ಶೀಘ್ರದಲ್ಲೇ ಟ್ವಿಟರ್‌ನಲ್ಲಿಯೂ ಲಭ್ಯವಾಗಲಿದೆ ಈ ಜನಪ್ರಿಯ ಫೀಚರ್ಸ್‌!

|

ಜನಪ್ರಿಯ ಮೈಕ್ರೋ ಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ಸ್ಟೇಟಸ್‌ ಅಪ್ಡೇಟ್‌ ಮಾಡಲು ಅನುಮತಿಸುವ ಹೊಸ ಫೀಚರ್ಸ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಇನ್ನು ಈ ಫಿಚರ್ಸ್‌ ಅನ್ನು 'ವೈಬ್‌ಚೆಕ್‌' ಎಂದು ಹೆಸರಿಸಲಾಗಿತ್ತು, ಇದಕ್ಕಾಗಿ ಟ್ವಿಟರ್‌ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಬಳಕೆದಾರರಿಗೆ ಸ್ಟೇಟಸ್‌ ಅಪ್ಡೇಟ್‌ ಮಾಡುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಇದರಿಂದ ಟ್ವಿಟರ್‌ನಲ್ಲಿಯೂ ಕೂಡ ನಿಮ್ಮ ಸ್ಟೇಟಸ್‌ ಅನ್ನು ಅಪ್ಡೇಟ್‌ ಮಾಡಬಹುದಾಗಿದೆ. ಫೇಸ್‌ಬುಕ್‌ ಸ್ಟೇಟಸ್‌ ಮಾದರಿಯಲ್ಲಿ ಈ ಫಿಚರ್ಸ್‌ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇನ್ನು ಈ ಫೀಚರ್ಸ್‌ ಟ್ವಿಟರ್‌ನ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆಯಾ ಅಥವಾ ಟ್ವಿಟರ್‌ ಬ್ಲೂ ಟಿಕ್‌ ಚಂದಾದಾರರಿಗೆ ಮಾತ್ರ ಲಭ್ಯವಾಗುತ್ತಾ ಅನ್ನೊದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌

ಟ್ವಿಟರ್‌ ಬಳಕೆದಾರರು ಸ್ಟೇಟಸ್‌ ಅಪ್ಡೇಟ್‌ ಮಾಡುವುದಕ್ಕೆ ಟ್ವಿಟರ್ ವೈಬ್‌ಚೆಕ್‌ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಫೀಚರ್ಸ್‌ನಲ್ಲಿ ಎಮೋಜಿಯನ್ನು ಸೇರಿಸಲು ಸಹ ಸಾಧ್ಯವಾಗಬಹುದು ಎಂದು ಹೇಳಲಾಗಿದೆ. ಅಂದರೆ ಇದು ಫೇಸ್‌ಬುಕ್ ಪೋಸ್ಟ್‌ಗಳ ಭಾವನೆ/ಚಟುವಟಿಕೆ ಆಯ್ಕೆಯನ್ನು ಹೋಲುತ್ತದೆ. ಇನ್ನು ಈ ಫೀಚರ್ಸ್‌ ಕುರಿತು ಆನ್‌ಲೈನ್‌ನಲ್ಲಿ ಈಗಾಗಲೇ ಸಾಕಷ್ಟು ವಿಚಾರ ಹರಿದಾಡ್ತಿದೆ. ಹೊಸ ಫೀಚರ್ಸ್‌ ಕುರಿತಾದ ಸ್ಕ್ರೀನ್‌ಶಾಟ್‌ಗಳು ಹರಿದಾಡ್ತಿವೆ. ಸ್ಟ್ರೀನ್‌ ಶಾಟ್‌ ಮಾಹಿತಿ ಪ್ರಕಾರ ಸ್ಟೇಟಸ್‌ ಬಾಕ್ಸ್‌ ಅನ್ನು ಟ್ವಿಟರ್‌ ಪೋಸ್ಟ್‌ನ ಮೇಲ್ಬಾಗದಲ್ಲಿ ಕಾಣಬಹುದಾಗಿದೆ.

ಟ್ವಿಟರ್‌

ಇದಲ್ಲದೆ ಟ್ವಿಟರ್‌ ತನ್ನ ಬಳಕೆದಾರರಿಗೆ ತಾವು ಭಾಗವಾಗಿರಲು ಬಯಸದ ಸಂಭಾಷಣೆಗಳು ಅಥವಾ ಚರ್ಚೆಗಳಿಂದ ತಮ್ಮನ್ನು ತಾವು ಮೆನ್ಶನ್‌ ಮಾಡದೆ ಇರಲು ಅನುವು ಮಾಡಿಕೊಡುವ ಫೀಚರ್ಸ್‌ ಪರಿಚಯಿಸಿದೆ.ಈ ಹೊಸ ಮೆನ್ಶನ್‌ ಬಟನ್ ಬಳಕೆದಾರರನ್ನು ನಿರ್ದಿಷ್ಟ ಟ್ವೀಟ್‌ನಿಂದ ಅನ್‌ಟ್ಯಾಗ್ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ ಇದು ಮೂಲ ಟ್ವೀಟ್‌ನಿಂದ ತಮ್ಮನ್ನು ಅನ್‌ಟ್ಯಾಗ್ ಮಾಡಲು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರತ್ಯುತ್ತರಗಳನ್ನು ಸಕ್ರಿಯಗೊಳಿಸುತ್ತದೆ.

ಟ್ವಿಟರ್‌.ಕಾಮ್‌ ಮೂಲಕ ನಿಮ್ಮ ಟ್ವಿಟರ್ ಖಾತೆಯನ್ನು ನಿಷ್ಕ್ರಿಯ ಮಾಡಲು ಹೀಗೆ ಮಾಡಿ?

ಟ್ವಿಟರ್‌.ಕಾಮ್‌ ಮೂಲಕ ನಿಮ್ಮ ಟ್ವಿಟರ್ ಖಾತೆಯನ್ನು ನಿಷ್ಕ್ರಿಯ ಮಾಡಲು ಹೀಗೆ ಮಾಡಿ?

ಹಂತ:1 ವೆಬ್ ಬ್ರೌಸರ್‌ನಲ್ಲಿ Twitter.com ಗೆ ಹೋಗಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
ಹಂತ:2 ನಿಮ್ಮ ಪರದೆಯ ಕೆಳಗಿನ ಎಡ ಮೂಲೆಯಲ್ಲಿರುವ ಮೋರ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆಯ ಮೇಲೆ ಕ್ಲಿಕ್ ಮಾಡಿ.
ಹಂತ:3 ನಿಮ್ಮ ಖಾತೆಯ ಟ್ಯಾಬ್‌ನಿಂದ, ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸು ಕ್ಲಿಕ್ ಮಾಡಿ.
ಹಂತ:4 ನಿಷ್ಕ್ರಿಯಗೊಳಿಸು ಬಟನ್ ಕ್ಲಿಕ್ ಮಾಡಿ.
ಹಂತ:5 ಈಗ, ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಖಾತೆಯನ್ನು ನಿಷ್ಕ್ರಿಯಗೊಳಿಸಿ ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಯ್ಕೆಯನ್ನು ದೃಢೀಕರಿಸಿ

ಟ್ವಿಟರ್ ಆಪ್ಸ್‌ ಮೂಲಕ ನಿಮ್ಮ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಲು ಹೀಗೆ ಮಾಡಿ?

ಟ್ವಿಟರ್ ಆಪ್ಸ್‌ ಮೂಲಕ ನಿಮ್ಮ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಲು ಹೀಗೆ ಮಾಡಿ?

ಹಂತ:1 ಸೈಡ್ ಪ್ಯಾನೆಲ್ ಅನ್ನು ಪ್ರವೇಶಿಸಲು ಟ್ವಿಟರ್ ಅಪ್ಲಿಕೇಶನ್‌ನಲ್ಲಿ ಹೋಮ್ ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:2 ಈಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ವಿಭಾಗವನ್ನು ಟ್ಯಾಪ್ ಮಾಡಿ.
ಹಂತ:3 ನಿಮ್ಮ ಖಾತೆಯ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಈಗ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ಈಗ ನಿಷ್ಕ್ರಿಯಗೊಳಿಸು ಬಟನ್ ಅನ್ನು ಟ್ಯಾಪ್ ಮಾಡಿ.
ಹಂತ:6 ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ನಿಮ್ಮ ಆಯ್ಕೆಯನ್ನು ದೃಢೀಕರಿಸಿ.

Best Mobiles in India

English summary
Twitter is reportedly working on a ‘vibe check’ feature that allows users to set a status.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X