ಭಾರತದಲ್ಲಿ 5ನೇ ಮಿ ಹೋಮ್ ತೆರೆದ ಶಿಯೋಮಿ..!

Written By: Lekhaka

ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಮೊದಲ ಬಾರಿಗೆ ಮಿ ಹೋಮ್ ಅನ್ನು ಬೆಂಗಳೂರಿನಲ್ಲಿ ತೆರೆದಿತ್ತು, ಇದಾದ ನಂತರದಲ್ಲಿ ಡೆಲ್ಲಿ, ಗುರಗ್ರಾಮ ಮತ್ತು ಚನ್ನೈನಲ್ಲಿಯೂ ಮಿ ಹೋಮ್ ಗಳನ್ನು ಓಪನ್ ಮಾಡಿತ್ತು.

ಭಾರತದಲ್ಲಿ 5ನೇ ಮಿ ಹೋಮ್ ತೆರೆದ ಶಿಯೋಮಿ..!

ಈಗಾಗಲೇ ದೇಶಲ್ಲಿ ಒಟ್ಟು 100 ಮಿ ಹೋಮ್ ಗಳನ್ನು ಓಪನ್ ಮಾಡುವುದಾಗಿ ತಿಳಿಸಿದ್ದ ಶಿಯೋಮಿ ಈಗಾಗಲೇ ಇದನ್ನು ಹಂತ ಹಂತವಾಗಿ ಪೂರೈಸುತ್ತಿದೆ. ಈಗಾಗಲೇ ಲಕ್ಷಾಂತರ ಮಂದಿಗೆ ಮಿ ಹೋಮ್ ಮೂಲಕವೇ ಸಾವಿರಾರು ಹಾಂಡ್ ಸೆಟ್ ಗಳನ್ನು ತಲುಪಿಸಿದೆ.

ಈಗ ಶಿಯೋಮಿ ಮುತ್ತಿನ ನಗರ ಹೈದ್ರಾಬಾದ್ ನಲ್ಲಿ ತನ್ನ 5ನೇ ಮಿ ಹೋಮ್ ಮಳಿಗೆಯನ್ನು ಉದ್ಘಾಟಿಸಲು ಮುಂದಾಗಿದೆ. ಮಾದಾಪುರ್ ಮೈನ್ ರೋಡ್ ನಲ್ಲಿ ಮಿ ಹೋಹ್ ಓಪನ್ ಆಗಲಿದೆ. ಇದು ಕಂಪನಿಯ 5ನೇ ಅಧಿಕೃತ ಮಿ ಹೋಮ್ ಮಳಿಗೆಯಾಗಲಿದೆ.

ದರಸಮರ ಎಫೆಕ್ಟ್..ಆಫರ್‌ಗಳನ್ನು ಚೇಂಜ್ ಮಾಡಿದ ಜಿಯೋ!..ಇಲ್ಲಿದೆ ಡಿಟೇಲ್ಸ್!!

ಸೆಪ್ಟೆಂಬರ್ 12ರಿಂದ ಈ ಮಳಿಗೆಯೂ ಅಧಿಕೃತವಾಗಿ ಕಾರ್ಯಚಟುವಟಿಕೆಯನ್ನು ಆರಂಭಿಸಲಿದೆ. ಇಷ್ಟು ದಿನ ಆನ್ ಲೈನ್ ಮಾರುಕಟ್ಟೆಯನ್ನು ಅಲಂಬಿಸಿದ್ಧ ಕಂಪನಿಯೂ ಈ ಬಾರಿ ಆಫ್ ಲೈನ್ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದು, ತನ್ನ ನೂತನ ಫೋನ್ ಗಳಲ್ಲಿ ಆಫ್ ಲೈನ್ ಮಾರುಕಟ್ಟೆಗೂ ಬಿಡುಗಡೆ ಮಾಡುತ್ತಿದೆ.

ಈಗಾಗಲೇ ಭಾರತದ 11 ನಗರಗಳಲ್ಲಿ 600ಕ್ಕೂ ಹೆಚ್ಚು ರೀಟೆಲ್ ಶಾಪ್ ಗಳಲ್ಲಿ ಶಿಯೋಮಿಯ ಮೊಬೈಲ್ ಗಳು ಲಾಂಚ್ ಆದ ದಿನವೇ ದೊರೆಯುತ್ತಿದೆ ಎನ್ನಲಾಗಿದೆ.

Read more about:
English summary
Xiaomi has now chosen Hyderabad as the ideal destination to open a new Mi Home Store.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot