ಹೆಚ್ಚು ದುಡ್ಡು ಕೊಟ್ಟವರಿಗೆ ವಾಪಸ್ ಮಾಡುತ್ತಿದೆ ಆಪಲ್ : ಯಾಕಾಗಿ..?

  ಆಪಲ್ ಐಫೋನ್ ಗಳು ಕಳೆದ ವರ್ಷ ಬ್ಯಾಟರಿ ವಿಚಾರವಾಗಿ ಹೆಡ್ ಲೈನ್ ಸುದ್ದಿಯಾಗಿದ್ದವು. ಬ್ಯಾಟರಿಗಳ ಕೆಟ್ಟ ಪ್ರದರ್ಶನದಿಂದಾಗಿ ಫೋನ್ ಪದೇ ಪದೇ ಹೇಳದೆಕೇಳದೆ ಸ್ವಿಚ್ ಆಫ್ ಆಗಿ ಬಿಡುತ್ತಿತ್ತು. ಈ ಸಮಸ್ಯೆಯನ್ನು ಪರೀಕ್ಷಿಸಿದವರಿಗೆ ನಿಮ್ಮ ಫೋನಿನ ಬ್ಯಾಟರಿ ಹಾಳಾಗಿದೆ ಹೊಸ ಬ್ಯಾಟರಿ ಹಾಕಿಸಿಕೊಳ್ಳಬೇಕು ಎಂಬ ಉತ್ತರ ಸಿಗುತ್ತಿತ್ತು. ಹಲವರು ಹೀಗೆ ಹಾಳಾದ ತಮ್ಮ ಬ್ಯಾಟರಿಯನ್ನು ಬದಲಾಯಿಸಿಕೊಂಡಿದ್ದರು. ಆದರೆ ಬ್ಯಾಟರಿಯ ಲೈಫ್ ಹೀಗೆ ಹಾಳಾಗಿರುವುದು ಆಪನ್ ಐಫೋನ್ ಗಳ ಬಗ್ಗೆ ಜನರಿಗೆ ಸಿಟ್ಟು ಬರುವಂತೆ ಮಾಡಿತ್ತು ಮತ್ತು ಚರ್ಚೆಗೆ ಗ್ರಾಸವಾಗಿತ್ತು.

  ಹೆಚ್ಚು ದುಡ್ಡು ಕೊಟ್ಟವರಿಗೆ ವಾಪಸ್ ಮಾಡುತ್ತಿದೆ ಆಪಲ್ : ಯಾಕಾಗಿ..?

  ಈ ಸುದ್ದಿ ಹರಡುತ್ತಿದ್ದಂತೆ, Cupertino ಆಧಾರಿತ ತಂತ್ರಜ್ಞಾನವನ್ನು ಒಳಗೊಂಡಿರುವ ಸಂಸ್ಥೆಯು ಕ್ಷಮೆಯಾಚಿಸಿತ್ತು ಮತ್ತು ಹಳೆಯ ಐಫೋನ್ ಗಳ ಬ್ಯಾಟರಿ ಬದಲಾವಣೆಯ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದ ಅನ್ವಯ ಕಂಪೆನಿಯು ಬ್ಯಾಟರಿ ಬದಲಾವಣೆಗೆ 5900 ರುಪಾಯಿ ಬೆಲೆಬಾಳುವ ಬ್ಯಾಟರಿಯನ್ನು ಕೇವಲ 3900 ರುಪಾಯಿಗೆ ಮಾರಾಟ ಮಾಡಿತ್ತು. ಸುಮಾರು 2000 ಮಂದಿಯ ಬ್ಯಾಟರಿ ಬದಲಾವಣೆಯ ಅಗತ್ಯವಿತ್ತು.

  ಆದರೆ ಆಪಲ್ ಈ ಆಫರ್ ನೀಡುವ ಮೊದಲೇ , ಹಲವಾರು ಬಳಕೆದಾರರು ತಮ್ಮ ಬ್ಯಾಟರಿಯನ್ನು ಪೂರ್ಣ ಹಣ ಅಂದರೆ 5900 ರುಪಾಯಿ ಪಾವತಿಸಿ ಅಧಿಕೃತ ಕೇಂದ್ರಗಳಲ್ಲಿ ಬದಲಾಯಿಸಿಕೊಂಡಾಗಿತ್ತು. ಹೀಗೆ ಬ್ಯಾಟರಿ ಬದಲಾಯಿಸಿಕೊಂಡವರಿಗೆ ಈಗ ತಮ್ಮ ಹಣವನ್ನು ವಾಪಾಸು ಪಡೆಯುವ ಸದವಕಾಶ ಬಂದಿದೆ. ನೀವೂ ಕೂಡ ಅವರಲ್ಲೊಬ್ಬರಾಗಿದ್ರೆ ನಿಮಗೆ 3900 ರುಪಾಯಿ ಮರುಪಾವತಿಯಾಗಲಿದೆ.

  ಆಪಲ್ ನ ವೆಬ್ ಸೈಟ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಖಾತರಿ ಇದ್ದರೂ ಕೂಡ ಹಾಳಾದ ಬ್ಯಾಟರಿಗಳನ್ನು ಯಾರು ಪೂರ್ಣ ಹಣ ಪಾವತಿಸಿ ಖರೀದಿಸಿದ್ದಾರೋ ಅಂತವರಿಗೆ 3900 ರುಪಾಯಿ ಮರುಪಾವತಿಸಲಾಗುವುದು ಎಂಬ ಮಾಹಿತ ನೀಡಿದ್ದಾರೆ. ಐಫೋನ್ 6 ಅಥವಾ ಅದರ ನಂತರ ಬಂದ ಎಲ್ಲಾ ಡಿವೈಸ್ ಗಳಿಗೂ ಇದು ಅನ್ವಯವಾಗಲಿದೆ. ಈ ಮರುಪಾವತಿಯು ಜನವರಿ1,2017 ರಿಂದ ಡಿಸೆಂಬರ್ 28,2017 ರ ವರೆಗೆ ಯಾರೆಲ್ಲ ಪೂರ್ಣ ಹಣ ಪಾವತಿಸಿ ಖರೀದಿಸಿದ್ದಾರೋ ಅವರಿಗೆ ಲಭ್ಯವಾಗಲಿದೆ. ಮತ್ತು ಯಾರಿಗೆ ಈ ಮರುಪಾವತಿ ಬೇಕೋ ಅವರು ಆಪಲ್ ಮಳಿಗೆಗಳಲ್ಲಿ,ಆಪಲ್ ನ ದುರಸ್ತಿ ಕೇಂದ್ರಗಳಲ್ಲಿ, ಮತ್ತು ಆಪಲ್ ನ ಅಧಿಕೃತ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.,

  3900 ರುಪಾಯಿ ಮರುಪಾವತಿಯನ್ನು ವಿದ್ಯುನ್ಮಾನ ಯಂತ್ರಗಳಿಂದ ಇಲ್ಲವೇ ಕ್ರೆಡಿಟ್ ಕಾರ್ಡ್ ಬಳಸಿದ್ದರೆ ನೇರವಾಗಿ ಆ ಖಾತೆಗೆ ಪಾವತಿಸಲಾಗುತ್ತೆ. ಯಾರು ಈ ಮರುಪಾವತಿಗೆ ಯೋಗ್ಯರಾಗಿದ್ದೀರೋ ಅವರು ಮೇ 28,2018ರಿಂದ ಜುಲೈ 27,2018 ರ ಒಳಗೆ ಆಪಲ್ ಸಂಸ್ಥೆಯನ್ನು ಈ ಮೇಲ್ ಮೂಲಕ ಸಂಪರ್ಕಿಸಿ, ಮರುಪಾವತಿ ಪಡೆಯಲು ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಮಾಹಿತಿ ಪಡೆಯಬಹುದು.

  ಮರುಪಾವತಿಗೆ ಯೋಗ್ಯರಾದವರು ಒಂದು ವೇಳೆ ಮರುಪಾವತಿ ಪಡೆಯದೆ ಇದ್ದಲ್ಲಿ ಡಿಸೆಂಬರ್ 21,2018 ರ ವರೆಗೂ ಕೂಡ ಆ ಬಗ್ಗೆ ಪರಿಶೀಲಿಸಿಕೊಳ್ಳಬಹುದು. ಆದರೆ ಅವರು ಆಪಲ್ ಕೇಂದ್ರಗಳಲ್ಲಿ ಇಲ್ಲವೇ ಆಪಲ್ ನ ಸೇವಾ ಕೇಂದ್ರಗಳಲ್ಲಿ ಪೂರ್ಣ ಹಣ ಪಾವತಿಸಿ ಬ್ಯಾಟರಿ ಖರೀದಿಸಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಒದಗಿಸಬೇಕಾಗುತ್ತದೆ.

  ಇದರ ಜೊತೆಗೆ ಆಪಲ್ WWDC ಸಮ್ಮೇಳನದಲ್ಲಿ ಹೊಸ ವರ್ಷನ್ ನ ಮೊಬೈಲ್ ಆಪರೇಟಿಂಗ ಸಿಸ್ಟಮ್ ನ್ನು ಬಿಡುಗಡೆಗೊಳಿಸುವ ಬಗ್ಗೆಯೂ ಮಾಹಿತಿ ನೀಡಿದೆ. ಅದಕ್ಕಾಗಿ ಆಮಂತ್ರಣವನ್ನೂ ಕಳುಹಿಸಿದ್ದು, McEnery ಕನ್ವೆಷನ್ ಸೆಂಟರ್, ಸಾನ್ ಜೋಸ್, ಕ್ಯಾಲಿಫೋರ್ನಿಯಾದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  7,499 ರೂಪಾಯಿಗೆ ಸಿಗಲಿದೆ ಐವೋಮಿ ಐ2 ಸ್ಮಾರ್ಟ್‌ಫೋನ್!

  Read more about:
  English summary
  who paid the original price for iPhone battery replacement, now get Rs 3,900 credit from Apple
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more