Subscribe to Gizbot

ಫ್ಲಿಪ್ಕಾರ್ಟ್ ಬಂಪರ್ ಆಫರ್: ವಿವೋ ವಿ5 ಪ್ಲಸ್ ಖರೀದಿಯಲ್ಲಿ 3,000ರೂ. ಕಡಿತ

By: Prathap T

ಅತ್ಯಾರ್ಷಕ ಸೆಲ್ಫಿ ಕೇಂದ್ರಿತ ಸ್ಮಾರ್ಟ್ಫೋನ್ ಎಂದೇ ಜನಾಕರ್ಷಣೆ ಪಡೆದಿರುವ ವಿವೋ ವಿ5 ಪ್ಲಸ್ ಖರೀದಿಸಲು ಗ್ರಾಹಕರು ಚಿಂತಿಸಬೇಕಾದ ಅಗತ್ಯವಿಲ್ಲ. ಕೈಗೆಡಕುವ ದರದಲ್ಲಿ ಗ್ರಾಹಕರಿಗೆ ನೀಡಲು ಫ್ಲಿಪ್ಕಾರ್ಟ್ ಮುಂದಾಗಿದ್ದು, ಮೂಲದರದಲ್ಲಿ 3,000ರೂ. ಕಡಿತಗೊಳಿಸಿ ಬಂಪರ್ ಆಫರ್ ಘೋಷಣೆ ಮಾಡಿರುವುದರಿಂದ ಗ್ರಾಹಕರನ್ನು ಹೆಚ್ಚು ಆಕರ್ಷಿಸುವಂತೆ ಮಾಡಿದೆ.

ಫ್ಲಿಪ್ಕಾರ್ಟ್ ಬಂಪರ್ ಆಫರ್: ವಿವೋ ವಿ5 ಪ್ಲಸ್ ಖರೀದಿಯಲ್ಲಿ 3,000ರೂ. ಕಡಿತ

ವಿವೋ ವಿ5 ಪ್ಲಸ್ ಜನವರಿ 2017ರಲ್ಲಿ ಮಾರುಕಟ್ಟೆಗೆ ಪರಿಚಯಿಸಿದಾಗ ಅದರ ದರ 27,990ರೂ.ಇತ್ತು. ಇದೀಗ 25,990ದರ ನಿಗದಿ ಮಾಡಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಫ್ಲಿಪ್ಕಾರ್ಟ್ 3,000ರೂ. ಕಡಿತಗೊಳಿಸಿ 22,990ರೂ.ಗಳಿಗೆ ಗ್ರಾಹಕರಿಗೆ ಕೈ ಸೇರುವಂತೆ ಮಾಡುವ ಮೂಲಕ ಇನ್ನಷ್ಟು ಹತ್ತಿರವಾಗಿದೆ.

ಈ ಸ್ಮಾರ್ಟ್ಫೋನ್ ಅಗತ್ಯವಿರುವ ಯುಎಸ್ಪಿ ಯೊಂದಿಗೆ ಡುಯಲ್-ಸೆಲ್ಫಿ ಕ್ಯಾಮರಾವನ್ನು ಮೊದಲ ಬಾರಿಗೆ ಪರಿಚಯಿಸಿದ ಮೊಲದ ಹ್ಯಾಂಡ್ ಸೆಟ್ಗಳಲ್ಲಿ ವಿವೋ ವಿ5 ಪ್ಲಸ್ ಕೂಡ ಒಂದಾಗಿದೆ.

ಡ್ಯುಯಲ್-ಸೆಲ್ಫಿ ಕ್ಯಾಮೆರಾ ಸೆಟಪ್ನಲ್ಲಿ 8ಎಂಪಿ ಸೆಕೆಂಡರಿ ಕ್ಯಾಮರಾ, 20ಎಂಪಿ ಪ್ರಾಥಮಿಕ ಕ್ಯಾಮರಾವನ್ನು ಹೊಂದಿದೆ, 'ಬೊಕೆ' ಎಫೆಕ್ಟ್ ನೊಂದಿಗೆ ಸೆರೆ ಹಿಡಿಯಬಹುದಾಗಿದೆ. ಕ್ಯಾಮೆರಾವು ಎಫ್/ 2.0 ನ ದ್ಯುತಿರಂಧ್ರದ ಗಾತ್ರ ಹೊಂದಿರುವ ಸೋನಿ ಐಎಂಎಕ್ಸ್376 ಇಮೇಜ್ ಸಂವೇದಕವನ್ನು ಹೊಂದಿದೆ.

4G ಸ್ಮಾರ್ಟ್‌ಫೋನ್ ಇದ್ಯಾ..? ಹಾಗಿದ್ರೆ ಜಿಯೋ ಬೇಡವೇ ಬೇಡ.!!

ಇತರೆ ವಿಶೇಷತೆಗಳ ಬಗ್ಗೆ ನೋಡುವುದಾದರೆ, 5.5 ಇಂಚಿನ ಸ್ಕ್ರೀನ್ 1080ಪಿ ರೆಸಲ್ಯೂಶನ್ ಹಾಗೂ 5.5 ಇಂಚಿನ ಫುಲ್ ಎಚ್ಡಿ ಡಿಸ್ಪ್ಲೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಹೊಂದಿದೆ. ಸೆಲ್ಫಿ ಚಿತ್ರ ತೆಗೆಯುವಾಗ ಏನಾದರೂ ಅತಾಚುರ್ಯವಾಗಿ ಕೆಳಗೆ ಬಿದ್ದರೆ ಅತ್ಯಂತ ಗುಣಮಟ್ಟದಿಂದ ಸ್ಮಾರ್ಟ್ಫೋನ್ ರಕ್ಷಿಸಬಲ್ಲ ಕಾರ್ನಿಂಗ್ ಗೊರಿಲ್ಲಾ 4 ಗ್ಲಾಸ್ ಒಳಗೊಂಡಿದೆ.

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 ಸಿಪಿಯು, ಆಕ್ಟಾ-ಕೋರ್ ಚಿಪ್, 14ಎನ್ಎಂ ಪ್ರೋಸಸರ್ನೊಂದಿಗೆ ದಿನವಿಡಿ ಬಳಕೆ ಮಾಡಲು ಶಕ್ತವಾದ ಬ್ಯಾಟರಿ ಒದಗಿಸಬಲ್ಲ ಸ್ಮಾರ್ಟ್ಫೋನ್ ಇದಾಗಿದೆ. ಸಿಪಿಯು 4ಜಿಬಿ ರಾಮ್ ಹೊಂದಿರುವುದರಿಂದ ದೀರ್ಘಕಾಲಿಕವಾಗಿ ಬಳಕೆ ಮಾಡಬಹುದಾಗಿದೆ.

ವೈವೋ ವಿ 5 ಪ್ಲಸ್ 64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ ಮತ್ತು ಆದರೆ, ಮೈಕ್ರೊ ಕಾರ್ಡ್ ಬೆಂಬಲ ಹೊಂದಿಲ್ಲದಿರುವುದು ಗಮನಿಸಬೇಕಾದ ಅಂಶವಾಗಿದೆ.

ಇನ್ನೊಂದು ಗಮನಾರ್ಹ ವಿಷಯವೆಂದರೆ, ಫ್ಲಿಪ್ಕಾರ್ಟ್ ನಲ್ಲಿ ಇಎಂಐ ಮೂಲಕ ವಿವೊ ವಿ 5 ಪ್ಲಸ್ ಖರೀದಿಸಲು ಬಯಸಿದರೆ ಯಾವುದೇ ಮುಂಗಡ ಹಣ ಪಾವಿತಸಬೇಕಿಲ್ಲ. ತಿಂಗಳಿಗೆ ರೂ. 1,916 ಮಾಸಿಕ ಕಂತು ಪಾವತಿಸಿ ಪಡೆಯಬಹುದಾಗಿದೆ. ಇದಲ್ಲದೆ, ನೀವು ವಿವೊ ವಿ 5 ಪ್ಲಸ್ ಖರೀದಿಸಲು ಇಚ್ಛಿಸಿದರೆ ನಿಮ್ಮ ಹಳೆಯ ಹ್ಯಾಂಡ್ಸೆಟ್ ವಿನಿಯಮ ಮಾಡಿ ರೂ. 15,600 ವರೆಗೆ ವಿನಿಮಯ ಮಾಡಿದರೆ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.

English summary
Launched at a price of Rs. 27,990, Vivo V5 Plus introduces the first of its kind dual-selfie camera on a smartphone that captures amazing selfies
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot