ಅಂದು ಗೂಗಲ್ ವಿರುದ್ಧ ಮೈಕ್ರೋಸಾಫ್ಟ್ ಗೆದ್ದಿದ್ದರೆ ಏನಾಗುತ್ತಿತ್ತು?

|

ಕಳೆದ ಹತ್ತು ವರ್ಷದಲ್ಲಿ ನಡೆದ ಸ್ಮಾರ್ಟ್‌ಫೋನ್ ತಯಾರಿಕೆಯ ಯುದ್ಧವು ಈಗ ಮುಗಿದಿದೆ. ಈ ವಿಶ್ವವು ಗೂಗಲ್ (ಆಂಡ್ರಾಯ್ಡ್) ಮತ್ತು ಆಪಲ್ (ಐಒಎಸ್) ಅನ್ನು ವಿಜೇತರು ಎಂದು ಘೋಷಿಸಿಕೊಂಡಿದೆ. ಅಂದರೆ, ಸ್ಮಾರ್ಟ್‌ಪೋನ್ ತಯಾರಿಕೆಗೆ ಸ್ಪರ್ಧಿಸಿದ್ದ ಹೆಚ್ಚಿನವರು ಈಗ ಕಣ್ಮರೆಯಾಗಿದ್ದಾರೆ. ಜೊತೆಗೆ ಇದೀಗ ಮೈಕ್ರೋಸಾಫ್ಟ್ ನಿಧಾನವಾಗಿ ವಿಂಡೋಸ್ ಫೋನಿನ ಕೊನೆಯ ಅವಶೇಷಗಳನ್ನು ವಿಶ್ರಾಂತಿಗೆ ದೂಡುತ್ತಿದೆ. ಈ ಎಲ್ಲಾ ಅಂಶಗಳ ಜೊತೆಗೆ ಎರಡು ಸಂಬಂಧಿತ ಪ್ರಶ್ನೆಗಳು ಟೆಕ್ ಜಗತ್ತಿನ ಮನಸ್ಸನ್ನು ಕೊರೆಯಲು ಆರಂಭಿಸಿವೆ.!

ಅಂದು ಗೂಗಲ್ ವಿರುದ್ಧ ಮೈಕ್ರೋಸಾಫ್ಟ್ ಗೆದ್ದಿದ್ದರೆ ಏನಾಗುತ್ತಿತ್ತು?

ಹೌದು, ಮೈಕ್ರೋಸಾಫ್ಟ್ ಕಂಪೆನಿ ಅಪಾರ ಹಣ ಮತ್ತು ಅದ್ಭುತ ಮಿದುಳುಗಳ ಸಂಗ್ರಹ ಹೊಂದಿದ್ದರೂ ಆಂಡ್ರಾಯ್ಡ್ ತಂತ್ರಜ್ಞಾದಂತೆಯೇ ಏಕೆ ಬರಲಿಲ್ಲ? ಹಾಗೂ ಒಂದು ವೇಳೆ ಮೈಕ್ರೋಸಾಫ್ಟ್ ಏನಾದರೂ ಆಂಡ್ರಾಯ್ಡ್ ತಯಾರಿಕೆಯಲ್ಲಿ ಯಶಸ್ವಿಯಾಗಿದ್ದರೆ ಪ್ರಸ್ತುತ ಟೆಕ್ ಜಗತ್ತು ಇಂದು ಹೇಗಿರುತ್ತಿತ್ತು? ಎಂಬ ಎರಡು ಪ್ರಶ್ನೆಗಳು ಇದೀಗ ಟೆಕ್ ವಲಯದ ಕುತೋಹಲ ಪ್ರಶ್ನೆಗಳಾಗಿವೆ. ಏಕೆಂದರೆ, ಇತ್ತೀಚಿಗಷ್ಟೇ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕರಾದ ಬಿಲ್‌ಗೇಟ್ಸ್ ಅವರು ಮೊಬೈಲ್ ತಂತ್ರಜ್ಞಾನದಲ್ಲಿ ಯಶಸ್ವಿಯಾಗದೇ ಇರುವು ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.

ಹಾಗಾಗಿಯೇ, ಇಂದಿನ ಲೇಖನವನ್ನು ನಾನಿಂದು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. ಮೈಕ್ರೋಸಾಫ್ಟ್ ಕಂಪೆನಿ ಅಪಾರ ಹಣ ಮತ್ತು ಅದ್ಭುತ ಮಿದುಳುಗಳ ಸಂಗ್ರಹ ಹೊಂದಿದ್ದರೂ ಕೂಡ ಆಂಡ್ರಾಯ್ಡ್ ತಂತ್ರಜ್ಞಾದಂತೆಯೇ ಏಕೆ ಹೊರ ಬರಲಿಲ್ಲ? ಹಾಗೂ ಒಂದು ವೇಳೆ ಮೈಕ್ರೋಸಾಫ್ಟ್ ಏನಾದರೂ ಆಂಡ್ರಾಯ್ಡ್ ತಯಾರಿಕೆಯಲ್ಲಿ ಯಶಸ್ವಿಯಾಗಿದ್ದರೆ ಪ್ರಸ್ತುತ ಟೆಕ್ ಜಗತ್ತು ಇಂದು ಹೇಗಿರುತ್ತಿತ್ತು? ಎಂಬ ಪ್ರಶ್ನೆಗಳ ಬಗ್ಗೆ ಇಲ್ಲಿ ಚರ್ಚಿಸುತ್ತಿದ್ದೇನೆ. ಉತ್ತರಗಳನ್ನು ಕಂಡುಕೊಳ್ಳುವ ನಮ್ಮ ಪ್ರಯತ್ನದಲ್ಲಿ ತಂತ್ರಜ್ಞಾನ ಲೋಕದ ವಿಚಿತ್ರಗಳನ್ನು ಸಹ ಸ್ವಲ್ಪ ಅರಿಯೋಣ.

ಮೈಕ್ರೋಸಾಫ್ಟ್ ಎಂಬ ಮತ್ತೊಂದು ಪ್ರಪಂಚ!

ಮೈಕ್ರೋಸಾಫ್ಟ್ ಎಂಬ ಮತ್ತೊಂದು ಪ್ರಪಂಚ!

ಕಂಪ್ಯೂಟರ್ ಎಂದರೆ ಪ್ರತಿಯೋರ್ವರಿಗೂ ಮೊದಲು ನೆನಪಿಗೆ ಬರುವ ಪದ ಈ ಮೈಕ್ರೋಸಾಫ್ಟ್.! ಇದು ಕಂಪ್ಯೂಟರ್ ಲೋಕವನ್ನು ಸಾಮಾನ್ಯರತ್ತ ತಂದ ತಂತ್ರಜ್ಞಾನ ಕಂಪನಿ ಎಂದರೆ ತಪ್ಪಾಗಲಾರದು. ಏಕೆಂದರೆ, ಕಂಪ್ಯೂಟರ್ ಸಾಫ್ಟ್‌ವೇರ್, ಗ್ರಾಹಕ ಎಲೆಕ್ಟ್ರಾನಿಕ್ಸ್, ವೈಯಕ್ತಿಕ ಕಂಪ್ಯೂಟರ್‌ಗಳು ಮತ್ತು ಸಂಬಂಧಿತ ಸೇವೆಗಳನ್ನು ಅಭಿವೃದ್ಧಿಪಡಿಸಿ ವಿಶ್ವದಾದ್ಯಂತ ಮನೆ ಮಾತಾದ ಕಂಪೆನಿ ಮೈಕ್ರೋಸಾಫ್ಟ್. ಇಂತಹ ಕಂಪೆನಿ ಈಗಲೂ ಕಂಪ್ಯೂಟರ್ ಲೋಕದ ದಿಗ್ಗಜ. ಆದರೆ, ಮೊಬೈಲ್ ಲೋಕದಲ್ಲಿ ಮಾತ್ರ ಸೋಲನ್ನು ಒಪ್ಪಿಕೊಂಡ ಕಂಪನಿ!

ಮೊಬೈಲ್ ಲೋಕದಲ್ಲಿ ಸೋತ ಮೈಕ್ರೋಸಾಫ್ಟ್!

ಮೊಬೈಲ್ ಲೋಕದಲ್ಲಿ ಸೋತ ಮೈಕ್ರೋಸಾಫ್ಟ್!

'ಆಂಡ್ರಾಯ್ಡ್ ತರಹದ ಮೊಬೈಲ್ ಪ್ಲಾಟ್‌ಫಾರ್ಮ್‌ನೊಂದಿಗೆ ತರಲು ಕಂಪನಿ ವೈಫಲ್ಯವನ್ನು ಅನುಭವಿಸಿದ್ದು ನನ್ನ ಮೈಕ್ರೋಸಾಫ್ಟ್ ದಿನಗಳಲ್ಲಿ ನಾನು ಮಾಡಿದ ಅತಿ ದೊಡ್ಡ ತಪ್ಪು' ಎಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಇತ್ತೀಚೆಗೆ ಹೇಳಿದ್ದರು. ಇದು ಟೆಕ್ ಲೋಕದಲ್ಲಿ ಮುಚ್ಚಿಹೋಗಿದ್ದ ಪ್ರಶ್ನೆಗಳನ್ನು ಮತ್ತೆ ಹುಟ್ಟಿಹಾಕಿತು. ಮೈಕ್ರೋಸಾಫ್ಟ್ ಈಗಲೂ ದೈತ್ಯ ಕಂಪೆನಿಯೇ ಆದರೂ ಮೊಬೈಲ್ ತಂತ್ರಜ್ಞಾನದಲ್ಲಿ ಮಾತ್ರ ಹಿಂದುಳಿಯಿತು. ಇನ್ನೆಂದೂ ಮೈಕ್ರೋಸಾಫ್ಟ್ ಇದರಲ್ಲಿ ಮೇಲೆ ಏಳಲು ಸಾಧ್ಯವಿಲ್ಲ ಎಂದುಕೊಳ್ಳುವಂತೆ ಮೈಕ್ರೋಸಾಫ್ಟ್ ಸೋತಿದೆ.

ಮೊಬೈಲ್ ತಂತ್ರಜ್ಞಾನದಲ್ಲಿ ಮೈಕ್ರೋಸಾಫ್ಟ್ ದಾರಿ!

ಮೊಬೈಲ್ ತಂತ್ರಜ್ಞಾನದಲ್ಲಿ ಮೈಕ್ರೋಸಾಫ್ಟ್ ದಾರಿ!

ಮೊಬೈಲ್ ತಂತ್ರಜ್ಞಾನದಲ್ಲಿ ಮೈಕ್ರೋಸಾಫ್ಟ್ ಸೋತಿದೆ. ಹಾಗೆಂದು ಮೈಕ್ರೋಸಾಫ್ಟ್ ಮೊಬೈಲ್ ತಂತ್ರಜ್ಞಾನಕ್ಕೆ ನಿಧಾನವಾಗಿ ಕಾಲಿಟ್ಟಿತು ಎಂದುಕೊಳ್ಳಬೇಡಿ. ಏಕೆಂದರೆ, ಬಿಲ್‌ಗೇಟ್ಸ್ ಅವರೇ ಹೇಳುವಂತೆ, ಮೊಬೈಲ್ ತಂತ್ರಜ್ಞಾನದ ಭವಿಷ್ಯದ ಅರಿವು ನಮಗಿತ್ತು. ನಮಗೆ ಮೊಬೈಲ್ ತಂತ್ರಜ್ಞಾನದ ಬಗ್ಗೆ ಮೊದಲೇ ತಿಳಿದಿತ್ತು ಎಂದು ಹೇಳಿದ್ದರು. ಅಂದರೆ, ಮೊಬೈಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮೈಕ್ರೋಸಾಫ್ಟ್ ಸೋತಿತು ಎಂಬುದು ಇದರರ್ಥ. ಇದಕ್ಕೆ ಕಾರಣಗಳನ್ನು ಹುಡುಕಿ ಹೊರಟಾಗ ಮೈಕ್ರೋಸಾಫ್ಟ್ ಹಿಂದಿನ ರೋಚಕ ಕಥೆಗಳು ತೆರೆದುಕೊಳ್ಳುತ್ತವೆ.

ಯಾವಾಗಲೂ ಹೊಸತನಕ್ಕೆ ದಾರಿ ಈ ಟೆಕ್ ಲೋಕ!

ಯಾವಾಗಲೂ ಹೊಸತನಕ್ಕೆ ದಾರಿ ಈ ಟೆಕ್ ಲೋಕ!

ಈ ತಂತ್ರಜ್ಞಾನದ ಲೋಕಕ್ಕೆ ಕಳೆದ ಐದರಿಂದ ಆರು ದಶಕಗಳ ಕಾಲ ನಿಜವಾದ ವಯಸ್ಸು ಎಂದು ಹೇಳಬಹುದು. ಈ ಅವಧಿಯಲ್ಲಿ ಆದಂತಹ ಬದಲಾವಣೆಗಳಿಗೆ ಲೆಕ್ಕವಿಲ್ಲ. ಇತಿಹಾಸದಲ್ಲೇ ಇಷ್ಟು ವೇಗವಾಗಿ ಬದಲಾದ ಕ್ಷೇತ್ರವಿರಲಿಲ್ಲ ( ಮೊಬೈಲ್ ಬಂದ ನಂತರ ಮೊಬೈಲ್ ಈ ಸ್ಥಾನ ಪಡೆಯಿತು) ಎಂದು ಹೇಳಲಾಯಿತು. ಅಂದರೆ, ಈ ಟೆಕ್ ಜಗತ್ತು ತೀರ್ವವಾಗಿ ಬದಲಾಯಿತು. ಕಂಪ್ಯೂಟರ್ ಎಂಬ ಕನಸಿನ ಹಿಂದೆ ನೂರಾರು ಕಂಪೆನಿಗಳು ಬಂದುಹೋದವು. ಅವುಗಳನ್ನೆಲ್ಲಾ ಮೀರಿಸಿ ಮೈಕ್ರೋಸಾಫ್ಟ್ ಮುಂದೆ ಬಂದಿತು. ನಂತರ ದಿಗ್ಗಜ ಕಂಪೆನಿಯಾಗಿಯೇ ಉಳಿಯಿತು.

ಚಿರತೆಯ ವೇಗವಿದ್ದರೂ ದೊರೆಯದ ಯಶಸ್ಸು!

ಚಿರತೆಯ ವೇಗವಿದ್ದರೂ ದೊರೆಯದ ಯಶಸ್ಸು!

ಹಣ ಇದ್ದ ಕಡೆಯೇ ಹಣ ಸೇರುತ್ತದೆ ಸೇರುತ್ತದೆ ಎಂಬ ಒಂದು ಮಾತಿದೆ. ಇದು ಈ ತಂತ್ರಜ್ಞಾನ ಲೋಕದಲ್ಲಿ ಯಾವಾಗಲೂ ಸುಳ್ಳಾಗುತ್ತಾ ಬಂದಿದೆ. ಮೊಬೈಲ್ ತಂತ್ರಜ್ಞಾನವನ್ನು ಮೊದಲು ಪರಿಚಯಿಸುವುದು ಮೈಕ್ರೋಸಾಫ್ಟ್ ಕಂಪೆನಿಯೇ ಆಗಿರಲಿದೆ ಎಂದು ತೊಂಬತ್ತರ ದಶಕದಲ್ಲಿ ಅಂದುಕೊಳ್ಳಲಾಗಿತ್ತು. ಆದರೆ, ಇಂದು ಈ ಮಾತು ಸುಳ್ಳಾಗಿದೆ. ಅಂದಿನ ಕಾಲಕ್ಕೇ ಹಣ ಮತ್ತು ಬುದ್ದಿವಂತಿಕೆಯ ಗೂಡಾಗಿದ್ದ ಮೈಕ್ರೋಸಾಫ್ಟ್ ಮೀರಿಸಿ ಗೂಗಲ್ ಮತ್ತು ಆಪಲ್ ಮುಂದೆ ಬಂದವು. ಇದು ಈ ತಂತ್ರಜ್ಞಾನ ಲೋಕದ ಅಭಾಸ ಎಂದು ಈಗಲೂ ಹೇಳುವುದುಂಟು.

ಮೊಬೈಲ್ ಲೋಕದಲ್ಲಿ ಮೈಕ್ರೋಸಾಫ್ಟ್ ಸೋತಿದ್ದೇಕೆ?

ಮೊಬೈಲ್ ಲೋಕದಲ್ಲಿ ಮೈಕ್ರೋಸಾಫ್ಟ್ ಸೋತಿದ್ದೇಕೆ?

ಈ ಮೇಲೆ ಓದಿದಾಗಲೇ ನಿಮಗೆ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದು ಹೇಳಬಹುದು. ತಂತ್ರಜ್ಞಾನ ಲೋಕದ ಅಭಾಸದಿಂದಲೇ ಮೊಬೈಲ್ ಲೋಕದಲ್ಲಿ ಮೈಕ್ರೋಸಾಫ್ಟ್ ಸೋತಿತು. ಆದರೆ, ಇದನ್ನು ಬಿಟ್ಟು ಹಲವು ಅಂಶಗಳು ಸಹ ಮೈಕ್ರೋಸಾಫ್ಟ್ ಸೋಲಿನಲ್ಲಿ ಸೇರಿಕೊಂಡಿವೆ. ಪಾಕೆಟ್ ಪಿಸಿ ಎಂಬ ಕಲ್ಪನೆ, ಆಂಡ್ರಾಯ್ಡ್ ಓಪನ್ ಸೋರ್ಸ್ ಅನ್ನು ಮೈಕ್ರೋಸಾಫ್ಟ್ ಇನ್ನೂ ಹೆಚ್ಚಿನ ಅನುಮಾನದಿಂದ ನೋಡಿದ್ದು ಮತ್ತು ಪರವಾನಗಿ ಶುಲ್ಕ ಪಾವತಿಸಬೇಕಾದಲ್ಲಿ ನಡೆದ ಪೈಪೋಟಿ ಮೈಕ್ರೋಸಾಫ್ಟ್ ಸೋಲಿಗೆ ಕಾರಣ. ಮತ್ತು ಗೂಗಲ್ ಗೆಲುವಿಗೂ ಕಾರಣ.!

ಗೂಗಲ್ ಗೆಲುವು ಪಡೆದದ್ದು ಮೈಕ್ರೋಸಾಫ್ಟ್ ಸೋಲು!

ಗೂಗಲ್ ಗೆಲುವು ಪಡೆದದ್ದು ಮೈಕ್ರೋಸಾಫ್ಟ್ ಸೋಲು!

ಹೌದು, ಗೂಗಲ್ ಗೆಲುವು ಪಡೆದದ್ದು ಮೈಕ್ರೋಸಾಫ್ಟ್ ಸೋಲಿನಿಂದಲೇ ಎಂದರೂ ತಪ್ಪಾಗುವುದಿಲ್ಲ. ಪಾಕೆಟ್ ಪಿಸಿ, ಆಂಡ್ರಾಯ್ಡ್ ಓಪನ್ ಸೋರ್ಸ್ ಮತ್ತು ಪರವಾನಗಿ ಶುಲ್ಕದ ವಿಷಯದಲ್ಲಿ ಮೈಕ್ರೋಸಾಫ್ಟ್ ತಪ್ಪುಹೆಜ್ಜೆಯನ್ನು ಇಟ್ಟಿತು. ಮೈಕ್ರೋಸಾಫ್ಟ್ ಸೇರಿದಂತೆ ಪ್ರತಿಯೊಬ್ಬರೂ ಆಂಡ್ರಾಯ್ಡ್ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದ್ದರಿಂದ, ಅಂತಿಮವಾಗಿ ಅವರ ಪರವಾನಗಿ ಶುಲ್ಕವನ್ನು ಕೈಬಿಟ್ಟರು. ಆದರೆ ಆ ಹೊತ್ತಿಗೆ ಅದು ತಡವಾಗಿತ್ತು. ಇದಾದ ನಂತರ ಮೈಕ್ರೋಸಾಫ್ಟ್ ಸಹ ವಿಂಡೋಸ್ 10 ಗೆ ಉಚಿತ ಅಪ್‌ಗ್ರೇಡ್ ನೀಡಿದ್ದು ಇದರ ಪ್ರಭಾವದಿಂದಲೇ.

ಒಂದು ವೇಳೆ ಮೈಕ್ರೋಸಾಫ್ಟ್ ಇದರಲ್ಲಿ ಯಶಸ್ವಿಯಾಗಿದ್ದರೆ?

ಒಂದು ವೇಳೆ ಮೈಕ್ರೋಸಾಫ್ಟ್ ಇದರಲ್ಲಿ ಯಶಸ್ವಿಯಾಗಿದ್ದರೆ?

ಒಂದು ವೇಳೆ ಮೈಕ್ರೋಸಾಫ್ಟ್ ಆಂಡ್ರಾಯ್ಡ್ ರೀತಿಯಲ್ಲಿ ಯಶಸ್ಸವಿಯಾಗಿದ್ದರೆ ಎಂಬ ಪ್ರಶ್ನೆ ಈಗ ಮೂಡಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಟೆಕ್ ತಜ್ಞರು ಪ್ರಯತ್ನಿಸಿದ್ದಾರೆ. ಅವರು ಕಂಡುಕೊಂಡಂತೆ ಮೊಬೈಲ್ ಲೋಕದಲ್ಲಿ ಮೈಕ್ರೋಸಾಫ್ಟ್ ಯಶಸ್ವಿಯಾಗದೇ ಇರುವುದೇ ಒಳ್ಳೆಯದಾಗಿದೆ. ಹೌದು, ಇದನ್ನು ಸಮರ್ಥಿಸಿಕೊಳ್ಳಲು ಟೆಕ್ ತಜ್ಞರು ಹತ್ತಾರು ಅಂಶಗಳನ್ನು ಮುಂದಿಟ್ಟಿದ್ದಾರೆ. ಕಂಪ್ಯೂಟರ್ ಲೊಕದಲ್ಲಿ ದೈತ್ಯನಾಗಿರುವ ಕಂಪೆನಿಯೊಂದು ಮೊಬೈಲ್ ಲೋಕದಲ್ಲಿ ಯಶಸ್ವಿಯಾಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಅವರು ತಿಳಿಸಲು ಪ್ರಯತ್ನಿಸಿದ್ದಾರೆ.

ಯಶಸ್ವಿಯಾಗದೇ ಇರುವುದೇ ಒಳ್ಳೆಯದಾಗಿದೆ!

ಯಶಸ್ವಿಯಾಗದೇ ಇರುವುದೇ ಒಳ್ಳೆಯದಾಗಿದೆ!

ಮೊಬೈಲ್ ಲೋಕದಲ್ಲಿ ಮೈಕ್ರೋಸಾಫ್ಟ್ ಯಶಸ್ವಿಯಾಗಿದ್ದರೆ, ಇಂದು 10 ಸಾವಿರದ ಒಂದು ಫೋನ್ ಬೆಲೆ 30 ಸಾವಿರಕ್ಕಿಂತಲೂ ಹೆಚ್ಚಿರುತ್ತಿತ್ತಂತೆ. ಗೂಗಲ್ ತನ್ನ ಸೇವೆಗಳನ್ನು ಉಚಿತವಾಗಿ ನೀಡುವುದಲ್ಲದೇ, ತನ್ನ ಸೇವೆಗಳನ್ನು ಬಳಸಲು ಮೊಬೈಲ್ ಕಂಪೆನಿಗಳಿಗೆ ಹಣ ನೀಡುತ್ತಿದೆ. ಇದರಿಂದ ಮೊಬೈಲ್ ಬೆಲೆಗಳು ಕಡಿಮೆ ಇವೆ. ಒಂದು ವೇಳೆ ಮೈಕ್ರೋಸಾಫ್ಟ್ ಆಗಿದ್ದರೆ ತನ್ನ ಸೇವೆಗಳಿಗೆ ಹಣ ಪಡೆಯುತ್ತಿತ್ತು. ಇದರಿಂದ ಜನರು ಮೊಬೈಲ್ ಖರೀದಿಗೆ ಹೆಚ್ಚು ಹಣ ಪಾವತಿಸಬೇಕಿತ್ತು. ಹೀಗೇನಾದರೂ ಆಗಿದ್ದರೆ, ಮೊಬೈಲ್ ತಂತ್ರಜ್ಞಾನದ ಬೆಳವಣಿಗೆ ನಿಧಾನವಾಗುತ್ತಿತ್ತು.

Best Mobiles in India

English summary
The greatest mistake ever is whatever mismanagement I engaged in that caused Microsoft not to be what Android is. That is, Android is the standard phone platform. Gates said at an event hosted by a US venture capital firm recently. to know more visit to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X