Subscribe to Gizbot

ಸ್ಮಾರ್ಟ್‌TV ನಂತರ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ ಸೈಕಲ್ ಮತ್ತು ಸ್ಕೂಟರ್ ಬಿಡಲಿದೆ ಶಿಯೋಮಿ..!

Written By:

ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಹವಾ ಎಬ್ಬಿಸಿರುವ ಶಿಯೋಮಿ, ಭಾರತೀಯರಿಗೆ ಬಜೆಟ್ ಬೆಲೆಯಲ್ಲಿ ಒಳ್ಳೆಯ ಸ್ಮಾರ್ಟ್‌ಫೋನ್‌ಗಳನ್ನು ನೀಡಿ ಅವರ ಮೆಚ್ಚುಗೆಯನ್ನುಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಮತ್ತಷ್ಟು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು, ಸ್ಮಾರ್ಟ್‌ ಬೈಕ್‌ಗಳನ್ನು ಮತ್ತು ಸ್ಮಾರ್ಟ್ ಸೈಕಲ್‌ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಈ ಮೂಲಕ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ತನ್ನ ಸ್ಪರ್ಧಿಗಳಿಗೆ ಟಕ್ಕರ್ ನೀಡಲು ಮುಂದಾಗಿದೆ.

ಸ್ಮಾರ್ಟ್‌TV ನಂತರ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ ಸೈಕಲ್ ಮತ್ತು ಸ್ಕೂಟರ್..!

ಈಗಾಗಲೇ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಅನ್ನ ಲಾಂಚ್ ಮಾಡಿರುವ ಶಿಯೋಮಿ, ಈ ಬಾರಿ MiTV 4 ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಈಗ ಒಟ್ಟು ಆರು ಸ್ಮಾರ್ಟ್‌ಫೋನ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡಗಡೆ ಮಾಡಲು ಶಿಯೋಮಿ ಯೋಜನೆ ರೂಪಿಸಿದೆ. ಜೊತೆಗೆ ಸ್ಮಾರ್ಟ್ ವಸ್ತುಗಳನ್ನು ಪರಿಚಯ ಮಾಡುವ ಮೂಲಕ ಹೊಸ ಅಲೆಯನ್ನು ಎಬ್ಬಿಸಲಿದೆ ಎನ್ನುವ ಮಾಹಿತಿ ಯನ್ನು ಭಾರತದಲ್ಲಿ Mi ಮುಖ್ಯಸ್ಥರಾಗಿರುವ ಮನುಕುಮಾರ್ ಜೈನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆರು ಸ್ಮಾರ್ಟ್‌ಫೋನ್:

ಆರು ಸ್ಮಾರ್ಟ್‌ಫೋನ್:

ಶಿಯೋಮಿ ಒಟ್ಟು ಆರು ಸ್ಮಾರ್ಟ್‌ಫೋನ್‌ಗಳನ್ನು ಈ ವರ್ಷದಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಹಾಗೂ ಮಧ್ಯಮ ಸರಣಿಯಲ್ಲಿ ಹಾಗೂ ಟಾಪ್ ಎಂಡ್ ಫೋನ್ ಗಳ ಸರಣಿಯಲ್ಲಿ ಕಾಣಿಸಿಕೊಳ್ಳಲಿದೆ.

ಸ್ಮಾರ್ಟ್‌ ಸ್ಕೂಟರ್:

ಸ್ಮಾರ್ಟ್‌ ಸ್ಕೂಟರ್:

ಇದಲ್ಲದೇ ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಸ್ಕೂಟರ್ ಗಳನ್ನು ಲಾಂಚ್ ಮಾಡಲು ಶಿಯೋಮಿ ಮುಂದಾಗಲಿದ್ದು, ಇದಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸುತ್ತಿದೆ. ಎಲ್ಲಾ ಸ್ಮಾರ್ಟ್‌ ಉದ್ಯಮದ ಮೇಲೆಯೂ ತನ್ನ ಪ್ರಭಾವನ್ನು ಬೀರಲು ಮುಂದಾಗಿದೆ.

ಸ್ಮಾರ್ಟ್‌ ಸೈಕಲ್:

ಸ್ಮಾರ್ಟ್‌ ಸೈಕಲ್:

ಇದಲ್ಲದೇ ದೇಶದಲ್ಲಿ ಸೈಕಲ್ ಬಳಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ಮಾರ್ಟ್‌ ಸೈಕಲ್ ಅನ್ನು ಪರಿಚಯಿಸಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಸೈಕಲ್ ಬಜೆಟ್ ಬೆಲೆಯಲ್ಲಿ ಕಾಣಿಸಿಕೊಳ್ಳಲಿದ್ದು, ಸಾಮಾನ್ಯರು ಬಳಕೆ ಮಾಡಿಕೊಳ್ಳುವಂತೆ ಇರಲಿದೆ.

100 ಮಿ ಸ್ಟೋರ್:

100 ಮಿ ಸ್ಟೋರ್:

ಈಗಾಗಲೇ ಆಫ್ ಲೈನ್ ಮಾರುಕಟ್ಟೆಯನ್ನು ಟಾರ್ಗೆಟ್ ಮಾಡಿರುವ ಶಿಯೋಮಿ. ಇದಕ್ಕಾಗಿ ದೇಶದ ವಿವಿಧ ನಗರಗಳಲ್ಲಿ ಒಟ್ಟು 100 ಮಿ ಹೋಮ್ ಗಳನ್ನು ತೆರೆಯಲಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ತಲುಪಿಸಲಿದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಸ್ಟಾರ್ಟಪ್‌ಗಳ ಮೇಲೆ ಹೂಡಿಕೆ:

ಸ್ಟಾರ್ಟಪ್‌ಗಳ ಮೇಲೆ ಹೂಡಿಕೆ:

ಇದಲ್ಲದೇ ದೇಶಿಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಹೊಂದುವ ಪ್ಲಾನ್ ಮಾಡಿರುವ ಶಿಯೋಮಿ, ದೇಶದಲ್ಲಿ ಹೆಚ್ಚಿನ ಪ್ರಮಾಣ ಉದ್ಯಮವಾಗುತ್ತಿರುವ ಸ್ಟಾರ್ಟಪ್‌ಗಳ ಮೇಲೆ ಹೂಡಿಕೆಯನ್ನು ಮಾಡಲು ಶಿಯೋಮಿ ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi to launch six new smartphone models in India this year. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot