ಟ್ವಿಟರ್‌ನಿಂದ ಮತ್ತೆ ಅಕೌಂಟ್‌ ವೆರಿಫಿಕೇಶನ್ ಪ್ರಕ್ರಿಯೆ ಪ್ರಾರಂಭ!

|

ಜನಪ್ರಿಯ ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್‌ ಮತ್ತೆ ಬ್ಲೂ ಬ್ಯಾಡ್ಜ್‌ ರಿಕ್ವೆಸ್ಟ್‌ ಅನ್ನು ಪ್ರಾರಂಭಿಸುವುದಾಗಿ ಹೇಳಿದೆ. ಈ ಮೂಲಕ ಮತ್ತೊಮ್ಮೆ ಅಕೌಂಟ್‌ ವೆರಿಫಿಕೇಷನ್ ಅನ್ನು ಆರಂಭಿಸಲಿದೆ. ವೆರಿಫಿಕೇಷನ್ ಪ್ರಕ್ರಿಯೆಗಾಗಿ ಬರುತ್ತಿದ್ದ ಅಪ್ಲಿಕೇಶಗಳ ಹರಿವು ಹೆಚ್ಚಾಗಿದ್ದರಿಂದ ಬ್ಲೂ ಟಿಕ್‌ ವೆರಿಫಿಕೇಷನ್ ಪ್ರಕ್ರಿಯೆ ಸ್ಥಗಿತಗೊಳಿಸಿತ್ತು. ಆದರೆ ಇದೀಗ ಟ್ವಿಟರ್‌ ಮತ್ತೊಮ್ಮೆ ಬ್ಲೂ ಟಿಕ್‌ ಪರಿಶೀಲನೆಗಾಗಿ ಬರುವ ರಿಕ್ವೆಸ್ಟ್‌ ಅಪ್ಲಿಕೇಶನ್‌ಗಳನ್ನು ಆಹ್ವಾನಿಸಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಮತ್ತೆ ಬ್ಲೂ ಬ್ಯಾಡ್ಜ್‌ ರಿಕ್ವೆಸ್ಟ್‌ ಅಪ್ಲಿಕೇಶನ್‌ ಅನ್ನು ಶುರುಮಾಡಿದೆ. ಇದರಿಂದ ಇನ್ಮುಂದೆ ಟ್ವಿಟರ್‌ ಬಳಕೆದಾರರು ಅಕೌಂಟ್‌ ಅನ್ನು ಪರಿಶೀಲನೆ ಮಾಡಿಸುವುದಕ್ಕೆ ಅಪ್ಲಿಕೇಶನ್‌ ಸಲ್ಲಿಸಬಹುದಾಗಿದೆ. ನಿಮ್ಮ ಅಕೌಂಟ್‌ ವೆರಿಫಿಕೇಷನ್ ಆದ ನಂತರ ಬ್ಲೂ ಬ್ಯಾಡ್‌ ಅನ್ನು ಕಾಣಬಹುದಾಗಿದೆ. ಸಾರ್ವಜನಿಕ ಖಾತೆಗಳನ್ನು ಅಪ್ಡೇಟ್‌ ಮಾಡುವುದಕ್ಕಾಗಿ ಈ ಹೊಸ ಪ್ರಕ್ರಿಯೆಗಳನ್ನು ಶುರುಮಾಡಿರುವುದಾಗಿ ಟ್ವಿಟರ್‌ ಹೇಳಿದೆ. ಹಾಗಾದ್ರೆ ಟ್ವಿಟರ್‌ನಲ್ಲಿ ಮತ್ತೆ ಬ್ಲೂ ಬ್ಯಾಡ್ಜ್‌ ರಿಕ್ವೆಸ್ಟ್‌ ಪ್ರಕ್ರಿಯೆ ಶುರುವಾಗಿರೋದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್

ಟ್ವಿಟರ್ ನಕಲಿ ಖಾತೆಗಳನ್ನು ಪತ್ತೆ ಹಚ್ಚುವುದಕ್ಕಾಗಿ ಬ್ಲೂ ಟಿಕ್‌ ಪರಿಶೀಲನೆಯನ್ನು ಶುರುಮಾಡಿತ್ತು. ಅದರಲ್ಲೂ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಯಾವುದು ನಂಬಲಾರ್ಹ ಮಾಹಿತಿ, ಯಾವುದು ಪಕ್ಕಾ ಮಾಹಿತಿ ನೀಡುತ್ತಿದೆ ಎಂದೆಲ್ಲಾ ಪರಿಶೀಲಿಸುವುದಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ತದ ನಂತರ ಬ್ಲೂಟಿಕ್‌ ವೆರಿಫಿಕೇಷನ್ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಅದು ಇದೀಗ ಮತ್ತೆ ಪ್ರಾರಂಭವಾಗುತ್ತಿದೆ. ಈ ಮೂಲಕ ನಕಲಿ ಖಾತೆಗಳನ್ನು ಪತ್ತೆ ಹಚ್ಚುವುದಕ್ಕೆ ಮುಂದಾಗಿದೆ.

ಟ್ವಿಟರ್

ಇದಲ್ಲದೆ ನಾವು ನಕಲಿ ಖಾತೆಗಳ ಸಂಖ್ಯೆಯ ಪರಿಶೀಲನೆ ಅರ್ಜಿಗಳನ್ನು ತಪ್ಪಾಗಿ ಅನುಮೋದಿಸಿದ್ದೇವೆ ಎಂದು ಟ್ವಿಟರ್ ಹೇಳಿದೆ. ನಾವು ಈಗ ಪ್ರಶ್ನೆಯಲ್ಲಿರುವ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಿದ್ದೇವೆ ಮತ್ತು ಅವುಗಳ ಪರಿಶೀಲಿಸಿದ ಬ್ಯಾಡ್ಜ್ ಅನ್ನು ನಮ್ಮ ಪ್ಲಾಟ್‌ಫಾರ್ಮ್ ಮ್ಯಾನಿಪ್ಯುಲೇಷನ್ ಮತ್ತು ಸ್ಪ್ಯಾಮ್ ಪಾಲಿಸಿಯ ಅಡಿಯಲ್ಲಿ ತೆಗೆದುಹಾಕಿದ್ದೇವೆ ಅನ್ನೊದನ್ನ ಟ್ವಿಟರ್‌ ಸ್ಪಷ್ಟ ಪಡಿಸಿದೆ. ಅಲ್ಲದೆ ಟ್ವಿಟರ್ ಈಗಾಗಲೇ ಪರಿಶೀಲಿಸಿದ ಐದು ಖಾತೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಒಂದು ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ವರದಿಯಾಗಿದೆ.

ಟ್ವಿಟರ್‌

ಇದೀಗ, ಮೈಕ್ರೋ-ಬ್ಲಾಗಿಂಗ್ ಸೈಟ್ ಮತ್ತೊಮ್ಮೆ ಪರಿಶೀಲನೆ ಪ್ರಕ್ರಿಯೆಯನ್ನು ಆರಂಭಿಸುತ್ತಿದೆ. ಟ್ವಿಟರ್‌ನಲ್ಲಿ ಬ್ಲೂ ಟಿಕ್‌ ಬ್ಯಾಡ್ಜ್ ಪಡೆದಿರುವ ಖಾತೆ ಅಧಿಕೃತವಾಗಿರಲಿದೆ. ಅಲ್ಲದೆ ನಿವು ಕೂಡ ಬ್ಲೂಟಿಕ್‌ ವೆರಿಫಿಕೇಷನ್ ಮಾಡಿಸಲು ಟ್ವಿಟರ್‌ನಲ್ಲಿ ನಿಮ್ಮ ಖಾತೆಯು ಗಮನಾರ್ಹ ಮತ್ತು ಸಕ್ರಿಯವಾಗಿರಬೇಕು ಎಂದು ಕಂಪನಿ ಹೇಳುತ್ತದೆ. ಪ್ರಸ್ತುತ ಪರಿಶೀಲಿಸುವ ಆರು ವಿಧದ ಗಮನಾರ್ಹ ಖಾತೆಗಳಲ್ಲಿ ಸರ್ಕಾರ, ಸುದ್ದಿ ಸಂಸ್ಥೆಗಳು ಮತ್ತು ಪತ್ರಕರ್ತರು, ಮನರಂಜನೆ, ಕ್ರೀಡೆ ಮತ್ತು ಸ್ಪೋರ್ಟ್ಸ್, ಕಂಪನಿಗಳು, ಬ್ರ್ಯಾಂಡ್‌ಗಳು ಮತ್ತು ಲಾಭರಹಿತ ಸಂಸ್ಥೆಗಳು, ಕಾರ್ಯಕರ್ತರು, ಸಂಘಟಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳ ಖಾತೆಗಳು ಸೇರಿವೆ ಎಂದು ಟ್ವಿಟರ್ ಹೇಳಿದೆ.

ವೆರಿಫಿಕೇಷನ್

ಪ್ರಸ್ತುತ ಬ್ಲೂ ಟಿಕ್‌ ವೆರಿಫಿಕೇಷನ್ ಮಾಡಿಸಲು ಆಸಕ್ತಿ ಇರುವವರು ತಮ್ಮ ಖಾತೆಯ "ಸೆಟ್ಟಿಂಗ್ಸ್" ವಿಭಾಗಕ್ಕೆ ಹೋಗಿ ಟ್ವಿಟರ್‌ನಲ್ಲಿ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಬಹುದು. ನಂತರ ನೀವು "ರಿಕ್ವೆಸ್‌ ವೆರಿಫಿಕೇಶನ್‌ " ಫೀಚರ್ಸ್‌ ಅನ್ನು ಇದರಲ್ಲಿ ಕಾಣಬಹುದು. ನೀವು ಪ್ರವೇಶವನ್ನು ನೋಡದಿದ್ದರೆ ನೀವು "ನಿಮ್ಮ ಖಾತೆ ಸೆಟ್ಟಿಂಗ್‌ಗಳನ್ನು ಪರಿಶೀಲಿಸುತ್ತಿರಿ" ಎಂದು ಟ್ವಿಟರ್ ಹೇಳಿದೆ. ಹೀಗೆ ಮಾಡುವುದರ ಮೂಲಕ ನಿಮ್ಮ ಖಾತೆಯನ್ನು ಸಹ ನೀವು ವೆರಿಫಿಕೇಶನ್‌ ಮಾಡಿಸಬಹುದಾಗಿದೆ.

ಟ್ವಿಟರ್ ಪರಿಶೀಲನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?

ಟ್ವಿಟರ್ ಪರಿಶೀಲನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?

ನಿಮ್ಮ ಖಾತೆಯನ್ನು ನೀವು ಪರಿಶೀಲಿಸಬೇಕು ಮತ್ತು ಸೆಟ್ಟಿಂಗ್‌ಗಳ ಅಡಿಯಲ್ಲಿ ಖಾತೆ ಪರಿಶೀಲನೆ ಆಯ್ಕೆಯು ಗೋಚರಿಸುತ್ತದೆಯೇ ಎಂದು ನೋಡಬೇಕು. ನೀವು ಅದನ್ನು ನೋಡಿದ ನಂತರ ನೀವು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

ಹಂತ:1 ಸೂಕ್ತವಾದ ವರ್ಗವನ್ನು ಆಯ್ಕೆಮಾಡಿ.
ಹಂತ:2 ಸರ್ಕಾರ-ಸಮಸ್ಯೆಗಳ ID ಯನ್ನು ಅಪ್‌ಲೋಡ್ ಮಾಡಿ (ಟ್ವಿಟರ್ ಇದನ್ನು ಉಳಿಸಲು ಹೋಗುವುದಿಲ್ಲ).

ನಂತರ ನೀವು ಅರ್ಜಿ ಸಲ್ಲಿಸಬಹುದು. ನೀವು ಸಲ್ಲಿಸಿದ ನಂತರ, ಪ್ರತಿಕ್ರಿಯಿಸಲು ಅವರು ಒಂದು ವಾರದಿಂದ 30 ದಿನಗಳವರೆಗೆ ಏನನ್ನೂ ತೆಗೆದುಕೊಳ್ಳುತ್ತಾರೆ ಎಂದು ಟ್ವಿಟರ್ ಹೇಳುತ್ತದೆ. ಇಮೇಲ್ ಮೂಲಕ ಪ್ರತಿಕ್ರಿಯೆ ಬರುತ್ತದೆ. ನೀವು ವೆರಿಫೈ ಆಗಿದ್ದಲ್ಲಿ ನಿಮ್ಮ ಪ್ರೊಫೈಲ್‌ನಲ್ಲಿ ನೀಲಿ ಟಿಕ್ ಕಾಣಿಸುತ್ತದೆ. ಇಲ್ಲದಿದ್ದರೆ, ನೀವು ಆರು ತಿಂಗಳ ಅವಧಿಯಲ್ಲಿ ಮತ್ತೆ ಅರ್ಜಿ ಸಲ್ಲಿಸಬಹುದು.

Most Read Articles
Best Mobiles in India

English summary
Twitter has announced that it has again started rolling out access to request a blue badge.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X