UIDAIಯಿಂದ 'ಆಧಾರ್‌ ಮಿತ್ರ' ಚಾಟ್‌ಬಾಟ್‌ ಬಿಡುಗಡೆ; ಏನಿದರ ಪ್ರಯೋಜನ?

|

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (The Unique Identification Authority of India - UIDAI) ಇದೀಗ ಹೊಸ ಎಐ/ಎಂಎಲ್‌ (AI/ML) ಆಧಾರಿತ ಚಾಟ್‌ಬೋಟ್‌ 'ಆಧಾರ್‌ ಮಿತ್ರ' (Aadhaar Mitra) ಅನ್ನು ಬಳಕೆದಾರರಿಗೆ ಬಿಡುಗಡೆ ಮಾಡಿದೆ. ಇದು ಬಳಕೆದಾರರಿಗೆ ಹೊಸ ಮತ್ತು ಉತ್ತಮ ಅನುಭವವನ್ನು ನೀಡಲಿದೆ ಎಂದು ಯುಐಡಿಎಐ (UIDAI) ಹೇಳಿಕೊಂಡಿದೆ.

ಚಾಟ್‌ಬಾಟ್

ಯುಐಡಿಎಐ ಪರಿಚಯಿಸಿರುವ ಈ ಹೊಸ ಚಾಟ್‌ಬಾಟ್ ನಲ್ಲಿ ಆಧಾರ್ ದಾಖಲಾತಿ, ಅಪ್‌ಡೇಟ್‌ ಸ್ಟೇಟಸ್‌, ಆಧಾರ್ ಪಿವಿಸಿ ಕಾರ್ಡ್ ಸ್ಟೇಟಸ್‌ ಟ್ರ್ಯಾಕಿಂಗ್ ಮತ್ತು ದಾಖಲಾತಿ ಕೇಂದ್ರದ ಸ್ಥಳದ ಮಾಹಿತಿಯಂತಹ ವರ್ಧಿತ ಆಯ್ಕೆಗಳನ್ನು ಹೊಂದಿದ್ದು, ಬಳಕೆದಾರರು ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಿಕೊಳ್ಳಬಹುದು.

ಇಲಾಖೆಗಳು

ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG) ಅಕ್ಟೋಬರ್ 2022 ಕ್ಕೆ ಪ್ರಕಟಿಸಿದ ಶ್ರೇಯಾಂಕಗಳ ವರದಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಎಲ್ಲA ಗುಂಪಿನ ಸಚಿವಾಲಯಗಳು, ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಪೈಕಿ ಯುಐಡಿಎಐ ಅಗ್ರಸ್ಥಾನದಲ್ಲಿದೆ. ಯುಐಡಿಎಐ (UIDAI) ಇದು ಸತತ ಮೂರನೇ ತಿಂಗಳು ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದೆ.

UIDAI

ಯುಐಡಿಎಐ (UIDAI), ಅದರ ಪ್ರಾದೇಶಿಕ ಕಚೇರಿಗಳು, ತಂತ್ರಜ್ಞಾನ ಕೇಂದ್ರ ಮತ್ತು ತೊಡಗಿಸಿಕೊಂಡಿರುವ ಸಂಪರ್ಕ ಕೇಂದ್ರದ ಪಾಲುದಾರರನ್ನು ಒಳಗೊಂಡಿರುವ ದೃಢವಾದ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಯುಐಎಡಿಐ ಹೊಂದಿದೆ. ಯುಐಡಿಎಐ ಬದುಕನ್ನು ಸುಲಭಗೊಳಿಸುವ ಮತ್ತು ಸುಲಭ ವ್ಯಾಪಾರಕ್ಕೆ ಅನುಕೂಲಕಾರಿ ಮತ್ತು ಆಧಾರ್ ಹೊಂದಿರುವವರಿಗೆ ಪ್ರಗತಿಪರವಾಗಿ ಉತ್ತಮ ಅನುಭವವನ್ನು ನೀಡಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಆರ್‌ಎಂ

ಬಳಕೆದಾರ ಕೇಂದ್ರಿತ ಸಮನ್ವಯದ ವಿಧಾನವನ್ನು ಯುಐಡಿಎಐ (UIDAI) ಅಳವಡಿಸಿಕೊಂಡಿದ್ದು, ವಾರದೊಳಗೆ ಶೇಕಡ 92 ಸಿಆರ್‌ಎಂ (CRM) ಅಹವಾಲುಗಳನ್ನು ಇತ್ಯರ್ಥಗೊಳಿಸಿದೆ.

ಬಳಕೆದಾರರಿಗೆ

'ಸಂಸ್ಥೆಯು ಸುಲಭ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತಿದೆ ಮತ್ತು ಅದರ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಮತ್ತಷ್ಟು ಬಲಪಡಿಸಲು ಬದ್ಧವಾಗಿದೆ. ಯುಐಡಿಎಐ ಕ್ರಮೇಣ ಸುಧಾರಿತ ಮತ್ತು ಭವಿಷ್ಯದ ಮುಕ್ತ-ಮೂಲ ಸಿಆರ್‌ಎಂ ಪರಿಹಾರವನ್ನು ಹೊರತರುತ್ತಿದೆ. ಹೊಸ ಗ್ರಾಹಕ ಸಂಬಂಧ ನಿರ್ವಹಣೆ (CRM) ಪರಿಹಾರವನ್ನು ಬಳಕೆದಾರರಿಗೆ ಯುಐಡಿಎಐ ಸೇವೆಯ ವಿತರಣೆಯನ್ನು ಹೆಚ್ಚಿಸಲು ಸುಧಾರಿತ ಫೀಚರ್ಸ್‌/ ಆಯ್ಕೆ ವಿನ್ಯಾಸಗೊಳಿಸಲಾಗಿದೆ' ಎಂದು ಸಚಿವಾಲಯ ಸೇರಿಸಲಾಗಿದೆ.

CRM

ಹೊಸ ಸಿಆರ್‌ಎಂ (CRM) ಪರಿಹಾರವು ಫೋನ್ ಕರೆ, ಇ-ಮೇಲ್, ಚಾಟ್‌ಬಾಟ್, ವೆಬ್ ಪೋರ್ಟಲ್, ಸಾಮಾಜಿಕ ಮಾಧ್ಯಮ, ಪತ್ರ ಮತ್ತು ವಾಕ್-ಇನ್‌ನಂತಹ ಬಹು-ಚಾನಲ್‌ಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ, ಅದರ ಮೂಲಕ ಕುಂದುಕೊರತೆಗಳನ್ನು ದಾಖಲಿಸಬಹುದು, ಟ್ರ್ಯಾಕ್ ಮಾಡಬಹುದು ಮತ್ತು ಪರಿಣಾಮಕಾರಿಯಾಗಿ ಪರಿಹರಿಸಬಹುದು.

ಗುರುತಿನ ಪುರಾವೆಯಾಗಿ mAadhaar

ಗುರುತಿನ ಪುರಾವೆಯಾಗಿ mAadhaar

ನಿಮ್ಮ ಸ್ಮಾರ್ಟ್‌ಫೋನನಲ್ಲಿ mAadhaar ಆಪ್ ಇದ್ದರೇ, ನೀವು ರೈಲ್ವೆ ಪ್ರಯಾಣ ಮಾಡುವಾಗ ಗುರುತಿನ ಪುರಾವೆಗೆ ಇ-ಆಧಾರ ಕಾರ್ಡ್‌ ಅನ್ನೇ ತೋರಿಸಬಹುದು. ಹೀಗಾಗಿ ಆಧಾರ ಕಾರ್ಡ್ ಹಾರ್ಡ್‌ಕಾಪಿ ಜೊತೆಗೆ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ. ಏರ್‌ಪೋರ್ಟ್‌ನಲ್ಲಿಯೂ ಸಹ ಗುರುತಿನ ಪುರಾವೆಗೆ ಆಪ್‌ನಲ್ಲಿನ ಆಧಾರ ಕಾರ್ಡ್ ತೋರಿಸಬಹುದಾಗಿದೆ.

mAadhaar ಆಪ್‌ನ ಇತರೆ ಪ್ರಯೋಜನಗಳು

mAadhaar ಆಪ್‌ನ ಇತರೆ ಪ್ರಯೋಜನಗಳು

* mAadhaarನಲ್ಲಿ ಸಮೀಷದ ಆಧಾರ ಕೇಂದ್ರಗಳನ್ನು ಹುಡುಕಬಹುದು. ತಿದ್ದುಪಡಿ, ವಿಳಾಸ ಬದಲಾವಣೆಯ ಸ್ಟೇಟಸ್‌ ಮಾಹಿತಿಯನ್ನು ಈ ಆಪ್‌ನಲ್ಲಿಯೇ ತಿಳಿದುಕೊಳ್ಳಬಹುದಾಗಿದೆ.
* ಈ ಆಪ್ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ದೃಢಿಕರಣ ಮಾಡಿಕೊಳ್ಳುವ ಆಯ್ಕೆ ಹೊಂದಿದೆ.
* ಕಳೆದುಹೋದ ಆಧಾರ ಎನ್‌ರೋಲ್‌ಮೆಂಟ್ ಐಡಿಯ ನಂಬರ್‌ ಅನ್ನ ಈ ಆಪ್‌ ನಲ್ಲಿ ಹಿಂಪಡೆಯಬಹುದಾಗಿದೆ.
* ಈ ಆಪ್ ಮೂಲಕ ಆನ್‌ಲೈನ್ ವಿಳಾಸ ಬದಲಾವಣೆ ಕೋರಿಕೆ ಸಲ್ಲಿಸಬಹುದಾಗಿದೆ.

Best Mobiles in India

English summary
UIDAI launches new chatbot Aadhaar Mitra: What are the Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X