ವಾಟ್ಸಾಪ್‌ನ ಈ ಫೀಚರ್ಸ್‌ ಕಾರ್ಯವೈಖರಿ ತಿಳಿದರೆ ನಿಮಗೆ ಅಚ್ಚರಿಯಾಗಲಿದೆ?

|

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಮತ್ತೊಂದು ಶುಭ ಸುದ್ದಿ ನೀಡಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ವಾಟ್ಸಾಪ್‌ ಕಾಲ್‌ ಟ್ಯಾಬ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ವಾಟ್ಸಾಪ್‌ನ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಇದಕ್ಕಾಗಿ ವಾಟ್ಸಾಪ್‌ ವಿಂಡೋಸ್‌ 2.2240.1.0 ಬೀಟಾದಲ್ಲಿ ಹೊಸ ಸೈಡ್‌ಬಾರ್ ಅನ್ನು ಸೇರ್ಪಡೆ ಮಾಡಿದೆ. ಈ ಸೈಡ್‌ಬಾರ್‌ ಚಾಟ್ ಲಿಸ್ಟ್‌, ಸ್ಟೆಟಸ್‌ ಅಪ್ಡೇಟ್‌ ಮತ್ತು ಸೆಟ್ಟಿಂಗ್ಸ್‌ ಜೊತೆಗೆ ಇದೀಗ ವಾಟ್ಸಾಪ್‌ ಕಾಲ್‌ ಟ್ಯಾಬ್‌ ಫೀಚರ್ಸ್‌ ಅನ್ನು ಕೂಡ ಒಳಗೊಂಡಿದೆ.

ವಾಟ್ಸಾಪ್‌

ಹೌದು, ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಅತ್ಯಂತ ಉಪಯುಕ್ತ ವಾಟ್ಸಾಪ್‌ ಕಾಲ್‌ ಟ್ಯಾಬ್‌ ಫೀಚರ್ಸ್‌ ಸೇರ್ಪಡ ಮಾಡಿದೆ. ಇದರಿಂದ ನೀವು ಮೊಬೈಲ್‌ ಆವೃತ್ತಿಯ ವಾಟ್ಸಾಪ್‌ನಲ್ಲಿ ಕರೆ ಮಾಡಿರುವ ಲಿಸ್ಟ್‌ ಅನ್ನು ವೆಬ್‌ ಆವೃತ್ತಿಯಲ್ಲಿ ಕೂಡ ಕಾಣಬಹುದಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ವಾಟ್ಸಾಪ್‌ ಕಾಲ್‌ ಹಿಸ್ಟರಿಯನ್ನು ಸಿಂಕ್‌ ಮಾಡುವ ಸಾಧ್ಯತೆ ಕೂಡ ಇದೆ. ಹಾಗಾದ್ರೆ ವಾಟ್ಸಾಪ್‌ ಕಾಲ್‌ ಟ್ಯಾಬ್‌ ಫೀಚರ್ಸ್‌ ವಿಶೇಷತೆ ಏನು? ಇದರ ಕಾರ್ಯವ್ಯಾಪ್ತಿ ಏನಿದೆ ಅನ್ನೊದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಕಾಲ್‌ ಟ್ಯಾಬ್‌ ಹೆಸರೇ ಸೂಚಿಸುವಂತೆ ಡೆಸ್ಕ್‌ಟ್ಯಾಪ್‌ ಆವೃತ್ತಿಯಲ್ಲಿ ನಿಮ್ಮ ವಾಟ್ಸಾಪ್‌ ಕಾಲ್‌ ಹಿಸ್ಟರಿಯನ್ನು ತೋರಿಸಲಿದೆ. ಇದು ವಾಟ್ಸಾಪ್‌ ವೆಬ್‌ನಲ್ಲಿರುವ ಎಡ ಸೈಡ್‌ ಬಾರ್‌ನಲ್ಲಿ ಕಾಲ್‌ ಐಕಾನ್‌ ಅನ್ನು ಕಾಣಬಹುದಾಗಿದೆ. ಈ ಐಕಾನ್‌ ಕಾಲ್‌ ಮೆನುವನ್ನು ತೆರೆಯಲಿದೆ. ಪ್ರಸ್ತುತ, ಇದು ನಿರ್ಧಿಷ್ಟ ಡಿವೈಸ್‌ನಿಂದ ಮಾಡಲಾಗುತ್ತಿರುವ ಕಾಲ್‌ ಲಿಸ್ಟ್‌ಗಳನ್ನು ಮಾತ್ರ ತೋರಿಸಲಿದೆ. ಆದರೆ ಭವಿಷ್ಯದಲ್ಲಿ ವಾಟ್ಸಾಪ್‌ ಕಾಲ್‌ ಹಿಸ್ಟರಿಯನ್ನು ಸಿಂಕ್‌ ಅನ್ನು ಸೇರಿಸುವ ನಿರೀಕ್ಷೆಯಿದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಮಾಡಿದ ಕರೆಗಳನ್ನು ವೆಬ್ ಆವೃತ್ತಿಗೆ ಸಿಂಕ್ ಮಾಡಲಾಗುತ್ತದೆ.

ವಾಟ್ಸಾಪ್‌

ಸದ್ಯ ಈ ಫೀಚರ್ಸ್‌ ಅನ್ನು ವಾಟ್ಸಾಪ್‌ ಬೀಟಾ ಪರೀಕ್ಷಕರು ವಿಂಡೋಸ್‌ 2.2246.4.0 ಅಪ್ಡೇಟ್‌ನಲ್ಲಿ ಪಡೆದುಕೊಂಡಿದ್ದಾರೆ. ಆದರೆ ಇತರೆ ಬಳಕೆದಾರರು ಈ ಹೊಸ ಫೀಚರ್ಸ್‌ ಅನ್ನು ಶೀಘ್ರದಲ್ಲೇ ಸ್ವೀಕರಿಸುವ ನಿರೀಕ್ಷೆಯಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ವಾಟ್ಸಾಪ್ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಕಾಲ್‌ ಮಾಡುವ ಫೀಚರ್ಸ್ ಅನ್ನು ಹೊರತಂದಿದೆ. ಇದರಿಂದ ನೀವು ಲ್ಯಾಪ್‌ಟಾಪ್‌ನಲ್ಲಿಯೂ ಕೂಡ ವಾಯ್ಸ್‌ ಮತ್ತು ವೀಡಿಯೋ ಕಾಲ್‌ ಮಾಡಲು ಅವಕಾಶವಿದೆ. ಆದರಿಂದ ವಾಟ್ಸಾಪ್‌ ಕಾಲ್‌ ಟ್ಯಾಬ್‌ ಇನ್ನಷ್ಟು ಅನುಕೂಲಕರವಾಗಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿನ ದಿನಗಳಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಸೇರ್ಫಡೆ ಮಾಡುತ್ತಲೇ ಬಂದಿದೆ. ಜೊತೆಗೆ ಹಲವು ಅನುಕೂಲಕರ ಫೀಚರ್ಸ್‌ಗಳ ಅಭಿವೃದ್ದಿಯಲ್ಲಿ ಕೂಡ ಕಾರ್ಯನಿರ್ವಹಿಸುತ್ತಿದೆ. ಇವುಗಳ ಮೂಲಕ ವಾಟ್ಸಾಪ್‌ನ ಬಳಕೆದಾರರ ಅನುಭವ ಮುಂದಿನಗಳಲ್ಲಿ ಇನ್ನಷ್ಟು ಬದಲಾಗಲಿದೆ ಎನ್ನಲಾಗಿದೆ. ಅದರಂತೆ ಕೆಲ ದಿನಗಳ ಹಿಂದೆ ವಾಟ್ಸಾಪ್‌ ಪರಿಚಯಿಸಿದ ಕಮ್ಯೂನಿಟಿ ಫೀಚರ್ಸ್‌ ಈಗಾಗಲೇ ಸಾಕಷ್ಟು ಸೌಂಡ್‌ ಮಾಡ್ತಿದೆ. ಒಂದೇ ರೀತಿಯ ಉದ್ದೇಶವಿಟ್ಟುಕೊಂಡಿರುವ ಅನೇಕ ವಾಟ್ಸಾಪ್‌ ಗ್ರೂಪ್‌ಗಳನ್ನು ಒಂದೇ ಸೂರಿನಲ್ಲಿ ತರುವ ಕೆಲಸವನ್ನು ಕಮ್ಯೂನಿಟಿ ಫೀಚರ್ಸ್‌ ಮಾಡುತ್ತಿದೆ. ಇದೇ ಕಾರಣಕ್ಕೆ ಈ ಫೀಚರ್ಸ್‌ ಸಂಚಲನವನ್ನು ಸೃಷ್ಟಿಸಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಕಮ್ಯೂನಿಟಿ ಗುಂಪುಗಳು ವಿವರಣೆ ಮತ್ತು ಮೆನುವನ್ನು ಹೊಂದಿರುತ್ತದೆ. ಇದರಲ್ಲಿ ನೀವು ಯಾವ ಜನರು ಕಮ್ಯೂನಿಟಿ ಸೇರಬಹುದು ಅನ್ನೊದನ್ನ ಆಯ್ಕೆ ಮಾಡಬಹುದು. ಇದಲ್ಲದೆ ದೊಡ್ಡ ಮತ್ತು ಹೆಚ್ಚು ಸಂಕೀರ್ಣವಾದ ಗ್ರೂಪ್ಸ್‌ ನಡುವಿನ ಸಂಭಾಷಣೆಗಳಿಗೆ ರಚನೆ ಮತ್ತು ಸಂಘಟನೆಯನ್ನು ಒದಗಿಸುತ್ತದೆ. ಇದರಿಂದ ವಾಟ್ಸಾಪ್‌ ಕಮ್ಯೂನಿಟಿಯಲ್ಲಿ ಜನರಿಗೆ ಮುಖ್ಯವಾದುದನ್ನು ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.

ವಾಟ್ಸಾಪ್‌

ಇದರೊಂದಿಗೆ ವಾಟ್ಸಾಪ್‌ ಸೇರಿದ ಪ್ರಮುಖ ಫೀಚರ್ಸ್‌ಗಳಲ್ಲಿ ವಾಟ್ಸಾಪ್‌ನ ಆನ್‌ಲೈನ್‌ ಸ್ಟೆಟಸ್‌ ಪ್ರೆಸೆನ್ಸ್‌ ಫೀಚರ್ಸ್‌ ಕೂಡ ಒಂದು. ಇದು ಕೂಡ ಬಳಕೆದಾರರ ದೃಷ್ಟಿಯಿಂದ ಸಾಕಷ್ಟು ಅನುಕೂಲಕರವಾಗಿದೆ. ಹೆಸರೇ ಸೂಚಿಸುವಂತೆ ಆನ್‌ಲೈನ್ ಸ್ಟೆಟಸ್‌ ಪ್ರಸೆನ್ಸ್‌ ಫೀಚರ್ಸ್‌ ಬಳಕೆದಾರರು ತಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಆಯ್ದ ಸಂಪರ್ಕಗಳಿಂದ ಮರೆಮಾಡಲು ಸಹಾಯ ಮಾಡಲಿದೆ. ಇದರಿಂದ ನೀವು ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಯಾರು ನೋಡುತ್ತಾರೆ ಎಂಬುದನ್ನು ನಿರ್ಧರಿಸಲು ಸಾದ್ಯವಾಗಲಿದೆ. ಇದರ ಮೂಲಕ ನೀವು ನಿಮ್ಮ ಎಲ್ಲಾ ಸಂಪರ್ಕಗಳಿಗೆ ಆನ್‌ಲೈನ್‌ ಸ್ಟೇಟಸ್‌ನಲ್ಲಿರುವುದನ್ನು ತಿಳಿಯದಂತೆ ಮಾಡಿ ಕೆಲವು ನಿರ್ದಿಷ್ಟ ಜನರೊಂದಿಗೆ ಮಾತ್ರ ಚಾಟ್ ಮಾಡುವುದಕ್ಕೆ ಅವಕಾಶ ನೀಡಲಿದೆ.

Best Mobiles in India

Read more about:
English summary
WhatsApp is adding a new feature for its users on Windows? Here's Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X