ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು?

|

ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ನೀವು ಕ್ಷಣಾರ್ಧದಲ್ಲಿ ನಿಮ್ಮ ಕುಟುಂಬಸ್ಥರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡುವುದು ಸುಲಭವಾಗಿದೆ. ಇದಕ್ಕಾಗಿಯೇ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್‌ಗಳು ಹೆಚ್ಚಿನ ಪ್ರಸಿದ್ಧಿ ಪಡೆದುಕೊಂಡಿವೆ. ಇವುಗಳಲ್ಲಿ ಫೋನ್‌ಪೇ, ಗೂಗಲ್‌ ಪೇ, ಪೇಟಿಎಂ ಅಪ್ಲಿಕೇಶನ್‌ಗಳು ಮುಂಚೂಣಿಯಲ್ಲಿವೆ. ಇದರ ನಡುವೆ ಕಳೆದ ಮೂರು ದಿನಗಳಿಂದ ಯುಪಿಐ ಪಾವತಿಗೆ ಶುಲ್ಕ ವಿಧಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡಿದೆ. ಇದರಿಂದ ಸಾಕಷ್ಟು ಜನ ಗೊಂದಲಕ್ಕೆ ಈಡಾಗಿದ್ದಾರೆ.

ಯುಪಿಐ

ಹೌದು, ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎನ್ನುವ ಸುದ್ದಿ ಸಾಕಷ್ಟು ಸೌಂಡ್‌ ಮಾಡಿದೆ. ಇದರಿಂದ ಹಣಕಾಸು ವರ್ಗಾವಣೆಗೆ ಚಾರ್ಜ್‌ ಕಟ್ಟಬೇಕಾ ಎನ್ನುವ ಪ್ರಶ್ನೆ ಕಳೆದ ಎರಡು ದಿನಗಳಲ್ಲಿ ಎಲ್ಲರ ಮನದಲ್ಲಿ ಚಿಂತಿಸುವಂತೆ ಮಾಡಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟ ಪಡಿಸಿದೆ. ಕೇಂದ್ರ ಹಣಕಾಸು ಸಚಿವಾಲಯ ನೀಡಿದ ಮಾಹಿತಿಯಂತೆ ಯಪಿಐ ಪಾವತಿಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹೇಳಿದೆ. ಹಾಗಾದ್ರೆ ಕಳೆದ ಎರಡು ದಿನಗಳಲ್ಲಿ ಹರಿದಾಡ್ತಿದ್ದ ಸುದ್ದಿಯಾದ್ರೂ ಏನು? ಇದಕ್ಕೆ ಕೇಂದ್ರ ಸರ್ಕಾರ ಏನು ಹೇಳಿದೆ? ಇದೆಲ್ಲದರದ ಬಗ್ಗೆಗಿನ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೊಂದಲಕ್ಕೆ ಕಾರಣವೇನು?

ಗೊಂದಲಕ್ಕೆ ಕಾರಣವೇನು?

ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ಗೊಂದಲ ಉಂಟಾಗುವುದಕ್ಕೆ ಒಂದು ಕಾರಣವಿದೆ. ಅದೆನೆಂದರೆ ಇದೇ ಆಗಸ್ಟ್ 17 ರ ಪತ್ರಿಕಾ ಪ್ರಕಟಣೆಯಲ್ಲಿ, ಆರ್‌ಬಿಐ "ಪಾವತಿ ವ್ಯವಸ್ಥೆಗಳಲ್ಲಿ ಶುಲ್ಕಗಳು" ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿದೆ ಎಂದು ಸುದ್ದಿಯಾಗಿದೆ. ಈ ಪತ್ರಿಕೆಯನ್ನು ಡಿಸೆಂಬರ್ 2021 ರಲ್ಲಿ ಸಾರ್ವಜನಿಕಗೊಳಿಸಲಾಗಿದೆ ಮತ್ತು ಪ್ರತಿಕ್ರಿಯೆಯನ್ನು ಅಕ್ಟೋಬರ್ 3, 2022 ರವರೆಗೆ ಸಲ್ಲಿಸಬಹುದು ಎಂದು ಹೇಳಲಾಗಿದೆ. ಈ ಪತ್ರಿಕಾ ಹೇಳಿಕೆಯು ದೇಶದಲ್ಲಿ ಸಾಕಷ್ಟು ಜನರಲ್ಲಿ ಗೊಂದಲವನ್ನು ಸೃಷ್ಟಿಸಿದೆ.

ಆರ್‌ಬಿಐ

ಆದರೆ ಆರ್‌ಬಿಐ ಹೇಳಿರುವಂತೆ ಪಾವತಿ ವ್ಯವಸ್ಥೆಗಳಲ್ಲಿನ ಶುಲ್ಕಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ತಕ್ಷಣದ ಪಾವತಿ ಸೇವೆ (IMPS), ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ (NEFT) ವ್ಯವಸ್ಥೆ, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ವ್ಯವಸ್ಥೆ ಮತ್ತು ಏಕೀಕೃತ ಪಾವತಿಗಳನ್ನು ಒಳಗೊಂಡಿದೆ ಎಂದು ಆರ್‌ಬಿಐ ಪತ್ರಿಕಾ ಹೇಳಿಕೆ ತಿಳಿಸಿದೆ. ಇಂಟರ್ಫೇಸ್ (UPI)] ಮತ್ತು ವಿವಿಧ ಪಾವತಿ ವಿಧಾನಗಳಿಗೆ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆಸಿದೆ. ಇದರ ಬಗ್ಗೆ ಇನ್ನು ಕೂಡ ಜನರ ಪ್ರತಿಕ್ರಿಯೆಯನ್ನು ಆರ್‌ಬಿಐ ಕೇಳುತ್ತಿದೆ ಎನ್ನುವುದು ಗಮನಿಸಬೇಕಾದ ವಿಚಾರ.

ಸೂಚನೆಗಳನ್ನು

ಸತ್ಯ ಸಂಗತಿ ಏನೆಂದರೆ UPI ವಹಿವಾಟುಗಳಿಗೆ ಶುಲ್ಕಗಳನ್ನು ವಿಧಿಸುವ ಬಗ್ಗೆ RBI ಸೂಚನೆಗಳನ್ನು ನೀಡಿಲ್ಲ. ಜನವರಿ 1, 2020 ರಿಂದ ಜಾರಿಗೆ ಬರುವಂತೆ UPI ವಹಿವಾಟುಗಳಿಗೆ ಶೂನ್ಯ ಶುಲ್ಕದ ಚೌಕಟ್ಟನ್ನು ಸರ್ಕಾರವು ಕಡ್ಡಾಯಗೊಳಿಸಿದೆ. ಅಂದರೆ ಬಳಕೆದಾರರಿಗೆ ಮತ್ತು ವ್ಯಾಪಾರಿಗಳಿಗೆ ಯುಪಿಐನಲ್ಲಿ ಯಾವುದೇ ರೀತಿಯ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರಿಂದ ಇಲ್ಲಿ ನಿಮ್ಮ ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ಪ್ರಶ್ನೆಯೆ ಉದ್ಭವಿಸುವುದಿಲ್ಲ.

ಸರ್ಕಾರ ನೀಡಿದ ಸ್ಪಷ್ಟನೆ ಏನು?

ಸರ್ಕಾರ ನೀಡಿದ ಸ್ಪಷ್ಟನೆ ಏನು?

UPI ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸುವ "ಯಾವುದೇ ಪರಿಗಣನೆ ಇಲ್ಲ" ಎಂದು ತಿಳಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಸ್ಪಷ್ಟನೆ ನೀಡಿದೆ. ಯುಪಿಐ ಪಾವತಿಗಳಿಗೆ ಶುಲ್ಕ ವಿಚಾರದ ಬಗ್ಗೆ ಸಾರ್ವಜನಿಕರಲ್ಲಿ ಉಂಟಾದ ಗೊಂದಲವನ್ನು ಪರಿಹರಿಸುವುದಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಹೇಳಿಕೆಯನ್ನು ನೀಡಿದೆ. ಇನ್ನು ತನ್ನ ಟ್ವೀಟ್‌ಗಳ ಸರಣಿಯಲ್ಲಿ ಸಚಿವಾಲಯವು, "ಯುಪಿಐ ಸಾರ್ವಜನಿಕರಿಗೆ ಅಪಾರ ಅನುಕೂಲತೆ ಮತ್ತು ಆರ್ಥಿಕತೆಗೆ ಉತ್ಪಾದಕತೆಯ ಲಾಭವನ್ನು ಹೊಂದಿರುವ ಡಿಜಿಟಲ್ ಸಾರ್ವಜನಿಕ ಉತ್ಪನ್ನವಾಗಿದೆ. ಈ ರೀತಿಯ UPI ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲು ಸರ್ಕಾರದಲ್ಲಿ ಯಾವುದೇ ರೀತಿಯ ಯೋಚನೆಗಳು ಬಂದಿಲ್ಲ ಎಂದು ಹೇಳಿಕೊಂಡಿದೆ.

ಯುಪಿಐ

ಇನ್ನು ದೇಶದಲ್ಲಿ ಯುಪಿಐ ಪಾವತಿ ಆಧಾರಿತ ವ್ಯವಸ್ಥೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ದೇಶದಲ್ಲಿ ಸದ್ಯ ಗೂಗಲ್‌ ಪೇ, ಫೋನ್‌ಪೇ, ಪೇಟಿಎಂ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಪ್ರತಿ ಪಾವತಿಗೂ ವಿಶೇಷ ರಿವಾರ್ಡ್‌ಗಳು, ಕೆಲವು ಆಯ್ದ ಟ್ರಾನ್ಸ್‌ಫರ್‌ಗಳಿಗೆ ಕ್ಯಾಶ್‌ಬ್ಯಾಕ್‌ ಆಫರ್‌ ನೀಡುವ ಮೂಲಕ ಎಲ್ಲರ ಗಮನ ಸೆಳೆದಿವೆ.

Best Mobiles in India

English summary
central government has clarified there is “no consideration” to levy any charges for UPI services

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X