ಶೀಘ್ರದಲ್ಲೇ 4ಜಿಯನ್ನು ಹಿಮ್ಮೆಟ್ಟಿಸಲಿರುವ ವೇಗದ ಇಂಟರ್ನೆಟ್ 5ಜಿ!!!

By Shwetha
|

4ಜಿ ಮೊಬೈಲ್ ಟೆಲಿಕಮ್ಯುನಿಕೇಶನ್ ನಿಧಾನವಾಗಿ ತನ್ನ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಇದೇ ಸಮಯದಲ್ಲಿ 5ಜಿ ಕೂಡ ಫೋನ್ ಕ್ಷೇತ್ರಕ್ಕೆ ಅಡಿಇಡುತ್ತಿದ್ದು ಇದು ಹೆಚ್ಚು ವೇಗದ ನೆಟ್‌ವರ್ಕ್ ಎಂದೇ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಮುಂದಿನ ತಲೆಮಾರಿನ ಹೈ ಸ್ಪೀಡ್ ನೆಟ್‌ವರ್ಕ್ ಎಂದೇ ಖ್ಯಾತಿವೆತ್ತಿರುವ 5 ಜಿ ಯ ಕುರಿತು ಸಮಗ್ರ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ಹಂಚಿಕೊಳ್ಳುತ್ತಿದ್ದೇವೆ.

ಓದಿರಿ: ಒಂದೇ ಸೆಕೆಂಡ್‌‌ನಲ್ಲಿ ಸಿನಿಮಾ ಡೌನ್‌ಲೋಡ್‌ ಮಾಡಿ!

ಮುಂದಿನ ಜನರೇಶನ್ ವೈರ್‌ಲೆಸ್ ಟೆಲಿಕಮ್ಯುನಿಕೇಶನ್ ಎಂದೇ ಪ್ರಸಿದ್ಧಿ ಹೊಂದಿರುವ 5ಜಿ ಕುರಿತು ಹೆಚ್ಚಿನ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

5ಜಿ ಜನರೇಶನ್ ವೈರ್‌ಲೆಸ್

5ಜಿ ಜನರೇಶನ್ ವೈರ್‌ಲೆಸ್

ವೈರ್‌ಲೆಸ್ ಟೆಲಿಕಮ್ಯುನಿಕೇಶನ್ ಮುಂದಿನ ತಲೆಮಾರು ಎಂದೇ ಪ್ರಸಿದ್ಧಿ ಹೊಂದಿರುವ 5ಜಿ 4 ಜಿಗಿಂತಲೂ ಹೆಚ್ಚಿನ ವೇಗವನ್ನು ಪಡೆದುಕೊಂಡಿದೆ. ಮಲ್ಟಿ ಸ್ಟ್ರೀಮ್, ಮಲ್ಟಿ ಯೂಸರ್, ಸ್ಪೀಡ್ ಮ್ಯಾಚಿಂಗ್ ಹೀಗೆ ಬಹು ವಿಶೇಷತೆಗಳನ್ನು 5ಜಿ ಹೊಂದಿದೆ.

4ಜಿ ವರ್ಸಸ್ 5ಜಿ

4ಜಿ ವರ್ಸಸ್ 5ಜಿ

ಎಲ್‌ಟಿಇ ಎಂಬುದು 4ಜಿ ಮೊಬೈಲ್ ಇಂಟರ್ನೆಟ್ ಜನರಿಕ್ ಹೆಸರಾಗಿದ್ದು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವ್ಯವಸ್ಥೆಯನ್ನು ನಮಗೆ ಕಂಡುಕೊಳ್ಳಬಹುದಾಗಿದೆ. 5ಜಿ 4ಜಿಗಿಂತಲೂ ಹೆಚ್ಚಿನ ಡೌನ್‌ಲೋಡ್ ವೇಗವನ್ನು ಬ್ರೌಸಿಂಗ್ ವೇಗವನ್ನು ಹೊಂದಿದ್ದು ಇಂದಿನ ತಲೆಮಾರಿಗೆ ಹೇಳಿಮಾಡಿಸಿರುವ ಕಮ್ಯುನಿಕೇಶನ್ ವ್ಯವಸ್ಥೆ ಎಂದೆನಿಸಿದೆ.

5 ಜಿ ಎಲ್ಲಿದೆ

5 ಜಿ ಎಲ್ಲಿದೆ

ಸ್ಯಾಮ್‌ಸಂಗ್ ಕೆಲವೊಂದು 5ಜಿ ಹ್ಯಾಂಡ್‌ಸೆಟ್‌ಗಳ ಪ್ರಯೋಗವನ್ನು ನಡೆಸಿದ್ದು ಚೀನಾ ಆಧಾರಿತ ಕಂಪೆನಿ ಹುವಾವೆ 2020 ರಲ್ಲಿ ತನ್ನ ಡಿವೈಸ್‌ಗಳಲ್ಲಿ 5ಜಿ ನೆಟ್‌ವರ್ಕ್ ಅನ್ನು ತರುವ ಯೋಜನೆಯನ್ನಿಟ್ಟುಕೊಂಡಿದೆ. 4ಜಿಗಿಂತಲೂ ಹೆಚ್ಚು ಉತ್ತಮವಾಗಿರುವ ಮೊಬೈಲ್ ಇಂಟರ್ನೆಟ್ ವೇಗವೆಂದೇ 5ಜಿಯನ್ನು ಕರೆಯಲಾಗಿದೆ.

5 ಜಿಯನ್ನು ನಾವು ಯಾವಾಗ ಪಡೆದುಕೊಳ್ಳಬಹುದು?

5 ಜಿಯನ್ನು ನಾವು ಯಾವಾಗ ಪಡೆದುಕೊಳ್ಳಬಹುದು?

2020 ರವರೆಗೆ ನಾವು 5ಜಿಯನ್ನು ಕಂಡುಕೊಳ್ಳಬಹುದು. ಮಿಲಿಟರಿ ಮತ್ತು ಸರಕಾರೀ ಸೇವೆಗಳು ಕೆಲವೇ ವರ್ಷಗಳಲ್ಲಿ 5 ಜಿಯನ್ನು ಬಳಸಿಕೊಳ್ಳಬಹುದು.

5 ಜಿ ಸ್ಮಾರ್ಟ್‌ಫೋನ್‌ಗಳು

5 ಜಿ ಸ್ಮಾರ್ಟ್‌ಫೋನ್‌ಗಳು

2020 ರಲ್ಲಿ ಬರುವ ಬಹುತೇಕ ಸ್ಮಾರ್ಟ್‌ಫೋನ್‌ಗಳು 5ಜಿ ಸಂಪರ್ಕವನ್ನು ಹೊಂದುವುದು ನಿಚ್ಚಳವಾಗಿದೆ. ಇನ್ನಷ್ಟು ಪ್ರಗತಿಯನ್ನು ಕಂಡುಕೊಳ್ಳುತ್ತಾ ಜನಸಾಮಾನ್ಯರು ಖರೀದಿಸುವಂತಹ ಮಟ್ಟಿಗೆ 5ಜಿ ಬರಬಹುದು. 4ಜಿಗಿಂತಲೂ ಅತ್ಯುತ್ತಮ ಎಂದೆನಿಸಿರುವ 5ಜಿ ಸೇವೆಯನ್ನು ಎಲ್ಲಾ ತಲೆಮಾರಿನವರೂ ಇಷ್ಟಪಡುವುದು ಖಂಡಿತ.

ವೇಗ ಹಾಗೂ ವೈಶಿಷ್ಟ್ಯ

ವೇಗ ಹಾಗೂ ವೈಶಿಷ್ಟ್ಯ

ಕಾಲ ಬದಲಾದಂತೆ ಮಾನವ ಬಳಸುವ ಪ್ರತಿಯೊಂದು ವಸ್ತುವಿನಲ್ಲೂ ಹೊಸತನವನ್ನು ಹುಡುಕುತ್ತಾನೆ. ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ. ಅದೇ ರೀತಿ ತಂತ್ರಜ್ಞಾನ ಕೂಡ ತನ್ನ ಹಳೆಯ ದಾಖಲೆಗಳನ್ನು ಅಳಿಸುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ. ಮಾರುಕಟ್ಟೆಗೆ ಬರಲಿರುವ 5ಜಿ ತಂತ್ರಜ್ಞಾನ ಬಳಕೆದಾರರಲ್ಲಿ ಸಂತಸದ ಅಲೆಯನ್ನು ತರುವುದಂತೂ ಖಂಡಿತ. ಯಾವುದೇ ತೊಡಕಿಲ್ಲದೆ ಇಂಟರ್ನೆಟ್‌ನಲ್ಲಿ ತಮ್ಮ ಇಷ್ಟದ ಹಾಡು, ವೀಡಿಯೋ, ಚಾಟ್ ಮಾಡುವುದು ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಬಹುದಾಗಿದೆ.

ನೆಟ್‌ವರ್ಕ್‌ ವಿನ್ಯಾಸದಲ್ಲಿ ಬದಲಾವಣೆ

ನೆಟ್‌ವರ್ಕ್‌ ವಿನ್ಯಾಸದಲ್ಲಿ ಬದಲಾವಣೆ

ಹೊಸ ಹೊಸ ವಿನ್ಯಾಸ ತಂತ್ರಜ್ಞಾನದಲ್ಲಿ ಉಂಟಾದಂತೆ ನೆಟ್‌ವರ್ಕ್ ವಿನ್ಯಾಸ ಕೂಡ ಬದಲಾಗುತ್ತದೆ. ಹೆಚ್ಚು ಔಟ್‌ಪುಟ್ ಹಾಗೂ ಹೆಚ್ಚು ಇನ್‌ಪುಟ್ (ಮಿಮೊ) ಗೆ ಸಂಬಂಧಿಸಿದಂತೆ ನೆಟ್‌ವರ್ಕ್ ವಿನ್ಯಾಸದಲ್ಲಿ ಬದಲಾವಣೆಯಾಗಲಿದೆ.

ಹೆಚ್ಚು ಸ್ಪೆಕ್ಟ್ರಲ್ ಲಭ್ಯತೆ

ಹೆಚ್ಚು ಸ್ಪೆಕ್ಟ್ರಲ್ ಲಭ್ಯತೆ

ಸ್ಪೆಕ್ಟ್ರಮ್ ವೇಗ ಕೂಡ 5ಜಿಗೆ ಸಂಬಂಧಿಸಿದಂತೆ ವೇಗವಾಗಿದ್ದು 10 GHz ಸ್ಪೆಕ್ಟ್ರಮ್ ಲಭ್ಯತೆ ಇದಕ್ಕಿದೆ. 100 GHz ಸ್ಪೆಕ್ಟ್ರಮ್ ಲಭ್ಯತೆ ಇರುವ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೂಡ ಕಂಪೆನಿ ಕಾರ್ಯಪ್ರವೃತ್ತವಾಗಿದೆ.

ಕಡಿಮೆ ಪವರ್

ಕಡಿಮೆ ಪವರ್

ಕಡಿಮೆ ಚಾರ್ಜ್‌ನಲ್ಲಿ ಫೈವ್ ಜೀಯನ್ನು ಬಳಸಲು ಗ್ರಾಹಕರಿಗೆ ಅನುಕೂಲವಾಗುವಂತೆ ಕಂಪೆನಿ ಶತಪ್ರಯತ್ನಗಳನ್ನು ಮಾಡುತ್ತಿದೆ. ಇದು ಅತಿ ಕಡಿಮೆ ಚಾರ್ಜಿಂಗ್ ಪವರ್ ಅನ್ನು ಬಳಸಿ ನಿಮಗೆ ಹೆಚ್ಚುವರಿ 5ಜಿ ಬೆಂಬಲವನ್ನು ನೀಡಲಿದೆ.

ಕೊನೆಯ ಮಾತು

ಕೊನೆಯ ಮಾತು

5ಜಿ ಯು ಬಳಕೆದಾರರಿಗೆ ಉತ್ತಮ ಫೋನ್ ವೈಶಿಷ್ಟ್ಯವನ್ನು ನೀಡಿದ್ದು ಅವರ ಮನಗೆಲ್ಲುವ ಸಕಲ ಪ್ರಯತ್ನವನ್ನು ಮಾಡುತ್ತಿದೆ. ಇನ್ನೂ ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ.

Best Mobiles in India

English summary
The 4G mobile telecommunication standard is slowly gain in popularity, there are already talk of the fifth-generation or 5G standards that will further enhance communications on the move.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X