುವವರು ಮಾತ್ರ ಕೋ-ಟ್ವೀಟ್‌ ಅನ್ನು ಪಿನ್ ಮಾಡಬಹುದು. ಕೋ-ಟ್ವೀಟ್‌ಗೆ ಇನ್ವೈಟ್‌ ಪಡೆದ ಬಳಕೆದಾರರು ಇನ್ವೈಟ್‌ ಅನ್ನು ನಿರಾಕರಿಸಬಹುದು. ಅಲ್ಲದೆ ಇನ್ವೈಟ್‌ ಕಳುಹಿಸುವ ಅಕೌಂಟ್‌ ಅನ್ನು ಬ್ಲಾಕ್‌ ಮಾಡುವುದಕ್ಕೆ ಕೂಡ ಅವಕಾಶ ನೀಡಲಾಗಿದೆ.

ಕೋ-ಟ್ವೀಟ್ಸ್‌

ಕೋ-ಟ್ವೀಟ್ಸ್‌ ಅನ್ನು ಇಬ್ಬರು ಆಥರ್‌ಗಳ ಹೆಸರುಗಳು ಮತ್ತು ಪ್ರೊಫೈಲ್ ಚಿತ್ರಗಳಿಂದ ಗುರುತಿಸಬಹುದಾಗಿದೆ. ಅಲ್ಲದೆ ಇಬ್ಬರು ಲೇಖಕರ ಟೈಮ್‌ಲೈನ್‌ಗಳನ್ನು ಅನುಸರಿಸುವವರಿಗೆ ಮಾತ್ರ ಕೋ ಟ್ವೀಟ್ಸ್‌ ಕಾಣಿಸಲಿದೆ. ಕೋ-ಟ್ವೀಟ್ಸ್‌ ಪ್ರಸ್ತುತ ಟ್ವೀಟರ್‌ ವಲಯಗಳು, ಸಮುದಾಯಗಳು ಅಥವಾ ಸೂಪರ್ ಫಾಲೋಗಳು-ಮಾತ್ರ ಟ್ವೀಟ್‌ಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಕೋ ಟ್ವೀಟ್‌ನ ಮೂಲ ಲೇಖಕರಾಗಿದ್ದರೆ ಅವುಗಳನ್ನು ಸ್ಪೇಸ್‌ ಹೋಸ್ಟ್‌ಗಳು ಟ್ವಿಟರ್‌ ಸ್ಪೇಸ್‌ಗಳಿಗೆ ಪಿನ್ ಮಾಡಬಹುದು.

ಟ್ವಿಟರ್‌

ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಮುಖ ವ್ಯಕ್ತಿಗಳ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಆಗಿ ಭಾರಿ ಸುದ್ದಿಯಾಗಿತ್ತು. ಆದರಿಂದ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಆಗದಂತೆ ತಡೆಯುವುದಕ್ಕಾಗಿ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಟ್ವಿಟರ್‌ ಅಕೌಂಟ್‌ ಅನ್ನು ಹ್ಯಾಕ್‌ ಆಗದಂತೆ ತಡೆಗಟ್ಟುವುದಕ್ಕೆ ಕೆಳಗಿನ ಕ್ರಮಗಳನ್ನು ಅನುಸರಿಸಿರಿ.

ಸ್ಟ್ರಾಂಗ್‌ ಪಾಸ್‌ವರ್ಡ್ ಬಳಸಿ

ಸ್ಟ್ರಾಂಗ್‌ ಪಾಸ್‌ವರ್ಡ್ ಬಳಸಿ

ಟ್ವಿಟರ್ ಗಾಗಿ ಸ್ಟ್ರಾಂಗ್‌ ಪಾಸ್‌ವರ್ಡ್‌ ಬಳಸುವುದು ಅತಿ ಅವಶ್ಯಕವಾಗಿದೆ. ಆ ಪಾಸ್‌ವರ್ಡ್ ಅನ್ನು ಬೇರೆಡೆ ಬಳಸುವುದಿಲ್ಲ ಎಂಬುದನ್ನು ಮೊದಲು ನೀವು ಖಚಿತಪಡಿಸಿಕೊಂಡಿರಬೇಕು. ಇದರಿಂದ ನಿಮ್ಮ ಎಲ್ಲಾ ಲಾಗಿನ್ ಮಾಹಿತಿಯನ್ನು ಸುರಕ್ಷಿತವಾಗಿಡಲು ಪಾಸ್‌ವರ್ಡ್ ಮ್ಯಾನೇಜರ್‌ ಸಾಫ್ಟ್‌ವೇರ್ ಅನ್ನು ಬಳಸಬಹುದು.

ಎರಡು ಅಂಶದ ದೃಢೀಕರಣ ಬಳಸಿ

ಎರಡು ಅಂಶದ ದೃಢೀಕರಣ ಬಳಸಿ

ಎರಡು ಅಂಶದ ದೃಢೀಕರಣ (Two-factor authentication) ಬಳಸುವುದರಿಂದ ಟ್ವಿಟರ್‌ ಖಾತೆ ಹ್ಯಾಕ್‌ ಆಗದಂತೆ ಮಾಡಬಹುದು. ಟು ಪ್ಯಾಕ್ಟರ್‌ ಅಥೆಂಟಿಕೇಶನ್‌ ಪಾಸ್‌ವರ್ಡ್ ಜೊತೆಗೆ ಸೆಕ್ಯುರ್‌ ಕೋಡ್ ಅನ್ನು ಬಳಸುವುದಕ್ಕೆ ಅವಕಾಶ ನೀಡಲಿದೆ. ಟ್ವಿಟರ್ ಬಳಕೆದಾರರು ಸೆಕ್ಯುರಿಟಿ ಸೆಟ್ಟಿಂಗ್‌ಗಳಲ್ಲಿ ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಬಹುದು. ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿದ ನಂತರ, ಬಳಕೆದಾರರಿಗೆ ದ್ವಿತೀಯ ಲಾಗಿನ್ ವಿಧಾನದೊಂದಿಗೆ ಪಾಸ್‌ವರ್ಡ್ ಅಗತ್ಯವಿರುತ್ತದೆ.

ಫಿಶಿಂಗ್ ಬಗ್ಗೆ ಎಚ್ಚರದಿಂದಿರಿ

ಫಿಶಿಂಗ್ ಬಗ್ಗೆ ಎಚ್ಚರದಿಂದಿರಿ

ದಾಳಿಕೋರರು ಟ್ವಿಟರ್ ನಲ್ಲಿ ಟ್ವೀಟ್‌ಗಳು, ಇಮೇಲ್‌ಗಳು ಮತ್ತು ನೇರ ಸಂದೇಶಗಳನ್ನು ಬಳಸಿಕೊಂಡು ಖಾಸಗಿ ಮಾಹಿತಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಲಾಗಿನ್ ಮಾಹಿತಿಯನ್ನು ನಮೂದಿಸುವಾಗ ಯಾವಾಗಲೂ ಜಾಗರೂಕರಾಗಿರಿ.

ಸುರಕ್ಷಿತ ಡಿವೈಸ್‌ಗಳಲ್ಲಿ ಟ್ವಿಟರ್ ಅನ್ನು ಬಳಸಿ

ಸುರಕ್ಷಿತ ಡಿವೈಸ್‌ಗಳಲ್ಲಿ ಟ್ವಿಟರ್ ಅನ್ನು ಬಳಸಿ

ಇತ್ತೀಚಿನ ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳು ಮತ್ತು ಆಂಟಿ ವೈರಸ್ ಸಾಫ್ಟ್‌ವೇರ್‌ನೊಂದಿಗೆ ನವೀಕರಿಸಲಾದ ಸುರಕ್ಷಿತ ಡಿವೈಸ್‌ಗಳಲ್ಲಿ (ಕಂಪ್ಯೂಟರ್, ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಇತ್ಯಾದಿ) ಟ್ವಿಟರ್ ಅನ್ನು ಪ್ರವೇಶಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

Best Mobiles in India

English summary
Twitter has finally gone live with its new CoTweets feature

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X