ವಾಟ್ಸಾಪ್ ವಾಯ್ಸ್ ಕಾಲಿಂಗ್ ಅತಿ ವಿಭಿನ್ನ ವಿಶೇಷತೆಗಳು

By Shwetha
|

ಜಗತ್ತಿನಾದ್ಯಂತ ಜನಪ್ರಿಯವಾಗಿರುವ ತ್ವರಿತ ಮೆಸೇಜಿಂಗ್ ಸೇವೆಯಾದ ವಾಟ್ಸಾಪ್, ತನ್ನ ಬಳಕೆದಾರರಿಗಾಗಿ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಬಿಡುಗಡೆಗೊಳಿಸಿದೆ. ಇಂದಿನ ಲೇಖನದಲ್ಲಿ ವಾಟ್ಸಾಪ್ ಬಿಡುಗಡೆ ಮಾಡಿರುವ ವಾಯ್ಸ್ ಕಾಲಿಂಗ್ ಫೀಚರ್ ಕುರಿತಾದ ಅನೇಕ ಮಹತ್ವದ ಸಂಗತಿಗಳನ್ನು ನಾವು ಅರಿತುಕೊಳ್ಳೋಣ.

ಇದನ್ನೂ ಓದಿ: ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್ ಮರೆಮಾಡುವುದು ಹೇಗೆ?

ಹೌದು ಗೆಳೆಯರೇ ವಾಟ್ಸಾಪ್‌ನ ವಾಯ್ಸ್ ಕಾಲಿಂಗ್ ಫೀಚರ್ ಅನೂಹ್ಯ ಅಂಶಗಳನ್ನು ಒಳಗೊಂಡಿದ್ದು ನೀವು ಇದನ್ನು ತಿಳಿದುಕೊಳ್ಳಲೇಬೇಕು.

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್

ವಾಟ್ಸಾಪ್ ಮೊದಲು ಬರಿಯ ಸಂದೇಶ ರವಾನೆ ವಿಶೇಷತೆಯನ್ನು ಮಾತ್ರ ತನ್ನ ಬಳಕೆದಾರರಿಗೆ ನೀಡಿತ್ತು. ಆದರೆ ವೈಫೈ ಅಥವಾ ಅಂತರ್ಜಾಲದ ಬಳಕೆಯನ್ನು ಮಾಡಿ ವಾಟ್ಸಾಪ್‌ನಿಂದ ನಿಮಗೆ ಕರೆಗಳನ್ನು ಕೂಡ ಮಾಡಬಹುದಾಗಿದೆ.

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್

ಈ ಸೇವೆ ಉಚಿತವಾಗಿದ್ದು, ವಾಟ್ಸಾಪ್‌ ಇದಕ್ಕೆ ಶುಲ್ಕ ಭರಿಸುವುದಿಲ್ಲ. ಸ್ಕೈಪ್ ಮತ್ತು ವೈಬರ್ ಶುಲ್ಕ ವಿಧಿಸುತ್ತದೆ. ಆದರೆ ವಾಟ್ಸಾಪ್‌ಗೆ ಬೇಕಾಗಿರುವುದು ಬರಿಯ ಇಂಟರ್ನೆಟ್ ಸೌಲಭ್ಯ ಮಾತ್ರ.

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್

ದುರಾದೃಷ್ಟವಶಾತ್ ವಾಯ್ಸ್ ಕಾಲಿಂಗ್ ಸೇವೆ ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆಂಡ್ರಾಯ್ಡ್ ಬಳಕೆದಾರರು ಮಾತ್ರ ಈ ಫೀಚರ್ ಅನ್ನು ಸದ್ಯಕ್ಕೆ ಬಳಸಬಹುದಾಗಿದ್ದು ಇತರ ಪ್ಲಾಟ್‌ಫಾರ್ಮ್ ಬಳಕೆದಾರರು ಶೀಘ್ರದಲ್ಲಿಯೇ ಸೇವೆಯ ಭಾಗ್ಯವನ್ನು ಪಡೆದುಕೊಳ್ಳಲಿದ್ದಾರೆ.

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್

ಆಂಡ್ರಾಯ್ಡ್‌ನಲ್ಲಿ ಈ ಸೇವೆಯನ್ನು ಪಡೆದುಕೊಳ್ಳಲು, ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದಕ್ಕೆ ನೀವು ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. ನೀವು ಇದನ್ನು ಡೌನ್‌ಲೋಡ್ ಮಾಡಿಕೊಂಡ ನಂತರ ಈ ವ್ಯವಸ್ಥೆಯನ್ನು ಈಗಾಗಲೇ ಸಕ್ರಿಯಗೊಳಿಸಿಕೊಂಡಿರುವ ಇನ್ನೊಬ್ಬರಿಗೆ ಕರೆಯನ್ನು ಮಾಡಬೇಕಾಗುತ್ತದೆ.

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್

ಸ್ಕೈಪ್, ವೈಬರ್ ಮತ್ತು ಹ್ಯಾಂಗ್‌ಔಟ್ಸ್‌ನಂತೆಯೇ ವಾಟ್ಸಾಪ್ ಸೇವೆಯಾಗಿದ್ದು, ವಾಟ್ಸಾಪ್ ಜಗತ್ತಿನಾದ್ಯಂತ ಬಳಕೆಯಲ್ಲಿರುವ ತ್ವರಿತ ಮೆಸೇಜಿಂಗ್ ಸೇವೆಯಾಗಿದೆ.

Best Mobiles in India

English summary
WhatsApp, the most popular instant messaging service used worldwide, has started rolling out the voice calling feature to its users. The company is rolling out the new feature in phases, and it appears some will have to wait longer than others.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X