Subscribe to Gizbot

ಭಾರತದಲ್ಲಿ ವಾಟ್ಸ್ಆಪ್, ಫೇಸ್‌ಬುಕ್‌ಗೆ ನಿಷೇಧ ಹೇರುವ ಸಾಧ್ಯತೆ!!?..ಏಕೆ..ಏನಾಯ್ತು?

Written By:

ವಾಟ್ಸ್‌ಆಪ್ ತನ್ನ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್ ಹಂಚಿಕೊಳ್ಳುತ್ತಿರುವ ವಿವಾದದ ಕಿಡಿ ಭುಗಿಲೆದ್ದಿದೆ.! ಬಳಕೆದಾರರ ಮಾಹಿತಿ ಬಹಿರಂಗವಾಗುವುದನ್ನು ತಡೆಯಲು ಸರ್ಕಾರ ನಿಯಂತ್ರಣ ವ್ಯವಸ್ಥೆ ಸ್ಥಾಪಿಸಲು ಮುಂದಾಗುವುದಾಗಿ ಹೇಳಿದ್ದು, ಫೇಸ್‌ಬುಕ್‌ ಸಹ ಸಂಸ್ಥೆ ವಾಟ್ಸಆಪ್ ಇದಕ್ಕೆ ಆಕ್ಷೇಪವ್ಯಕ್ತಪಡಿಸಿದೆ.!!

ಸುಪ್ರೀಂ ಕೋರ್ಟ್‌ ಐವರು ನ್ಯಾಯಮೂರ್ತಿಗಳು ಈ ಬಗ್ಗೆ ತಮ್ಮದೇ ಅಭಿಪ್ರಾಯ ನೀಡಿದ್ದು, ವಾಟ್ಸ್‌ಆಪ್ ಮಾಹಿತಿಯನ್ನು ಫೇಸ್‌ಬುಕ್‌ ಜತೆ ಹಂಚಿಕೊಳ್ಳುವ ಹೊಸ ಖಾಸಗಿ ನೀತಿ ಬಗ್ಗೆ ಹೇಳಿದ್ದಾರೆ.! ಹಾಗಾದರೆ, ಸರ್ಕಾರ ಮತ್ತು ವಾಟ್ಸ್‌ಆಪ್ ಮಧ್ಯೆ ಆಗುತ್ತಿರುವ ವಿರಸ ಏನು? ಇದಕ್ಕೆ ವಾಟ್ಸ್‌ಆಪ್ ಹೇಳುತ್ತಿರುವುದೇನು? ವಾಟ್ಸ್ಆಪ್, ಫೇಸ್‌ಬುಕ್‌ಗೆ ನಿಷೇಧ ಹೇರಲಿದೆಯೇ ಸರ್ಕಾರ? ಸರ್ಕಾರದ ಮುಂದಿನ ನಡೆಯೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾಹಿತಿ ಹಂಚಿಕೊಳ್ಳುತ್ತಿದೆ ವಾಟ್ಸ್ಆಪ್.!!

ಮಾಹಿತಿ ಹಂಚಿಕೊಳ್ಳುತ್ತಿದೆ ವಾಟ್ಸ್ಆಪ್.!!

ದೇಶದಲ್ಲಿ ಕೋಟ್ಯಾಂತರ ಮಂದಿ ವಾಟ್ಸ್ಆಪ್ ಅನ್ನು ಬಳಸುತ್ತಿದ್ದು, ಬಳಕೆದಾರರ ಎಲ್ಲಾ ಮಾಹಿತಿಗಳನ್ನು ವಾಟ್ಸ್ಆಪ್ ಫೇಸ್‌ಬುಕ್ ಜೊತೆ ಸೇರಿ ಹಂಚಿಕೊಳ್ಳುತ್ತಿದೆ.! ಇದು ಒಂದು ವಾಣಿಜ್ಯೋದ್ದೇಶಕ್ಕಾಗಿದ್ದು, ಇದರಲ್ಲಿ ಯಾವುದೇ ತೊಂದರೆ ಅದ್ಬವಿಸುವುದಿಲ್ಲ ಎಂದು ವಾಟ್ಸಆಪ್ ಹೇಳಿದೆ.!!

ಸರ್ಕಾರ ಹೇಳುತ್ತಿರುವುದೇನು?

ಸರ್ಕಾರ ಹೇಳುತ್ತಿರುವುದೇನು?

ವ್ಯಕ್ತಿಯ ವೈಯಕ್ತಿಕ ಮಾಹಿತಿ ವ್ಯಕ್ತಿತ್ವದ ಅವಿಭಾಜ್ಯ ಭಾಗವಾಗಿದೆ. ವ್ಯಕ್ತಿತ್ವ ಇಲ್ಲದ ವ್ಯಕ್ತಿ ಇರುವುದು ಸಾಧ್ಯವಿಲ್ಲ. ಮಾಹಿತಿಗೆ ಸಂಬಂಧಿಸಿದ ಯಾವುದೇ ಒಪ್ಪಂದ ವ್ಯಕ್ತಿಯ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತದೆ.ಹಾಗಾಗಿ, ವೈಯಕ್ತಿಕ ಮಾಹಿತಿಯನ್ನು ಉಲ್ಲಂಘಿಸುವ ಯಾವುದೇ ಒಪ್ಪಂದ ಜೀವಿಸುವ ಹಕ್ಕಿನ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ.!!

ವಾಟ್ಸ್ಆಪ್ ವಾದ ಹೀಗಿದೆ.!!

ವಾಟ್ಸ್ಆಪ್ ವಾದ ಹೀಗಿದೆ.!!

ವಿವಿಧ ವಾಣಿಜ್ಯ ಉದ್ದೇಶಗಳಿಗಾಗಿ ಇಂದು ಮಾಹಿತಿ ಹಂಚಿಕೆ ಕಡ್ಡಾಯವಾಗಿದ್ದು, . ಒಬ್ಬ ವ್ಯಕ್ತಿ ಇಟಲಿಗೆ ಟಿಕೆಟ್ ಕಾದಿರಿಸಿದರೆ ಆ ಮಾಹಿತಿ ತಕ್ಷಣವೇ ಹಂಚಿಕೆಯಾಗುತ್ತದೆ. ಅಲ್ಲಿ ನೋಡಬಹುದಾದ ತಾಣಗಳ ಬಗೆಗಿನ ವಿವರಗಳು ಅವರಿಗೆ ಅಂತರ್ಜಾಲ ಮೂಲ ಬರಲು ಆರಂಭವಾಗುತ್ತದೆ. ಮತ್ತು ಹಲವು ಅಂತರ್ಜಾಲ ತಾಣಗಳು ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿವೆ ಎಮದು ಹೇಳಿದೆ.!!

ನ್ಯಾಯಪೀಠದ ಅಭಿಮತ ಏನು?

ನ್ಯಾಯಪೀಠದ ಅಭಿಮತ ಏನು?

ಜನರ ಮಾಹಿತಿ ರಕ್ಷಣೆಗೆ ಯಾವ ರೀತಿಯ ನಿಯಂತ್ರಣ ವ್ಯವಸ್ಥೆ ಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಬೇಕು. ಸಾರ್ವಜನಿಕ ಸೇವೆಗಳನ್ನು ನೀಡುವ ಖಾಸಗಿ ಸಂಸ್ಥೆಯು ಬಳಕೆದಾರರ ಜತೆ ಒಪ್ಪಂದ ಮಾಡಿಕೊಂಡು ಸಾಂವಿಧಾನಿಕ ರಕ್ಷಣೆ ಇರುವ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ಕೊಡಬಾರದು ಎನ್ನುವಹಾಗಿದೆ.!!

ಮಧ್ಯಂತರ ಆದೇಶ ನೀಡಿ.!!

ಮಧ್ಯಂತರ ಆದೇಶ ನೀಡಿ.!!

ನೂತನ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಮಾಹಿತಿಯ ರಕ್ಷಣೆಯನ್ನು ಖಚಿತಪಡಿಸಲು ಯಾವುದೇ ವ್ಯವಸ್ಥೆ ಇಲ್ಲ ಎಂದು ನ್ಯಾಯಪೀಠ ಭಾವಿಸುವುದಾದರೆ ಮಧ್ಯಂತರ ಆದೇಶವನ್ನೂ ಹೊರಡಿಸಬಹುದು ಎಂದು ಸರ್ಕಾರ ತಿಳಿಸಿದೆ. ಇದರಿಂದ ನ್ಯಾಯಪೀಟಕ್ಕೆ ಮತ್ತಷ್ಟು ಬಲಬಂದಿದೆ.!!

WhatsApp Tips
ವಾಟ್ಸ್ಆಪ್, ಫೇಸ್‌ಬುಕ್‌ಗೆ ನಿಷೇಧ?

ವಾಟ್ಸ್ಆಪ್, ಫೇಸ್‌ಬುಕ್‌ಗೆ ನಿಷೇಧ?

ವ್ಯಕ್ತಿಯ ವೈಯಕ್ತಿಕ ಮಾಹಿತಿ ವ್ಯಕ್ತಿತ್ವದ ಅವಿಭಾಜ್ಯ ಭಾಗವಾಗಿದೆ. ವ್ಯಕ್ತಿತ್ವ ಇಲ್ಲದ ವ್ಯಕ್ತಿ ಇರುವುದು ಸಾಧ್ಯವಿಲ್ಲ. ಹಾಗಾಗಿ, ಯಾವುದೇ ಕಂಪೆನಿಗಳು ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ಎಚ್ಚರಿಸಿದ್ದು, ಈ ಎಚ್ಚರಿಕೆ ಉಲ್ಲಂಘನೆಯಾದರೆ ವಾಟ್ಸ್ಆಪ್, ಫೇಸ್‌ಬುಕ್‌ಗೆ ನಿಷೇಧ ಹೇರುವ ಸಾಧ್ಯತೆಗಳನ್ನು ತೆರೆದಿದೆ.!!

ಓದಿರಿ:ಇಷ್ಟು ವರ್ಷ ಕಂಪ್ಯೂಟರ್ ಯೂಸ್ ಮಾಡಿದ್ರೂ.. ಕೀಬೋರ್ಡ್‌ನಲ್ಲಿ ಈ 12 ಕೀಗಳ ಬಗ್ಗೆ ಗೊತ್ತಿಲ್ಲಾ?!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp shares the data collected from users.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot