ಟ್ವಿಟರ್‌ನಲ್ಲಿ ಉದ್ಯೋಗವಕಾಶ? ನೋಡಲ್‌ ಅಧಿಕಾರಿ ಸ್ಥಾನಕ್ಕೆ ಅರ್ಜಿ ಆಹ್ವಾನ?

|

ಜನಪ್ರಿಯ ಮೈಕ್ರೋಬ್ಲಾಗಿಂಗ್‌ ತಾಣ ಟ್ವಿಟರ್‌ ಭಾರತದಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಭಾರತದಲ್ಲಿ ಹೊಸ ಐಟಿ ನಿಯಮಗಳನ್ನು ಅನುಸರಿಸಲು ಈಗಾಗಲೇ ಕ್ರಮ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿ ಸ್ಥಾನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಟ್ವಿಟರ್ ಲಿಂಕ್ಡ್ಇನ್‌ ನಲ್ಲಿ ಉದ್ಯೋಗಾವಕಾಶಗಳನ್ನು ಪೋಸ್ಟ್ ಮಾಡಿದೆ. ಅಗತ್ಯ ಕೌಶಲ್ಯ ಮತ್ತು ಅನುಭವ ಹೊಂದಿರುವ ಯಾರಾದರೂ ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಟ್ವಿಟರ್‌

ಹೌದು, ಟ್ವಿಟರ್‌ ಭಾರತದಲ್ಲಿ ಉದ್ಯೋಗವಕಾಶ ನೀಡಿದ್ದು, ಅರ್ಜಿ ಆಹ್ವಾನಿಸಿದೆ. ಭಾರತ ಸರ್ಕಾರದ ಐಟಿ ನಿಯಮದ ಅನ್ವಯ ಕೆಲವು ಅಧಿಕಾರಿಗಳನ್ನು ನೇಮಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಟ್ವಿಟರ್ ರೆಸಿಡೆನ್ಸಿ ಕುಂದುಕೊರತೆ ಅಧಿಕಾರಿಗೆ ಉದ್ಯೋಗಾವಕಾಶವನ್ನು ಪೋಸ್ಟ್ ಮಾಡಿದೆ. ಈ ಸ್ಥಾನ ದೆಹಲಿಯಲ್ಲಿದೆ. ಉದ್ಯೋಗ ವಿವರಣೆಯಲ್ಲಿ, ಟ್ವಿಟರ್ ಭಾರತದಲ್ಲಿ ಟ್ವಿಟರ್ ಮಾಡುವ ಜನರಿಂದ ದೂರುಗಳ ಕುಂದುಕೊರತೆ ಪರಿಹಾರದ ಕಾರ್ಯವಿಧಾನದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಟ್ವೀಟರ್‌ ಹೊಸದಾಗಿ ಆಹ್ವಾನಿಸಿರುವ ಹುದ್ದೆಗಳ ವಿಶೇಷತೆ ಏನು? ಯಾರೆಲ್ಲಾ ಅರ್ಜಿ ಆಹ್ವಾನಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್

ಇನ್ನು ಟ್ವಿಟರ್ ಹೊಸ ಹುದ್ದೆಗಳ ಬಗ್ಗೆ ನೀಡಿರುವ ವಿವರಣೆಯಲ್ಲಿ ಟ್ವಿಟರ್‌ ಭಾರತದಲ್ಲಿ ಟ್ವಿಟರ್ ಮಾಡುವ ಜನರಿಂದ ದೂರುಗಳ ಕುಂದುಕೊರತೆ ಪರಿಹಾರದ ಕಾರ್ಯವಿಧಾನದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಟ್ವಿಟರ್ ಇಂಕ್‌ನ ಕಾನೂನು ತಂಡದ ಭಾಗವಾಗಿದೆ ಮತ್ತು ಸ್ಯಾನ್ ಫ್ರಾನ್ಸಿಸ್ಕೊ, ಸಿಎ ನಲ್ಲಿರುವ ಕಂಪನಿಯ ಪ್ರಧಾನ ಕಚೇರಿಗೆ ವರದಿ ಮಾಡುತ್ತದೆ. ಮಿತ್ರ ತಂಡಗಳ (ಕಾನೂನು ಮತ್ತು ನಂಬಿಕೆ ಮತ್ತು ಸುರಕ್ಷತೆ ಸೇರಿದಂತೆ) ಸಹೋದ್ಯೋಗಿಗಳೊಂದಿಗೆ ನೀವು ನಿಕಟವಾಗಿ ಸಹಕರಿಸುತ್ತೀರಿ, ನಿಮ್ಮದೇ ಆದ ವಿಷಯ-ಪರಿಣತಿಯನ್ನು ಒದಗಿಸುತ್ತೀರಿ ಮತ್ತು ಅಗತ್ಯವಿದ್ದಾಗ ಇತರರ ಪರಿಣತಿಯನ್ನು ಬಯಸುತ್ತೀರಿ ಎಂದು ಹೇಳಿದೆ.

ಟ್ವಿಟರ್

ಅಲ್ಲದೆ ನೀವು ವಿವಿಧ ತಂಡಗಳು ಮತ್ತು ಹಿನ್ನೆಲೆಗಳಿಂದ ಸಹೋದ್ಯೋಗಿಗಳೊಂದಿಗೆ ಸಹಭಾಗಿತ್ವ ವಹಿಸಬೇಕು ಮತ್ತು ಆಂತರಿಕ ಮತ್ತು ಬಾಹ್ಯ ಮಧ್ಯಸ್ಥಗಾರರನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು, ಇವೆಲ್ಲವೂ ಟ್ವಿಟರ್ ಮತ್ತು ಭಾರತದಲ್ಲಿನ ನಮ್ಮ ಬಳಕೆದಾರರಿಗಾಗಿ ತೀವ್ರವಾಗಿ ಪ್ರತಿಪಾದಿಸುತ್ತದೆ. ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಸಾರ್ವಜನಿಕರೊಂದಿಗೆ ಅಥವಾ ಸರ್ಕಾರಿ ಅಧಿಕಾರಿಗಳೊಂದಿಗೆ ಮೊದಲಿನ ಅನುಭವದೊಂದಿಗೆ ಪರಿಣಿತ ವೃತ್ತಿಪರರಿಗೆ ಈ ಸ್ಥಾನವು ಸೂಕ್ತವಾಗಿದೆ. ಇದಕ್ಕಾಗಿ ಕನಿಷ್ಠ ಆರು ವರ್ಷಗಳ ಸಂಬಂಧಿತ ಅರ್ಹತೆಗಳು ಮತ್ತು ಕೆಲಸದ ಅನುಭವವನ್ನು ಹೊಂದಿರಬೇಕು ಎನ್ನಲಾಗಿದೆ.

ಅಧಿಕಾರಿ

ಇನ್ನು ಸರ್ಕಾರದ ವರದಿಗಳು, ಆದೇಶಗಳು ಮತ್ತು ದೂರುಗಳಿಗೆ ಸ್ಪಂದಿಸುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ನೋಡಲ್‌ ಅಧಿಕಾರಿ ನೋಡಿಕೊಳ್ಳಬೇಕಾಗುತ್ತದೆ. ಇವರು ಭಾರತದ ಕಾನೂನು ಜಾರಿ ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ಸಮನ್ವಯದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಅರ್ಜಿದಾರರು ಭಾರತದ ನಿವಾಸಿಯಾಗಬೇಕು ಮತ್ತು ಕನಿಷ್ಠ ಆರು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಇದಲ್ಲದೆ ಟ್ವಿಟರ್ ಕನಿಷ್ಠ 15 ವರ್ಷಗಳ ಕೆಲಸದ ಅನುಭವ ಹೊಂದಿರುವ ಮುಖ್ಯ ಅನುಸರಣೆ ಅಧಿಕಾರಿಯನ್ನು ಹುಡುಕುತ್ತಿದೆ. ಸಂಬಂಧಪಟ್ಟ ವ್ಯಕ್ತಿಯು ಟ್ವಿಟರ್ ಇಂಕ್‌ನೊಳಗಿನ ಕಾನೂನು ತಂಡದ ಭಾಗವಾಗುತ್ತಾರೆ ಎನ್ನಲಾಗಿದೆ. ಹೆಚ್ಚಿನ ವಿವರಗಳಿಗಾಗಿ ನೀವು ಟ್ವಿಟರ್‌ನ ಅಧಿಕೃತ ಲಿಂಕ್ಡ್‌ಇನ್ ಪುಟಕ್ಕೆ ಭೇಟಿ ನೀಡಬೇಕಾಗುತ್ತದೆ.

Best Mobiles in India

English summary
Twitter has posted job openings on Linkedin for the position of chief compliance officer, nodal officer and grievance officer.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X