ಒಂದೇ ಸೆಕೆಂಡ್‌ನಲ್ಲಿ ಸಿನಿಮಾ ಡೌನ್‌ಲೋಡ್ ಮಾಡಿ!
ನಮ್ಮ ದೇಶದಲ್ಲಿ ಈಗಷ್ಟೇ ಟೆಲಿಕಾಂ ಕಂಪೆನಿಗಳು 4ಜಿ ಸೇವೆಗಳನ್ನು ನೀಡಲು ಆರಂಭಿಸಿದ್ದರೆ ಅತ್ತ ದಕ್ಷಿಣ ಕೊರಿಯಾದಲ್ಲಿ 5ನೇ ತಲೆಮಾರಿನ ವೈರ್‌ಲೆಸ್ ತಂತ್ರಜ್ಞಾನ ಆರಂಭಿಸಲು ಸರ್ಕಾರ ಸಿದ್ದತೆ ನಡೆಸಿದೆ.
1.5 ಶತ ಕೋಟಿ ಡಾಲರ್ ವೆಚ್ಚದಲ್ಲಿ ಈ ಸೇವೆ ನೀಡಲು ಸರ್ಕಾರ ಯೋಜನೆ ರೂಪಿಸಿದ್ದು,4ಜಿ ನೆಟ್‌ವರ್ಕ್‌ನಲ್ಲಿ 800 ಮೆಗಾಬೈಟ್ಸ್‌ನ ಸಿನಿಮಾ ಸಂಪೂರ್ಣ ಡೌನ್‌ಲೋಡ್ ಆಗಲು 40 ಸೆಕೆಂಡ್ ತೆಗೆದುಕೊಂಡರೆ,5ಜಿಯಲ್ಲಿ ಆ ಸಿನಿಮಾ ಒಂದೇ ಸೆಕೆಂಡ್‌ನಲ್ಲಿ ಡೌನ್‌ಲೋಡ್ ಅಗುತ್ತದೆ.
ಕೊರಿಯಾದಲ್ಲಿ1990ರಲ್ಲಿ 2ಜಿ ಸೇವೆ ಆರಂಭಗೊಂಡಿದ್ದರೆ,3ಜಿ 2000 ಇಸವಿಯಲ್ಲಿ ಆರಂಭಗೊಂಡಿತ್ತು.ಇನ್ನು2010ರಲ್ಲಿ 4ಜಿ ಆರಂಭಗೊಂಡಿದ್ದು, ವೇಗದ 4ಜಿ ಇಂಟರ್‌ನೆಟ್ ಹೊಂದಿರುವ ದೇಶಗಳ ಪಟ್ಟಿಯಲ್ಲಿ ನಾಲ್ಕನೇಯ ಸ್ಥಾನವನ್ನು ದಕ್ಷಿಣ ಕೊರಿಯಾ ಪಡೆದುಕೊಂಡಿದೆ.
ಮುಂದಿನ ವರ್ಷ ಪರೀಕ್ಷಾರ್ಥವಾಗಿ 5 ಜಿಯನ್ನು ಆರಂಭಿಸಲಿದ್ದು 2018ರಲ್ಲಿ ಪಿಯಾಂಗ್‌ಚಂಗ್(Pyeongchang)ನಲ್ಲಿ ನಡೆಯುವ ಚಳಿಗಾಲದ ಒಲಂಪಿಕ್ಸ್ ವೇಳೆಗೆ 5ಜಿ ಇಂಟರ್‌ನೆಟ್ ಸಂಪರ್ಕ ಲಭ್ಯವಾಗುವಂತೆ ಕೊರಿಯನ್ ಸರ್ಕಾರ ಯೋಜನೆ ರೂಪಿಸಿದೆ.ಅಮೆರಿಕ,ಚೀನಾ ಯುರೋಪ್ ದೇಶಗಳ ತಂತ್ರಜ್ಞರು 5 ತಲೆಮಾರಿನ ವೈರ್‌ಲೆಸ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಯೂ ಟ್ಯೂಬ್‌ನಿಂದ ವೀಡಿಯೋ ಡೌನ್‌ಲೋಡ್ ಮಾಡುವುದು ಹೇಗೆ ?

1
2013 ಮೇ ತಿಂಗಳಿನಲ್ಲಿ ಸ್ಮಾರ್ಟ್‌ಫೋನ್ ದಿಗ್ಗಜ ಕೊರಿಯನ್ ಕಂಪೆನಿ ಸ್ಯಾಮ್‌ಸಂಗ್ 5ನೇ ತಲೆಮಾರಿನ ವೈರ್‌ಲೆಸ್ ತಂತ್ರಜ್ಞಾನ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಪರೀಕ್ಷಿಸಿತ್ತು.

2
ಡಿಜಿಟಲ್ ಮೀಡಿಯಾಗಳನ್ನು ಅಧ್ಯಯನ ಮಾಡುವ ethinos.com ಪ್ರಕಾರ ವೇಗದ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೌಲಭ್ಯವಿರುವ ದೇಶಗಳ ಪಟ್ಟಿಯಲ್ಲಿ ದಕ್ಷಿಣ ಕೊರಿಯಾ ನಾಲ್ಕನೇಯ ಸ್ಥಾನವನ್ನು ಪಡೆದುಕೊಂಡಿದೆ.

3
ಭಾರತದಲ್ಲಿ ಪ್ರಪ್ರಥಮ ಭಾರಿಗೆ ಏರ್‌ಟೆಲ್ 4ಜಿ ಸೇವೆಯಲ್ಲಿ ದೇಶದ ಮಹಾನಗರಗಳಲ್ಲಿ ಆರಂಭಿಸಿದ್ದು, ಬೆಂಗಳೂರಿನಲ್ಲಿ ಸದ್ಯದಲ್ಲೇ 4ಜಿ ಸೇವೆಯನ್ನು ಆರಂಭಿಸಲಾಗುವುದು ಎಂದು 2013 ಡಿಸೆಂಬರ್‌ನಲ್ಲಿ ಏರ್‌ಟೆಲ್ ಹೇಳಿತ್ತು.

4
ಮುಕೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೊ ಸದ್ಯದಲ್ಲೇ ದೇಶದಲ್ಲಿ 4ಜಿ ಸೇವೆಯನ್ನು ಆರಂಭಿಸಲು ಯೋಜನೆ ರೂಪಿಸಿದೆ. ರಿಲಾಯನ್ಸ್ 4ಜಿಯಲ್ಲಿ ಬಳಕೆದಾರರಿಗೆ 49Mbps (ಮೆಗಾಬೈಟ್ ಪರ್‌ಸೆಕೆಂಡ್) ವೇಗದ ಇಂಟರನೆಟ್ ಸೌಲಭ್ಯವನ್ನು ನೀಡುವುದಾಗಿ ಹೇಳಿದೆ.

5
ಚೀನಾದ ಸಂಶೋಧಕರು ವೈಫೈ ಬದಲಿಗೆ ಇಂಟರ್‌ನೆಟ್‌ನ್ನು ಕಡಿಮೆ ದರದಲ್ಲಿ ಪಡೆಯುವ ಲಿಫೈ(Li-Fi) ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾರೆ.ಇಂಟರ್‌ನೆಟ್ ಸಿಗ್ನಲ್‌ಗಳನ್ನು ರೇಡಿಯೋ ಫ್ರಿಕ್ವೆನ್ಸಿ ಬದಲಾಗಿ ಲೈಟ್ ಬಲ್ಬ್‌ಗಳ ಮೂಲಕ ಸಿಗ್ನಲ್‌ನ್ನು ನಾಲ್ಕು ಕಂಪ್ಯೂಟರ್‌ಗಳಿಗೆ ಕಳುಹಿಸುವಲ್ಲಿ ಚೀನಾ ಸಂಶೋಧಕರು ಯಶಸ್ವಿಯಾಗಿದ್ದಾರೆ.


Click it and Unblock the Notifications








