ಮತ್ತೊಂದು ಅನುಕೂಲಕರ ಫೀಚರ್ಸ್‌ ಸೇರ್ಪಡೆ ಮಾಡಿದ ವಾಟ್ಸಾಪ್‌!

|

ವಾಟ್ಸಾಪ್‌ ವಿಶ್ವದಲ್ಲೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಜೊತೆಗೆ ಕಾಲಕಾಲಕ್ಕೆ ಅಗತ್ಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬ್ಯುಸಿನೆಸ್‌ಗಳನ್ನು ಸರ್ಚ್‌ ಮಾಡುವುದಕ್ಕೆ ಅವಕಾಶ ನೀಡುವ ಫೀಚರ್ಸ್‌ ಪರಿಚಯಿಸಿದೆ. ಇದು ಬ್ಯುಸಿನೆಸ್‌ ಸರ್ಚ್‌ ಜೊತೆಗೆ ಬಳಕೆದಾರರು ವ್ಯಾಪಾರಗಳೊಂದಿಗೆ ಚಾಟ್ ಮಾಡಲು ಕೂಡ ಅವಕಾಶ ನೀಡಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಬ್ಯುಸಿನೆಸ್‌ ಸರ್ಚ್‌ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ಬಳಕೆದಾರರು ವಾಟ್ಸಾಪ್‌ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ವ್ಯಾಪರಿಗಳನ್ನು ಸಂಪರ್ಕಿಸಬಹುದು. ಅವರೊಂದಿಗೆ ಚಾಟ್‌ ಮಾಡುವುದಲ್ಲದೆ ಮತ್ತು ಅವರಿಂದ ಉತ್ಪನ್ನಗಳನ್ನು ಖರೀದಿಸಲು ಸಹ ಸಕ್ರಿಯಗೊಳಿಸುತ್ತದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಬ್ಯುಸಿನೆಸ್‌ ಫೀಚರ್ಸ್‌ನ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಬಳಕೆದಾರರು ಇನ್ಮುಂದೆ ವ್ಯಾಪಾರಿಗಳ ಜೊತೆಗೆ ಡೈರೆಕ್ಟ್‌ ಚಾಟ್‌ ಮಾಡಬಹುದು. ಅವರ ಬಳಿ ಲಬ್ಯವಿರುವ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಇದರಲ್ಲಿ ಬ್ಯಾಂಕಿಂಗ್‌ನಂತಹ ವರ್ಗಗಳ ಮೂಲಕ ವ್ಯಾಪಾರಗಳನ್ನು ಬ್ರೌಸ್ ಮಾಡಲು ಅನುಮತಿಸಲಿದೆ. ಇದು ವೆಬ್‌ಸೈಟ್‌ಗಳಿಂದ ಫೋನ್ ಸಂಖ್ಯೆಗಳನ್ನು ಹುಡುಕಲಿದೆ. ಇದಕ್ಕಾಗಿ ಕಂಪನಿಯು ವಿವಿಧ ಪಾವತಿ ಪಾಲುದಾರರೊಂದಿಗೆ ಸಹಭಾಗಿತ್ವದಲ್ಲಿದೆ ಎಂದು ಹೇಳಲಾಗಿದೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರು ಕಂಪನಿಯ ಇಂಟರ್ಫೇಸ್ ಅನ್ನು ಬಿಡದೆ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗಲಿದೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ಈ ವರ್ಷದ ಆರಂಭದಲ್ಲಿ ವಾಟ್ಸಾಪ್‌ ಜಿಯೋಮಾರ್ಟ್‌ ಶಾಪಿಂಗ್‌ ಎಕ್ಸ್‌ಪಿರಿಯನ್ಸ್‌ ಅನ್ನು ಪ್ರಾರಂಭಿಸಿತ್ತು. ಇದೇ ಮಾದರಿಯ ಅನುಭವವನ್ನು ಈ ಹೊಸ ಫೀಚರ್ಸ್‌ ಕೂಡ ನೀಡಲಿದ್ದು, ಕೆಲವು ಆಯ್ದ ದೇಶಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದಲ್ಲದೆ, ಈ ಫೀಚರ್ಸ್‌ ಜನರ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ಬಿಲ್ಟ್‌ ಮಾಡಲಾಗಿದೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಇದರಲ್ಲಿಒಂದು ವೇಳೆ ನೀವು ಸರ್ಚ್‌ ಮಾಡಿದ ವಿಚಾರವನ್ನು ನಿಮ್ಮ ಖಾತೆಗೆ ಮರಳಿ ಲಿಂಕ್‌ ಮಾಡಲು ಸಾಧ್ಯವಾಗದ ರೀತಿಯಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ ಎಂದು ವಾಟ್ಸಾಪ್‌ ಹೇಳಿದೆ.

ವಾಟ್ಸಾಪ್‌ನಲ್ಲಿ ಬ್ಯುಸಿನೆಸ್‌ ಸರ್ಚ್ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಬ್ಯುಸಿನೆಸ್‌ ಸರ್ಚ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ತೆರೆಯಿರಿ.
ಹಂತ:2 ಚಾಟ್ ಐಕಾನ್ ಟ್ಯಾಪ್ ಮಾಡಿ ಮತ್ತು 'ಡಿಸ್ಕವರ್' ಆಯ್ಕೆಯ ಅಡಿಯಲ್ಲಿ 'ಬ್ಯುಸಿನೆಸ್' ಅನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ನಿಮ್ಮ ಲೊಕೇಶನ್‌ ಶೇರ್‌ ಆದ್ಯತೆಗಳನ್ನು ಆಯ್ಕೆಮಾಡಿ.
ಹಂತ:4 ನಿಮ್ಮ ಲೊಕೇಶನ್‌ನಲ್ಲಿ ವ್ಯಾಪಾರಗಳನ್ನು ಹುಡುಕಲು ನಿಮ್ಮ ಸ್ಥಳವನ್ನು ಬಳಸಲು, 'ಕಂಟಿನ್ಯೂ' ಟ್ಯಾಪ್ ಮಾಡಿ
ಹಂತ:5 ನಿಮ್ಮ ಲೊಕೇಶನ್‌ ಡೇಟಾಗೆ ವಾಟ್ಸಾಪ್‌ ಪ್ರವೇಶವನ್ನು ರಿಸ್ಟ್ರಿಕ್ಟ್ ಮಾಡಲು 'ಅಲೋ ಒನ್ಸ್‌' ಟ್ಯಾಪ್ ಮಾಡಿ.
ಹಂತ:6 ನೀವು ಯಾವ ಮಾದರಿಯ ಬ್ಯುಸಿನೆಸ್‌ ಸರ್ಚ್‌ ಮಾಡ್ತಿದ್ದೀರಾ ಅದಕ್ಕೆ ಸಂಬಂದಿಸಿದ ಪ್ರಶ್ನೆಯನ್ನು ಟೈಪ್ ಮಾಡಿ.
ಹಂತ:7 ಫಿಲ್ಟರ್ ಚಿಪ್ ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಸರ್ಚ್‌ ಅನ್ನು ನೀವು ಇನ್ನಷ್ಟು ಪರಿಷ್ಕರಿಸಬಹುದು.
ಹಂತ:8 ಲಿಸ್ಟ್‌ನಲ್ಲಿ ಕಾಣುವ ಬ್ಯುಸಿನೆಸ್‌ ಪ್ರೊಫೈಲ್ ವೀಕ್ಷಿಸಲು ವ್ಯಾಪಾರವನ್ನು ಟ್ಯಾಪ್ ಮಾಡಿ.
ಹಂತ:9 ಇದೀಗ ನೀವು ಆಯ್ಕೆ ಮಾಡುವ ಬ್ಯುಸಿನೆಸ್‌ ಜೊತೆಗೆ ಚಾಟ್ ಮಾಡಲು ಚಾಟ್ ಬಟನ್ ಅನ್ನು ಟ್ಯಾಪ್ ಮಾಡಿರಿ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಹೊಸ ಕ್ರಿಯೇಟ್‌ ಪೋಲ್‌ ಫೀಚರ್ಸ್‌ ಪರಿಚಯಿಸಿದೆ. ಇದರ ಮೂಲಕ ಬಳಕೆದಾರರು ವಾಟ್ಸಾಪ್‌ ಗ್ರೂಪ್‌ ಮತ್ತು ವೈಯಕ್ತಿಕ ಚಾಟ್‌ಗಳಲ್ಲಿ ಸಮೀಕ್ಷೆ ನಡೆಸುವುದಕ್ಕೆ ಅನುಮತಿಸಲಿದೆ. ಇನ್ನು ಈ ಫೀಚರ್ಸ್‌ ವಾಟ್ಸಾಪ್‌ನ ಮೊಬೈಲ್‌ ಆವೃತ್ತಿಗೆ ಮಾತ್ರ ಲಭ್ಯವಾಗಲಿದೆ. ಇದು ಮುಂದಿನ ದಿನಗಳಲ್ಲಿ ವೆಬ್‌ ಆವೃತ್ತಿಯಲ್ಲಿ ಕೂಡ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
WhatsApp now lets you search for businesses

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X