ವಾಟ್ಸಾಪ್‌ ಸ್ಥಗಿತಗೊಂಡಿದ್ದಕ್ಕೆ ಕಾರಣ ನೀಡುವಂತೆ ವರದಿ ಕೇಳಿದ ಕೇಂದ್ರ ಸರ್ಕಾರ!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಮಂಗಳವಾರ (ಅ.25) ಇಡೀ ದೇಶದಾದ್ಯಂತ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತ್ತು. ಇದೇ ಕಾರಣಕ್ಕೆ ಎರಡು ಗಂಟೆಗಳ ಕಾಲ ವಾಟ್ಸಾಪ್‌ನಲ್ಲಿ ಯಾವುದೇ ಸಂದೇಶವಾಗಲಿ, ವೀಡಿಯೊ ಕರೆ ಹಾಗೂ ವಾಯ್ಸ್‌ ಕಾಲ್‌ ಅನ್ನು ಮಾಡಲು ಸಾಧ್ಯವಾಗಿರಲಿಲ್ಲ. ನಂತರ ಮೆಟಾ ಕಂಪೆನಿ ತನ್ನ ಒಡೆತನದ ವಾಟ್ಸಾಪ್‌ನಲ್ಲಿ ಉಂಟಾಗಿದ್ದ ದೋಷವನ್ನು ನಿವಾರಿಸಿರುವುದಾಗಿ ಹೇಳಿಕೊಂಡಿತ್ತು. ಇದೀಗ ಭಾರತ ಸರ್ಕಾರ ವಾಟ್ಸಾಪ್‌ ಯಾಕೆ ಸ್ಥಗಿತಗೊಂಡಿತ್ತು ಎಂಬುದರ ಬಗ್ಗೆ ವಿವರಣೆ ನೀಡಲು ಮೆಟಾ ಕಂಪೆನಿಗೆ ಸೂಚಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಎರಡು ಗಂಟೆಗಳ ಕಾಲ ಎದುರಿಸಿದ್ದ ಸಮಸ್ಯೆಯ ಬಗ್ಗೆ ಯಾವುದೇ ವಿವರಣೆಯನ್ನು ಇದುವರೆಗೂ ನೀಡಿಲ್ಲ. ಇದೀಗ ಸಮಸ್ಯೆಗೆ ಅಸಲಿ ಕಾರಣ ಏನು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮೆಟಾವನ್ನು ಕೇಳಿದೆ. ಮೆಟಾ ವರದಿಯನ್ನು ಸರ್ಕಾರದ ನೋಡಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿಯಾದ ICERT ಗೆ ಸಲ್ಲಿಸಬೇಕಾಗುತ್ತದೆ. ಹಾಗಾದ್ರೆ ಮೆಟಾದ ಬಳಿ MeitY ಏನೆಲ್ಲಾ ವರದಿ ಕೇಳಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನ ಸರ್ವರ್‌ನಲ್ಲಿ ಉಂಟಾದ ದೋಷದಿಂದಾಗಿ ಇಡೀ ದೇಶದಲ್ಲಿ ಎರಡು ಗಂಟೆಗಳ ಕಾಲ ವಾಟ್ಸಾಪ್‌ ಸ್ಥಗಿತಗೊಂಡಿತ್ತು. ಇದರಿಂದ ಸೊಶೀಯಲ್‌ ಮೀಡಿಯಾದಲ್ಲಿ ವಾಟ್ಸಾಪ್‌ ಕುರಿತ ಸಾಕಷ್ಟು ಮಿಮ್‌ಗಳು ಕೂಡ ಹರಿದಾಡಿತ್ತು. ಅಷ್ಟೇ ಅಲ್ಲ ಟ್ವಿಟರ್‌ನಲ್ಲಿ ಸಾಕಷ್ಟು ಮಂದಿ ಇದರ ಬಗ್ಗೆ ವರದಿ ಕೂಡ ಮಾಡಿದ್ದು. ಇದೀಗ ಭಾರತ ಸರ್ಕಾರ ಮೆಟಾ ಕಂಪೆನಿಯನ್ನು ವರದಿ ಕೇಳಿದೆ. ಭಾರತದ ಭೌಗೋಳಿಕ ಡೊಮೇನ್‌ನಲ್ಲಿ ಇಂಟರ್‌ನೆಟ್‌ಗೆ ಯಾವುದೇ ಅಡ್ಡಿ ಉಂಟಾದಾಗ MeitY ಕ್ರಮ ಕೈಗೊಳ್ಳುವುದು ಕಾರ್ಯವಿಧಾನವಾಗಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ

ಇದೇ ಕಾರ್ಯವಿಧಾನದ ಅನ್ವಯ Meity ಮೆಟಾವನ್ನು ವರದಿ ಕೇಳಿದೆ. ಭಾರತದಲ್ಲಿ ವಾಟ್ಸಾಪ್‌ ಏಕೆ ಬ್ಲ್ಯಾಕ್‌ಔಟ್ ಅನ್ನು ಎದುರಿಸಿತು ಎಂಬ ವರದಿಯನ್ನು ಮೆಟಾ ಕಂಪೆನಿ ಸಲ್ಲಿಸಬೇಕಾಗುತ್ತದೆ. ಇನ್ನು ವಾಟ್ಸಾಪ್‌ನಲ್ಲಿ ದೋಷ ಉಂಟಾದಾಗ ಬಳಕೆದಾರರು ಪಠ್ಯಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ವಾಟ್ಸಾಪ್ ವೀಡಿಯೊ ಕರೆಗಳು ಮತ್ತು ವಾಯ್ಸ್‌ ಕರೆಗಳು ಸಹ ಸ್ಥಗಿತಗೊಂಡಿದ್ದವು. ವಾಟ್ಸಾಪ್ ಬ್ಯುಸಿನೆಸ್ ಮತ್ತು ವಾಟ್ಸಾಪ್ ಪೇಯಂತಹ ಪ್ರಮುಖ ಸೇವೆಗಳ ಜೊತೆಗೆ ಸ್ಟೇಟಸ್ ಫೀಚರ್ಸ್‌ ಕೂಡ ಕಾರ್ಯನಿರ್ವಹಿಸಿರಲಿಲ್ಲ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಹೊಸ ಬ್ಲರ್‌ ಟೂಲ್‌ ಅನ್ನು ಸೇರಿಸಿದೆ. ಇದರಿಂದ ಚಿತ್ರಗಳನ್ನು ಬ್ಲರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇನ್ನು ವಾಟ್ಸಾಪ್‌ ಬ್ಲರ್‌ ಫೀಚರ್ಸ್‌ನಲ್ಲಿ ಎರಡು ರೀತಿಯ ಬ್ಲರ್‌ ಟೂಲ್‌ಗಳನ್ನು ಅಭಿವೃದ್ಧಿಪಡಿಸಿದೆ. ಆದ್ದರಿಂದ ನೀವು ಪರ್ಯಾಯ ಬ್ಲರ್‌ ಎಫೆಕ್ಟ್‌ ಅನ್ನು ಬಳಸಿಕೊಂಡು ನಿಮ್ಮ ಚಿತ್ರಗಳನ್ನು ಎಡಿಟ್‌ ಮಾಡಬಹುದು. ಇದಲ್ಲದೆ ಹೆಚ್ಚುವರಿಯಾಗಿ, ನೀವು ಬ್ಲರ್‌ ಗಾತ್ರವನ್ನು ಕೂಡ ಆಯ್ಕೆ ಮಾಡಬಹುದಾಗಿದೆ. ಅಂದರೆ ನೀವು ಬ್ಲರ್‌ ಮಾಡಲು ಬಯಸುವ ಇಮೇಜ್‌ನಲ್ಲಿನ ಹರಳಿನ ನಿಖರತೆಯೊಂದಿಗೆ ಎಫೆಕ್ಟ್‌ ಅನ್ನು ಅನ್ವಯಿಸಬಹುದು.

ವಾಟ್ಸಾಪ್‌

ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಫೋಟೋ ಅಥವಾ ಇಮೇಜ್‌ಗಳನ್ನು ಶೇರ್‌ ಮಾಡುವಾಗ ಕೆಲವು ಪ್ರಮುಖ ಭಾಗವನ್ನು ಮರೆ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇದಕ್ಕಾಗಿ ಹೆಚ್ಚಿನ ಜನರು ಅಂತಹ ಭಾಗವನ್ನು ಕ್ರಾಪ್‌ ಮಾಡಿ ಸೆಂಡ್‌ ಮಾಡುತ್ತಾರೆ. ಆದರೆ ಇದೀಗ ಬ್ಲರ್‌ ಟೂಲ್‌ ಲಭ್ಯವಾಗುವುದರಿಂದ ನೀವು ಮರೆ ಮಾಡಲು ಬಯಸುವ ಸೂಕ್ಷ್ಮ ಮಾಹಿತಿಯನ್ನು ಬ್ಲರ್‌ ಮಾಡಬಹುದು. ಹೀಗೆ ಬ್ಲರ್‌ ಮಾಡಿದ ಇಮೇಜ್‌ ಅನ್ನು ಶೇರ್‌ ಮಾಡುವುದರಿಂದ ನಿಮ್ಮ ಸೂಕ್ಷ್ಮ ಮಾಹಿತಿಗೆ ಯಾವುದೇ ದಕ್ಕೆಯಾಗುವುದಿಲ್ಲ ಎನ್ನಲಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಇತ್ತೀಚಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಾಟ್‌ಗಳಲ್ಲಿ ನಿಮ್ಮ ಆನ್‌ಲೈನ್ ಸ್ಟೇಟಸ್‌ ಹೈಡ್‌ ಮಾಡುವ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ನೀವು ಆನ್‌ಲೈನ್‌ನಲ್ಲಿದ್ದರೂ ಕೂಡ ಆನ್‌ಲೈನ್‌ ಸ್ಟೇಟಸ್‌ ಯಾರಿಗೂ ಕಾಣದಂತೆ ಹೈಡ್‌ ಮಾಡಬಹುದಾಗಿದೆ. ನಿಮ್ಮ ಸ್ನೇಹಿತರಿಗೆ ನೀವು ಆನ್‌ಲೈನ್‌ ಸ್ಟೇಟಸ್‌ ಕಾಣದಂತೆ ಮರೆ ಮಾಡಬಹುದು. ಇದರಿಂದ ನೀವು ಆನ್‌ಲೈನ್‌ನಲ್ಲಿದ್ದರೂ ಕೂಡ ನಿಮ್ಮ ಆನ್‌ಲೈನ್‌ ಸ್ಟೇಸ್‌ ಯಾರಿಗೂ ಕಾಣವುದಿಲ್ಲ ಎಂದು ವಾಟ್ಸಾಪ್‌ ಹೇಳಿದೆ.

Best Mobiles in India

English summary
WhatsApp is now under the government scanner after outage in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X