ವಾಟ್ಸಾಪ್ ವೆಬ್‌ನಲ್ಲಿ ಫೇಸ್‌ಬುಕ್‌ ಮೆಸೆಂಜರ್ ರೂಮ್ಸ್‌ ಬಳಸುವುದು ಹೇಗೆ!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಫೇಸ್‌ಬುಕ್‌ ಬಳಕೆದಾರರಿಗೆ ಗ್ರೂಪ್‌ ವೀಡಿಯೋ ಮೀಟಿಂಗ್‌ಗಳಿಗಾಗಿ ಮೆಸೆಂಜರ್‌ ರೂಮ್‌ ಅನ್ನು ಪರಿಚಯಿಸಿರೊದು ತಿಳಿದೆ ಇದೆ. ಇದೀಗ ಫೇಸ್‌ಬುಕ್‌ ತನ್ನ ಒಡೆತನದ ವಾಟ್ಸಾಪ್‌ ವೆಬ್‌ನಲ್ಲಿಯೂ ಸಹ ಮೆಸೆಂಜರ್ ರೂಮ್ ಅನ್ನು ಬೆಂಬಲಿಸುವ ಫೀಚರ್ಸ್‌ ಪರಿಚಯಿಸುತ್ತಿದೆ. ಈ ಮೂಲಕ ವಾಟ್ಸಾಪ್‌ ವೆಬ್‌ ಕೂಡ ಫೇಸ್‌ಬುಕ್‌ ಮೆಸೆಂಜರ್‌ ರೂಮ್‌ ಅನ್ನು ಬೆಂಬಲಿಸಲಿದೆ. ಇದು ಫೇಸ್‌ಬುಕ್ ಮತ್ತು ವಾಟ್ಸಾಪ್ ಅನ್ನು ಸಂಯೋಜಿಸುವ ಸೊಶೀಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ ಯೋಜನೆಯ ಒಂದು ಭಾಗವಾಗಿದೆ.

ಮೆಸೆಂಜರ್

ಹೌದು, ಫೇಸ್‌ಬುಕ್‌ ಮೆಸೆಂಜರ್ ರೂಮ್‌ಗೆ ವಾಟ್ಸಾಪ್‌ ವೆಬ್‌ ಬೆಂಬಲಿಸಲಿದೆ. ಸದ್ಯ ಮೆಸೆಂಜರ್‌ ರೂಮ್ಸ್‌ ಬೆಂಬಲ ವಾಟ್ಸಾಪ್ ವೆಬ್‌ಗೆ ಮಾತ್ರ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಮೆಸೆಂಜರ್‌ ರೂಮ್‌ಗಳ ಬೆಂಬಲ ಸ್ಮಾರ್ಟ್‌ಫೋನ್‌ ಗಳಲ್ಲಿರುವ ವಾಟ್ಸಾಪ್‌ ವರ್ಷನ್‌ನಲ್ಲಿಯೂ ಲಭ್ಯವಾಗಬಹುದು. ಇನ್ನು ಬಳಕೆದಾರರಿಗೆ ತಡೆರಹಿತ ಕ್ರಾಸ್-ಅಪ್ಲಿಕೇಶನ್ ಅನುಭವವನ್ನು ನೀಡಲು ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಮೆಸೆಂಜರ್ ರೂಮ್ಸ್‌ ಬೆಂಬಲವನ್ನು ಪರೀಕ್ಷಿಸುತ್ತಿದೆ ಎಂದು ಈ ಹಿಂದೆಯ ಫೇಸ್‌ಬುಕ್‌ ದೃಡಪಡಿಸಿತ್ತು. ಸದ್ಯ ಇದೀಗ ವಾಟ್ಸಾಪ್‌ ವೆಬ್‌ನಲ್ಲಿ ಮೆಸೆಂಜರ್‌ ಅಪ್ಲಿಕೇಶನ್‌ ಅನ್ನು ಬೆಂಬಲಿಸುತ್ತಿದೆ. ಹಾಗಾದ್ರೆ ವಾಟ್ಸಾಪ್ ಮೂಲಕ ಮೆಸೆಂಜರ್ ರೂಮ್‌ಗಳನ್ನ ಹೇಗೆ ರಚಿಸುವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್ ಮೂಲಕ ಮೆಸೆಂಜರ್ ರೂಮ್ಸ್‌ಗಳನ್ನು ರಚಿಸುವುದು ಹೇಗೆ?

ವಾಟ್ಸಾಪ್ ಮೂಲಕ ಮೆಸೆಂಜರ್ ರೂಮ್ಸ್‌ಗಳನ್ನು ರಚಿಸುವುದು ಹೇಗೆ?

ನೀವು ಮೊದಲು ವಾಟ್ಸಾಪ್ ವೆಬ್ ಅನ್ನು ಇತ್ತೀಚಿನ ಆವೃತ್ತಿ 2.2031.4 ಗೆ ನವೀಕರಿಸಬೇಕು. ವಾಟ್ಸಾಪ್ ವೆಬ್‌ನಲ್ಲಿ ರೂಮ್ಸ್‌ ರಚಿಸಲು ಎರಡು ಮಾರ್ಗಗಳಿವೆ, ಮೊದಲನೆಯದು ವಾಟ್ಸಾಪ್‌ ಪರದೆಯ ಮೇಲಿನ ಎಡ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ ನಂತರ ರೂಮ್ಸ್‌ ಕ್ರಿಯೆಟ್‌ ಅನ್ನು ಕ್ಲಿಕ್ ಮಾಡಿ. ನಂತರ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ವಾಟ್ಸಾಪ್‌ ಡಿಸ್‌ಪ್ಲೇಯ ಫೇಸ್‌ಬುಕ್ ಮೆಸೆಂಜರ್ ರೂಮ್ಸ್‌ಗಳಿಗಾಗಿ ಪರಿಚಯ ಪುಟವನ್ನು ತೋರಿಸುತ್ತದೆ ಮತ್ತು "ಕಂಟಿನ್ಯೂ ವಿಥ್ ಮೆಸೆಂಜರ್" ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ನಂತರ "ಫೇಸ್‌ಬುಕ್ ಖಾತೆಯೊಂದಿಗೆ ಮುಂದುವರಿಸಿ" ಆಯ್ಕೆಯನ್ನು ಮುಂದುವರಿಸಿ ಕ್ಲಿಕ್ ಮಾಡುವ ಮತ್ತೊಂದು ಪುಟ ಕಾಣಿಸುತ್ತದೆ. ನೀವು ಬೇರೆ ಖಾತೆಯನ್ನು ಬಳಸಿಕೊಂಡು ಕೊಠಡಿ ರಚಿಸಲು ಬಯಸಿದರೆ ಖಾತೆಗಳನ್ನು ಬದಲಾಯಿಸುವ ಆಯ್ಕೆಯೂ ಸಹ ಲಬ್ಯವಾಗಲಿದೆ.

ಮೆಸೆಂಜರ್‌ ರೂಮ್ಸ್‌ಗಳನ್ನು ನೀವು ಬಳಸುವುದು ಹೇಗೆ!

ಮೆಸೆಂಜರ್‌ ರೂಮ್ಸ್‌ಗಳನ್ನು ನೀವು ಬಳಸುವುದು ಹೇಗೆ!

ಮೂರು ಚುಕ್ಕೆಗಳಲ್ಲದೆ, ವಾಟ್ಸಾಪ್ ರೂಮ್‌ಗಳ ಫೀಚರ್ಸ್‌ ಅನ್ನು ವೈಯಕ್ತಿಕ ಚಾಟ್‌ನ ಒಳಗೂ ಸೇರಿಸಿದೆ. ಇದರಿಂದ ಆಟ್ಯಾಚ್‌ಮೆಂಟ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಕೊನೆಯ ಆಯ್ಕೆಯು ರೂಮ್ಸ್ ಗಳಾಗಿರುತ್ತದೆ. ಸದ್ಯ ವಾಟ್ಸಾಪ್‌ ವೆಬ್‌ನಲ್ಲಿಯೂ ಮೆಸೆಂಜರ್‌ ರೂಮ್ಸ್‌ ಲಬ್ಯವಾಗುವುದರಿಂದ ಎರಡು ಪ್ಲಾಟ್‌ಫಾರ್ಮ್‌ಗಳಿಗೆ ಬದಲಾವನೆ ಆಗುವ ಕೆಲಸ ತಪ್ಪುತ್ತದೆ. ವಾಟ್ಸಾಪ್‌ನಲ್ಲಿದ್ದುಕೊಂಡೆ ಮೆಸೆಂಜರ್‌ ರೂಮ್ಸ್‌ಗೆ ಎಂಟ್ರಿ ನಿಡಬಹುದಾಗಿದ್ದು, ನಿಮ್ಮ ಮಿಟಿಂಗ್‌ಗಳಲ್ಲಿ ಭಾಗವಾಹಿಸಬಹುದಾಗಿದೆ.

ಮೆಸೆಂಜರ್

ಇನ್ನು ಮೆಸೆಂಜರ್ ರೂಮ್ ಕರೆಗಳಲ್ಲಿ ಏಕಕಾಲದಲ್ಲಿ 50 ಮಂದಿ ಮಾತ್ರ ಭಾಗವಹಿಸುವುದಕ್ಕೆ ಸೀಮಿತವಾಗಿದೆ. ಇದು ಹೌಸ್‌ಪಾರ್ಟಿಯಂತೆಯೇ ರೂಮ್ಸ್‌ ಅನ್ನು ಲಾಕ್ ಮಾಡುವ ಅವಕಾಶವನ್ನು ಹೊಂದಿದ್ದು, ಮೆಸೆಂಜರ್ ರೂಮ್ಸ್‌ ಅನ್ನು ನಿಗದಿಪಡಿಸಬಹುದು. ಅಲ್ಲದೆ ಭಾಗವಹಿಸುವವರು ಲಿಂಕ್ ಮೂಲಕ ಮಾತ್ರ ರೂಮ್ಸ್‌ ಮೀಟಿಂಗ್‌ಗೆ ಸೇರಬಹುದು.

Most Read Articles
Best Mobiles in India

English summary
Facebook is rolling out Messenger Room support on WhatsApp as tipped earlier. This is a part of the social media platform’s plan to integrate Facebook and WhatsApp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X