ಟ್ವಿಟ್ಟರ್‌ನಲ್ಲಿ ಬರುತ್ತಿದೆ ಅನ್‌ಫಾಲೋ ಸಲಹೆ..! ಸುಳ್ಳು ಸುದ್ದಿಗೆ ಬಿಗ್ ಅಂಕುಶ..!

By Avinash
|

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹಾಗೂ ಟ್ರೋಲ್‌ಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಈ ಸಮಸ್ಯೆ ಪರಿಹರಿಸಲು ವಾಟ್ಸ್‌ಆಪ್‌, ಫೇಸ್‌ಬುಕ್‌, ಟ್ವಿಟ್ಟರ್ ಸೇರಿ ಅನೇಕ ಸಾಮಾಜಿಕ ಜಾಲತಾಣ ಸಂಸ್ಥೆಗಳು ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿವೆ.

Twitter Shortcut ಕೀಗಳನ್ನು ಬಳಸುವುದು ಟ್ವಿಟ್ಟಿಗರ ಮೂಲ ಲಕ್ಷಣಗಳಲ್ಲೊಂದು!!

ಇತ್ತಿಚೆಗೆ ತಾನೇ ಭಾರತದಲ್ಲಿ ವಾಟ್ಸ್‌ಆಪ್‌ ಫಾರ್‌ವರ್ಡ್‌ ಮೇಸೆಜ್‌ಗಳಿಗೆ ನಿರ್ಬಂಧ ವಿಧಿಸಿರುವುದು, ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಅನುಮಾನಾಸ್ಪದ ಪ್ರೊಫೈಲ್‌ ಮತ್ತು ಪೇಜ್‌ಗಳನ್ನು ಡಿಲೀಟ್ ಮಾಡುತ್ತಿರುವುದು ಸೇರಿದಂತೆ ನಕಲಿ ಸುದ್ದಿಗಳ ತಡೆಗೆ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಟ್ವಿಟ್ಟರ್‌ನಲ್ಲಿ ಬರುತ್ತಿದೆ ಅನ್‌ಫಾಲೋ ಸಲಹೆ..! ಸುಳ್ಳು ಸುದ್ದಿಗೆ ಬಿಗ್ ಅಂಕುಶ.

ಈಗ ಟ್ವಿಟ್ಟರ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಇಷ್ಟು ದಿನ ನಿಮಗೆ ಫಾಲೋ ಸಲಹೆಗಳನ್ನು ತೋರಿಸುತ್ತಿದ್ದ ಟ್ವಿಟ್ಟರ್ ಈಗ ಅನ್‌ಫಾಲೋ ಸಲಹೆಗಳನ್ನು ನೀಡಲು ಮುಂದಾಗಿದೆ. ಈ ಫೀಚರ್ ಫೇಸ್‌ಬುಕ್‌ಗೂ ಬರುವ ಸಾಧ್ಯತೆ ಇದ್ದು, ಫ್ರೇಂಡ್ ಸಲಹೆ ಜಾಗದಲ್ಲಿ ಅನ್‌ಫ್ರೇಂಡ್‌ ಸಲಹೆಗಳು ಬರುವ ದಿನಗಳು ದೂರವುಳಿದಿಲ್ಲ.

ಬಳಕೆದಾರರಿಗೆ ಉತ್ತಮ ಸೇವೆ

ಬಳಕೆದಾರರಿಗೆ ಉತ್ತಮ ಸೇವೆ

ಸಾಮಾಜಿಕ ಜಾಲತಾಣದ ಜತೆ ಮೈಕ್ರೋ ಬ್ಲಾಗಿಂಗ್ ತಾಣವಾಗಿರುವ ಟ್ವಿಟ್ಟರ್ ತನ್ನ ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡುವತ್ತ ಮುಂದುವರೆದಿದ್ದು, ಹೊಸ ಹೊಸ ಫೀಚರ್‌ಗಳನ್ನು ತಂದು ಗ್ರಾಹಕರ ಅನುಭವವನ್ನು ಹೆಚ್ಚಿಸಲು ಟ್ವಿಟ್ಟರ್ ಮುಂದಾಗಿದೆ. ಈ ಮೂಲಕ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆಯಾ ಕಾದು ನೋಡಬೇಕು.

ಅನ್‌ಫಾಲೋ ಸಲಹೆ

ಅನ್‌ಫಾಲೋ ಸಲಹೆ

ಟ್ವಿಟ್ಟರ್‌ನಲ್ಲಿ ಇಷ್ಟು ದಿನ ನಿಮ್ಮ ಆಸಕ್ತಿ, ಅಭಿರುಚಿಗಳಿಗನುಗುಣವಾಗಿ ಫಾಲೋ ಸಲಹೆಗಳು ಸಿಗುತ್ತಿದ್ದವು. ಆದರೆ, ಈಗ ನಿಮಗೆ ಅದೇ ಟ್ವಿಟ್ಟರ್ ಅನ್‌ಫಾಲೋ ಸಲಹೆಗಳನ್ನು ನೀಡಲು ಮುಂದಾಗಿದೆ. ಟ್ವಿಟ್ಟರ್ ಅಲ್ಗಾರೀಥಮ್‌ನಂತೆ ಯಾವ ಟ್ವಿಟ್ಟರ್ ಅಕೌಂಟ್ ನಿಯಮಗಳನ್ನು ಉಲ್ಲಂಘಿಸುತ್ತದೆಯೋ ಅಥವಾ ಸುಳ್ಳು ಸುದ್ದಿಗಳನ್ನು ಹೆಚ್ಚು ಪ್ರಚಾರ ಮಾಡುತ್ತದೆಯೋ ಅಂತಹ ಟ್ವಿಟ್ಟರ್ ಅಕೌಂಟ್‌ಗಳನ್ನು ಅನ್‌ಫಾಲೋ ಸಲಹೆಗಳಲ್ಲಿ ತೋರಿಸಲಿದೆ.

ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಟ್ವಿಟ್ಟರ್ ಹೀಗಾಗಲೇ ಖಚಿತ ಪಡಿಸಿದ್ದು, ಅನ್‌ಫಾಲೋ ಸಲಹೆ ಫೀಚರ್‌ನ್ನು ಕೆಲವೊಂದು ಗ್ರೂಪ್‌ ಬಳಕೆದಾರರಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು, ಯಶಸ್ವಿಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಟ್ವಿಟ್ಟರ್ ಈ ಫೀಚರ್‌ನ್ನು ಎಲ್ಲ ಬಳಕೆದಾರರಿಗೂ ಪರಿಚಯಿಸುತ್ತದೆ. ಕೆಲವೊಂದು ನಿರ್ದಿಷ್ಟ ಅಕೌಂಟ್‌ಗಳನ್ನು ಇಲ್ಲಿ ತೋರಿಸಲಾಗುತ್ತಿದೆ.

ಎಲ್ಲರನ್ನೂ ಫಾಲೋ ಮಾಡುವ ಅಗತ್ಯವಿಲ್ಲ

ಎಲ್ಲರನ್ನೂ ಫಾಲೋ ಮಾಡುವ ಅಗತ್ಯವಿಲ್ಲ

ಟ್ವಿಟ್ಟರ್ ಅನ್‌ಫಾಲೋ ಸಲಹೆ ಫೀಚರ್ ಪರಿಚಯಿಸಿರುವುದಲ್ಲದೇ ಎಲ್ಲರನ್ನೂ ಫಾಲೋ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ. ಜಗತ್ತಿನಲ್ಲಿ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಎಲ್ಲರನ್ನೂ ಫಾಲೋ ಮಾಡುವ ಅಗತ್ಯವಿಲ್ಲ ಎಂದು ಘೋಷಿಸಿದೆ.

ಅಧಿಕೃತವಾಗಿ ಘೋಷಿಸದ ಟ್ವಿಟ್ಟರ್

ಅಧಿಕೃತವಾಗಿ ಘೋಷಿಸದ ಟ್ವಿಟ್ಟರ್

ಅನ್‌ಫಾಲೋ ಸಲಹೆಯ ಫೀಚರ್ ಯಾವಾಗ ಎಲ್ಲ ಬಳಕೆದಾರರಿಗೆ ಸಿಗುತ್ತೆ ಎಂಬುದನ್ನು ಟ್ವಿಟ್ಟರ್ ಘೋಷಿಸಿಲ್ಲ. ಮತ್ತು ಯಾವ ರೀತಿ ಅನ್‌ಫಾಲೋ ಸಲಹೆಯನ್ನು ನೀಡುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ, ಟ್ವಿಟ್ಟರ್ ತನ್ನ ಪ್ಲಾಟ್‌ಫಾರ್ಮ್‌ನ್ನು ಬಳಕೆಗೆ ಯೋಗ್ಯವಾಗಿಸಲು ಅಥವಾ ಬಳಕೆದಾರ ಸ್ನೇಹಿಯಾಗಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಫೀಚರ್ ಸಹ ಜಾರಿಗೆ ಬರುವ ಸಾಧ್ಯತೆ ಇದೆ.

ಡಿಲೀಟ್ ಅಕೌಂಟ್ ಅಭಿಯಾನ

ಡಿಲೀಟ್ ಅಕೌಂಟ್ ಅಭಿಯಾನ

ಸುಳ್ಳು ಸುದ್ದಿ ಮತ್ತು ಗಾಸಿಪ್‌ಗಳನ್ನು ತಡೆಗಟ್ಟಲು ಟ್ವಿಟ್ಟರ್ ಅಕೌಂಟ್‌ಗಳನ್ನು ಡಿಲೀಟ್ ಮಾಡುವ ಅಭಿಯಾನಕ್ಕೆ ಮುಂದಾಗಿದೆ. ಆಕ್ಷೇಪಾರ್ಹ ವಿಷಯಗಳನ್ನು ಶೇರ್ ಮಾಡುವ ಅಕೌಂಟ್‌ಗಳನ್ನು ಟ್ವಿಟ್ಟರ್ ಹುಡುಕುತ್ತಿದ್ದು, ಆಕ್ಷೇಪಾರ್ಹ ಅಂಶಗಳು ನಿಮ್ಮ ಟ್ವಿಟ್ಟರ್‌ನಲ್ಲಿ ಇದ್ದರೆ ನಿಮ್ಮ ಅಕೌಂಟ್‌ ಡಿಲೀಟ್‌ ಆಗುತ್ತದೆ.

2016ರ ಅಮೇರಿಕಾ ಚುನಾವಣೆ

2016ರ ಅಮೇರಿಕಾ ಚುನಾವಣೆ

ಸಾಮಾಜಿಕ ಜಾಲತಾಣಗಳ ಅಧ್ಯಯನದಂತೆ ಟ್ವಿಟ್ಟರ್‌ನಲ್ಲಿ ರಷ್ಯಾ ಅನೇಕ ಸುಳ್ಳು ಸುದ್ದಿಗಳನ್ನು ಪಸರಿಸಿತ್ತು ಮತ್ತು ಟ್ರೋಲ್‌ಗಳನ್ನು ಶೇರ್ ಮಾಡಲು 2016ರಲ್ಲಿ ಪ್ರಾರಂಭಿಸಿತ್ತು. ಈ ಸುಳ್ಳು ಸುದ್ದಿಗಳ ಪ್ರಭಾವ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಮೇಲಾಯಿತು. ಏಕೆಂದರೆ, ಬಹಳಷ್ಟು ಅಕೌಂಟ್‌ಗಳು ಚುನಾವಣೆ ಘೋಷಣೆಯ ಒಂದು ತಿಂಗಳ ಮುಂಚೆ ಸೃಷ್ಟಿಯಾಗಿದ್ದವು.

ಇರಾನ್‌ನಲ್ಲಿ ಅಕೌಂಟ್‌ ಡಿಲೀಟ್‌

ಇರಾನ್‌ನಲ್ಲಿ ಅಕೌಂಟ್‌ ಡಿಲೀಟ್‌

ಇತ್ತೀಚಿನ ವರದಿಯಂತೆ ಸುಳ್ಳು ಸುದ್ದಿ ಮತ್ತು ಟ್ರೋಲ್‌ಗಳ ನಿಯಂತ್ರಣಕ್ಕಾಗಿ ಇರಾನ್‌ ಮತ್ತು ರಷ್ಯಾದಲ್ಲಿ 284 ಟ್ವಿಟ್ಟರ್‌ ಅಕೌಂಟ್‌ಗಳನ್ನು ಡಿಲೀಟ್ ಮಾಡಲಾಗಿದೆ. ಮಧ್ಯ ಏಷ್ಯಾ, ಲ್ಯಾಟಿನ್‌ ಅಮೇರಿಕಾ, ಬ್ರಿಟನ್ ಮತ್ತು ಯುಎಸ್‌ನಲ್ಲಿ 486 ಅಕೌಂಟ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಟ್ವಿಟ್ಟರ್ ಹೇಳಿಕೊಂಡಿದೆ.

Best Mobiles in India

English summary
Twitter may tell you whom to 'unfollow' in future. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X