ಏನೀದು ಜಿಯೋ ಹೋಮ್ TV..? ರೂ.1 ಕ್ಕೆ HD ಚಾನಲ್‌ಗಳು..!

|

ಸದ್ಯ ಮಾರುಕಟ್ಟೆಯಲ್ಲಿ ಜಿಯೋ ಸಂಬಂಧಿತ ವಿಷಯಗಳು ಸಾಕಷ್ಟು ಚರ್ಚೆಗೆ ಬರುತ್ತಿದೆ. ಇದೇ ಮಾದರಿಯಲ್ಲಿ ಕಳೆದ ಎರಡು ದಿನಗಳಿಂದ ಜಿಯೋ ಹೋಮ್ ಟಿವಿಯನ್ನು ಲಾಂಚ್ ಮಾಡಲಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಮಾರುಕಟ್ಟೆಯಲ್ಲಿ ಸದಾ ಹೊಸತನವನ್ನು ಚಿಂತಿಸುವ ಜಿಯೋ, ಈ ಬಾರಿ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲಿದ್ದು, ಹಾಗಾಗಿ ಜಿಯೋ ಹೋಮ್ ಟಿವಿ ಕುರಿತು ಹೆಚ್ಚಿನ ಕುತೂಹಲ ನಿರ್ಮಾಣವಾಗಿದೆ.

ಏನೀದು ಜಿಯೋ ಹೋಮ್ TV..?  ರೂ.1 ಕ್ಕೆ HD ಚಾನಲ್‌ಗಳು..!

ಈಗಾಗಲೇ ಮಾರುಕಟ್ಟೆಗೆ ಜಿಯೋ DTH ಸೇವೆಯನ್ನು ಲಾಂಚ್ ಮಾಡಬೇಕಾಗಿತ್ತು. ಆದರೆ ಇದು ಸಾಧ್ಯವಾಗಿಲ್ಲ. DTH ಗಿಂತಲೂ ಭಿನ್ನವಾದ eMBMS ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹೋಮ್ ಟಿವಿ ಸೇವೆಯನ್ನು ನೀಡಲಿದೆ ಎನ್ನುವ ಮಾತು ಕೇಳಿ ಬಂದಿದೆ. ಈ ಹೊಸ ಸೇವೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ವೆಚ್ಚವಿಲ್ಲದೇ ಟಿವಿ ಚಾನಲ್‌ಗಳನ್ನು ನೋಡುವ ಅವಕಾಶವನ್ನು ನೀಡಲಿದೆ. ಇದರಲ್ಲಿ ಕೆಲವು ಸೇವೆಗಳನ್ನು ಪಡೆಯಲು ಇಂಟೆರ್ನೆಟ್ ಆಗಲಿ, ಕೇಬಲ್ ವ್ಯವಸ್ಥೆಯಾಗಲಿ ಬೇಕಾಗಿಲ್ಲ ಎನ್ನವ ಮಾತು ಕೇಳಿ ಬಂದಿದೆ.

ಬಂಡವಾಳ:

ಬಂಡವಾಳ:

ಜಿಯೋ DTH ಸೇವೆಯನ್ನು ಲಾಂಚ್ ಮಾಡಲು ಹಿಂದೆ ಮುಂದೆ ನೋಡುತ್ತಿದ್ದು, ಇದಕ್ಕಾಗಿ ಹೆಚ್ಚಿನ ಬಂಡವಾಳ ಬೇಕಾಗಿರುವುದೇ ಕಾರಣವಾಗಿದೆ. ಇದನ್ನು ಮೀರಿದಂತಹ ಸೇವೆಯನ್ನು ನೀಡಲು ಯೋಜನೆಯನ್ನು ರೂಪಿಸಿದೆ. ಇದೇ ಜಿಯೋ ಹೋಮ್ ಟಿವಿ ಎನ್ನಲಾಗಿದೆ.

SD + HD ಚಾನಲ್‌ಗಳು:

SD + HD ಚಾನಲ್‌ಗಳು:

ಮಾರುಕಟ್ಟೆಯಲ್ಲಿ LED ಟಿವಿಗಳ ಸಂಖ್ಯೆಯೂ ಹೆಚ್ಚಾದ ಹಿನ್ನಲೆಯಲ್ಲಿ ಬಳಕೆದಾರರು ಗುಣಮಟ್ಟದ DTH ಸೇವೆಯನ್ನ ಪಡೆಯಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ HD ಚಾನಲ್‌ಗಳು ಹೆಚ್ಚು ಸದ್ದು ಮಾಡುತ್ತಿವೆ. ಆದರೆ HD ಚಾನಲ್‌ಗಳ ಮಾಸಿಕ ಶುಲ್ಕವು ದುಬಾರಿಯಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ಹೋಮ್ ಟಿವಿಯಲ್ಲಿ ಕಡಿಮೆ ಬೆಲೆಗೆ SD+ HD ಚಾನಲ್‌ಗಳು ದೊರೆಯಲಿದೆ.

500ಕ್ಕೂ ಹೆಚ್ಚು ಚಾನಲ್:

500ಕ್ಕೂ ಹೆಚ್ಚು ಚಾನಲ್:

ಈಗಾಗಲೇ ತನ್ನ ಬಳಕೆದಾರರಿಗೆ ಜಿಯೋ ಟಿವಿ ಆಪ್ ಮೂಲಕ ನೀಡುತ್ತಿರುವ 500ಕ್ಕೂ ಹೆಚ್ಚು ಚಾನಲ್‌ಗಳನ್ನು ಹೋಮ್ ಟಿವಿ ಯಲ್ಲಿಯೂ ನೀಡಲಿದೆ ಎನ್ನಲಾಗಿದೆ. ಬಳಕೆದಾರರಿಗೆ ರೂ.1ಕ್ಕಿಂತ ಕಡಿಮೆ ಬೆಲೆಗೆ ಚಾನಲ್‌ಗಳನ್ನು ನೀಡಲಿದೆ.

ಬೆಲೆ ಕಡಿಮೆ:

ಬೆಲೆ ಕಡಿಮೆ:

ಜಿಯೋ ತನ್ನ ಹೋಮ್ ಟಿವಿ ಸೇವೆಯಲ್ಲಿ ಪ್ರತಿ ತಿಂಗಳಿಗೆ SD ಚಾನಲ್‌ಗಳನ್ನು ರೂ.200 ಮತ್ತು SD+ HD ಚಾನಲ್‌ಗಳನ್ನು ರೂ.400ಕ್ಕೆ ನೀಡಲಿದೆ ಎಂದು ಮೂಲಗಳು ತಿಳಿಸಿದ್ದು, ಇದು ಸಾಮಾನ್ಯ DTH ಸೇವೆಗಿಂತಲೂ ಕಡಿಮೆ ದರವಾಗಿದೆ. ಈ ಕುರಿತು ಜಿಯೋ ಮೂಲದಿಂದ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

ಬ್ರಾಡ್ ಬ್ಯಾಂಡಿನೊಂದಿಗೆ:

ಬ್ರಾಡ್ ಬ್ಯಾಂಡಿನೊಂದಿಗೆ:

ಜಿಯೋ ತನ್ನ ಹೋಮ್ ಟಿವಿ ಸೇವೆಯಲ್ಲಿಯನ್ನು ಸದ್ಯ ಲಾಂಚ್ ಮಾಡಲಿರುವ FTTH ಫೈಬರ್ ಬ್ರಾಡ್ ಬ್ಯಾಂಡಿನೊಂದಿಗೆ ಲಾಂಚ್ ಮಾಡಲಿದೆ ಎನ್ನಲಾಗಿದೆ. ಜಿಯೋ ಹೋಮ್ ಟಿವಿ ಸೇವೆಯಲ್ಲಿ ಕೇಲವು ಸೇವೆಯನ್ನು ಪಡೆಯಲು ಇಂಟರ್ನೆಟ್ ಬೇಕಾಗಿದ್ದು, ಕೆಲವು ಚಾನಲ್‌ಗಳು ಹಾಗೇ ನೋಡಬಹುದಾಗಿದೆ.

ಮೊದಲ ಬಾರಿಗೆ ಬಳಕೆ:

ಮೊದಲ ಬಾರಿಗೆ ಬಳಕೆ:

eMBMS ತಂತ್ರಜ್ಞಾನ (ಎನಹಾನ್ಸ್ ಮಲ್ಟಿಮೀಡಿಯಾ ಬ್ರಾಡ್ ಕಾಸ್ಟ್ ಮಲ್ಟಿ ಕಾಸ್ಟ್ ಸರ್ವಿಸ್) ಮೂಲಕ ಜಿಯೋ ಹೋಮ್ ಟಿವಿಯನ್ನು ಲಾಂಚ್ ಮಾಡಲಿದೆ. ಇದು ಹೈಬ್ರಿಡ್ ಟೆಕ್ನಾಲಜಿಯಾಗಿದ್ದು, ಮೊದಲ ಬಾರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.

ಟೆಲಿಕಾಂ ಸೇವೆ:

ಟೆಲಿಕಾಂ ಸೇವೆ:

eMBMS ತಂತ್ರಜ್ಞಾನದಲ್ಲಿ ಜಿಯೋ ಹೋಮ್ ಟಿವಿಯನ್ನು ಬಳಕೆ ಮಾಡಿಕೊಳ್ಳಲು ಟೆಲಕಾಂ ಸೇವೆಯನ್ನು ಪಡೆದುಕೊಳ್ಳಲಿದೆ. ಇದಕ್ಕಾಗಿ ಯಾವುದೇ ಇಂಟರ್ನೆಟ್ ಆಗಲಿ, ಕೇಬಲ್ ಆಗಲಿ ಬೇಕಾಗಿಲ್ಲ. ಕೆಲವು ಚಾನಲ್‌ಗಳನ್ನು ಉಚಿತವಾಗಿ ಹಾಗೆಯೇ ಪ್ರಸರವಾಗಲಿದೆ. ಆಫ್‌ಲೈನಿನಲ್ಲಿಯೇ ಚಾನಲ್‌ಗಳನ್ನು ನೋಡಬಹುದಾಗಿದೆ.

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ಇಡೀ ದೇಶದಲ್ಲಿಯೇ ಸೇವೆ:

ಇಡೀ ದೇಶದಲ್ಲಿಯೇ ಸೇವೆ:

eMBMS ತಂತ್ರಜ್ಞಾನದ ಮೂಲಕ ಜಿಯೋ ಹೋಮ್ ಟಿವಿಯನ್ನು ದೇಶ ಮೂಲೆ ಮೂಲೆಗೂ ತಲುಪಿಸುವ ಕಾರ್ಯವನ್ನು ಮಾಡಲು ಮುಂದಾಗಿದೆ. ಈ ಕಾರ್ಯಕ್ಕೆ ಚಾಲನೆ ದೊರೆತಿದೆ ಎನ್ನಲಾಗಿದೆ.

Best Mobiles in India

English summary
What is JioHomeTV? Upcoming service could offer HD channels at Rs 1. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X