ವೊಡಾಫೋನ್ 199,399 ರುಪಾಯಿ ಪ್ರೀಪೇಯ್ಡ್ ಪ್ಲಾನ್ನಲ್ಲಿ ಬದಲಾವಣೆ:ಲಾಭ,ನಷ್ಟವೆಷ್ಟು?

|

ಡಾಟಾ ಮತ್ತು ಬೆಲೆಯ ವಿಚಾರದಲ್ಲಿ ಟೆಲಿಕಾಂ ಆಪರೇಟರ್ ಗಳ ನಡುವೆ ಒಂದು ರೀತಿಯ ಯುದ್ಧವೇ ನಡೆಯುತ್ತಿದೆ. ಗ್ರಾಹಕರನ್ನು ಸೆಳೆಯುವುದಕ್ಕಾಗಿ ಮತ್ತು ಇರುವ ಗ್ರಾಹಕರನ್ನು ಉಳಿಸಿಕೊಳ್ಳುವುದಕ್ಕಾಗಿ ವಡಾಫೋನ್ ತನ್ನ ಎರಡು ಪ್ರೀಪೇಯ್ಡ್ ಪ್ಲಾನ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ರುಪಾಯಿ 199, ರುಪಾಯಿ 399 ರ ಪ್ರೀಪೇಯ್ಡ್ ಪ್ಲಾನ್ ನ್ನು ಮರುಪರಿಶೀಲಿಸಿ ಬಿಡುಗಡೆಗೊಳಿಸಿದೆ ವಡಾಫೋನ್.

ಬದಲಾದ 199 ನಲ್ಲಿ ಪ್ಲಾನ್ ನಲ್ಲಿ ಏನೇನು ಆಫರ್?

ಬದಲಾದ 199 ನಲ್ಲಿ ಪ್ಲಾನ್ ನಲ್ಲಿ ಏನೇನು ಆಫರ್?

ರುಪಾಯಿ 199 ರ ಪ್ಲಾನ್ ನಲ್ಲಿ ವಡಾಫೋನ್ ಇದೀಗ 1.5ಜಿಬಿ ಡಾಟಾ ಪ್ರತಿದಿನ ಜೊತೆಗೆ ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳು ಮತ್ತು 100ಎಸ್ಎಂಎಸ್ ಗಳನ್ನು ನೀಡುತ್ತದೆ. ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ ಹಾಗಾಗಿ ಬಳಕೆದಾರರಿಗೆ ಒಟ್ಟು 42ಜಿಬಿ ಡಾಟಾವನ್ನು ಈ ಅವಧಿಯಲ್ಲಿ ಉಚಿತವಾಗಿ ಪಡೆಯುತ್ತಾರೆ.

ಹಿಂದಿನ 199 ರುಪಾಯಿ ಪ್ಲಾನ್ ಹೇಗಿತ್ತು?

ಹಿಂದಿನ 199 ರುಪಾಯಿ ಪ್ಲಾನ್ ಹೇಗಿತ್ತು?

ಈ ಹಿಂದೆ ಇದೇ ಪ್ಲಾನ್ 1.4ಜಿಬಿ ಡಾಟಾ ಪ್ರತಿದಿನ ನೀಡುತ್ತಿತ್ತು. ಇದೀಗ ಪ್ರತಿದಿನ 100ಎಂಬಿ ಹೆಚ್ಚುವರಿ ಡಾಟಾವನ್ನು ನೀಡಲಾಗುತ್ತದೆ.

399 ರುಪಾಯಿ ಪ್ಲಾನ್ ನಲ್ಲಿ ಆಗಿರುವ ಬದಲಾವಣೆ:

399 ರುಪಾಯಿ ಪ್ಲಾನ್ ನಲ್ಲಿ ಆಗಿರುವ ಬದಲಾವಣೆ:

ಇನ್ನೊಂದು ಪ್ಲಾನ್ ನ್ನು ಕೂಡ ಮರುಬಿಡುಗಡೆಗೊಳಿಸಲಾಗಿದೆ ಅದುವೇ ರುಪಾಯಿ 399 ರ ಪ್ಲಾನ್.ಬಳಕೆದಾರರಿಗೆ ಇದರ ಅನ್ವಯ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳು ಜೊತೆಗೆ 100ಎಸ್ಎಂಎಸ್ ಪ್ರತಿದಿನ ಉಚಿತವಾಗಿ ನೀಡಲಾಗುತ್ತದೆ. ಬಳಕೆದಾರರಿಗೆ 1ಜಿಬಿ ಡಾಟಾ ಪ್ರತಿದಿನ ಈ ಪ್ಲಾನ್ ನ ಅಡಿಯಲ್ಲಿ ಲಭ್ಯವಾಗುತ್ತದೆ ಮತ್ತು ಇದು 84 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಹಿಂದಿನ 399 ರುಪಾಯಿ ಪ್ಲಾನ್ ನಲ್ಲಿ ಏನಿತ್ತು?

ಹಿಂದಿನ 399 ರುಪಾಯಿ ಪ್ಲಾನ್ ನಲ್ಲಿ ಏನಿತ್ತು?

ಈ ಹಿಂದೆ ಇದೇ ಪ್ಲಾನ್ 1.4ಜಿಬಿ ಡಾಟಾವನ್ನು ಪ್ರತಿದಿನ ಉಚಿತವಾಗಿ 70 ದಿನಗಳ ಅವಧಿಗೆ ನೀಡುತ್ತಿತ್ತು. ಬದಲಾವಣೆಯ ನಂತರ ಅವಧಿಯನ್ನು ಹೆಚ್ಚಿಸಲಾಗಿದ್ದು 1.4ಜಿಬಿ ಡಾಟಾ ಬದಲಿಗೆ ಕೇವಲ 1ಜಿಬಿ ಡಾಟಾವನ್ನು ನೀಡಲಾಗುತ್ತಿದೆ.

ಎರಡೂ ಪ್ಲಾನ್ ಗೂ ಇದೆ ಎಫ್ ಯುಪಿ ಲಿಮಿಟ್:

ಎರಡೂ ಪ್ಲಾನ್ ಗೂ ಇದೆ ಎಫ್ ಯುಪಿ ಲಿಮಿಟ್:

ಇದೆಲ್ಲದರ ಜೊತೆಗೆ ಮೇಲಿನ ಎರಡೂ ಪ್ಲಾನ್ ನಲ್ಲಿ ಪ್ರತಿದಿನದ ಕರೆಗಳಿಗೆ ಎಫ್ ಯುಪಿ ಲಿಮಿಟ್ ಇರುತ್ತದೆ. ಅಂದರೆ ಬಳಕೆದಾರರು ಪ್ರತಿದಿನ 250 ನಿಮಿಷಗಳ ಅವಧಿಯ ಕರೆಗಳನ್ನು ಮಾಡಲು ಅವಕಾಶವಿರುತ್ತದೆ ಮತ್ತು 1,000 ನಿಮಿಷ ವಾರಕ್ಕೆ ಈ ಪ್ಲಾನ್ ಗಳ ಅಡಿಯಲ್ಲಿ ಉಚಿತವಾಗಿ ಮಾತನಾಡಲು ಅವಕಾಶವಿರುತ್ತದೆ. ಒಂದು ವೇಳೆ ಬಳಕೆದಾರರು ಈ ಪ್ರತಿನಿತ್ಯದ ಲಿಮಿಟ್ ನ್ನು ಮೀರಿದ್ದಲ್ಲಿ 1.2 ಪೈಸೆ ಪ್ರತಿ ಸೆಕೆಂಡ್ ಗೆ ಅಥವಾ 1ರುಪಾಯಿ ಪ್ರತಿ ನಿಮಿಷಕ್ಕೆ ಬೆಲೆ ತೆತ್ತಬೇಕಾಗುತ್ತದೆ. ಒಂದು ವೇಳೆ ಪ್ರತಿದಿನದ ಡಾಟಾ ಲಿಮಿಟ್ ನ್ನು ಕ್ರಾಸ್ ಮಾಡಿ ಬಳಕೆ ಮಾಡಿದ್ದಲ್ಲಿ ಬಳಕೆದಾರರು 50 ಪೈಸೆ ಪ್ರತಿ ಎಂಬಿ ಗೆ ಪಾವತಿ ಮಾಡಬೇಕಾಗುತ್ತದೆ.

ವಡಾಫೋನ್ 169 ರುಪಾಯಿ ಪ್ಲಾನ್:

ವಡಾಫೋನ್ 169 ರುಪಾಯಿ ಪ್ಲಾನ್:

ಇತ್ತೀಚೆಗೆ ವಡಾಫೋನ್ 169 ರುಪಾಯಿ ಪ್ರೀಪೇಯ್ಡ್ ಪ್ಲಾನ್ ನ್ನು ಕೂಡ ಪರಿಚಯಿಸಿದೆ. ಇದರ ಅಡಿಯಲ್ಲಿ ಚಂದಾದಾರರಿಗೆ ಅನಿಯಮಿತ ಕರೆಗಳ ಬೆನಿಫಿಟ್, 100ಎಸ್ಎಂಎಸ್ ಮತ್ತು 1ಜಿಬಿ ಡಾಟಾ ಪ್ರತಿದಿನ ಉಚಿತವಾಗಿ ಲಭ್ಯವಾಗುತ್ತದೆ. ಈ ಪ್ಲಾನ್ ನ ಅವಧಿ 28 ದಿನಗಳಾಗಿರುತ್ತದೆ.

Most Read Articles
Best Mobiles in India

Read more about:
English summary
Vodafone has revised Rs 199 and Rs 399 prepaid plans; here's what's more and what's less

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X