ಶಿಯೋಮಿ ನಂತರದಲ್ಲಿ ವಿವೋ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಕಡಿತ..!

Written By: Lekhaka

ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಒಂದೊಂದಾಗಿ ತಮ್ಮ ಸ್ಮಾರ್ಟ ಫೋನ್ ಬೆಲೆಗಳನ್ನು ಇಳಕೆ ಮಾಡಲು ಮುಂದಾಗಿದ್ದು, ಶಿಯೋಮಿ ತನ್ನ Mi A1 ಸ್ಮಾರ್ಟ್ ಫೋನ್ ಬೆಲೆಯಲ್ಲಿ ರೂ.1000 ಕಡಿಮೆ ಮಾಡಿದ ರೀತಿಯಲ್ಲಿ ವಿವೋ ಸಹ ತನ್ನ ವಿವೋ V5s ಸ್ಮಾರ್ಟ್ ಫೋನ್ ಬೆಲೆಯಲ್ಲಿ ರೂ. 2000 ಇಳಿಕೆ ಮಾಡಿದೆ ಎನ್ನಲಾಗಿದೆ.

ಶಿಯೋಮಿ ನಂತರದಲ್ಲಿ ವಿವೋ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಕಡಿತ..!

ಈ ಹಿಂದೆ ವಿವೋ V5s ಸ್ಮಾರ್ಟ್ ಫೋನ್ ರೂ. 17,990ಕ್ಕೆ ಮಾರಾಟವಾಗುತ್ತಿತ್ತು, ಆದರೆ ಸದ್ಯ ವಿವೋ V5s ಸ್ಮಾರ್ಟ್ ಫೋನ್ ಬೆಲೆಯಲ್ಲಿ ಶಾಶ್ವತ ರೂ. 2000 ಕಡಿತವಾದ ನಂತರದಲ್ಲಿ ರೂ. 15,990ಕ್ಕೆ ದೊರೆಯುತ್ತಿದೆ ಎನ್ನಲಾಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಈ ಫೋನ್ ಗಳು ಹೊಸ ಬೆಲೆಗೆ ಮಾರಾಟವಾಗುತ್ತಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ರೂ.15000ದ ಬೆಲೆಯ ಸ್ಮಾರ್ಟ್ ಫೋನ್ ಗಳ ಸಂಖ್ಯೆ ಹೆಚ್ಚಾಗಿದ್ದು, ಈ ವಿಭಾಗದಲ್ಲಿ ಸಾಕಷ್ಟು ಸ್ಪರ್ಧೆಯನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ವಿವೋ ಮತ್ತು ಶಿಯೋಮಿ ಕಂಪನಿಗಳು ತಮ್ಮ ಬೆಲೆಯಲ್ಲಿ ಇಳಿಕೆಯನ್ನು ಕಾಣಿಸಿಕೊಂಡಿದೆ ಎನ್ನಲಾಗಿದೆ.

ವಿವೋ V5s ಸ್ಮಾರ್ಟ್ ಫೋನ್ ನಲ್ಲಿ 5.5 ಇಂಚಿನ ವಿವೋ V5s ಸ್ಮಾರ್ಟ್ ಫೋನ್ ನಲ್ಲಿ HD ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 1.5 GHz ವೇಗದ ಮಿಡಿಯಾ ಟೆಲ್ ಪ್ರೊಸೆಸರ್ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಇದರಲ್ಲಿ ಅಳವಡಿಸಲಾಗಿದೆ.

3G ಗ್ರಾಹಕರು 'ಐಡಿಯಾ'ಗೆ ಪೋರ್ಟ್ ಆಗಲು ಇದೊಂದೇ ಆಫರ್ ಸಾಕು!!

ಇದಲ್ಲದೇ ಮುಂಭಾಗದಲ್ಲಿ ಸೆಲ್ಫಿಗಾಗಿ 20 MP ಕ್ಯಾಮೆರಾವನ್ನು ಈ ಫೋನಿನಲ್ಲಿ ಕಾಣಬಹುದಾಗಿದ್ದು, ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ನೀಡಲಾಗಿದೆ. ಈ ಫೋನ್ ಆಂಡ್ರಾಯ್ಡ್ 6 ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು 3000mAh ಬ್ಯಾಟರಿಯನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.

Read more about:
English summary
After Xiaomi, it looks like Vivo is also dropping the price of its smartphones.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot