ಭಾರತದ ಉಪರಾಷ್ಟ್ರಪತಿ ವಿಚಾರದಲ್ಲಿ ಟ್ವಿಟರ್‌ ನಡೆಗೆ ಎಲ್ಲೆಡೆ ಆಕ್ರೋಶ!

|

ಜನಪ್ರಿಯ ಮೈಕ್ರೋಬ್ಲಾಗಿಂಗ್‌ ತಾಣ ಟ್ವಿಟರ್ ಖಾತೆ ಇತ್ತೀಚಿಗಷ್ಟೇ ವೆರಿಫಿಕೇಶನ್ ಪ್ರಕಿಯೆಯನ್ನು ಮತ್ತೆ ಪ್ರಾರಂಭಿಸಿದೆ. ಆದರೆ ಇದೇ ನೆಪವನ್ನು ಇಟ್ಟುಕೊಂಡು ಭಾರತದ ಮಾನ್ಯ ಉಪರಾಷ್ಟ್ರಪತಿಗಳ ಟ್ವೀಟರ್‌ ಖಾತೆಯಿಂದ ಬ್ಲೂ ಬ್ಯಾಡ್ಜ್‌ ಅನ್ನು ತೆಗೆದುಹಾಕಿದೆ. ಈ ಮೂಲಕ ಖಾತೆದಾರರ ಯಾವುದೇ ಸ್ಥಾನಮಾನದ ಪ್ರಾಮುಖ್ಯತೆಯನ್ನು ಲೆಕ್ಕಿಸುವುದಿಲ್ಲ ಎನ್ನುವ ದಾಟಿಯಲ್ಲಿ ಟ್ವೀಟರ್‌ ಹೆಜ್ಜೆ ಹಾಕಿದೆ. ಆದರೆ ಟ್ವೀಟರ್‌ ಈ ನಡೆಗೆ ಆಕ್ರೋಶ ಕೂಡ ವ್ಯಕ್ತವಾಗಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ವೆರಿಫಿಕೇಶನ್‌ ಪ್ರಕ್ರಿಯೆ ಅನ್ವಯ ದೇಶದ ಉಪರಾಷ್ಟ್ರಪತಿಗಳ ಟ್ವಿಟರ್‌ ಖಾತೆಯ ಬ್ಲೂ ಬ್ಯಾಡ್ಜ್‌ ಅನ್ನು ತೆಗೆದುಹಾಕಿದೆ. ಈ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಟ್ವಿಟರ್‌ನ ಈ ನಡೆ ಎಷ್ಟು ಸರಿ ಅನ್ನೊದು ಕೆಲವರ ಪ್ರಶ್ನೆಯಾಗಿದ್ದರೆ, ಸ್ಥಾನಮಾನ ನೋಡಿ ನಿಯಮ ಬದಲಾಗದು ಅನ್ನೊದು ಟ್ವಿಟರ್‌ನ ನಡೆಯಾಗಿದೆ. ಅಷ್ಟಕ್ಕೂ ಉಪರಾಷ್ಟ್ರಪತಿಗಳ ವೈಯುಕ್ತಿಕ ಟ್ವೀಟರ್‌ ಖಾತೆ ಬ್ಲೂಟಿಕ್‌ ಕಳೆದುಕೊಳ್ಳಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌

ಟ್ವಿಟರ್‌ ಹೊಸ ವೆರಿಫಿಕೇಶನ್‌ ಪ್ರಕ್ರಿಯೆ ಪ್ರಕಾರ ಯಾವುದೇ ಖಾತೆದಾರರ ಆರು ತಿಂಗಳಿಂಗಿಂತ ಹೆಚ್ಚು ಕಾಲ ಟ್ವಿಟರ್‌ ಆ ಖಾತೆ ನಿರ್ವಹಿಸದಿದ್ದರೆ ಅವರ ಖಾತೆ ಬ್ಲೂ ಟಿಕ್‌ ಬ್ಯಾಡ್ಜ್‌ ಕಳೆದುಕೊಳ್ಳಲಿದೆ. ಇದೇ ಕಾರಣಕ್ಕೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ವೈಯುಕ್ತಿಕ ಖಾತೆಯಿಂದ ಬ್ಲೂಟಿಕ್‌ ತೆಗೆದುಹಾಕಿದೆ. ಆದರೆ ಭಾರತದ ಉಪಾಧ್ಯಕ್ಷರ ಅಧಿಕೃತ ಹ್ಯಾಂಡಲ್ @ ವಿಪಿಎಸ್ ಸೆಕ್ರೆಟರಿಯಟ್ ನೀಲಿ ಬ್ಯಾಡ್ಜ್ ಅನ್ನು ಮುಂದುವರಿಸಿದೆ.

ಟ್ವಿಟ್ಟರ್

ಇನ್ನು ಟ್ವಿಟ್ಟರ್ ಪ್ರಕಾರ, ಟ್ವಿಟರ್‌ನಲ್ಲಿ ವೆರಿಫಿಕೇಶನ್‌ ಬ್ಲೂ ಬ್ಯಾಡ್ಜ್ ಸಾರ್ವಜನಿಕ ಹಿತಾಸಕ್ತಿಯ ಖಾತೆಯು ಅಧಿಕೃತವೆಂದು ಜನರಿಗೆ ತಿಳಿಸುತ್ತದೆ. ನೀಲಿ ಬ್ಯಾಡ್ಜ್ ಸ್ವೀಕರಿಸಲು, ನಿಮ್ಮ ಖಾತೆಯು ಅಧಿಕೃತ, ಗಮನಾರ್ಹ ಮತ್ತು ಸಕ್ರಿಯವಾಗಿರಬೇಕು. ವೆರಿಫಿಕೇಶನ್‌ ಟ್ವಿಟರ್‌ನೊಂದಿಗೆ ಖಾತೆಯ ಗುರುತನ್ನು ದೃಡೀಕರಿಸುವ ಮೂಲಕ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರ ನಡುವೆ ವಿಶ್ವಾಸವನ್ನು ಕಾಪಾಡಿಕೊಳ್ಳುವುದು ಮತ್ತು ಕಾಪಾಡುವುದು ಇದರ ಉದ್ದೇಶವಾಗಿದೆ. ವೆರಿಫಿಕೇಶನ್‌ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಖಾತೆಗಳ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸುವ ಮೂಲಕ ಸಾರ್ವಜನಿಕ ಸಂಭಾಷಣೆಯನ್ನು ಪೂರೈಸುವ ಸಾಮಾಜಿಕ ಮಾಧ್ಯಮ ವೇದಿಕೆಗಳ ಬದ್ಧತೆಯ ಭಾಗವಾಗಿದೆ.

ವೆರಿಫಿಕೇಶನ್‌

ವೆರಿಫಿಕೇಶನ್‌ ಮಾಡಲು ಟ್ವೀಟರ್‌ ಖಾತೆಯು ಗಮನಾರ್ಹ, ಅಧಿಕೃತ ಮತ್ತು ಸಕ್ರಿಯವಾಗಿರಬೇಕು. ಟ್ವಿಟರ್ ಪ್ರಸ್ತುತ ಪರಿಶೀಲಿಸುವ ಆರು ರೀತಿಯ ಗಮನಾರ್ಹ ಖಾತೆಗಳಲ್ಲಿ ಸರ್ಕಾರಿ ಕಂಪನಿಗಳು, ಬ್ರ್ಯಾಂಡ್‌ಗಳು ಮತ್ತು ಲಾಭರಹಿತ ಸಂಸ್ಥೆ, ಸುದ್ದಿ ಸಂಸ್ಥೆಗಳು ಮತ್ತು ಪತ್ರಕರ್ತರು, ಮನರಂಜನೆ, ಕ್ರೀಡೆ ಮತ್ತು ಎಸ್‌ಪೋರ್ಟ್ಸ್, ಕಾರ್ಯಕರ್ತರು, ಸಂಘಟಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳು ಸೇರಿದ್ದಾರೆ. ಆದರೆ ಉಪರಾಷ್ಟ್ರಪತಿಗಳ ವಿಚಾರದಲ್ಲಿ ಟ್ವಿಟ್ಟರ್ ನಡೆ ಖಂಡನೀಯ ಅನ್ನೊದು ಹಲವರ ವಾದವಾಗಿದೆ. ಅವರ ಟ್ವೀಟರ್‌ ಹ್ಯಾಂಡಲ್‌ನಿಂದ ಬ್ಲೂ ಬ್ಯಾಡ್ಜ್ ಅನ್ನು ತೆಗೆದುಹಾಕುವ ಬಗ್ಗೆ ಟ್ವಿಟ್ಟರ್ನಲ್ಲಿ ಅನೇಕರು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ಭಾರತದ ಸಂವಿಧಾನದ ಮೇಲಿನ ಆಕ್ರಮಣ ಎಂದು ಕೆಲವರು ಪ್ರಸ್ತಾಪಿಸಿದ್ದಾರೆ.

ಟ್ವೀಟರ್‌

ಇನ್ನು ಎಂ ವೆಂಕಯ್ಯ ನಾಯ್ಡು ಟ್ವೀಟರ್‌ ಹ್ಯಾಂಡಲ್‌ನಿಂದ ಬ್ಲೂ ಬ್ಯಾಡ್ಜ್ ಅನ್ನು ತೆಗೆದುಹಾಕುವ ಬಗ್ಗೆ ಟ್ವಿಟ್ಟರ್ನಲ್ಲಿ ಅನೇಕರು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ಭಾರತದ ಸಂವಿಧಾನದ ಮೇಲಿನ ಆಕ್ರಮಣ ಎಂದು ಕೆಲವರು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಬಿಜೆಪಿಯ ನಾಯಕರು ಟ್ವಿಟರ್‌ನ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ನಡೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದ ಹಾಗೇ ಟ್ವಿಟರ್ ಮತ್ತೆ ಎಂ ವೆಂಕಯ್ಯ ನಾಯ್ಡು ಅವರ ವೈಯುಕ್ತಿಕ ಖಾತೆಯಲ್ಲಿ ಬ್ಲೂಟಿಕ್‌ ಅನ್ನು ಮರಳಿ ನೀಡಿದೆ.

Best Mobiles in India

Read more about:
English summary
Venkaiah Naidu's Twitter handle apparently lost the blue badge over inactivity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X