ಹುವಾಯಿಯನ್ನು ಬ್ಯಾನ್ ಮಾಡಿದ ನಂತರ ಗೂಗಲ್ ನ ಮುಂದಿನ ಹೆಜ್ಜೆಯೇನು?

By Gizbot Bureau
|

ಯುಸ್ ನಲ್ಲಿ ಹುವಾಯಿ ಬ್ಯಾನ್ ಆದ ನಂತರ ಗೂಗಲ್ ಸಂಸ್ಥೆ ತನ್ನೆಲ್ಲಾ ಸೇವೆಗಳನ್ನು ಚೀನಾದ ಫೋನ್ ತಯಾರಿಕಾ ಸಂಸ್ಥೆಯಿಂದ ಹಿಂಪಡೆದುಕೊಂಡಿದೆ. ಸದ್ಯ ಹುವಾಯಿ ಫೋನ್ ಬಳಸುತ್ತಿರುವವರು ಇದರಿಂದಾಗಿ ಯಾವುದೇ ಪರಿಣಾಮವನ್ನು ಎದುರಿಸುವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ 90 ದಿನಗಳ ಕಾಲಾವಕಾಶವನ್ನು ಪ್ರಕಟಿಸಿಕೊಳ್ಳಲಾಗಿದೆ.ಮಿಂಟ್ ದೀರ್ಘಕಾಲದ ಪರಿಣಾಮಗಳನ್ನು ಡಿಕೋಡ್ ಮಾಡುತ್ತದೆ.

ಹುವಾಯಿಯನ್ನು ಬ್ಯಾನ್ ಮಾಡಿದ ನಂತರ ಗೂಗಲ್ ನ ಮುಂದಿನ ಹೆಜ್ಜೆಯೇನು?

ಹುವಾಯಿ ಫೋನ್ ಗಳು ಇದೀಗ ಮನವಿ ಮಾಡಲು ಪ್ರಾರಂಭಿಸಿದೆಯೇ? ಗೂಗಲ್ ನ ನಿರ್ಧಾರದಿಂದಾಗಿ ಹುವಾಯಿ ಫೋನ್ ಗಳಲ್ಲಿ ಗೂಗಲ್ ಸೇವೆಗಳು ನಿಲ್ಲುವುದರಿಂದಾಗಿ ಚೀನಾದ ಕಂಪೆನಿಯು ಸ್ಮಾರ್ಟ್ ಫೋನ್ ಮಾರಾಟ ಮಾಡುವುದನ್ನು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಫೋನ್ ಗಳು ಪ್ಲೇ ಸ್ಟೋರ್, ಆಂಡ್ರಾಯ್ಡ್ ಅಪ್ ಡೇಟ್ ಗಳು ಮತ್ತು ಗೂಗಲ್ ನ ಇತರೆ ಆಪ್ ಗಳ ಸೇವೆಯನ್ನು ಪಡೆಯುವುದಿಲ್ಲ ಅಷ್ಟೇ. ಆಂಡ್ರಾಯ್ಡ್ ಆಪ್ಸ್ ಗಳಿಗೆ ಪ್ಲೇ ಸ್ಟೋರ್ ಬಹಳ ನಂಬಿಕೆ ಮೂಲವಾಗಿದೆ. ಇತರೆ ಯಾವುದೇ ಆಂಡ್ರಾಯ್ಡ್ ಆಪ್ ಸ್ಟೋರ್ ಗಳಿಗಿಂತ ಪ್ಲೇ ಸ್ಟೋರ್ ನ್ನು ಹೆಚ್ಚು ಜನ ಬಳಸುತ್ತಾರೆ.

ಮುಂದಿನ ದಿನಗಳಲ್ಲಿ ಹುವಾಯಿಯ ಹೊಸ ಫೋನ್ ಗಳಲ್ಲಿ ಹುವಾಯಿ ಕಸ್ಟಮ್ ಇಂಟರ್ಫೇಸ್ ಇರಲಿದೆ ಜೊತೆಗೆ ಆಂಡ್ರಾಯ್ಡ್ ನ ಓಪನ್ ಸೋರ್ಸ್ ವರ್ಷನ್ ನ್ನು ಬಳಕೆ ಮಾಡಬೇಕಾಗುತ್ತದೆ. ಪ್ರತಿ ವರ್ಷ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗುವಂತೆ ಹೊಸ ಅಪ್ ಡೇಟ್ ಗಳು, ಫೀಚರ್ ಗಳು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗುವುದಿಲ್ಲ. ಹುವಾಯಿಯಿಂದ ಸಾಫ್ಟ್ ವೇರ್ ಅಪ್ ಡೇಟ್ ಅಷ್ಟೇ ಸಿಗುತ್ತದೆ.

ಹುವಾಯಿ ಮಾರುಕಟ್ಟೆ ಶೇರಿನ ಮೇಲೆ ಪರಿಣಾಮವಾಗಲಿದೆಯೇ?

ಹುವಾಯಿ ಮಾರುಕಟ್ಟೆ ಶೇರಿನ ಮೇಲೆ ಪರಿಣಾಮವಾಗಲಿದೆಯೇ?

ಹುವಾಯಿ ಸಂಸ್ಥೆ ಯುರೋಪಿನ ಮೂರನೇ ಅತಿದೊಡ್ಡ ವೆಂಡರ್ ಆಗಿದ್ದು ಮಾರುಕಟ್ಟೆಯ 17.7% ಶೇರ್ ನ್ನು ಎಪ್ರಿಲ್ ನಲ್ಲಿ ಹೊಂದಿತ್ತು ಎಂದು ಸ್ಟ್ಯಾಕ್ ಕೌಂಟರ್ ವರದಿ ತಿಳಿಸುತ್ತದೆ.ಒಂದು ವೇಳೆ ಯುರೋಪಿನಲ್ಲಿ ಹೊಸ ಹುವಾಯಿ ಫೋನ್ ಗಳನ್ನು ಗ್ರಾಹಕರು ನಿಷೇಧಿಸಿದರೆ ಇದು ಚೀನಾ ಸಂಸ್ಥೆಗೆ ಸಮಾನವಾದ ಡಿಎನ್ಎ ಮತ್ತು ಇದೇ ಬೆಲೆಯ ಶ್ರೇಣಿಯಲ್ಲಿ ಸ್ಪರ್ಧೆಯೊಡ್ಡುವ ಫೋನ್ ಗಳಿಗೆ ಲಾಭದಾಯಕವಾಗಬಹುದು.

ಯುಎಸ್ ನ ಬ್ಯಾನ್ ಹುವಾಯಿ ಸಂಸ್ಥೆಯ ಮೇಲೆ ಅಷ್ಟೇನು ಪರಿಣಾಮ ಬೀರಲಾರದು ಯಾಕೆಂದರೆ ಹುವಾಯಿ ಫೋನ್ ಗಳು ಅಲ್ಲಿನ ಮಾರುಕಟ್ಟೆಯಲ್ಲಿ ಟಾಪ್ 5 ಫೋನ್ ಗಳ ಪೈಕಿ ಒಂದಾಗಿಲ್ಲ ಮತ್ತು ಗೂಗಲ್ ನ ಮಾರುಕಟ್ಟೆಯ ಶೇರಿಗಿಂತ 2.4% ದಷ್ಟು ಕಡಿಮೆ ಇದೆ. ಭಾರತದಲ್ಲೂ ಕೂಡ ಹುವಾಯಿ ಫೋನ್ ಮಾರುಕಟ್ಟೆಯಲ್ಲಿ ಟಾಪ್ 5 ಫೋನ್ ಮೇಕರ್ ಗಳ ಪಟ್ಟಿಯಲ್ಲಿ ಇಲ್ಲ ಮತ್ತು ರಿಯಲ್ ಮಿ ಮಾರುಕಟ್ಟೆ ಶೇರ್ 6% ಗಿಂತ ಇದು ಕಡಿಮೆ ಇದೆ.

ಹುವಾಯಿ ಪುನಃ ಸ್ಪರ್ಧೆಯೊಡ್ಡುವ ಸಾಮರ್ಥ್ಯ ಹೊಂದಿದೆಯೇ?

ಹುವಾಯಿ ಪುನಃ ಸ್ಪರ್ಧೆಯೊಡ್ಡುವ ಸಾಮರ್ಥ್ಯ ಹೊಂದಿದೆಯೇ?

ಹುವಾಯಿ ಬಳಿ ತಾಂತ್ರಿಕ ಮೂಲಗಳಿದ್ದು ಪುನಃ ಸ್ಪರ್ಧೆಯೊಡ್ಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಹೊಸ ಆಪರೇಟಿಂಗ್ ಸಿಸ್ಟಮ್ ಬಗ್ಗೆ ಗಮನ ಹರಿಸುವ ಸಾಧ್ಯತೆ ಇದೆ. ವರದಿಗಳು ಹೇಳುವ ಪ್ರಕಾರ ಹೊಸದಾದ ಓಎಸ್ ಈಗಾಗಲೇ ಪರ್ಯಾಯವಾಗಿ ಹುವಾಯಿ ಬಳಿ ಲಭ್ಯವಿದೆಯಂತೆ. ಕೆಲವೇ ದಿನಗಳಲ್ಲಿ ಅದು ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ.

ಒಂದು ವೇಳೆ ಚೀನಾ ಯುಸ್ ಫೋನ್ ಮೇಕರ್ ಗಳನ್ನು ಬ್ಯಾನ್ ಮಾಡಿದರೆ ಏನಾಗುತ್ತದೆ?

ಒಂದು ವೇಳೆ ಚೀನಾ ಯುಸ್ ಫೋನ್ ಮೇಕರ್ ಗಳನ್ನು ಬ್ಯಾನ್ ಮಾಡಿದರೆ ಏನಾಗುತ್ತದೆ?

ತಜ್ಞರು ತಿಳಿಸುವ ಪ್ರಕಾರ ಹುವಾಯಿ ಮತ್ತು ಚೀನಾ ಸರ್ಕಾರ ಬಹಳ ಹತ್ತಿರದಿಂದ ಕಾರ್ಯ ನಿರ್ವಹಿಸುತ್ತಿದೆ ಮತ್ತು ಅದೇ ಕಾರಣಕ್ಕೆ ಚೀನಾದಿಂದ ನಡೆಯಬಹುದಾದ ಪ್ರತಿಕಾರವನ್ನು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಹುವಾಯಿ ಮತ್ತು ಯುಸ್ ನಡುವಿನ ಒಪ್ಪಂದ ಸರಿಯಾಗದೇ ಇದ್ದಲ್ಲಿ ಯುಸ್ ನ ವಸ್ತುಗಳಿಗೆ ಚೀನಾ ಮಾರುಕಟ್ಟೆಯಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇದರಲ್ಲಿ ಆಪಲ್ ಸಂಸ್ಥೆ 25% ಮಾರುಕಟ್ಟೆ ಶೇರ್ ನ್ನು ಚೀನಾದಲ್ಲಿ ಹೊಂದಿದ್ದು ಅತೀ ದೊಡ್ಡ ಸ್ಮಾರ್ಟ್ ಫೋನ್ ವೆಂಡರ್ ಆಗಿ ಚೀನಾದಲ್ಲಿ ಗುರುತಿಸಿಕೊಂಡಿದೆ ಎಂದು ಎಪ್ರಿಲ್ ನ ವರದಿಯೊಂದು ತಿಳಿಸುತ್ತದೆ. ಆಪಲ್ ಚೀನಾ ಮೂರನೇ ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಯುಸ್ ಮತ್ತು ಯುರೋಪ್ ಎರಡನೇ ಸ್ಥಾನವನ್ನು ಹೊಂದಿದೆ. ಯುಸ್ ಫೋನ್ ತಯಾರಕರಿಗೆ ಈ ಬ್ಯಾನ್ ನಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ.

ಇತರೆ ಫೋನ್ ತಯಾರಕರೊಂದಿಗೆ ಗೂಗಲ್ ಹೊಂದಾಣಿಕೆ ಮಾಡಿಕೊಂಡರೆ ಏನಾಗುತ್ತದೆ?

ಇತರೆ ಫೋನ್ ತಯಾರಕರೊಂದಿಗೆ ಗೂಗಲ್ ಹೊಂದಾಣಿಕೆ ಮಾಡಿಕೊಂಡರೆ ಏನಾಗುತ್ತದೆ?

ಸ್ಮಾರ್ಟ್ ಫೋನ್ ಓಇಎಂ ಗಳು ಈ ಹಿಂದೆಯೇ ಇತರೆ ಓಪನ್ ಸೋರ್ಸ್ ಓಎಸ್ ಗಳೊಂದಿಗೆ ಪ್ರಯೋಗವನ್ನು ಕೈಗೊಂಡಿವೆ. ಹಾಗಾಗಿ ಅವು ಗೂಗಲ್ ಆಂಡ್ರಾಯ್ಡ್ ಗೆ ಸಂಪೂರ್ಣ ಅವಲಂಬಿತವಾಗಿಲ್ಲ. ಸ್ಯಾಮ್ ಸಂಗ್ ಟೈಝನ್ ಮತ್ತು ಮೋಝಿಲಾ ಬಿಡುಗಡೆಗೊಳಿಸಿದ ಫೈಯರ್ ಓಎಸ್ ನೊಂದಿಗೆ ಹೊರಬಂದಿದೆ. ಇನ್ನು ಸೈನೋಜನ್ ಓಎಸ್ ಕೂಡ ಇದೆ. ಆದರೆ ಇವ್ಯಾವುವು ಕೂಡ ಆಂಡ್ರಾಯ್ಡ್ ಗೆ ಪರ್ಯಾಯವಾಗಿಲ್ಲ.ಹುವಾಯಿಯಲ್ಲಿ ಗೂಗಲ್ ಸೇವೆಗಳು ಸ್ಥಗಿತವಾದ ನಂತರ ಇತರೆ ಫೋನ್ ತಯಾರಕರು ಇತರೆ ಓಎಸ್ ಗಳ ನಿರ್ಮಾಣದಲ್ಲಿ ತೊಡಗಿಕೊಳ್ಳಬಹುದು. ಆದರೆ ಪ್ಲೇ ಸ್ಟೋರ್ ನ ಆಕ್ಸಿಸ್ ಸಮಸ್ಯೆಯಾಗಬಹುದು.

Best Mobiles in India

English summary
What next after Google’s move to cut off Huawei?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X