5G ನೆಟ್‌ವರ್ಕ್‌ನಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿಗೆ ಪ್ರಯೋಜನವೇನು!?

|

5G ಎಂಬುದು 5 ನೇ ತಲೆಮಾರಿನ ಮೊಬೈಲ್ ನೆಟ್‌ವರ್ಕ್ ಆಗಿದ್ದು, ಇದು 1G, 2G, 3G, ಮತ್ತು 4G ನೆಟ್‌ವರ್ಕ್‌ಗಳ ನಂತರದ ಮುಂದಿನ ಹೊಸ ಜಾಗತಿಕ ವಾಯರ್‌ಲೆಸ್‌ ಸೇವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸೇವೆ ಮೂಲಕ ನೀವು ಕಣ್ಣು ಮಿಟುಕಿಸುವ ವೇಗದಲ್ಲಿ ಬೇಕಾದ ಮಾಹಿತಿಯನ್ನು ಅಥವಾ ಇಂಟರ್ನೆಟ್‌ ಆಧಾರಿತ ಸೇವೆಯನ್ನು ಪಡೆದುಕೊಳ್ಳಬಹುದು. 5G ನೆಟ್‌ವರ್ಕ್‌ ಅಂದ್ರೆ ಕೇವಲ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಇಂಟರ್ನೆಟ್‌ ವೇಗ ಹೆಚ್ಚಿಸುತ್ತದೆ ಎಂಬ ಉದ್ದೇಶ ಒಂದೇ ಅಲ್ಲ, ಬದಲಾಗಿ ಹಲವಾರು ರೀತಿಯ ಸೌಲಭ್ಯ ಈ ವ್ಯವಸ್ಥೆಯಿಂದ ಲಭ್ಯವಾಗಲಿದೆ.

ವ್ಯವಹಾರ

ಹೌದು, ವ್ಯವಹಾರ ಉದ್ದೇಶದ ವಿಷಯಕ್ಕೆ ಬಂದಾಗ 5G ತುಂಬಾ ಸಹಕಾರಿಯಾಗಲಿದೆ. 5G ವೈರ್‌ಲೆಸ್ ನೆಟ್‌ವರ್ಕ್‌ ನಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪೆನಿಗಳಿಗೆ ಹಲವಾರು ರೀತಿಯಲ್ಲಿ ಸಹಾಯಕಾಗಲಿದ್ದು, ಅದರಲ್ಲೂ ದೊಡ್ಡ ಸ್ಪರ್ಧಿಗಳ ವಿರುದ್ಧ ಸೆಣಸಾಡಲು ಕಾರಣವಾಗುತ್ತದೆ. ಇದರ ನಡುವೆ ಈ 5G ಸೇವೆಯಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪೆನಿಗಳಿಗೆ ಹಾಗೂ ಇತರರಿಗೆ ಆಗುವ ಪ್ರಮುಖ ಐದು ವಿಷಯಗಳನ್ನು ವಿವರಿಸಲಾಗಿದೆ ಗಮನಿಸಿ.

ಸುಪ್ತತೆ(Latency )

ಸುಪ್ತತೆ(Latency )

ಪ್ರಮುಖವಾಗಿ ಈ 5G ಸೇವೆಯು ಸಿಗ್ನಲ್ ತನ್ನ ಗಮ್ಯಸ್ಥಾನಕ್ಕೆ ತಲುಪಲು ತೆಗೆದುಕೊಳ್ಳುವ ಸಮಯ ಮತ್ತು ಪ್ರತಿಕ್ರಿಯೆಯನ್ನು ಪ್ರಚೋದಿಸುವ ಸಮಯವನ್ನು ಕಡಿಮೆ ಮಾಡಲಿದೆ. ಇದನ್ನು ಉದಾಹರಣೆ ಸಹಿತ ವಿವರಿಸುವುದಾದರೆ ತೀವ್ರವಾಗಿ ಗಾಯಗೊಂಡ ರೋಗಿಯ ಜೊತೆ ಅರೆ ವೈದ್ಯರು ತೆರಳುತ್ತಿದ್ದಾರೆ ಎಂದುಕೊಳ್ಳಿ. ಆಗ ಆಸ್ಪತ್ರೆ ಇನ್ನೂ ದೂರ ಇದೆ ಎನ್ನುವಾಗ ಅರೆವೈದ್ಯರು ಆತನ ಪ್ರಾಣ ಉಳಿಸುವ ಕೆಲಸಕ್ಕೆ ಮೊದಲಾಗಬೇಕು. ಇದಕ್ಕೆ 5G ತನ್ನದೇ ಆದ ರೀತಿಯಲ್ಲಿ ಸಹಾಯ ಮಾಡುತ್ತದೆ. ಅರೆವೈದ್ಯರು ರೋಗಿಯ ವಿಡಿಯೋವನ್ನು ಸ್ಟ್ರೀಮ್ ಮಾಡಲು ಸಾಧ್ಯಮಾಡಿಕೊಡಲಿದೆ. ಜೊತೆಗೆ ಪ್ರಮುಖ ವೈದ್ಯರು ಸ್ಪಷ್ಟವಾದ ಸಲಹೆಯನ್ನು ಅವರು ಇರುವ ಸ್ಥಳದಿಂದಲೇ ನೀಡುತ್ತಾರೆ. ಹೀಗಾಗಿ ರೋಗಿಗೆ ಪ್ರಾರ್ಥಮಿಕ ಚಿಕಿತ್ಸೆಯನ್ನು ನೀಡಿ, ನಂತರ ಆಸ್ಪತ್ರೆಗೆ ತಲುಪಿದಾಗ ಮಾಡುವ ಮೌಲ್ಯಮಾಪನ ಸಮಯ ತಗ್ಗುವಂತೆ ಮಾಡುತ್ತದೆ.

ವೇಗ

ವೇಗ

5G ಎಂದರೆ ಪರ್ಯಾಯವಾಗಿ ಅದಕ್ಕೆ ವೇಗ ಎಂದು ಕರೆಯಬಹುದು. ಅಷ್ಟರ ಮಟ್ಟಿಗೆ ಇದು ಕೆಲಸ ಮಾಡುತ್ತದೆ. ಇದು ಬಿಸಿನೆಸ್, ಇಂಡಸ್ಟ್ರಿಯಲ್‌ ಅಪ್ಲಿಕೇಶನ್ಸ್ ವಿಭಾಗದಲ್ಲಿ ತನ್ನದೇ ಆದ ರೀತಿಯಲ್ಲಿ ಬಳಕೆದಾರರಿಗೆ ವಿಶೇಷ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ನೀವು ಎಲ್ಲಾ 5G ಅನ್ನು ಕನೆಕ್ಟಿವಿಟಿ ಸಂಪರ್ಕಗಳನ್ನು ಸಮಾನವಾಗಿ ರಚಿಸಿರುವುದಿಲ್ಲ ಎಂಬುದನ್ನು ಗಮನಿಸುವುದೂ ಸಹ ಒಂದು ಪ್ರಮುಖ ಕೆಲಸವಾಗಿದೆ. ಇದರಲ್ಲಿ ಲೋ-ಬ್ಯಾಂಡ್, ಮಿಡ್-ಬ್ಯಾಂಡ್ ಮತ್ತು ಹೈ-ಬ್ಯಾಂಡ್ ಎಂಬ ವಿಧಗಳಿವೆ. ಹೈ-ಬ್ಯಾಂಡ್ ಅಥವಾ ಎಂಎಂವೇವ್ ಕವರೇಜ್ ಅತ್ಯುತ್ತಮವಾಗಿ ನಿಮಗೆ ಸಹಕಾರ ನೀಡಬಹುದು.

ಸಾಮರ್ಥ್ಯ

ಸಾಮರ್ಥ್ಯ

ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ 5G ಯ ಹಲವಾರು ಪ್ರಯೋಜನಗಳಲ್ಲಿ ಈ ಸಾಮರ್ಥ್ಯದ ವಿಷಯ ಗಮನಾರ್ಹವಾದುದು. ಕಂಪೆನಿಯಲ್ಲಿ ಹೆಚ್ಚಿನ ವೇಗವನ್ನು ಒದಗಿಸುವುದು ಅನಿವಾರ್ಯವಾಗಿದ್ದು, ಬೃಹತ್ ಸಂಖ್ಯೆಯ ಬಳಕೆದಾರರಿಗೆ ಇದನ್ನು ಒದಗಿಸುವುದು ಚಾಲೆಂಜ್‌ ಆಗಿರುತ್ತದೆ. ಆದರೆ, ಜನದಟ್ಟಣೆ ಪ್ರದೇಶದಲ್ಲಿ ಎಲ್ಲರೂ ಒಮ್ಮೆಲೆ ಅತ್ಯುತ್ತಮ ನೆಟ್‌ವರ್ಕ್‌ ಸೇವೆ ಪಡೆಯಬೇಕೆಂದರೆ ಅದು ಬಹಳ ಕಷ್ಟದ ಕೆಲಸ. ಆದರೆ, 5G ಯ ಒಂದು ಪ್ರಯೋಜನವೆಂದರೆ, ಆ ನಿಧಾನಗತಿಯ ಸಮಸ್ಯೆ ಬಾರದಂತೆ ಇದು ತಡೆಯುತ್ತದೆ.

ವ್ಯಾಪ್ತಿ

ವ್ಯಾಪ್ತಿ

ಈ 5G ಸೇವೆಯು ಚಲಿಸುತ್ತಿರುವಾಗ ವ್ಯಾಪಾರ ಮತ್ತು ವೈಯಕ್ತಿಕ ಸಂವಹನಗಳನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ. ಸ್ಮಾರ್ಟ್‌ಫೋನ್‌ ವಿಷಯಕ್ಕಷ್ಟೆ ಅಲ್ಲದೆ,ಇಂಟರ್ನೆಟ್ ಆಫ್ ಥಿಂಗ್ಸ್‌ಗೆ (IoT) ವಿಚಾರದಲ್ಲೂ ಇದು ಬಹಳ ಪ್ರಯೋಜನಾಕಾರಿಯಾಗಿದೆ. ಉದಾಹರಣೆಗೆ 5G ಸಕ್ರಿಯಗೊಳಿಸಿದ IoT ಸೆನ್ಸರ್‌ಗಳು ವಿಶಾಲವಾದ ವ್ಯಾಪ್ತಿಯನ್ನು ಪಡೆದಿರುತ್ತವೆ. ಅದರಂತೆ ನೀವು ಎಲ್ಲೇ ಇದ್ದರೂ ಅವುಗಳನ್ನು ನಿಯಂತ್ರಣ ಮಾಡಬಹುದು.

ಸಾಂದ್ರತೆ(Density)

ಸಾಂದ್ರತೆ(Density)

ಸಾಮಾನ್ಯವಾಗಿ ವಿಮಾನ ನಿಲ್ದಾಣಗಳು, ಗಗನಚುಂಬಿ ಕಟ್ಟಡಗಳು, ಕೈಗಾರಿಕಾ ಉದ್ಯಾನವನಗಳು ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನ ಸಮೂಹ ಇರುತ್ತದೆ. ಈ ಸಮೂಹ ಹೆಚ್ಚಿಗೆ ಇದೆ ಅಂದ ಮೇಲೆ ಇವರೆಲ್ಲರ ಬಳಿಯೂ ಸ್ಮಾರ್ಟ್‌ಡಿವೈಸ್‌ಗಳು ಇದ್ದೇ ಇರುತ್ತವೆ. ಆದರೆ, ಈ ಹಿಂದಿನ ನೆಟ್‌ವರ್ಕ್‌ ಸೇವೆಗಳಲ್ಲಿ ಹೆಚ್ಚಿನ ಸಮೂಹ ಇರುವ ಪ್ರದೇಶದಲ್ಲಿ ನೆಟ್‌ವರ್ಕ್‌ಗಾಗಿ ಪರಿತಪಿಸಬೇಕಾಗಿತ್ತು. ಆದರೆ, ಈ 5G ಸೇವೆಯಿಂದ ಸಾವಿರಾರು ಜನರಿರಲಿ ಅಥವಾ ಲಕ್ಷಾಂತರ ಜನರು ಇರಲಿ ಅಲ್ಲಿ ಒಂದೇ ರೀತಿಯಾದ 5G ಸೇವೆ ಲಭ್ಯವಾಗಲಿದೆ.

Best Mobiles in India

English summary
5G is t5G he 5th generation mobile network service. Meanwhile, the 5G network will bring many benefits to small and medium-sized enterprises.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X