Just In
- 6 hrs ago
ಜಪಾನ್ನಲ್ಲಿ ಸಿದ್ದವಾಗ್ತಿದೆ 60 ಅಡಿ ಎತ್ತರದ ಗುಂಡಮ್ ರೋಬೋಟ್!..ಹೇಗಿದೆ ಗೊತ್ತಾ?
- 7 hrs ago
ವಾಟ್ಸಾಪ್ ಡೌನ್ಲೋಡ್ ಕಡ್ಡಾಯವಲ್ಲ!..ದೆಹಲಿ ಹೈಕೋರ್ಟ್ ಸ್ಪಷ್ಟನೆ!
- 9 hrs ago
ಭಾರತದಲ್ಲಿ ಒನ್ಪ್ಲಸ್ ಸಂಸ್ಥೆಯಿಂದ ಹೊಸ ಇಯರ್ಬಡ್ಸ್ ಲಾಂಚ್! ವಿಶೇಷತೆ ಏನು?
- 11 hrs ago
ವಾಟ್ಸಾಪ್ನಲ್ಲಿ ವಾಯ್ಸ್ ಕಾಲ್ಗಳನ್ನು ರೆಕಾರ್ಡ್ ಮಾಡುವುದು ಹೇಗೆ ಗೊತ್ತಾ?
Don't Miss
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- News
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Lifestyle
ಗಣರಾಜ್ಯೋತ್ಸವ ಪರೇಡ್ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಸ್ವಾತಿ ರಾಥೋಡ್
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆನ್‌ಲೈನ್ ಖರೀದಿಗೆ ಮೊಬೈಲ್‌ಗಿಂತ ಡೆಸ್ಕ್‌ಟಾಪ್ ಬೆಸ್ಟ್..!
ಸ್ಮಾರ್ಟ್‌ಫೋನ್‌ಗಳಿಗಿಂತ ಗ್ರಾಹಕರು ತಮ್ಮ ಡೆಸ್ಕ್‌ಟಾಪ್‌ಗಳನ್ನು ಬಳಸಿಕೊಂಡು ಉತ್ತಮವಾಗಿ ಶಾಪಿಂಗ್ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಅಧ್ಯಯನವು ಸ್ಕ್ರೀನ್‌ನ ಗಾತ್ರ ಮತ್ತು ಮಾಹಿತಿ ಕಡಿತದ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತದೆ,

ಸಮಸ್ಯೆ ಸ್ಕ್ರೀನ್ ಗಾತ್ರದಲ್ಲ..!
ವಾಸ್ತವವಾಗಿ ಸಮಸ್ಯೆಯು ಪರದೆಯ ಗಾತ್ರದ್ದಲ್ಲ, ಬದಲಾಗಿ ಮೊಬೈಲ್ ವೀಕ್ಷಣೆಗಾಗಿ ಹೊಂದಿಸಲಾದ ಸೈಟ್‌ಗಳು ಫಲಿತಾಂಶಗಳ ಪುಟದಲ್ಲಿ ನೀಡಲಾಗುವ ಮಾಹಿತಿಯನ್ನು ಕಡಿಮೆ ಮಾಡುತ್ತವೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಸೈಟ್‌ನಲ್ಲಿ ಹುಡುಕುವ ಅಗತ್ಯವಿರುತ್ತದೆ ಎಂದು ಇಸ್ರೇಲ್‌ನ ಬೆನ್-ಗುರಿಯನ್ ವಿಶ್ವವಿದ್ಯಾಲಯದ ಸಂಶೋಧಕ ಲಿಯರ್ ಫಿಂಕ್ ಹೇಳಿದ್ದಾರೆ.

ಪಿಸಿಯಲ್ಲಿ ಹೆಚ್ಚಿನ ಮಾಹಿತಿ
ಪಿಸಿ ವೀಕ್ಷಣೆಗಾಗಿ ಹೊಂದಿಸಲಾದ ಸೈಟ್‌ಗಳು ಹೆಚ್ಚಿನ ಮಾಹಿತಿಯನ್ನು ಗ್ರಾಹಕರಿಗೆ ನೀಡುತ್ತವೆ ಎಂದು ಫಿಂಕ್ ಹೇಳಿದ್ದಾರೆ. 2018 ರಲ್ಲಿ, ಅಡೋಬ್ ಅನಾಲಿಟಿಕ್ಸ್ ಪ್ರಕಾರ ಸ್ಮಾರ್ಟ್‌ಫೋನ್‌ನಿಂದ ಆನ್‌ಲೈನ್ ಶಾಪಿಂಗ್‌ಗೆ ಶೇ.47ರಷ್ಟು ಟ್ರಾಫಿಕ್ ದಾಖಲಾದರೂ, ಮಾರಾಟ ಮಾತ್ರ ಶೇ.36 ರಷ್ಟಿದೆ. ಹೆಚ್ಚಿನ ಇ-ಕಾಮರ್ಸ್ ಪೂರೈಕೆದಾರರು ಮಾಹಿತಿಯ ಪ್ರಸ್ತುತಿಯನ್ನು ಹೊಂದಿಸಲು ಸ್ಪಂದಿಸುವ ವೆಬ್ ವಿನ್ಯಾಸ ಬಳಸುತ್ತಾರೆ ಎಂದು ಫಿಂಕ್ ವಿವರಿಸಿದ್ದಾರೆ.

ಸರಳ ಪ್ರಸ್ತುತಿ ಅಗತ್ಯ
ಮೊಬೈಲ್ ಸ್ನೇಹಿ ಪ್ರಸ್ತುತಿಯು ವಿಸಿಬಿಲಿಟಿಯನ್ನು ಸುಧಾರಿಸುತ್ತದೆ, ಇದು ಮಾಹಿತಿಯ ಪ್ರಮಾಣ ಕಡಿಮೆ ಮಾಡಿ, ಗ್ರಾಹಕರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಕಡಿಮೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗುತ್ತದೆ. ಆದರೆ, ಶುದ್ಧ ನಿರ್ಧಾರ ತೆಗೆದುಕೊಳ್ಳುವ ದೃಷ್ಟಿಕೋನದಿಂದ, ಸಾಧನವನ್ನು ಲೆಕ್ಕಿಸದೆ ಅದೇ ಮಾಹಿತಿಯನ್ನು ಸರಳವಾಗಿ ಪ್ರಸ್ತುತಪಡಿಸುವುದು ಉತ್ತಮ ಎಂದು ಅಧ್ಯಯನವು ಸ್ಪಷ್ಟಪಡಿಸಿದೆ.

ಮೊಬೈಲ್ ಬಿಹೇವಿಯರ್ ಲ್ಯಾಬ್
ಮೊಬೈಲ್ ಸಾಧನಗಳಲ್ಲಿ ಮಾಹಿತಿಯನ್ನು ವೀಕ್ಷಿಸುವುದು ಗ್ರಾಹಕರಿಗೆ ಹೆಚ್ಚು ಕಷ್ಟಕರವೆಂದುಕೊಂಡಿದ್ದಾರೆ. ಆದರೆ, ಅವರ ಕೊಳ್ಳುವಿಕೆಯ ನಿರ್ಧಾರಗಳು ಹೆಚ್ಚು ನಿಖರವಾಗಿರುತ್ತವೆ. ಅಧ್ಯಯನಕ್ಕಾಗಿ, ಸಂಶೋಧಕರು 'ಮೊಬೈಲ್ ಬಿಹೇವಿಯರ್ ಲ್ಯಾಬ್'ನಲ್ಲಿ ಎರಡು ಪ್ರಯೋಗಗಳನ್ನು ನಡೆಸಿದ್ದು, 11 ಕೊಠಡಿಗಳಲ್ಲಿ ಕಾಲ್ಪನಿಕ ಹೋಟೆಲ್ ಕೋಣೆಯನ್ನು ಆಯ್ಕೆ ಮಾಡುವತ್ತ ಗ್ರಾಹಕರು ಗಮನಹರಿಸಿದ್ದಾರೆ.

ಪಿಸಿಯಲ್ಲಿ ಸುಲಭ
ಗ್ರಾಹಕರು ಮಾಹಿತಿಯನ್ನು ಪಿಸಿ ಅಥವಾ ಮೊಬೈಲ್‌ನಲ್ಲಿ ವೀಕ್ಷಿಸಿದರು. ಪಿಸಿಯಲ್ಲಿ ಪ್ರತಿ ಕೋಣೆಯ ಆಯ್ಕೆಯ ಬಗ್ಗೆ ಎಂಟು ವೈಶಿಷ್ಟ್ಯಗಳ ಮಾಹಿತಿಯನ್ನು ವೀಕ್ಷಿಸಿದರೆ, ಮೊಬೈಲ್‌ನಲ್ಲಿ ಕೇವಲ ಮೂರು ವೈಶಿಷ್ಟ್ಯಗಳ ಮಾಹಿತಿಯನ್ನು ಮಾತ್ರ ವೀಕ್ಷಿಸಿದ್ದಾರೆ. ಎರಡರಲ್ಲೂ ಎಲ್ಲಾ ಮಾಹಿತಿಗಳು ಲಭ್ಯವಿದ್ದರೂ, ಪಿಸಿಯಲ್ಲಿ ಸುಲಭವಾಗಿ ಲಭ್ಯವಿತ್ತು.

ಮಾಹಿತಿಯೇ ಆಧಾರ
ಎರಡೂ ಪರದೆಯ ಮೇಲೆ ಒಂದೇ ಮಾಹಿತಿಯನ್ನು ಪ್ರಸ್ತುತಪಡಿಸಿದಾಗ, ಅಷ್ಟೇ ನಿಖರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಪ್ರಯೋಗಗಳು ತೋರಿಸಿವೆ. ಇದರ ಪರಿಣಾಮವಾಗಿ, ಮೊಬೈಲ್ ಪ್ರದರ್ಶನದ ಪರಿಣಾಮವಾಗಿ ಕಡಿಮೆ ನಿಖರ ಮತ್ತು ಕಡಿಮೆ ಆದ್ಯತೆಗಳನ್ನು ತಮ್ಮ ಆದ್ಯತೆಗಳೊಂದಿಗೆ ತೆಗೆದುಕೊಂಡಿದ್ದಾರೆ ಎಂದು ಸಂಶೋಧನೆ ತೋರಿಸಿದೆ.

ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡನೆ
ಹೋಟೆಲ್ ಕೊಠಡಿ, ಹೊಸ ವಸ್ತು ಅಥವಾ ಹೊಸ ಟೆಲಿವಿಷನ್ ಆಯ್ಕೆ ಮಾಡುತ್ತಿರಲಿ, ಮೊಬೈಲ್ ಸ್ನೇಹಿ ಸ್ವರೂಪಕ್ಕಿಂತ ಹೆಚ್ಚಾಗಿ ಪಿಸಿ ಬಳಸುವ ಆದ್ಯತೆಗಳಿಗನುಗುಣವಾಗಿ ಶಾಪರ್‌ಗಳು ಹೆಚ್ಚು ನಿಖರವಾದ ಶಾಪಿಂಗ್ ಅನುಭವ ಹೊಂದಿರುತ್ತಾರೆ ಎಂದು ಸಂಶೋಧಕರು ನಂಬಿದ್ದಾರೆ. ಮುಂದಿನ ತಿಂಗಳು ಮಾಹಿತಿ ವ್ಯವಸ್ಥೆಗಳ ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಈ ಅಧ್ಯಯನ ಮಂಡಿಸಲು ನಿರ್ಧರಿಸಲಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190