2020 ರಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳ ಪಾತ್ರವೇನು?

|

ಪ್ರಸ್ತುತ ದಿನಗಳಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳು ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಅದರಲ್ಲೂ ಕೊರೊನಾ ವೈರಸ್‌ನ ಹಾವಳಿ ಶುರುವಾದ ನಂತರ ಈ ಅಪ್ಲಿಕೇಶನ್‌ಗಳು ಹೆಚ್ಚಿನ ಪ್ರಸಿದ್ದಿಯನ್ನು ಪಡೆದುಕೊಂಡಿವೆ. ಅಷ್ಟೇ ಅಲ್ಲ ಹೊಸ ಮಾದರಿಯ ಅಪ್ಲಿಕೇಶನ್‌ಗಳು ಕೂಡ ಮಾರುಕಟ್ಟೆಗೆ ಎಂಟ್ರಿ ಕೊಟ್ಟು ಗ್ರಾಹಕರನ್ನು ಸೆಳೆದಿದ್ದು ನಿಮಗೆಲ್ಲಾ ತಿಳಿದೆ ಇದೆ. ಸದ್ಯ ವೀಡಿಯೋ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌ಗಳ ಮೂಲಕ ಮಿಟಿಂಗ್ಸ್‌, ಸೆಮಿನಾರ್‌ಗಳು ಅಥವಾ ತರಗತಿಗಳನ್ನು ನಡೆಸಲು ಪ್ರತಿಯೊಂದು ಉದ್ಯಮದ ಬೆನ್ನೆಲುಬಾಗಿ ಮಾರ್ಪಟ್ಟಿವೆ.

ಭಾರತ

ಹೌದು, ಜಾಗತಿಕವಾಗಿ ಮಾತ್ರವಲ್ಲದೆ ಭಾರತದಲ್ಲಿ ಮಾರಣಾಂತಿಕ ವೈರಸ್ ಶುರುವಾದ ನಂತರ, ಕೊರೊನಾ ಹಾವಳಿಯನ್ನು ಮೆಟ್ಟಿ ನಿಲ್ಲುವುದಕ್ಕೆ ಸರ್ಕಾರವು ಲಾಕ್ ಡೌನ್ ಅವಧಿಯನ್ನು ಘೋಷಿಸಿದ್ದರಿಂದ, ಮನೆಯಿಂದಲೇ ಕೆಲಸ ಮಾಡುವುದು ಸಾಮಾನ್ಯವಾಯಿತು. ಪ್ರತಿಯೊಂದು ಕಾರ್ಪೊರೇಟ್ ಸಂಸ್ಥೆಯು ಸಂಪೂರ್ಣ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸವನ್ನು ಘೋಷಿಸಿದ್ದು ಉಂಟು. ಸದ್ಯ ಕೋವಿಡ್ -19 ನಂತರ ಗ್ರಾಹಕರ ವಿಭಿನ್ನ ಅಗತ್ಯಗಳನ್ನು ಪೂರೈಸಲು ವಿವಿಧ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳ ಬೆಳವಣಿಗೆಗೆ ಕಾರಣವಾಗಿದೆ. ಸದ್ಯ ಕೊರೊನಾ ಸಮಯದಲ್ಲಿ ಜನಪ್ರಿಯತೆ ಪಡೆದುಕೊಂಡ ವೀಡಿಯೊ ಕಾನ್ಫರೆನ್ಸಿಂಗ್‌ ಆಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕೊರೊನಾ

ಇಡೀ ದೇಶವೇ ಕೊರೊನಾ ವೈರಸ್‌ನ ಹಾವಳಿಯಿಂದಾಗಿ ಲಾಕ್‌ಡೌನ್‌ ಆಗಿ ಎಲ್ಲವೂ ಬಂದ್‌ ಆದಾಗ, ಉದ್ಯೋಗಿಗಳ ನೆರವಿಗೆ ಬಂದಿದ್ದು ಇದೇ ವೀಡಿಯೊ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌ಗಳು. ಒಂದರ್ಥದಲ್ಲಿ ಕೊರೊನಾ ನಂತರ ಎಲ್ಲರ ಸಂಪರ್ಕವನ್ನ ಸಾಧ್ಯವಾಗಿಸಿದ್ದೆ ವೀಡಿಯೊ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌ಗಳು. ಇನ್ನು ಲಾಕ್‌ಡೌನ್‌ ಸಮಯದಲ್ಲಿ ದೇಶದಲ್ಲಿ ಐಟಿಬಿಟಿ ಕಂಪೆನಿಗಳು ಮಾತ್ರವಲ್ಲದೆ ಕೆಲವು ಅಗತ್ಯ ಉದ್ದಿಮೆಗಳು ತಮ್ಮ ಸಿಬ್ಬಂದಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವುದಕ್ಕೆ ಸೂಚನೆ ನೀಡಿದ್ದವು. ಅಲ್ಲದೆ ಸಂಸ್ಥೆಯ ಉದ್ಯೋಗಿಗಳ ಜೊತೆಗೆ ಹಂತಹಂತವಾಗಿ ಸಂಪರ್ಕ ಸಾಧಿಸುವುದಕ್ಕಾಗಿ ವೀಡಿಯೋ ಕಾನ್ಫರೆನ್ಸಿಂಗ್‌ ಆಪ್‌ಗಳ ಮೊರೆ ಹೋದವು. ಇಂತಹ ಸಮಯದಲ್ಲಿಯೇ ಮಾರುಕಟ್ಟೆಗೆ ಜೂಮ್‌, ಗೂಗಲ್‌ ಮೀಟ್‌, ಜಿಯೋಮೀಟ್‌ ನಂತಹ ಅಪ್ಲಿಕೇಶನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿ ಎಲ್ಲರ ಗಮನ ಸೆಳೆದಿದ್ದು ಗೊತ್ತೆ ಇದೆ.

ಜೂಮ್‌ ಅಪ್ಲಿಕೇಶನ್‌

ಜೂಮ್‌ ಅಪ್ಲಿಕೇಶನ್‌

ಕೊರೊನಾ ವೈರಸ್‌ ಅನ್ನು ಎದುರಿಸಲು ಲಾಕ್ ಡೌನ್ ಅವಧಿಯನ್ನು ಸರ್ಕಾರ ಘೋಷಿಸಿದಾಗ ಜೂಮ್ ಅಪ್ಲಿಕೇಶನ್ ಹೆಚ್ಚು ಬೆಳಕಿಗೆ ಬಂದಿತು. ಜೂಮ್ ಅಪ್ಲಿಕೇಶನ್ ಅನ್ನು ಉದ್ಯಮಗಳು ಮತ್ತು ವ್ಯಕ್ತಿಗಳು ವೈಯಕ್ತಿಕ ಮತ್ತು ಸಾಂಸ್ಥಿಕ ಸಭೆಗಳಿಗೆ ವ್ಯಾಪಕವಾಗಿ ಬಳಸುತ್ತಿದ್ದಾರೆ. ಇನ್ನು ಈ ಅಪ್ಲಿಕೇಶನ್ ಅನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದು ಏಕಕಾಲದಲ್ಲಿ 100 ಜನ ಭಾಗವಹಿಸುವುದಕ್ಕೆ ಜೂಮ್ ಬೆಂಬಲಿಸುತ್ತದೆ. ಪ್ರಾರಂಭದಲ್ಲಿ ಈ ಅಪ್ಲಿಕೇಶನ್ ತನ್ನ ಬಳಕೆದಾರರ ಖಾಸಗಿ ಡೇಟಾವನ್ನು ಸೋರಿಕೆ ಮಾಡುತ್ತಿದೆ ಎಂದು ಹೇಳಲಾಗಿತ್ತಲ್ಲದೆ. ಭಾರತ ಸರ್ಕಾರ ಕೂಡ ಜೂಮ್ ಬಳಕೆದಾರರಿಗೆ ಸುರಕ್ಷಿತ ವೇದಿಕೆಯಲ್ಲ ಎಂದು ಹೇಳಿದೆ. ಆದಾಗ್ಯೂ, ಈ ಅಪ್ಲಿಕೇಶನ್ ಅನ್ನು ಭಾರತದ ಪ್ರಮುಖ ಬಳಕೆದಾರರು ಬಳಸುತ್ತಿದ್ದಾರೆ.

ಜಿಯೋಮೀಟ್ ಅಪ್ಲಿಕೇಶನ್

ಜಿಯೋಮೀಟ್ ಅಪ್ಲಿಕೇಶನ್

ಇನ್ನು ಜೂಮ್‌ ಅಪ್ಲಿಕೇಶನ್ ಬಳಕೆದಾರರಿಗೆ ಸುರಕ್ಷಿತವಲ್ಲ ಎಂಬ ಸುದ್ದಿ ಹೊರಬಿದ್ದ ತಕ್ಷಣ, ರಿಲಯನ್ಸ್ ಜಿಯೋ ತನ್ನದೇ ಆದ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಜಿಯೋಮೀಟ್ ಅನ್ನು ಶುರುಮಾಡಿತು. ಜೂಮ್‌ ಅಪ್ಲಿಕೇಶನ್‌ ಹೊಂದಿದ್ದ ಮಾರುಕಟ್ಟೆ ಜನಪ್ರಿಯತೆಯನ್ನು ತನ್ನತ್ತ ಸೆಳೆಯಲು ಮುಂದಾಗಿತ್ತು. ಆದಾಗ್ಯೂ, ವೀಡಿಯೊ ಕಾನ್ಫರೆನ್ಸಿಂಗ್ ವಿಭಾಗದಲ್ಲಿ ರಿಲಯನ್ಸ್ ಜಿಯೋ ಹೊಸತಲ್ಲ. ಈ ಮೊದಲು, ಇದು ಜಿಯೋಚಾಟ್ ಅಪ್ಲಿಕೇಶನ್ ಅನ್ನು ಪರಿಚಯಿಸಿತು, ಇದು ಬಳಕೆದಾರರಿಗೆ ವೀಡಿಯೊ ಕರೆ ವೈಶಿಷ್ಟ್ಯಗಳನ್ನು ಅನುಮತಿಸುತ್ತದೆ. ಈಗ ಜಿಯೋಮೀಟ್ ಅಪ್ಲಿಕೇಶನ್ ಅನ್ನು ವಿಶೇಷವಾಗಿ ಸವಾಲಿನ ಸಮಯದಲ್ಲಿ ಬಳಕೆದಾರರ ವೀಡಿಯೊ ಕರೆ ಅಗತ್ಯವನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಸದ್ಯ ಜಿಯೋಮೀಟ್ ಅಪ್ಲಿಕೇಶನ್ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ, ಮತ್ತು ಇದು ಎಲ್ಲಾ ಸಾಧನಗಳಲ್ಲಿ ಎಚ್‌ಡಿ ವಿಡಿಯೋ ಕಾನ್ಫರೆನ್ಸಿಂಗ್ ಅನ್ನು ಅನುಮತಿಸುತ್ತದೆ.

ಗೂಗಲ್‌ ಮೀಟ್‌

ಗೂಗಲ್‌ ಮೀಟ್‌

ಕೊರೊನಾ ಲಾಕ್‌ಡೌನ್‌ ಪರಿಣಾಮದಿಂದಾಗಿ ಬಹುತೇಕ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಗೆ ರೂಢಿ ಆಗಿದ್ದು, ವಿಡಿಯೊ ಕಾಲಿಂಗ್ ಆಪ್‌ಗಳ ಬೇಡಿಕೆ ಹೆಚ್ಚಿಸಿದೆ. ಆ ಪೈಕಿ ಜೂಮ್‌ ಅಪ್ಲಿಕೇಶನ್ ಹೆಚ್ಚು ಟ್ರೆಂಡ್‌ ಹುಟ್ಟುಹಾಕಿತ್ತು, ಇದಕ್ಕೆ ನೇರವಾಗಿ ಪೈಪೋಟಿ ನೀಡುವಲ್ಲಿ ಗೂಗಲ್ ಮೀಟ್ ಆಪ್‌ ಕೂಡ ಬಳಕೆದಾರರ ಗಮನ ಸೆಳೆದಿದೆ. ಸಾಕಷ್ಟು ಅಪ್‌ಡೇಟ್ ಕಂಡಿರುವ ಗೂಗಲ್‌ ಮೀಟ್‌ ಅಪ್ಲಿಕೇಶನ್ ಬಳಕೆದಾರರನ್ನು ಆಕರ್ಷಿಸಿದೆ. ಅಲ್ಲದೆ ಟೆಕ್ ದೈತ್ಯ ಗೂಗಲ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಜಿ-ಮೇಲ್ ಅಪ್ಲಿಕೇಶನ್‌ಗೆ 'ಮೀಟ್' ಆಯ್ಕೆಯನ್ನು ಸೇರಿಸಿದೆ. ಇತರ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗಳಾದ ಜೂಮ್, ಮೈಕ್ರೋಸಾಫ್ಟ್‌, ಸ್ಕೈಪ್‌ ನಂತಹ ಆಪ್ಸ್‌ಗಳಿಗೆ ಪೈಪೋಟಿ ನೀಡುವ ಫೀಚರ್ಸ್‌ಗಳನ್ನು ಹೊಂದಿದೆ.

ಬ್ಲೂಜೀನ್ಸ್ ಅಪ್ಲಿಕೇಶನ್

ಬ್ಲೂಜೀನ್ಸ್ ಅಪ್ಲಿಕೇಶನ್

ಜಿಯೋಮೀಟ್, ಜೂಮ್ ಮತ್ತು ಇತರ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳು ವ್ಯಾಪಕವಾಗಿ ಬೆಳೆಯುತ್ತಿರುವುದರಿಂದ, ಏರ್‌ಟೆಲ್ ಸಹ ಸ್ಪರ್ಧೆಗೆ ಎಂಟ್ರಿ ನೀಡಿ ತನ್ನದೇ ಆದ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಬ್ಲೂಜೀನ್ಸ್ ಅನ್ನು ಪ್ರಾರಂಭಿಸಿತು. ಅಪ್ಲಿಕೇಶನ್‌ಗಾಗಿ, ಏರ್‌ಟೆಲ್ ಯುಎಸ್ ಮೂಲದ ವೆರಿಜೋನ್ ಒಡೆತನದ ಬ್ಲೂಜೀನ್ಸ್ ಜೊತೆ ಪಾಲುದಾರಿಕೆ ಹೊಂದಿದ್ದು, ಭಾರತದಲ್ಲಿ ತನ್ನ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಬ್ಲೂಜೀನ್ಸ್ ಅಪ್ಲಿಕೇಶನ್ ಉನ್ನತ ದರ್ಜೆಯ ಭದ್ರತಾ ಫೀಚರ್ಸ್‌ಗಳನ್ನು ಹೊಂದಿದ್ದು, ಇದನ್ನು ಬ್ರೌಸರ್‌ಗಳ ಮೂಲಕ ಪ್ರವೇಶಿಸಬಹುದಾಗಿದೆ.

ವೀಡಿಯೊ

ಹೀಗೆ ಹಲವು ಮಾದರಿಯ ವೀಡಿಯೊ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುವ ಮೂಲಕ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿವೆ. ಕೊರೊನಾ ವೈರಸ್‌ ಸೃಷ್ಟಿಸಿದ ಅನಿವಾರ್ಯತೆಯನ್ನೇ ಮೆಟ್ಟಿಲು ಮಾಡಿಕೊಂಡ ಈ ಅಪ್ಲಿಕೇಶನ್‌ಗಳು ಇಂದು ಬಹುದೊಡ್ಡ ಜನಪ್ರಿಯತೆಯನ್ನು ಸಾಧಿಸಿವೆ. ಸದ್ಯ ಜಗತ್ತಿನಲ್ಲಿ ಇನ್ನು ಕೂಡ ಕೊರೊನಾ ಹಾವಳಿ ಕೊನೆಯಾಗಿಲ್ಲ, ಇದೇ ಕಾರಣಕ್ಕೆ 2020ರಲ್ಲಿ ವೀಡಿಯೊ ಕಾನ್ಫರೆನ್ಸಿಂಗ್‌ ಅಪ್ಲಿಕೇಶನ್‌ಗಳು ಕೇವಲ ಜನಪ್ರಿಯತೆ ಮಾತ್ರವಲ್ಲದೆ ಅನಿವಾರ್ಯತೆಗೆ ತಕ್ಕಂತೆ ಜನರಿಗೆ ಉಪಯುಕ್ತವಾಗಿವೆ.

Best Mobiles in India

English summary
video conferencing apps are more populared in 2020.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X