ಸದ್ಯದಲ್ಲೇ ವಾಟ್ಸಾಪ್‌ ಸ್ಟೇಟಸ್‌ ವೀಕ್ಷಿಸುವುದಕ್ಕೆ ಲಭ್ಯವಾಗಲಿದೆ ಹೊಸ ಆಯ್ಕೆ!

|

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಸೆಳೆದಿದೆ. ಜೊತೆಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ಮತ್ತೊಂದು ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇದು ಬಳಕೆದಾರರಿಗೆ ವಾಟ್ಸಾಪ್‌ ಚಾಟ್‌ ಲಿಸ್ಟ್‌ನಲ್ಲಿಯೇ ಸ್ಟೇಟಸ್‌ ಅಪ್ಡೇಟ್‌ ಅನ್ನು ವೀಕ್ಷಿಸುವುದಕ್ಕೆ ಅವಕಾಶ ನೀಡಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ಜನಪ್ರಿಯ ಫೀಚರ್ಸ್ ಆಗಿರುವ ಸ್ಟೇಟಸ್‌ ಅಪ್ಡೇಟ್‌ ಆಯ್ಕೆಯಲ್ಲಿ ಇದೀಗ ಹೊಸ ಆಯ್ಕೆ ಲಭ್ಯವಾಗಲಿದೆ. ಇನ್ಮುಂದೆ ನೀವು ನಿಮ್ಮ ಗೆಳೆಯರ ವಾಟ್ಸಾಪ್‌ ಸ್ಟೇಟಸ್‌ ಅನ್ನು ವಾಟ್ಸಾಪ್‌ ಚಾಟ್‌ ಲಿಸ್ಟ್‌ನಲ್ಲಿಯೇ ಕಾಣುವುದಕ್ಕೆ ಸಾಧ್ಯವಾಗಲಿದೆ. ಇತಹದೊಂದು ಹೊಸ ಆಯ್ಕೆಯನ್ನು ಪರಿಚಯಿಸುವುದಕ್ಕಾಗಿ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ಬಳಕೆದಾರರು ಸುಲಭವಾಗಿ ಅವರ ಕುಟುಂಬ ಮತ್ತು ಸ್ನೇಹಿತರ ಸ್ಟೇಟಸ್‌ ಅಪ್ಡೇಟ್‌ ನೋಡಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಪ್ರಸ್ತುತ

ಪ್ರಸ್ತುತ ವಾಟ್ಸಾಪ್‌ನಲ್ಲಿ ಬಳಕೆದಾರರು ಚಾಟ್ ಲಿಸ್ಟ್‌ ಅನ್ನು ವೀಕ್ಷಿಸಿದಾಗ, ಅವರು ಲಾಸ್ಟ್‌ ಸಂದೇಶವನ್ನು ಶೇರ್‌ ಮಾಡಿರುವುದನ್ನು ಮಾತ್ರ ಕಾಣಬಹುದು. ಅಲ್ಲದೆ ನಿಮ್ಮ ಮೆಸೇಜ್‌ ಡೆಲಿವರಿ ಸ್ಟೇಟಸ್‌ ಅನ್ನು ಸಿಂಗಲ್‌ ಮತ್ತು ಡಬಲ್‌ ಟಿಕ್‌ಗಳ ರೂಪದಲ್ಲಿ ಕಾಣಬಹುದು. ಆದರೆ ವಾಟ್ಸಾಫ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ನಂದಾಗಿ ಮುಂದಿನ ದಿನಗಳಲ್ಲಿ ಚಾಟ್‌ ಲಿಸ್ಟ್‌ನಲ್ಲಿ ನಿಮ್ಮ ಗೆಳೆಯರ ವಾಟ್ಸಾಪ್‌ ಸ್ಟೇಟಸ್‌ ಅನ್ನು ಕೂಡ ವೀಕ್ಷಿಸಬಹುದು. ಇದರಿಂದ ಪ್ರತ್ಯೇಕವಾಗಿ ನೀವು ವಾಟ್ಸಾಪ್‌ ಸ್ಟೇಟಸ್‌ಗೆ ಹೋಗಬೇಕಾದ ಅಗತ್ಯ ಬರುವುದಿಲ್ಲ ಎನ್ನಬಹುದಾಗಿದೆ.

ವಾಟ್ಸಾಪ್‌ನ

ವಾಟ್ಸಾಪ್‌ನ ಹೊಸ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ ವಾಬೇಟಾಇನ್ಫೋ ಈ ಹೊಸ ಫೀಚರ್ಸ್‌ನ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ತನ್ನ ಬ್ಲಾಗ್‌ಸೈಟ್‌ನಲ್ಲಿ ಶೇರ್‌ ಮಾಡಿರುವ ಮಾಹಿತಿ ಪ್ರಕಾರ ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ಬಳಕೆದಾರರಯ ತಮ್ಮ ಕೊನೆಯ ಸಂದೇಶದ ಜೊತೆಗೆ ಬದಲಿಗೆ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ವಾಟ್ಸಾಪ್‌ ಸ್ಟೇಟಸ್‌ ಅಪ್ಡೇಟ್‌ ಅನ್ನು ತೋರಿಸಲಿದೆ. ನಿಮ್ಮ ಚಾಟ್‌ ಲಿಸ್ಟ್‌ನಲ್ಲಿರುವ ಯಾವುದೇ ಸಂಪರ್ಕವು ಹೊಸ ಸ್ಟೇಟಸ್‌ ಅಪ್ಡೇಟ್‌ ಅಪ್‌ಲೋಡ್ ಮಾಡಿದಾಗ, ಅದು ಚಾಟ್ ಪಟ್ಟಿಯಲ್ಲಿ ಸಹ ಗೋಚರಿಸುತ್ತದೆ.

ಸ್ಟೇಟಸ್‌

ಆದರೆ ನೀವು ಅವರ ಸ್ಟೇಟಸ್‌ ಅಪ್ಡೇಟ್‌ ವೀಕ್ಷಿಸಲು ಅವರ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಬೇಕಾಗುತ್ತದೆ. ವಾಟ್ಸಾಪ್‌ನಲ್ಲಿ ಸ್ಟೇಟಸ್‌ ಅಪ್‌ಡೇಟ್‌ಗಳನ್ನುಹಂಚಿಕೊಳ್ಳುವ ಬಳಕೆದಾರರಿಗೆ ಇದು ಸಾಕಷ್ಟು ಉಪಯುಕ್ತವಾಗಲಿದೆ. ಇನ್ನು ಈ ಫೀಚರ್ಸ್‌ ಇದೀಗ ವಾಟ್ಸಾಪ್ ಬೀಟಾ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಆಂಡ್ರಾಯ್ಡ್ ಆವೃತ್ತಿ 2.22.18.17 ಗಾಗಿ ವಾಟ್ಸಾಪ್‌ ಬೀಟಾದಲ್ಲಿ ಈ ಫೀಚರ್ಸ್‌ ಲಭ್ಯವಿದೆ ಎಂದು ವಾಬೇಟಾಇನ್ಫೋ ಟ್ರ್ಯಾಕರ್‌ ಹೇಳಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ತನ್ನ ಬಳಕೆದಾರರಿಗೆ ವಾಟ್ಸಾಪ್‌ ವಿಂಡೋಸ್‌ಗಾಗಿ ಹೊಸ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಪರಿಚಯಿಸಿದೆ. ಈ ಹಿಂದೆ ಮ್ಯಾಕ್‌ ಮತ್ತು ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂಗಾಗಿ ವೆಬ್‌ ಆಧಾರಿತ ಅಪ್ಲಿಕೇಶನ್‌ಗಳನ್ನು ಮಾತ್ರ ನೀಡುತ್ತಿತ್ತು. ಇದೀಗ ನೇಟಿವ್‌ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಬಳಕೆದಾರಿಗೆ ವಿಶ್ವಾಸಾರ್ಹತೆ ಮತ್ತು ವೇಗವನ್ನು ಹೆಚ್ಚಿಸಲಿದೆ ಎಂದು ಮೆಟಾ ಕಂಪೆನಿ ಹೇಳಿದೆ. ಇದಲ್ಲದೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಆಫ್‌ಲೈನ್‌ನಲ್ಲಿದ್ದರೂ ಕೂಡ ವಾಟ್ಸಾಪ್‌ ನೋಟಿಫಿಕೇಶನ್‌ಗಳು ಮತ್ತು ಮೆಸೇಜ್‌ಗಳನ್ನು ಡೆಸ್ಕ್‌ಟಾಪ್‌ನಲ್ಲಿ ಸ್ವಿಕರಿಸಲು ಸಾಧ್ಯವಾಗಲಿದೆ. ಇನ್ನು ಈ ಹೊಸ ನೇಟಿವ್‌ ಅಪ್ಲಿಕೇಶನ್‌ ಪ್ರಸ್ತುತ ಲೈವ್ ಆಗಿದೆ. ಇದನ್ನು ಮೈಕ್ರೋಸಾಫ್ಟ್‌ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಬಹುದು.

ವಾಟ್ಸಾಪ್‌

ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ ಮತ್ತೊಂದು ಆಸಕ್ತಿದಾಯಕ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಈ ಹೊಸ ಫೀಚರ್ಸ್‌ ಬಳಕೆದಾರರು ತಾವು ಡಿಲೀಟ್‌ ಮಾಡಿದ ಮೆಸೇಜ್‌ಗಳನ್ನು ರಿಕವರಿ ಮಾಡುವುದಕ್ಕೆ ಅನುವು ಮಾಡಿಕೊಡಲಿದೆ. ಇದರಿಂದ ನೀವು ಆಕಸ್ಮಿಕವಾಗಿ ಡಿಲೀಟ್‌ ಮಾಡಿದ ನಿಮ್ಮ ಸಂದೇಶಗಳನ್ನು ರಿಕವರಿ ಮಾಡಿಕೊಳ್ಳಬಹುದಾಗಿದೆ. ಸದ್ಯ ಈ ಫೀಚರ್ಸ್‌ ಅನ್ನು ಆಂಡ್ರಾಯ್ಡ್‌ ಬೀಟಾ ಅಪ್‌ಡೇಟ್‌ನಲ್ಲಿ ಗುರುತಿಸಲಾಗಿದೆ.ಪ್ರಸ್ತುತ ವಾಟ್ಸಾಪ್‌ನಲ್ಲಿ ಆಕಸ್ಮಿಕವಾಗಿ ಮೆಸೇಜ್‌ ಡಿಲೀಟ್‌ ಆದರೆ ರಿಕವರಿ ಮಾಡುವುದಕ್ಕೆ ಯಾವುದೇ ಆಯ್ಕೆಯಿಲ್ಲ. ಬದಲಿಗೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಿ ಡಿಲೀಟ್‌ ಮೆಸೇಜ್‌ ಅನ್ನು ಕಾಣಬಹುದು.

Best Mobiles in India

Read more about:
English summary
Whatsapp is planning to introduce a feature that will let users view status updates within the chat list

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X