ಅನಗತ್ಯ ಕಾಮೆಂಟ್‌ ಮಾಡೋರನ್ನ ತಡೆಯೋಕೆ ಟ್ವಿಟರ್‌ನಿಂದ ಮಾಸ್ಟರ್‌ ಪ್ಲಾನ್‌!

|

ಜನಪ್ರಿಯ ಮೈಕ್ರೋ-ಬ್ಲಾಗಿಂಗ್ ಸೈಟ್‌ ಟ್ವಿಟರ್‌ ತನ್ನ ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮ ಪಡಿಸುವ ಪ್ರಯತ್ನ ನಡೆಸುತ್ತಲೇ ಇದೆ. ಇದೇ ಕಾರಣಕ್ಕೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಳವಡಿಸುತ್ತಲೇ ಸಾಗಿದೆ. ಇದೀಗ ತನ್ನ ಬಳಕೆದಾರರಿಗೆ ಸಾಕಷ್ಟು ಉಪಯುಕ್ತ ಎನಿಸುವ ಹೊಸ ಫೀಚರ್ಸ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಇನ್ನು ಈ ಹೊಸ ಫೀಚರ್ಸ್‌ ನಿಮ್ಮ ಟ್ವೀಟ್‌ಗಳಿಗೆ ಅನಗತ್ಯವಾಗಿ ಅಸಹ್ಯಕರ ಟ್ವೀಟ್‌ ಮಾಡುವವರನ್ನು ರಿಮೋವ್‌ ಮಾಡಲು ಅವಕಾಶ ನೀಡಲಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಇನ್ಮುಂದೆ ನಿಮ್ಮ ಟ್ವೀಟ್‌ಗಳಿಗೆ ಅಸಹ್ಯಕರವಾಗಿ ಕಾಮೆಂಟ್‌ ಮಾಡುವವರನ್ನು ರಿಮೋವ್‌ ಮಾಡುವ ಅವಕಾಶ ನೀಡಲಿದೆ. ನೀವು ಮಾಡಿದ ಟ್ವೀಟ್‌ಗಳಿಗೆ ಅನಾವಶ್ಯಕ ಟ್ವೀಟ್‌ ಮಾಡುವ ನಿಮ್ಮ ಫಾಲೋವರ್‌ಗಳನ್ನು ರಿಮೋವ್‌ ಮಾಡಬಹುದಾಗಿದೆ. ನೀವು ಅವರನ್ನು ಬ್ಲಾಕ್‌ ಮಾಡುವ ಬದಲು ರಿಮೋವ್‌ ಮಾಡುವ ಆಯ್ಕೆ ನೀಡಲು ಟ್ವೀಟರ್‌ ಮುಂದಾಗಿದೆ. ಬಳಕೆದಾರರು ಶೀಘ್ರದಲ್ಲೇ ಈ ಫೀಚರ್ಸ್‌ ಅನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಟ್ವಿಟರ್‌ನ ಈ ಹೊಸ ಫಿಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌

ಟ್ವಿಟರ್‌ನಲ್ಲಿ ನೀವು ಮಾಡುವ ಟ್ವೀಟ್‌ಗಳಿಗೆ ನಿಮ್ಮ ಅನುಯಾಯಿಗಳು ಕಾಮೆಂಟ್‌ ಮಾಡುವುದು ಸಹಜ. ಹೀಗೆ ಕಾಮೆಂಟ್‌ ಮಾಡುವವರಲ್ಲಿ ಕೆಲವರು ನಿಮ್ಮನ್ನು ಬೇಕೆಂತಲೇ ಅಸಹ್ಯಕರವಾಗಿ ಕಾಮೆಂಟ್‌ ಮಾಡುವವರು ಇರುತ್ತಾರೆ. ಟ್ವಿಟರ್‌ನಲ್ಲಿ ನಿಮ್ಮನ್ನು ಹಣಿಯುವ ಪ್ರಯತ್ನದಲ್ಲಿ ಅನಗತ್ಯ ಎನಿಸುವ ಕಾಮೆಂಟ್‌ಗಳನ್ನು ಮಾಡುತ್ತಿರುತ್ತಾರೆ. ಇಂತಹವರಿಂದ ಟ್ವಿಟರ್‌ನಲ್ಲಿ ಕೆಲವೊಮ್ಮೆ ಕಿರಿಕಿರಿ ಎನಿಸಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಅವರನ್ನು ಬ್ಲಾಕ್‌ ಮಾಡುವುದಕ್ಕೆ ಮುಂದಾಗುತ್ತಾರೆ. ಆದ್ರೆ ಇನ್ಮುಂದೆ ನಿಮಗೆ ಅನಗತ್ಯವಾಗಿ ಕಾಮೆಂಟ್‌ ಮಾಡುವವರನ್ನು ಬ್ಲಾಕ್‌ ಮಾಡುವ ಬದು ಡೈರೆಕ್ಟ್‌ ಆಗಿ ರಿಮೋವ್‌ ಮಾಡುವ ಅವಕಾಶ ನೀಡಲು ಟ್ವಿಟರ್‌ ಮುಂದಾಗಿದೆ.

ಟ್ವಿಟರ್

ಟ್ವಿಟರ್ ವೆಬ್‌ನಲ್ಲಿ ಈ ಹೊಸ ಫೀಚರ್ ಅನ್ನು ಪರೀಕ್ಷಿಸುತ್ತಿರುವುದಾಗಿ ಘೋಷಿಸಿಸಲಾಗಿದೆ. ಬಳಕೆದಾರರು ಅನಗ್ತಯ ಕಾಮೆಂಟ್‌ ಮಾಡುವವರನ್ನು ಬ್ಲಾಕ್‌ ಮಾಡುವ ಬದಲು ರಿಮೋವ್‌ ಮಾಡಲು ಹೊಸ ಫೀಚರ್ಸ್‌ ಅನುವು ಮಾಡಿಕೊಡಲಿದೆ ಎಂದು ಟ್ವಿಟರ್‌ ಘೋಷಿಸಿದೆ. ನಿಮ್ಮ ಸ್ವಂತ ಫಾಲೋವರ್‌ಗಳನ್ನು ಮ್ಯಾನೇಜ್‌ ಮಾಡಲು ಇದು ಸುಲಭವಾಗಲಿದೆ. ಯಾಕೆಂದರೆ ನಿಮ್ಮ ಫಾಲೋವರ್‌ಗಳೇ ನಿಮ್ಮ ಟ್ವೀಟ್‌ಗಳಿಗೆ ಅನಗತ್ಯ ಕಾಮೆಂಟ್‌ ಮಾಡಿ ಇಲ್ಲ ಸಲ್ಲದ ಚರ್ಚೆಗಳಿಗೆ ಕಾರಣರಾಗುತ್ತಾರೆ. ಇಂತಹವರನ್ನು ಫಾಲೋ ಮಾಡದೆ ರಿಮೋವ್ ಮಾಡುವುದು ಉತ್ತಮ.

ಕಾಮೆಂಟ್‌

ಇನ್ನು ಅನಗತ್ಯ ಕಾಮೆಂಟ್‌ ಮಾಡುವ ಫಾಲೋವರ್ ರಿಮೋವ್‌ ಮಾಡಲು ನಿಮ್ಮ ಪ್ರೊಫೈಲ್‌ಗೆ ಹೋಗಿ ಮತ್ತು "ಫಾಲೋವರ್‌" ಕ್ಲಿಕ್ ಮಾಡಿ, ನಂತರ ಮೂರು-ಡಾಟ್ ಐಕಾನ್ ಕ್ಲಿಕ್ ಮಾಡಿ ಮತ್ತು "ಈ ಅನುಯಾಯಿಯನ್ನು ತೆಗೆದುಹಾಕಿ" ಆಯ್ಕೆ ಮಾಡಿ ಎಂದು ಟ್ವಿಟರ್ ಟ್ವೀಟ್‌ನಲ್ಲಿ ತಿಳಿಸಿದೆ. ನಿಮ್ಮ ಲಿಸ್ಟ್‌ನಿಂದ ನಈವು ಫಾಲೋವರ್ ಅನ್ನು ರಿಮೋವ್‌ ಮಾಡಿದ ನಂತರ ಅದು ತಕ್ಷಣವೇ ನಿಮ್ಮ ಫಾಲೋವರ್‌ಗೆ ತಿಳಿಯುವುದಿಲ್ಲ. ಆದರೆ ನಿಮ್ಮ ಟ್ವಿಟರ್‌ ಅಕೌಂಟ್‌ ಪಬ್ಲಿಕ್‌ ಅಕೌಂಟ್‌ ಆಗಿದ್ದರೆ, ಯಾರಾದರೂ ನಿಮ್ಮ ಟ್ವೀಟ್‌ಗಳನ್ನು ನೋಡಬಹುದು ಮತ್ತು ಅವರ ಅಡಿಯಲ್ಲಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಬಹುದು.

ಅಕೌಂಟ್‌

ಒಂದು ವೇಳೆ ನಿಮ್ಮ ಅಕೌಂಟ್‌ ಪಬ್ಲಿಕ್‌ ಅಕೌಂಟ್‌ ಆಗಿದ್ದರೆ ಈ ಫೀಚರ್ಸ್‌ ಉಪಯುಕ್ತ ಎನಿಸುವುದಿಲ್ಲ. ಅಂತಹ ಸಮಯದಲ್ಲಿ ಅವರನ್ನು ಬ್ಲಾಕ್‌ ಮಾಡುವುದೊಂದೆ ಉತ್ತಮ ಮಾರ್ಗವಾಗಿರುತ್ತದೆ. ಸದ್ಯ ಟ್ವಿಟರ್ ಈ ಫೀಚರ್ಸ್‌ ಅನ್ನು ಟೆಸ್ಟ್‌ ಮಾಡುತ್ತಿದೆ. ಅಂತಿಮ ಪಲಿತಾಂಶ ಏನು? ಇದರ ಉಪಯೋಗ ಹೇಗಿರಲಿದೆ ಅನ್ನೊದು ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಷ್ಟವಾಗಲಿದೆ. ಇದಲ್ಲದೆ ಐಒಎಸ್ ಆಪ್ ಗಾಗಿ ಮಾತ್ರ ಟ್ವಿಟರ್ ಎಡ್ಜ್ ಟು ಎಡ್ಜ್ ಫೀಚರ್ ಅನ್ನು ಪರೀಕ್ಷಿಸುತ್ತಿದೆ. ಈ ಫೀಚರ್ಸ್‌ ಬಳಕೆದಾರರಿಗೆ ಎಡ್ಜ್ ಟು ಎಡ್ಜ್ ಟ್ವೀಟ್‌ಗಳನ್ನು ಟೈಮ್‌ಲೈನ್‌ನ ಅಗಲವನ್ನು ವಿಸ್ತರಿಸಲು ಅವಕಾಶ ಮಾಡಿಕೊಡುತ್ತದೆ. ಇದರಿಂದ ಫೋಟೋಗಳು, ಜಿಐಎಫ್‌ಗಳು ಮತ್ತು ವೀಡಿಯೊಗಳು ಶೈನ್‌ ಆಗಲು ಹೆಚ್ಚಿನ ಅವಕಾಶವನ್ನು ಹೊಂದಿರುತ್ತವೆ.

Best Mobiles in India

English summary
Twitter announced that it is testing a new feature on the web that would let users remove followers without blocking them.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X