ಟ್ವಿಟರ್‌ನಿಂದ ಹೊಸ ಫೀಚರ್ಸ್‌ ಲಾಂಚ್‌! ಆದರೆ ಷರತ್ತುಗಳು ಅನ್ವಯ!

|

ಟೆಸ್ಲಾ ಕಂಪೆನಿ ಸಿಇಒ ಎಲೋನ್‌ ಮಸ್ಕ್‌ ಮೈಕ್ರೋ ಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ಅನ್ನು ಖರೀದಿಸಿದ ನಂತರ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಟ್ವಿಟರ್‌ ಉದ್ಯೋಗಿಗಳನ್ನು ತೆಗೆದುಹಾಕುವುದರಿಂದ ಹಿಡಿದು ಬ್ಲೂಟಿಕ್‌ ಪಡೆಯಲು ಶುಲ್ಕ ವಿಧಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ಮೂಲಕ ಟ್ವಿಟರ್‌ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿದೆ. ಇದರ ನಡುವೆ ಟ್ವಿಟರ್‌ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೈ ಪ್ರೊಫೈಲ್‌ ವೆರಿಫೈಡ್‌ ಅಕೌಂಟ್‌ಗಳಿಗಾಗಿ ಹೊಸ ಅಧಿಕೃತ (ಅಫೀಷಿಯಲ್) ಲೆಬಲ್‌ ಅನ್ನು ಪರಿಚಯಿಸಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಹೈ ಪ್ರೊಫೈಲ್ ವೆರಿಫೈಡ್‌ ಅಕೌಂಟ್‌ಗಳಿಗಾಗಿ ಹೊಸ ಅಫೀಷಿಯಲ್ ಲೆಬಲ್‌ ಅನ್ನು ಪರಿಚಯಿಸಿದೆ. ಇದು ಪ್ರಮುಖ ಮೀಡಿಯಾ ಔಟ್‌ಲೆಟ್‌ಗಳು, ಸರ್ಕಾರಗಳು ಸೇರಿದಂತೆ ಕೆಲವು ಆಯ್ದ ವೆರಿಫೈಡ್‌ ಖಾತೆಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಇನ್ನು ಈ ಅಫೀಷಿಯಲ್ ಲೇಬಲ್‌ ಟ್ವಿಟರ್ ತನ್ನ ಹೊಸ $8 ಪ್ರೀಮಿಯಂ ಚಂದಾದಾರಿಕೆಯನ್ನು ಪ್ರಾರಂಭಿಸಿದ ನಂತರ ಲಭ್ಯವಾಗಲಿದೆ. ಹಾಗಾದ್ರೆ ಅಫೀಷಿಯಲ್ ಲೇಬಲ್‌ ಯಾರಿಗೆಲ್ಲಾ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌

ಎಲೋನ್‌ ಮಸ್ಕ್‌ ಟ್ವಿಟರ್‌ ಅನ್ನು ಖರೀದಿಸಿದ ನಂತರ ಟ್ವಿಟರ್‌ನಲ್ಲಿ ಬ್ಲೂಟಿಕ್‌ ಪಡೆಯಲು ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಬ್ಲೂಟಿಕ್‌ಗಾಗಿ ಪ್ರತಿ ತಿಂಗಳು ಕೂಡ ಹಣ ಪಾವತಿಸುವುದು ಅನಿವಾರ್ಯ ಎಂದು ಹೇಳಲಾಗಿತ್ತು. ಇದೀಗ ಈ ಪ್ರೀಮಿಯಂ ಚಂದಾದಾರಿಕೆ ಶುರುವಾದ ನಂತರ ಪ್ರಮುಖ ಬ್ಯುಸಿನೆಸ್‌ ಅಕೌಂಟ್‌ಗಳು, ಸರ್ಕಾರಗಳು, ವೇರಿಫೈಡ್‌ ಅಕೌಂಟ್‌ಗಳಿಗೆ ಹೊಸದಾಗಿ ಅಫೀಷಿಯಲ್‌ ಲೇಬಲ್‌ ಅನ್ನು ಪರಿಚಯಿಸಲಿದೆ. ಹಾಗಂತ ಇದು ಎಲ್ಲಾ ಬ್ಲೂಟಿಕ್‌ ಪಡೆದ ಅಕೌಂಟ್‌ಗಳಿಗೆ ಅನ್ವಯವಾಗುವುದಿಲ್ಲ ಅನ್ನೊದು ಗಮನಸಿಬೇಕಾದ ವಿಚಾರವಾಗಿದೆ.

ನಿಜವಾಗಿ

ಟ್ವಿಟರ್‌ ಬ್ಲೂಟಿಕ್‌ ಚಂದಾದಾರಿಕೆ ಬಳಕೆದಾರರ ಗುರುತನ್ನು ನಿಜವಾಗಿ ಪರಿಶೀಲಿಸುವುದಿಲ್ಲ ಎಂದು ಕ್ರಾಫೋರ್ಡ್ ಹೇಳಿದ್ದಾರೆ. ಆದರೆ ಐಡಿ ವೆರಿಫಿಕೇ‍ಷನ್‌ ಇಲ್ಲದೆ ಹೋದರೆ ಸಾರ್ವಜನಿ ಸಂಸ್ಥೆಗಳ ಹೆಸರಿನಲ್ಲಿ ಇತರೆ ವ್ಯಕ್ತಿಗಳು ಅಕೌಂಟ್‌ ತೆರೆದು ವಂಚಿಸುವ ಸಾಧ್ಯತೆಯಿದೆ. ಆದರಿಂದ ಇದು ದೃಢೀಕರಣ ಮತ್ತು ಗಮನಾರ್ಹತೆಯ ಸಂಕೇತವಾಗಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ $8 ಬೆಲೆಯ ಪ್ರೀಮಿಯಂ ಶುಲ್ಕವನ್ನು ಪಾವತಿಸಿ ಬ್ಲೂಟಿಕ್‌ ಪಡೆಯುವುದು ಎಲ್ಲರಿಗೂ ಅನಿವಾರ್ಯವಾಗಲಿದೆ.

ಅಫೀಷಿಯಲ್

ಪ್ರೀಮಿಯಂ ಶುಲ್ಕವನ್ನು ಪರಿಚಯಿಸಿದ ನಂತರ ಬರುವ ಹೊಸ ಅಫೀಷಿಯಲ್ ಲೇಬಲ್‌ ಎಲ್ಲಾ ಟ್ವಿಟರ್ ಖಾತೆಗಳು ಪಡೆಯಲು ಸಾಧ್ಯವಿಲ್ಲ. ಏಕೆಂದರೆ "ಅಧಿಕೃತ" ಲೇಬಲ್ ಸಂಪೂರ್ಣ ಉಚಿತವಾಗಿರಲಿದೆ, ಇದು ಖರೀದಿಗೆ ಲಭ್ಯವಾಗುವುದಿಲ್ಲ. ಆದರಿಂದ ಅಧಿಕೃತ ಲೇಬಲ್ ಅನ್ನು ಸರ್ಕಾರಗಳು, ವಾಣಿಜ್ಯ ಕಂಪನಿಗಳು, ವ್ಯಾಪಾರ ಪಾಲುದಾರರು, ಪ್ರಮುಖ ಮಾಧ್ಯಮಗಳು, ಪ್ರಕಾಶಕರು ಮತ್ತು ಇತರ ಕೆಲವು ಆಯ್ದ ಸಾರ್ವಜನಿಕ ವ್ಯಕ್ತಿಗಳಿಗೆ ಸೇರಿದ ಅಕೌಂಟ್‌ಗಳಿಗೆ ಮಾತ್ರ ಸೀಮಿತವಾಗಿರಲಿದೆ.

ವಿಚಾರದಲ್ಲಿ

ಟ್ವಿಟರ್‌ನ ಈ ಹೊಸ ಅಧಿಕೃತ ಲೇಬಲ್ ಮತ್ತು ಬ್ಲೂಟಿಕ್‌ ವಿಚಾರದಲ್ಲಿ ಮುಂದಿನದಿನಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯಿದೆ. ಏಕೆಂದರೆ ಎರಡು ಫೀಚರ್ಸ್‌ ಕೂಡ ಟ್ವಿಟರ್‌ನ ವೆರಿಫೈಡ್‌ ಅಕೌಂಟ್‌ಗಳಿಗೆ ಮಾತ್ರ ಅನ್ವಯಿಸಲಿದೆ. ಆದರೆ ಇದರಲ್ಲಿ ಅಫೀಷಿಯಲ್ ಲೇಬಲ್‌ ಮಾತ್ರ ಕೆಲವು ಹೈ ಪ್ರೊಫೈಲ್ಡ್‌ಗಳಿಗೆ ಮಾತ್ರ ದೊರೆಯಲಿದೆ. ಇದೇ ಕಾರಣಕ್ಕೆ ಈ ಫೀಚರ್ಸ್‌ ವಿಚಾರವಾಗಿ ಇನ್ನಷ್ಟು ಗೊಂದಲವಿರಲಿದೆ. ಏಕೆಂದರೆ ವೆರಿಫೈಡ್‌ ಮಾಡಿದ ಮಾತ್ರಕ್ಕೆ ಅದೆಲ್ಲವೂ ಅಧಿಕೃತ ಎಂದು ಹೇಳಲು ಕೂಡ ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಟ್ವಿಟರ್

ಇನ್ನು ಟ್ವಿಟರ್ ಬ್ಲೂ (Twitter Blue) ಅನ್ನು ಕಳೆದ ವರ್ಷ ಜೂನ್‌ನಲ್ಲಿ ಪ್ಲಾಟ್‌ಫಾರ್ಮ್‌ನ ಮೊದಲ ಚಂದಾದಾರಿಕೆ ಸೇವೆಯಾಗಿ ಪ್ರಾರಂಭಿಸಲಾಯಿತು. ಇದು ಟ್ವೀಟ್‌ಗಳನ್ನು ಸಂಪಾದಿಸುವ ಆಯ್ಕೆಯನ್ನು ಒಳಗೊಂಡಂತೆ ಮಾಸಿಕ ಚಂದಾದಾರಿಕೆಯ ಆಧಾರದ ಮೇಲೆ ಪ್ರೀಮಿಯಂ ವೈಶಿಷ್ಟ್ಯಗಳಿಗೆ ವಿಶೇಷ ಪ್ರವೇಶ ನೀಡುತ್ತದೆ.

Best Mobiles in India

English summary
Twitter will introduce an Official label for some verified accounts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X