6.26 ಇಂಚ್ ನೋಚ್ದ್ ಡಿಸ್‌ಪ್ಲೇಯೊಂದಿಗೆ ಮಾರುಕಟ್ಟೆಗೆ ಬರುತ್ತಿದೆ ವಿವೋ Y85

By Kiran Kumar Kh
|

ಬಜೆಟ್ ಬೆಲೆಯ ಮೊಬೈಲ್ ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಛಾಪು ಮೂಡಿಸಿರುವ ವಿವೋ ಸಂಸ್ಥೆ, ಈಗ ವಿವೋ X21 ಮತ್ತು ವಿವೋ V9 ಸೇರಿದಂತೆ ಹೊಸ ಮಾದರಿಯ ಸ್ಮಾರ್ಟ್‍ಫೋನ್ ಗಳನ್ನು ಪರಿಚಯಿಸಲು ಸಜ್ಜಾಗಿದೆ. ಸ್ಲ್ಯಾಷ್ ಲೀಕ್ ಬಿಡುಗಡೆ ಮಾಡಿರುವ ಹೊಸ ವರದಿಯಂತೆ, ಮೇಲಿನ ಎರಡು ಮೊಬೈಲ್ ನೊಂದಿಗೆ ವಿವೋ ತನ್ನ ಹೊಸ ಮೊಬೈಲ್ ವಿವೋ Y85 ಗಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ವಿಷಯಗಳೆಂದರೆ, ಈ ಮೂರು ಹೊಸ ಸ್ಮಾರ್ಟ್‍ಫೋನ್ ಗಳ ಡಿಸ್‌ಪ್ಲೇ ವಿನ್ಯಾಸವೂ ಆಪಲ್ ಐಫೋನ್ X ನಂತೆಯೇ ಇರಲಿದೆ.

6.26 ಇಂಚ್ ನೋಚ್ದ್ ಡಿಸ್‌ಪ್ಲೇಯೊಂದಿಗೆ ಮಾರುಕಟ್ಟೆಗೆ ಬರುತ್ತಿದೆ ವಿವೋ Y85


ಇನ್ನು ಮಾರುಕಟ್ಟೆಗೆ ಲಗ್ಗೆ ಇಡದ ವಿವೋ X21 ಮತ್ತು ವಿವೋ V9 ಮೊಬೈಲ್ ಗಳ ಕುರಿತು ಈಗಾಗಲೇ ಕೆಲವು ಮಾಹಿತಿಗಳು ಸೋರಿಕೆಯಾಗಿದೆ. ಸೋರಿಕೆಯಾದ ಮಾಹಿತಿಯಂತೆ ಬಿಡುಗಡೆಗೊಳ್ಳಲಿರುವ 3 ಸ್ಮಾರ್ಟ್‍ಫೋನ್ ಗಳು ನೋಚ್ದ್ ಮಾದರಿಯ ಡಿಸ್‌ಪ್ಲೇ ಹೊಂದಿರಲಿದೆ. ವಿವರವಾಗಿ ಹೇಳುವುದಾದರೆ ಐಫೋನ್ X ವಿನ್ಯಾಸದ ಫುಲ್ ಡಿಸ್‌ಪ್ಲೇ ಹೊಂದಿರಲಿದೆ.

ಸೋರಿಕೆಯಾದ ಮಾಹಿತಿಯಂತೆ, ವಿವೋ Y85 ಮೊಬೈಲ್ 6.26 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅಕಾರವು 19:9ರ ಅನುಪಾತ ಇರಲಿದೆ. ಬೃಹತ್ ಆಕಾರದ ಅನುಪಾತವು ನೋಚ್ಡ್ ಮಾದರಿಯ ಡಿಸ್‌ಪ್ಲೇ ಹೊಂದಿರಲಿದೆ ಎಂದು ಸುಳಿವು ನೀಡಿದೆ. ಆದರೆ ಈವರೆಗೆ ಹೊಸ ಸ್ಮಾರ್ಟ್‍ಫೋನ್ ನ ಯಾವುದೇ ರೀತಿಯ ಫೋಟೋ ಬಿಡುಗಡೆಯಾಗಿಲ್ಲ.

ಬಿಡುಗಡೆಯಾಗಲಿರುವ ವಿವೋ Y85 ಸ್ಮಾರ್ಟ್‍ಫೋನ್ ನಲ್ಲಿ 4GB RAM ನೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್‌ 450 ಪ್ರೊಸೆಸಿಂಗ್ ಸಿಸ್ಟಮ್ ಇರಲಿದೆ. ಈ ಮೊಬೈಲ್ ಎರಡು ಆವೃತ್ತಿಯಲ್ಲಿ ಮಾರುಕಟ್ಟೆಗೆ ಬರಲಿದೆ.ಮೊದಲನೆಯದ್ದು 32GB ಅಂತರಿಕ ಮೆಮೊರಿ (ಡೀಫಾಲ್ಟ್ ಸ್ಟೋರೇಜ್) ನ ಫೋನ್ ಮತ್ತು 64GB ಅಂತರಿಕ ಮೆಮೊರಿ ಸಾಮರ್ಥ್ಯದ ಮತ್ತೊಂದು ಆವೃತ್ತಿಯಲ್ಲಿರಲಿದೆ. ಎರಡೂ ಮಾದರಿಯ ಫೋನ್ ಗಳಲ್ಲಿ ಮೈಕ್ರೋ ಎಸ್ಡಿ ಕಾರ್ಡ್ ನ ಮೂಲಕ ಶೇಖರಣಾ ಜಾಗವನ್ನು ವಿಸ್ತರಿಸಬಹುದು.

Y85 ಆವೃತ್ತಿಯ ಕ್ಯಾಮೆರಾದ ಕಡೆ ಕಣ್ಣಾಡಿಸುವುದಾದರೆ, ಪ್ರಸ್ತುತ ಫೋಟೋ ಟ್ರೆಂಡ್ ಗಳನ್ನು ಗಮನದಲ್ಲಿಟ್ಟುಕೊಂಡು ಹಿಂಬದಿಯ ಕ್ಯಾಮೆರಾ 13MP ಪ್ರೈಮರಿ ಮತ್ತು 2MP ಸೆಕೆಂಡರಿ ಕ್ಯಾಮೆರಾ ಇರಲಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಪ್ರೀಯರಿಗಾಗಿ 16MP ಸೆಲ್ಫ್ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ AR ಸ್ಟಿಕ್ಕರ್ಗಳು ಮತ್ತು ಫೇಸ್ ಅನ್ಲಾಕ್ ನಂತಹ ಇತರ ವೈಶಿಷ್ಟ್ಯಗಳು ಸಹ ಇರಲಿದೆ.

ಸ್ಮಾರ್ಟ್‍ಫೋನ್ ನ ಸಾಫ್ಟ್‌ವೇರ್ ವಿಭಾಗದಲ್ಲಿ ಆಂಡ್ರಾಯ್ಡ್ 8.0 ಓರಿಯೋ ಕಾರ್ಯನಿರ್ವಹಿಸುತ್ತದೆ. ಬ್ಲೂಟೂತ್ 5.0, ಡ್ಯುಯಲ್ ಸಿಮ್, USB 2.0 ಮೈಕ್ರೋ ಪೋರ್ಟ್, ಜಿಪಿಎಸ್ ಮತ್ತು ವೈಫೈನಂತಹ ವೈಶಿಷ್ಟ್ಯಗಳಿವೆ. ಹಾಗು 3,260mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ.

ಪೇಟಿಎಂ, ಫೋನ್‌ಪೇ, ತೇಜ್ ಬಿಟ್ಟು ವಾಟ್ಸ್‌ಆಪ್‌ನಲ್ಲಿ ಪೇಮೆಂಟ್‌ ಮಾಡಲು ಇದೊಂದು ಆಯ್ಕೆ ಸಾಕು..!ಪೇಟಿಎಂ, ಫೋನ್‌ಪೇ, ತೇಜ್ ಬಿಟ್ಟು ವಾಟ್ಸ್‌ಆಪ್‌ನಲ್ಲಿ ಪೇಮೆಂಟ್‌ ಮಾಡಲು ಇದೊಂದು ಆಯ್ಕೆ ಸಾಕು..!

ಪ್ರಸ್ತುತ ಮಾಹಿತಿಯಂತೆ ವಿವೋ Y85 ಆವೃತ್ತಿ ಬ್ಲ್ಯಾಕ್ ಗೋಲ್ಡ್ ಮತ್ತು ಶಾಂಪೇನ್ ಗೋಲ್ಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‍ಫೋನ್ ನ ಅಂದಾಜು ಬೆಲೆ. 18,475 ರೂ. ವಿವೋ ಕಂಪೆನಿಯ ಹೊಸ ಆವೃತ್ತಿಯ ಸ್ಮಾರ್ಟ್‍ಫೋನ್ ಗಳು ಮಾರುಕಟ್ಟೆಯಲ್ಲಿ ಶಿಯೊಮಿ ಕಂಪೆನಿಯ ರೆಡ್ಮಿ 5 ಆವೃತ್ತಿಗೆ ಪ್ರಬಲ ಸವಾಲು ನೀಡಬಹುದು.

Best Mobiles in India

Read more about:
English summary
Vivo seems to be working on another smartphone with design similar to the iPhone X. Dubbed as Y85, the smartphone's leaked specs sheet suggests it will feature a display with an aspect ratio of 19:9. The leak further reveals, the Y85 is powered by a Qualcomm Snapdragon 450 processor coupled with 4GB of RAM.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X