ಸದ್ಯದಲ್ಲೇ ವಾಟ್ಸಾಪ್‌ ಸೇರಲಿದೆ ಈ ಫೀಚರ್‌! ಇದರ ಕಾರ್ಯವೈಖರಿ ಏನ್‌ ಗೊತ್ತಾ?

|

ಮೆಟಾ ಒಡೆತನದ ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತೊಂದು ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರೋದು ವರದಿಯಾಗಿದೆ. ಈ ಹೊಸ ಫೀಚರ್ಸ್‌ ಡಿಸ್‌ಅಪಿಯರಿಂಗ್‌ ಮೆಸೇಜಸ್‌ ಬಳಸುವವರಿಗೆ ಅನುಕೂಲಕರವಾಗಿದೆ ಎನ್ನಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಹೊಸ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಕೆಪ್ಟ್‌ ಮೆಸೇಜಸ್‌ ಎಂದು ಹೆಸರಿಸಲಾಗಿದೆ. ಇದರಿಂದ ಡಿಸ್‌ಅಪಿಯರಿಂಗ್‌ ಮೆಸೇಜಸ್‌ ಫೀಚರ್‌ ಬಳಸುವವರಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನಲಾಗಿದೆ. ಈ ಫೀಚರ್‌ ಮೂಲಕ ನೀವು ಡಿಸ್‌ಅಪಿಯರಿಂಗ್‌ ಸಂದೇಶಗಳನ್ನು ಕೂಡ ಉಳಿಸಿಕೊಳ್ಳುವುದಕ್ಕೆ ಸಾದ್ಯವಾಗಲಿದೆ ಎಂದು ವರದಿಯಾಗಿದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಕೆಪ್ಟ್‌ ಮೆಸೇಜಸ್‌ ಫಿಚರ್‌ ವಿಶೇಷತೆ ಏನು? ಇದರ ಕಾರ್ಯವೈಖರಿ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜಸ್‌ ಫಿಚರ್‌ ಪರಿಚಯಿಸಿ ಬಹಳ ದಿನಗಳೇ ಆಗಿದೆ. ಇದನ್ನು ಒಮ್ಮೆ ಸಕ್ರಿಯಗಳಿಸಿ ಟೈಮರ್ ಅನ್ನು 24 ಗಂಟೆಗಳವರೆಗೆ ಸೆಟ್‌ ಮಾಡಿದರೆ, ನಿಗದಿತ ಸಮಯ ಪೂರ್ಣಗೊಂಡ ನಂತರ ಎಲ್ಲಾ ಮೆಸೇಜ್‌ಗಳ ಮರೆಯಾಗಲಿವೆ. ಆದರೆ ಡಿಸ್‌ಅಪಿಯರಿಂಗ್‌ ಆಕ್ಟಿವ್ ಇದ್ದಾಗಲೂ ಕೆಲವು ಸಂದೇಶಗಳನ್ನು ಉಳಿಸಿಕೊಳ್ಳಲು ಬಯಸಿದರೆ ಏನು ಮಾಡೋದು? ಇದಕ್ಕೆ ಪರಿಹಾರ ನೀಡುವುದಕ್ಕಾಗಿಯೇ ವಾಟ್ಸಾಪ್‌ ಕೆಪ್ಟ್‌ ಮೆಸೇಜಸ್‌ ಫೀಚರ್‌ ಪರಿಚಯಿಸಿದೆ.

ಮೆಸೇಜಸ್‌

ಕೆಪ್ಟ್‌ ಮೆಸೇಜಸ್‌ ಫೀಚರ್‌ ಡಿಸ್‌ಅಪಿಯರಿಂಗ್‌ ಮೆಸೇಜಸ್‌ ಅನ್ನು ಆಕ್ಟಿವ್‌ ಮಾಡಿದ್ದರೂ ಕೂಡ ಎಲ್ಲಾ ಚಾಟ್‌ಳನ್ನು ಸೇವ್‌ಮಾಡಲು ಅನುಮತಿಸಲಿದೆ. ಇದರಲ್ಲಿ ಸಂದೇಶ ಕಳುಹಿಸುವವರು ಮತ್ತು ಸ್ವೀಕರಿಸುವವರು ಇಬ್ಬರೂ ಕೂಡ ಚಾಟ್‌ಗಳನ್ನು ಉಳಿಸುವ ಆಯ್ಕೆಯನ್ನು ಪಡೆಯುತ್ತಾರೆ ಎಂದು ವರದಿಯಾಗಿದೆ. ಅಲ್ಲದೆ ಕೆಲವು ಕಾರಣಗಳಿಂದ ಬಳಕೆದಾರರು ತಮ್ಮ ಚಾಟ್‌ಗಳನ್ನು ರಿಮೂವ್‌ ಮಾಡಲು ಬಯಸಿದರೆ ಅದೇ ಚಾಟ್‌ಗಳನ್ನು ತೆಗೆದುಹಾಕುವುದಕ್ಕೆ ಕೂಡ ಸಾಧ್ಯವಾಗಲಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಚಾಟ್ ಬಾಕ್ಸ್‌ನ ಮೇಲ್ಭಾಗದಲ್ಲಿ ಈ ಹೊಸ ಐಕಾನ್ ಲಭ್ಯವಾಗಲಿದೆ. ನೀವು ಮೆಸೇಜ್‌ ಅನ್ನು ಲಾಂಗ್‌ ಪ್ರೆಸ್‌ ಮಾಡಿದರೆ ಮಾತ್ರ ಈ ಆಯ್ಕೆ ಕಾಣಲಿದೆ. ಆಗ ಈ ಆಯ್ಕೆಯನ್ನು ಬಳಸಿಕೊಂಡು ಒಬ್ಬರು ಚಾಟ್‌ಗಳನ್ನು ಇರಿಸಿಕೊಳ್ಳಲು ಅಥವಾ ತೆಗೆದುಹಾಕಲು ಸಾಧ್ಯವಾಗುತ್ತದೆ. ಆದರೆ ಡಿಸ್‌ಅಪಿಯರಿಂಗ್‌ ಚಾಟ್‌ಗಳನ್ನು ಉಳಿಸಲು ಬಳಕೆದಾರರು ಕೇವಲ ಒಂದು ಅವಕಾಶವನ್ನು ಮಾತ್ರ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಬೀಟಾ

ಈ ಹೊಸ ಫೀಚರ್‌ ಆಂಡ್ರಾಯ್ಡ್ 2.22.20.3 ಆವೃತ್ತಿಯ ವಾಟ್ಸಾಪ್‌ ಬೀಟಾ ಅಪ್‌ಡೇಟ್‌ನಲ್ಲಿ ಕಾಣಿಸಿಕೊಂಡಿದೆ. ಇದು ಯಾವಾಗ ರೂಲ್‌ಔಟ್‌ ಆಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಪ್ರಸ್ತುತ ಇದು ಇನ್ನು ಕೂಡ ಅಭಿವೃದ್ದಿ ಹಂತದಲ್ಲಿದೆ. ಇದನ್ನು ಪರೀಕ್ಷೆ ಮಾಡುವುದಕ್ಕಾಗಿ ಇದನ್ನು ಮೊದಲು ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲಾಗುತ್ತದೆ. ಒಮ್ಮೆ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದ ನಂತರ, ಈ ಫೀಚರ್‌ ಅಪ್ಲಿಕೇಶನ್‌ನ ಸ್ಥಿರ ಆವೃತ್ತಿಯಲ್ಲಿ ಬರುತ್ತದೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇನ್ನು ಅನೇಕ ಹೊಸ ಫೀಚರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಂತೆ ಇತ್ತೀಚಿಗೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸರ್ವೇ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಈ ಸರ್ವೇ ಫೀಚರ್‌ ಮೂಲಭೂತವಾಗಿ ಚಾಟ್‌ ಮಾದರಿಯಲ್ಲಿ ಕಾಣಲಿದೆ. ವಾಟ್ಸಾಪ್‌ ಬಳಕೆದಾರರು ಇದರಲ್ಲಿ ತಮ್ಮ ಫೀಡ್‌ಬ್ಯಾಕ್‌ ಅನ್ನು ನೀಡಲು ಸಾಧ್ಯವಾಗಲಿದೆ. ಇನ್ನು ಈ ಸರ್ವೇ ಮೂಲಕ ಬಳಕೆದಾರರ ಅನುಭವವನ್ನು ತಿಳಿದುಕೊಳ್ಳಲು ಅವಕಾಶ ಸಿಗಲಿದೆ.

ವಾಟ್ಸಾಪ್

ಬಳಕೆದಾರರು ಈ ಸರ್ವೇಯಲ್ಲಿ ಭಾಗವಹಿಸಲೇಬೇಕೆಂಬ ಕಂಡಿಷನ್‌ ಇಲ್ಲ. ನೀವು ಸರ್ವೇಯಲ್ಲಿ ಭಾಗವಹಿಸದೆ ಇರುವುದಕ್ಕೂ ಕೂಡ ಅವಕಾಶವಿದೆ. ಇನ್ನು ಸರ್ವೇಯಲ್ಲಿ ಬಳಕೆದಾರರು ಭಾಗವಹಿಸುವ ಮೊದಲು ವಾಟ್ಸಾಪ್ ಒಪ್ಪಿಗೆಯನ್ನು ಸರ್ಚ್‌ ಮಾಡಲಿದೆ ಎಂದು ಹೇಳಲಾಗಿದೆ. ನೀವು ನೀಡುವ ಫೀಡ್‌ಬ್ಯಾಕ್‌ ಅನ್ನು ಗೌಪ್ಯವಾಗಿಡುವುದಾಗಿ ವಾಟ್ಸಾಪ್‌ ಹೇಳಿದೆ. ಇದಲ್ಲದೆ ಭವಿಷ್ಯದಲ್ಲಿ ವಾಟ್ಸಾಪ್‌ ನಿಮಗೆ ಹೊಸ ಸಮೀಕ್ಷೆಗಳನ್ನು ಕಳುಹಿಸದಂತೆ ಬ್ಯಾನ್‌ ಮಾಡುವ ಅವಕಾಶ ಕೂಡ ಬಳಕೆದಾರರಿಗಿದೆ. ಸರ್ವೇಯನ್ನು ಪರಿಶೀಲಿಸಿದ ವಾಟ್ಸಾಪ್‌ ಖಾತೆಯ ಮೂಲಕ ಕಳುಹಿಸಲಾಗುತ್ತದೆ. ಇದು ಗ್ರೀನ್‌ ಟಿಕ್‌ನೊಂದಿಗೆ ಬರಲಿದೆ.

Best Mobiles in India

English summary
WhatsApp is working on a new feature Called “Kept Messages”

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X