ಟ್ವಿಟ್ಟರ್‌ನಲ್ಲಿ ಮತ್ತೆ ನವೀಕರಣ; ಆಯ್ದ ಖಾತೆಗಳಿಗಾಗಿ Official Label

|

ಟ್ವಿಟ್ಟರ್‌ನಲ್ಲಿ ನಿರಂತರವಾಗಿ ಕೆಲವು ಅಪ್‌ಡೇಟ್‌ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲೂ ಎಲೋನ್ ಮಸ್ಕ್ ಅವರು ಟ್ವಿಟ್ಟರ್‌ ಅನ್ನು ಖರೀದಿ ಮಾಡಿದ ನಂತರ ಸಾಕಷ್ಟು ಬದಲಾವಣೆ ಮಾಡಿದ್ದು, ಕೆಲವು ಬಳಕೆದಾರರು ಬೇರೆ ಪ್ಲಾಟ್‌ಫಾರ್ಮ್‌ ಕಡೆ ಮುಖ ಮಾಡುತ್ತಿದ್ದಾರೆ. ಆದರೂ ನಿರಂತರ ಅಪ್‌ಡೇಟ್‌ ಭಾಗವಾಗಿ ಬಳಕೆದಾರರಿಗೆ ಕೆಲವು ನೂತನ ಫೀಚರ್ಸ್‌ಗಳನ್ನು ನೀಡುವ ಮೂಲಕ ಹೊಸ ಅನುಭವ ಕೊಡಲು ಟ್ವಿಟ್ಟರ್ ಮುಂದಾಗಿದೆ.

ಎಲೋನ್ ಮಸ್ಕ್

ಹೌದು, ಎಲೋನ್ ಮಸ್ಕ್ ಅವರ ಟ್ವಿಟ್ಟರ್‌ನಲ್ಲಿ ಈಗ ಮತ್ತೊಂದು ನವೀಕರಣ ಮಾಡಲಾಗಿದೆ. ಈ ನವೀಕರಣದ ಮೂಲಕ ಗಣ್ಯ ವ್ಯಕ್ತಿಗಳನ್ನು ವಿಶೇಷವಾಗಿ ಗುರುತಿಸಲು ಮುಂದಾಗಿದೆ. ಅದುವೇ 'ಅಫೀಶಿಯಲ್' ಲೇಬಲ್ ಫೀಚರ್ಸ್‌. ಈ ಲೇಬಲ್ ಅನ್ನು ಸರ್ಕಾರಿ ಅಕೌಂಟ್‌ಗಳು, ವಾಣಿಜ್ಯ ಕಂಪೆನಿಗಳು, ವ್ಯಾಪಾರ ಪಾಲುದಾರರು, ಪ್ರಮುಖ ಮಾಧ್ಯಮಗಳು, ಪ್ರಕಾಶಕರು ಮತ್ತು ಕೆಲವು ಸಾರ್ವಜನಿಕ ವ್ಯಕ್ತಿಗಳಿಗೆ ಕಾಯ್ದಿರಿಸಲಾಗಿದೆ.

ಬ್ಲೂಟಿಕ್‌ ಮಾರ್ಕ್‌ ಇರುವ ಎಲ್ಲಾ ಅಕೌಂಟ್‌ಗೂ ಲಭ್ಯವಿಲ್ಲ

ಬ್ಲೂಟಿಕ್‌ ಮಾರ್ಕ್‌ ಇರುವ ಎಲ್ಲಾ ಅಕೌಂಟ್‌ಗೂ ಲಭ್ಯವಿಲ್ಲ

ಇನ್ನು ಟ್ವಿಟ್ಟರ್‌ನ ಅಫೀಶಿಯಲ್ ಲೇಬಲ್ ಆಯ್ದ ಹಾಗೂ ಪರಿಶೀಲಿಸಿದ ಖಾತೆಗಳಿಗೆ ಲಭ್ಯವಾಗಲಿದ್ದು, ಬ್ಲೂಟಿಕ್‌ ಮಾರ್ಕ್‌ ಇರುವ ಎಲ್ಲಾ ಖಾತೆಗಳಿಗೂ ಇದು ಲಭ್ಯ ಇರುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಟ್ವಿಟ್ಟರ್ ಕಾರ್ಯನಿರ್ವಾಹಕ ಎಸ್ತರ್ ಕ್ರಾಫೋರ್ಡ್, ಬ್ಲೂ ಟಿಕ್‌ ಮತ್ತು ಅಧಿಕೃತವಾಗಿ ಪರಿಶೀಲಿಸಿದ ಖಾತೆಗಳನ್ನು ಹೊಂದಿರುವ ಗ್ರಾಹಕರ ನಡುವೆ ವ್ಯತ್ಯಾಸ ಏನು ಎಂಬುದನ್ನು ಅನೇಕ ಜನರು ಪ್ರಶ್ನೆ ಮಾಡಿದ್ದರು. ಇದಕ್ಕಾಗಿಯೇ ನಾವು ಕೆಲವು ಖಾತೆಗಳಿಗೆ ಅಫೀಶಿಯಲ್ ಲೇಬಲ್ ಅನ್ನು ಪರಿಚಯಿಸುತ್ತಿದ್ದೇವೆ. ಈ ಹಿಂದೆ ಪರಿಶೀಲಿಸಲಾದ ಎಲ್ಲಾ ಖಾತೆಗಳು ಅಫೀಶಿಯಲ್ ಲೇಬಲ್ ಅನ್ನು ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ವಿಶೇ‍ಷ ಸೌಲಭ್ಯ ಲಭ್ಯ

ವಿಶೇ‍ಷ ಸೌಲಭ್ಯ ಲಭ್ಯ

ಇನ್ನು ಎಲೋನ್ ಮಸ್ಕ್ ಅವರು ಬ್ಲೂ ಟಿಕ್ಗಾಗಿ ತಿಂಗಳಿಗೆ $ 8 ಯೋಜನೆಯನ್ನು ಪರಿಚಯಿಸಿದ್ದಾರೆ. ಹೊಸ ಟ್ವಿಟ್ಟರ್‌ ಬ್ಲೂ ಚಂದಾದಾರಿಕೆಯು ಐಡಿ ಪರಿಶೀಲನೆಯನ್ನು ಒಳಗೊಂಡಿಲ್ಲ ಎಂದು ಕ್ರಾಫೋರ್ಡ್ ಹೇಳಿದ್ದು, ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಆಯ್ಕೆಯು ಪಾವತಿಸಿದ ಚಂದಾದಾರಿಕೆಯಾಗಿದೆ. ಇದು ಬಳಕೆದಾರರಿಗೆ ನೀಲಿ ಚೆಕ್‌ ಮಾರ್ಕ್ ಮತ್ತು ಕೆಲವು ಫೀಚರ್ಸ್‌ ಅನ್ನು ನೀಡುತ್ತದೆ.

ಜಾಹೀರಾತು

ಇದರಲ್ಲಿ, ಬಳಕೆದಾರರು ಕಡಿಮೆ ಜಾಹೀರಾತುಗಳು, ಪ್ರತ್ಯುತ್ತರಕ್ಕೆ ಆದ್ಯತೆ ಮತ್ತು ದೀರ್ಘವಾದ ವಿಡಿಯೋಗಳನ್ನು ಪೋಸ್ಟ್ ಮಾಡುವಂತಹ ಲಾಭವನ್ನು ಪಡೆಯಬಹುದಾಗಿದೆ. ಹಾಗೆಯೇ ಖಾತೆಗಳ ನಡುವಿನ ವ್ಯತ್ಯಾಸವನ್ನು ಕಾಪಾಡಿಕೊಳ್ಳಲು ಟ್ವಿಟ್ಟರ್‌ ಈ ರೀತಿಯ ಪ್ರಯೋಗವನ್ನು ಮುಂದುವರಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಟ್ವಿಟ್ಟರ್‌

ಟ್ವಿಟ್ಟರ್‌ನ ಸುರಕ್ಷತೆ ಮತ್ತು ಸಮಗ್ರತೆಯ ಮುಖ್ಯಸ್ಥ ಯೋಯೆಲ್ ರಾತ್ ಟ್ವೀಟ್ ಮಾಡಿದ್ದು, ಐಡಿ ಪರಿಶೀಲನೆಯ ಕೊರತೆಯಿಂದಾಗಿ ಜನರು ಸಾರ್ವಜನಿಕ ವ್ಯಕ್ತಿಗಳಂತೆ ಸೋಗು ಹಾಕುವ ಸಾಧ್ಯತೆಯು ಕಳವಳವನ್ನು ಉಂಟುಮಾಡಲಿದೆ. ಈ ರೀತಿಯ ಸಮಸ್ಯೆಯಿಂದಾಗಿ ಯುಎಸ್ ಮಧ್ಯಂತರ ಚುನಾವಣೆಯ ನಂತರ ಟ್ವಿಟ್ಟರ್ ಬ್ಲೂನ ಹೊಸ ಆವೃತ್ತಿ ಪ್ರಾರಂಭಿಸುವುದನ್ನು ತಡೆಹಿಡಿಯಲಾಗಿದೆ. ಗುರುತಿನ ಪರಿಶೀಲನೆಯು ತುಂಬಾ ಕಷ್ಟಕರವಾಗಿದೆ. ಯಾಕೆಂದರೆ ಈ ಪ್ರಕ್ರಿಯೆಯು ದೃಢೀಕರಣ ಮತ್ತು ಗಮನಾರ್ಹತೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಈಗಾಗಲೇ ಜಾರಿ

ಭಾರತದಲ್ಲಿ ಈಗಾಗಲೇ ಜಾರಿ

ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಭಾರತದಲ್ಲಿ ತನ್ನ ಬ್ಲೂ ಟಿಕ್ ಚಂದಾದಾರಿಕೆಯನ್ನು ಪರಿಚಯಿಸುವ ಮೊದಲೇ ಭಾರತದಲ್ಲಿ ಟ್ವಿಟ್ಟರ್ ಹ್ಯಾಂಡಲ್‌ಗಳು ಮತ್ತು ಮಾಧ್ಯಮಗಳಿಗೆ ಅಫೀಶಿಯಲ್ ಲೇಬಲ್ ನೀಡಲು ಮುಂದಾಗಿದೆ. ಬುಧವಾರ, ಅಧಿಕೃತ ಲೇಬಲ್‌ಗಳು ಅನೇಕ ಸರ್ಕಾರಿ ಹ್ಯಾಂಡಲ್‌ಗಳು ಮತ್ತು ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಕಾಣಿಸಿಕೊಂಡಿವೆ. ಅದರಲ್ಲೂ ಪಿಎಂ ಕಚೇರಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಟ್ವಿಟ್ಟರ್ ಹ್ಯಾಂಡಲ್ ಅನ್ನು ಸಹ ಅಫೀಶಿಯಲ್ ಎಂದು ಲೇಬಲ್ ಮಾಡಲಾಗಿದೆ.

Best Mobiles in India

English summary
Twitter is constantly undergoing some updating process. Meanwhile, Twitter is now offering official badge features to dignitaries.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X