ಗೂಗಲ್‌ನ ಮೈ ಆಕ್ಟಿವಿಟಿ ಸೆಟ್ಟಿಂಗ್ಸ್ ನಲ್ಲಿ‌ ಏನೆಲ್ಲಾ ಮಾಡಬಹುದು?

ಗೂಗಲ್ ಉತ್ಪನ್ನಗಳನ್ನು ಉಪಯೋಗಿಸಿ ನೀವು ನಡೆಸುವ ಚಟುವಟಿಕೆಗಳ ಮಾಹಿತಿಯನ್ನು ಗೂಗಲ್ ಕಲೆಹಾಕುತ್ತಿರುತ್ತದೆ. ಈ ಎಲ್ಲಾ ಮಾಹಿತಿಯನ್ನು 'ಮೈ ಆಕ್ಟಿವಿಟಿ' ಎಂಬ ಪುಟದಲ್ಲಿ ನೋಡಬಹುದು.

By Tejaswini P G
|

ಗೂಗಲ್ ಗೆ ನಿಮ್ಮ ಬಗ್ಗೆ ಗೊತ್ತಿದೆಯೇ? ಹೌದು!ಏನೋ ಸ್ವಲ್ಪ ತಿಳಿದಿರಬಹುದೆಂದು ಅಂದುಕೊಂಡಿರೇ? ಇಲ್ಲ! ಗೂಗಲ್ ಗೆ ನಿಮ್ಮ ಬಗ್ಗೆ ಎಲ್ಲವೂ ಗೊತ್ತಿರುವ ಸಾಧ್ಯತೆಯಿದೆ. ಶಾಕ್ ಆಯ್ತಾ?ನೀವು ಜಿಮೈಲ್, ಜಿಡ್ರೈವ್, ಮ್ಯಾಪ್ಸ್ ಮೊದಲಾದ ಗೂಗಲ್ ಉತ್ಪನ್ನಗಳನ್ನು ಬಳಸುತ್ತಿದ್ದರೆ ಗೂಗಲ್ ಗೆ ನಿಮ್ಮ ಬಗ್ಗೆ ಸಾಕಷ್ಟು ವಿಷಯ ತಿಳಿದಿರುವ ಸಾಧ್ಯತೆಯಿದೆ.ನೀವು ಗೂಗಲ್ ಉತ್ಪನ್ನಗಳನ್ನು ಬಳಸಿ ನಡೆಸಿದ ಎಲ್ಲಾ ಚಟುವಟಿಕೆಗಳ ಮಾಹಿತಿ "ಮೈ ಆಕ್ಟಿವಿಟಿ" ಎಂಬ ನಿರ್ದಿಷ್ಟ ಪುಟದಲ್ಲಿ ಲಭ್ಯವಿರುತ್ತದೆ.

ಗೂಗಲ್‌ನ ಮೈ ಆಕ್ಟಿವಿಟಿ ಸೆಟ್ಟಿಂಗ್ಸ್ ನಲ್ಲಿ‌ ಏನೆಲ್ಲಾ ಮಾಡಬಹುದು?


ಏನಿದು "ಮೈ ಆಕ್ಟಿವಿಟಿ"? ಪ್ರತಿದಿನವೂ ಗೂಗಲ್ ನಿಮ್ಮ ಚಟುವಟಿಕೆಗಳ ಆಧಾರದ ಮೇಲೆ ನಿಮ್ಮ ಮಾಹಿತಿಯನ್ನು ಕಲೆಹಾಕುತ್ತಿರತ್ತದೆ. ಈ ಎಲ್ಲಾ ಮಾಹಿತಿಗಳನ್ನು ನಾವು ನೋಡಬಹುದಾದ ಪುಟವೇ "ಮೈ ಆಕ್ಟಿವಿಟಿ".ಇಲ್ಲಿ ಗೂಗಲ್ ಸರ್ಚ್,ಇಮೇಜ್ ಸರ್ಚ್, ಮ್ಯಾಪ್ಸ್, ಪ್ಲೇ, ಶಾಪಿಂಗ್, ಯೂಟ್ಯೂಬ್ ಮೊದಲಾದ ಚಟುವಟಿಕೆಗಳ ಮಾಹಿತಿ ನಿಮಗೆ ಸಿಗಲಿದೆ.

"ಮೈ ಆಕ್ಟಿವಿಟಿ" ಪುಟದ ಮೇಲ್ಭಾಗದಲ್ಲಿ ಎಡಬದಿಯಲ್ಲಿರುವ ಮೆನು ಬಟನ್ ಮೇಲೆ ಕ್ಲಿಕ್ ಮಾಡಿ ಐಟಮ್ ವ್ಯೂಗೆ ಹೋದರೆ, ನಿರ್ದಿಷ್ಟ ಐಟಂ ನ ಚಟುವಟಿಕೆಗಳ ಪಟ್ಟಿ ನಿಮ್ಮ ಟೈಂಲೈನ್ ಮೇಲಿರಲಿದೆ. ಗೂಗಲ್ ನಿಮ್ಮ ಮಾಹಿತಿಯನ್ನು ಉಪಯೋಗಿಸಿ ನಿಮಗಾಗಿ ವೈಯುಕ್ತೀಕರಿಸಲಾದ ಸೇವೆಯ ಅನುಭವವನ್ನು ನಿಮಗೆ ನೀಡುವ ಪ್ರಯತ್ನ ಮಾಡುತ್ತದಲ್ಲದೆ, ಜನರಿಗೆ ನೀಡುವ ಸೇವೆಗಳ ಗುಣಮಟ್ಟವನ್ನು ಉತ್ತಮವಾಗಿಸಲು ಪ್ರಯತ್ನಿಸುತ್ತದೆ.

ಗೂಗಲ್‌ನ ಮೈ ಆಕ್ಟಿವಿಟಿ ಸೆಟ್ಟಿಂಗ್ಸ್ ನಲ್ಲಿ‌ ಏನೆಲ್ಲಾ ಮಾಡಬಹುದು?


ಇದನ್ನು ಡಿಲೀಟ್ ಮಾಡಲು ಸಾಧ್ಯವೆ? ಹೌದಾದರೆ ಹೇಗೆ?

ಮೈ ಆಕ್ಟಿವಿಟಿ ಪುಟದಿಂದ ಈ ಎಲ್ಲಾ ಮಾಹಿತಿಯನ್ನು ಡಿಲೀಟ್ ಮಾಡಲು ಸಾಧ್ಯವಿದೆ.

ನೀವು ನಿರ್ದಿಷ್ಟ ಮಾಹಿತಿಯನ್ನು ಡಿಲೀಟ್ ಮಾಡಬಯಸಿದರೆ ಹೀಗೆ ಮಾಡಿ.ಮೈ ಆಕ್ಟಿವಿಟಿ ಪುಟದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿ. ಅದರ ಮುಂದಿರುವ ಮೂರು ಚುಕ್ಕಿಗಳ ಮೇಲೆ ಒತ್ತಿ ಡಿಲೀಟ್ ಮೇಲೆ ಕ್ಲಿಕ್ ಮಾಡಿ.

ಗೂಗಲ್‌ನ ಮೈ ಆಕ್ಟಿವಿಟಿ ಸೆಟ್ಟಿಂಗ್ಸ್ ನಲ್ಲಿ‌ ಏನೆಲ್ಲಾ ಮಾಡಬಹುದು?


ನಿರ್ದಿಷ್ಟ ಸಮಯದ ಮಾಹಿತಿಯನ್ನು ಅಳಿಸಬೇಕೇ? ಕಳೆದ ವಾರದಿಂದ ಅಥವಾ ತಿಂಗಳಿನಿಂದ ಇಂದಿನ ವರೆಗಿನ ಮಾಹಿತಿಯನ್ನು ಅಳಿಸಬೇಕಾದರೆ,"ಮೈ ಆಕ್ಟಿವಿಟಿ" ಪುಟದ ಮೇಲ್ಭಾಗದಲ್ಲಿ ಎಡಬದಿಯಲ್ಲಿರುವ ಮೆನು ಬಟನ್ ಮೇಲೆ ಕ್ಲಿಕ್ ಮಾಡಿ "ಡಿಲೀಟ್ ಆಕ್ಟಿವಿಟಿ ಬೈ" ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇವತ್ತಿನಿಂದ, ನಿನ್ನೆಯಿಂದ, ಕಳೆದ 7 ದಿನಗಳಿಂದ ಅಥವ ಕಳೆದ 30 ದಿನಗಳಿಂದ ಇಂದಿನವರೆಗಿನ ಮಾಹಿತಿ ಮಾತ್ರವಲ್ಲದೆ ಸಂಪೂರ್ಣ ಮಾಹಿತಿಯನ್ನು ಕೂಡ ಡಿಲೀಟ್ ಮಾಡಬಹುದು.

ಗೂಗಲ್‌ನ ಮೈ ಆಕ್ಟಿವಿಟಿ ಸೆಟ್ಟಿಂಗ್ಸ್ ನಲ್ಲಿ‌ ಏನೆಲ್ಲಾ ಮಾಡಬಹುದು?


ಅಷ್ಟೇ ಅಲ್ಲದೆ ಯೂಟ್ಯೂಬ್ ,ಮ್ಯಾಪ್ ಇತ್ಯಾದಿ ಆಪ್ ಆಧಾರದ ಮೇಲೆ ಮಾಹಿತಿಯನ್ನು ಡಿಲೀಟ್ ಮಾಡಬಹುದು. ಮೈ ಆಕ್ಟಿವಿಟಿ ಪುಟಕ್ಕೆ ಹೋಗಿ ಸರ್ಚ್ ಬಾಕ್ಸ್ ನ ಕೆಳಗಿರುವ ಫಿಲ್ಟರ್ ಬೈ ಡೇಟ್ ಆಂಡ್ ಪ್ರಾಡಕ್ಟ್ ಮೇಲೆ ಕ್ಲಿಕ್ ಮಾಡಿ. ಈಗ ಯಾವ ಆಪ್ ನ ಚಟುವಟಿಕೆಗಳ ಮಾಹಿತಿಯನ್ನು ಡಿಲೀಟ್ ಮಾಡಬಯಸುತ್ತಿರೋ ಆ ಪ್ರಾಡಕ್ಟ್ ಅನ್ನು ಆಯ್ಕೆ ಮಾಡಿ ಸರ್ಚ್ ಬಟನ್ ಕ್ಲಿಕ್ ಮಾಡಿ ಬೇಕಾದ ಮಾಹಿತಿಯನ್ನು ಡಿಲೀಟ್ ಮಾಡಿ.

ಗೂಗಲ್‌ನ ಮೈ ಆಕ್ಟಿವಿಟಿ ಸೆಟ್ಟಿಂಗ್ಸ್ ನಲ್ಲಿ‌ ಏನೆಲ್ಲಾ ಮಾಡಬಹುದು?


ಗೂಗಲ್ ಮಾಹಿತಿ ಕಲೆಹಾಕುವುದನ್ನು ತಡೆಯಬಹುದೇ?

ಗೂಗಲ್ ಈ ರೀತಿ ನಿಮ್ಮ ಮಾಹಿತಿಯನ್ನು ಕಲೆಹಾಕುವುದನ್ನು ತಡೆಯಬಹುದೇ? ಹೌದು. ಇದು ಸಾಧ್ಯ. ಪುಟದ ಮೇಲ್ಭಾಗದಲ್ಲಿ ಎಡಬದಿಯಲ್ಲಿರುವ ಮೆನು ಬಟನ್ ಮೇಲೆ ಕ್ಲಿಕ್ ಮಾಡಿ ಆಕ್ಟಿವಿಟಿ ಕಂಟ್ರೋಲ್ಸ್ ಮೇಲೆ ಕ್ಲಿಕ್ ಮಾಡಿ.ಆಗ ಅದು ನಿಮಗೆ ಪಟ್ಟಿಯೊಂದನ್ನು ತೋರಿಸುತ್ತದೆ.

ಈ ಪಟ್ಟಿಯಲ್ಲಿ ವೆಬ್ ಆಂಡ್ ಆಕ್ಟಿವಿಟಿ,ಲೊಕೇಶನ್ ಹಿಸ್ಟರಿ,ಡಿವೈಸ್ ಇನ್ಫರ್ಮೇಶನ್,ವಾಯ್ಸ್ ಆಂಡ್ ಆಕ್ಟಿವಿಟಿ,ಯೂಟ್ಯೂಬ್ ಸರ್ಚ್ ಹಿಸ್ಟರಿ ಮತ್ತು ಯೂಟ್ಯೂಬ್ ವಾಚ್ ಹಿಸ್ಟರಿ ಎಂಬ ಆಯ್ಕೆಗಳಿವೆ.

ಗೂಗಲ್ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಪ್ರಮಾಣೀಕರಿಸಿದೆಯೇ?.ಚೆಕ್ ಮಾಡುವುದು ಹೀಗೆ!!ಗೂಗಲ್ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಪ್ರಮಾಣೀಕರಿಸಿದೆಯೇ?.ಚೆಕ್ ಮಾಡುವುದು ಹೀಗೆ!!

ಯಾವ ವಿಷಯಗಳ ಮಾಹಿತಿಯನ್ನು ಗೂಗಲ್ ಟ್ರ್ಯಾಕ್ ಮಾಡುವುದು ನಿಮಗಿಷ್ಟವಿಲ್ಲವೋ ಅದರ ಮುಂದಿರುವ ಟಾಗಲ್ ಬಟನ್ ಅನ್ನು ಆಫ್ ಮಾಡಿ. ಈ ಮೂಲಕ ಗೂಗಲ್ ನಿಮ್ಮ ಮಾಹಿತಿಯನ್ನು ಕಲೆಹಾಕುವುದನ್ನು ತಡೆಗಟ್ಟಬಹುದು.

Best Mobiles in India

Read more about:
English summary
Does Google know about you? Yes! Up to certain extent? No, everything! Shocking right? Yes, if you use most of the Google products including Gmail, Gdrive, Maps and more. Check out here for more infromation

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X