ವಿವೋ X21 ಸ್ಮಾರ್ಟ್ ಫೋನ್ ಲಾಂಚ್: ಮಾರುಕಟ್ಟೆಯಲ್ಲಿ ಹೊಸ ಸಂಚಲನ..!
ವಿವೋ ಸ್ಮಾರ್ಟ್ ಫೋನ್ 3D ಗ್ಲಾಸ್ ಅನ್ನು ಹೊಂದಿದ್ದು, ಡ್ಯುಯಲ್ ಹಿಂಬದಿ ಕ್ಯಾಮೆರಾ, ಉತ್ತಮ ಫೋಟೋಗಳನ್ನು ಸೆರೆ ಹಿಡಿಯುವ ಸಲುವಾಗಿ ಕೃತಕ ಬುದ್ಧಿ ಮತ್ತೆಯ ಬಳಕೆ. ಹೈ ಸ್ಕ್ರಿನ್ ಬಾಡಿ ರೇಷಿಯೋ, ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅಲ್ಲದೇ ಕೃತಕ ಬುದ್ದಿಮತ್ತೆಯ ಚಿಪ್, ಸೂಪರ್ ಅಮೊಲೈಡ್ ಪ್ಯಾನಲ್ ಗಳನ್ನು ಒಳಗೊಂಡಿದೆ.

ವಿವೋ X21 ಸ್ಮಾರ್ಟ್ ಫೋನ್ ವಿಶೇಷತೆ:
ವಿವೋ X21 ಸ್ಮಾರ್ಟ್ ಫೋನ್ ನಲ್ಲಿ 6.28 ಇಂಚಿನ FHD+ ಗುಣಮಟ್ಟದ ಸೂಪರ್ ಅಮೊಲೈಡ್ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. 19:9 ಅನುಪಾತದಿಂದ ಕೂಡಿರುವ ಡಿಸ್ ಪ್ಲೇ ಇದಾಗಿದೆ. ಅಲ್ಲದೇ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಪ್ರೋಸೆಸರ್, 512GPU ಸೇರಿದಂತೆ 6GB RAM ಮತ್ತು 64GB/128GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ. ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.
ವಿವೋ X21 ಸ್ಮಾರ್ಟ್ ಫೋನ್ ಹಿಂಬದಿಯಲ್ಲಿ 12MP + 5 MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಮುಂಭಾಗದಲ್ಲಿ 12MP ಕ್ಯಾಮೆರಾವನ್ನು ಸೆಲ್ಪಿಗಾಗಿ ನೀಡಲಾಗಿದೆ. 3200mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ವಿವೋ X21 ಸ್ಮಾರ್ಟ್ ಫೋನ್ ಹೈಲೈಟ್:
ಐಫೋನ್ X ಮಾದರಿಯಲ್ಲಿ ಮುಂಭಾಗದ ಡಿಸ್ ಪ್ಲೇಯನ್ನು ಹೊಂದಿದ್ದು, ಮಧ್ಯಭಾಗದಲ್ಲಿ ನೋಚ್ ಕಾಣಬಹುದಾಗಿದೆ. ಶೇ.90 ಬಾಡಿ ಫೋನಿನಲ್ಲಿ ಕಾಣಬಹುದಾಗಿದ್ದು, ಆಂಡ್ರಾಯ್ಡ್ 8.1ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಅಲ್ಲದೇ ಉತ್ತಮವಾದ ಸೆಲ್ಪಿಗಳು ಮತ್ತು ಫೋಟೋಗಳನ್ನು ತೆಗೆಯುವ ಸಲುವಾಗಿಯೇ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲಾಗದೆ.


ಬೆಲೆ:
ವಿವೋ X21 ಸ್ಮಾರ್ಟ್ ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. 6GB -64GB ಆವೃತ್ತಿಯ ವಿವೋ X21 ಸ್ಮಾರ್ಟ್ ಫೋನ್ ಅಂದಾಜು ರೂ.29000ಕ್ಕೆ ದೊರೆಯಬಹುದು, ಇದೇ ಮಾದರಿಯಲ್ಲಿ 6GB -128GB ಆವೃತ್ತಿಯೂ ಅಂದಾಜು ರೂ.32000ಕ್ಕೆ ಮಾರಾಟವಾಗುವ ಸಾಧ್ಯತೆ ಇದೆ. ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರುವ ವಿವೋ X21 ಸ್ಮಾರ್ಟ್ ಫೋನ್ 37000ಕ್ಕೆ ಲಭ್ಯವಾಗಲಿದೆ.


Click it and Unblock the Notifications








