ಇನ್ಮುಂದೆ ಫಿಂಗರ್‌ಪ್ರಿಂಟ್ ಬಳಸಿ 'ವಾಟ್ಸ್‌ಆಪ್' ಲಾಕ್ ಮಾಡಬಹುದು!!

|

ವಿಶ್ವದಲ್ಲೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಂಜಿಂಗ್ ಆಪ್ 'ವಾಟ್ಸ್ಆಪ್' ಈ ವರ್ಷ ಭಾರೀ ಬದಲಾವಣೆಯನ್ನು ಕಾಣುತ್ತಿದೆ. ಕಳೆದ ವರ್ಷ ಮೆಸೇಜ್ ಡಿಲೀಟ್, ಗ್ರೂಪ್ ಕಾಲ್‌‌ನಂತಹ ಹಲವು ಸೌಲಭ್ಯಗಳನ್ನು ಅಳವಡಿಸಿಕೊಂಡಿದ್ದ ವಾಟ್ಸ್‌ಆಪ್‌, ಈ ವರ್ಷದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಸೇರಿದಂತೆ ಹಲವು ಅಪ್‌ಡೇಟ್‌ಗಳನ್ನು ತರುವುದು ಪಕ್ಕಾ ಆಗಿದೆ ಎಂದು ಇತ್ತೀಚಿನ ಟೆಕ್ ವರದಿಗಳ ಮೂಲಕ ತಿಳಿದುಬಂದಿದೆ.

ಇನ್ಮುಂದೆ ಫಿಂಗರ್‌ಪ್ರಿಂಟ್ ಬಳಸಿ 'ವಾಟ್ಸ್‌ಆಪ್' ಲಾಕ್ ಮಾಡಬಹುದು!!

ಆಂಡ್ರಾಯ್ಡ್ ಬೀಟಾ ನೀಡಿರುವ ಮಾಹಿತಿಯ ಪ್ರಕಾರ, ಈ ವರ್ಷ ವಾಟ್ಸ್​​​ಆಪ್​ ಬಳಕೆದಾರರಿಗೆ ಫಿಂಗರ್‌ಪ್ರಿಂಟ್ ಫೀಚರ್, ಡಾರ್ಕ್ ಮೋಡ್ ಸೇರಿದಂತೆ ಹಲವು ಸರ್ಪ್ರೈಸ್​​ಗಳ ಮಹಾಪೂರವೇ ಹರಿದುಬರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಬಳಕೆದಾರರಿಗೆ ಈ ವರ್ಷ ವಾಟ್ಸ್​ಆಪ್ ಮೂಲಕ ಮತ್ತೆ ಹಲವು ಅದ್ಬುತ ಸೇವೆಗಳನ್ನು ದೊರೆಯುತ್ತಿದ್ದು, 2019ರಲ್ಲಿ ನೀವು ನಿರೀಕ್ಷಿಸಬಹುದಾದ ವಾಟ್ಸ್​​ಆಪ್ ಅಪಡೇಟ್ಸ್​ ಇವಾಗಿವೆ.

ಫಿಂಗರ್‌ಪ್ರಿಂಟ್ ಫೀಚರ್!

ಫಿಂಗರ್‌ಪ್ರಿಂಟ್ ಫೀಚರ್!

ಸ್ಮಾರ್ಟ್‌ಫೋನ್ ಅನ್‌ಲಾಕ್‌ಗೆ ಇರುವ ಫಿಂಗರ್‌ಪ್ರಿಂಟ್ ಫೀಚರ್ ಅನ್ನು ಇನ್ಮುಂದೆ ವಾಟ್ಸ್‌ಆಪ್ ಆಪ್ ಅನ್ನು ಲಾಕ್ ಮಾಡಲು ಬಳಸಿಕೊಳ್ಳಬಹುದಾಗಿದೆ. ಈ ಮೂಲಕ ವಾಟ್ಸ್‌ಆಪ್‌ನಲ್ಲಿ ಹೆಚ್ಚು ಖಾಸಾಗಿತನವನ್ನು ಕಾಪಾಡಿಕೊಳ್ಳಲು ವಾಟ್ಸ್‌ಆಪ್ ಸಂಸ್ಥೆ ದಾರಿ ಮಾಡಿಕೊಡುತ್ತಿದೆ ಎಂದು ಆಂಡ್ರಾಯ್ಡ್ ಬೀಟಾ ನೀಡಿರುವ ಇತ್ತೀಚಿನ ವರದಿಯಿಂದ ತಿಳಿದುಬಂದಿದೆ.

ಆರ್ಡರ್​​ನಲ್ಲಿ ವಾಯ್ಸ್​​ ಮೆಸೇಜ್​​​

ಆರ್ಡರ್​​ನಲ್ಲಿ ವಾಯ್ಸ್​​ ಮೆಸೇಜ್​​​

ಈ ಹೊಸ ಫೀಚರ್​​​ ಮೂಲಕ ವಾಟ್ಸ್​​ಆಪ್​ ಬಳಕೆದಾರರು ಇನ್ಮುಂದೆ ಮಾರ್ನಾಲ್ಕು ವಾಯ್ಸ್​ ಮೆಸೇಜ್​ಗಳನ್ನ ಆರ್ಡರ್​​ನಲ್ಲಿ ಪ್ಲೇ ಮಾಡಬಹುದು ಎಂದು ಹೇಳಲಾಗಿದೆ. ಆಲಿಸಬೇಕಾದ ಎಲ್ಲಾ ವಾಯ್ಸ್ ಮೆಸೇಜ್‌ಗಳನ್ನು ಒಂದೇ ವೇಳೆಯಲ್ಲಿ ಸೆಲೆಕ್ಟ್ ಮಾಡಿ ಪ್ಲೇ ಮಾಡಿದರೆ, ಅವೆಲ್ಲವೂ ಆರ್ಡರ್​​ನಲ್ಲಿ ಪ್ಲೇ ಆಗುತ್ತವೆ ಎಂದು ಹೇಳಲಾಗಿದೆ.

ಡಾರ್ಕ್​ ಮೋಡ್​

ಡಾರ್ಕ್​ ಮೋಡ್​

ಕತ್ತಲಲ್ಲಿ ವಾಟ್ಸ್​​​ಆಪ್​ ಬಳಕೆ ಮಾಡುವಾಗ ಕಣ್ಣುಗಳ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಮತ್ತು ಬ್ಯಾಟರಿ ಬಾಳಿಕೆ ಹೆಚ್ಚಿಸುವ ಸಲುವಾಗಿ ಡಾರ್ಕ್​ ಮೋಡ್​ ಅನ್ನು ಈ ವರ್ಷ ವಾಟ್ಸ್‌ಆಪ್‌ನಲ್ಲಿ ಕಾಣಬಹುದಾಗಿದೆ. ವಾಟ್ಸ್​​ಆಪ್​ ಬೀಟಾ ಇನ್ಫೋ ಟ್ವಿಟರ್​​ ಅಕೌಂಟ್​​ನಲ್ಲಿ ಈ ಬಗ್ಗೆ ಖಚಿತ ಮಾಹಿತಿ ನೀಡಲಾಗಿದೆ.

ಸ್ವೈಪ್​ ಟು ರಿಪ್ಲೈ

ಸ್ವೈಪ್​ ಟು ರಿಪ್ಲೈ

ಈಗಾಗಲೇ​​ ಲಭ್ಯವಿರುವ ಈ ಸ್ವೈಪ್​ ಟು ರಿಪ್ಲೈ ಮತ್ತಷ್ಟು ಅಪ್‌ಡೇಟ್ ಆಗಿ ಬರಲಿದೆ. ಬಳಕೆದಾರರು ಈ ಫೀಚರ್​ ಮೂಲಕ ಬಳಕೆದಾರರು ಬಲಕ್ಕೆ ಸ್ವೈಪ್​ ಮಾಡುವ ಮೂಲಕ ಮೆಸೇಜ್​ಗಳಿಗೆ ರಿಪ್ಲೈ ಮಾಡಬಹುದು. ಬಲಕ್ಕೆ ಸ್ವೈಪ್​ ಮಾಡುತ್ತಿದ್ದಂತೆ ಆ ಸಂದೇಶ ರಿಪ್ಲೈ ಕಾಂಟೆಕ್ಸ್ಟ್​​​ನಲ್ಲಿ ಲೋಡ್​ ಆಗುತ್ತದೆ ಎಂದು ಹೇಳಲಾಗಿದೆ.

ಕಾಂಟ್ಯಾಕ್ಟ್ಸ್​ ಲಿಂಕಿಂಗ್

ಕಾಂಟ್ಯಾಕ್ಟ್ಸ್​ ಲಿಂಕಿಂಗ್

ವಾಟ್ಸ್ಆಪ್ ಪರಿಚಯಿಸಲಿರುವ ಈ ನೂತನ ಫೀಚರ್ ಸಹಾಯದಿಂದ ನೀವು ಯಾರೊಂದಿಗೆ ಹೆಚ್ಚು ಬಾರಿ ಚಾಟ್​​ ಮಾಡ್ತೀರ ಎನ್ನುವುದರ ಆಧಾರದ ಮೇಲೆ ಇತರೆ ಕಾಂಟ್ಯಾಕ್ಟ್​​ಗಳನ್ನ ಆಟೋಮ್ಯಾಟಿಕ್​ ಆಗಿ ಲಿಂಕ್​ ಮಾಡಿ ಪಟ್ಟಿ ಮಾಡಬಹುದಾಗಿದೆ. ಇದು ಚಾಟಿಂಗ್‌ಗೆ ಬಹಳ ಸಹಕಾರಿಯಾಗಲಿದೆ.

Best Mobiles in India

English summary
Facebook-owned WhatsApp is reportedly working on a fingerprint authentication feature to protect its users' chats from being seen by others. The authentication, once enabled, will be required for users to open the app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X