Just In
- 47 min ago
ಇನ್ಸ್ಟಾಗ್ರಾಮ್ ಬಳಕೆದಾರರೇ ಗಮನಿಸಿ...ಇನ್ಮುಂದೆ ಈ ಸೇವೆಗೆ ಶುಲ್ಕ ಪಾವತಿ ಮಾಡಬೇಕು!?
- 3 hrs ago
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- 14 hrs ago
Oppo Reno 8T 5G : ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 17 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
Don't Miss
- News
ರಾಯಚೂರಿನ ಯುವಕನ ಸಾಧನೆಗೆ ನರೇಗಾ ನೆರವು: ವರ್ಷಕ್ಕೆ ₹10 ಲಕ್ಷ ಆದಾಯ
- Automobiles
Xiaomi ಮೊದಲ ಎಲೆಕ್ಟ್ರಿಕ್ ಕಾರು: ಫುಲ್ ಚಾರ್ಜ್ನಲ್ಲಿ 1000 KM ಓಡಲಿದೆ.. ಫೋಟೋ ಲೀಕ್
- Lifestyle
ಸಂಧಿವಾತ ಮತ್ತು ಉರಿಯೂತಕ್ಕೆ ಈ ಆಯುರ್ವೇದ ಮದ್ದುಗಳು ಪರಿಣಾಮಕಾರಿ
- Sports
ಈ ಇಬ್ಬರಲ್ಲಿ ಈತ ಮಾತ್ರ ಮುಂದಿನ ಟಿ20 ವಿಶ್ವಕಪ್ ಆಡುತ್ತಾನೆ; ವಾಸಿಂ ಜಾಫರ್ ಭವಿಷ್ಯ
- Movies
ಯುವ ರಾಜ್ಕುಮಾರ್ ಭೇಟಿ ಮಾಡಿ ಪಠಾಣ್ ಸಕ್ಸಸ್ ಆಚರಿಸಿದ ಶಾರುಖ್ ಫ್ಯಾನ್ಸ್; ಪಠಾಣ್ ನೋಡಿದ್ರಾ ಯುವ?
- Finance
Milk Price: ಅಮುಲ್ ಬಳಿಕ ಈ ಬ್ರ್ಯಾಂಡ್ ಹಾಲಿನ ದರ 3 ರೂಪಾಯಿ ಏರಿಕೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಂದು ಕಾಲದ ದಿಗ್ಗಜ ಕಂಪೆನಿ 'ಯಾಹೂ'ವಿನ ಇಂದಿನ ಕರುಣಾಜನಕ ಕಥೆ!
ಒಂದು ಕಾಲದಲ್ಲಿ ದಿಗ್ಗಜ ಕಂಪೆನಿಯಾಗಿ ಬೆಳೆದ ಕಂಪೆನಿಯೊಂದು ದಿವಾಳಿಯಾಗುವ ಹಂತಕ್ಕೆ ಬರುತ್ತದೆ ಎಂದು ಯಾರೂ ಕೂಡ ಊಹಿಸಿರುವುದಿಲ್ಲ. ಆದರೆ, ವಿಧಿಯಾಟಕ್ಕೆ ಸಿಲುಕಿದರೆ ಒಂದು ಬೃಹತ್ ಕಂಪೆನಿ ಹೇಗೆಲ್ಲಾ ದಿವಾಳಿಯಾಗಬಹುದು ಎಂಬುದಕ್ಕೆ ದಶಕಗಳ ಹಿಂದೆ ಇಂಟರ್‌ನೆಟ್‌ನ ಇನ್ನೊಂದು ಹೆಸರೇ ಆಗಿದ್ದ 'ಯಾಹೂ' ಒಂದು ಉದಾಹರಣೆ.
ಹೌದು, ಕೇವಲ ಎರಡು ದಶಕಗಳ ಹಿಂದೆ ಇಂಟರ್‌ನೆಟ್‌ನ ಇನ್ನೊಂದು ಹೆಸರೇ ಆಗಿದ್ದ ಯಾಹೂ ಇಂದು ಅವಸಾನದಂಚಿನಲ್ಲಿರುವ ಬೃಹತ್ ಕಂಪೆನಿಯಾಗಿದೆ. 90ರ ದಶಕದ ಅಂತ್ಯದಲ್ಲಿ ಮತ್ತು 2000ರ ಪ್ರಾರಂಭದಲ್ಲಿ ಇ-ಮೇಲ್ ಉಪಯೋಗಿಸಲಾರಂಭಿಸಿದ ಬಹುತೇಕರು ತಮ್ಮ ಪ್ರಥಮ ಇ-ಮೇಲ್ ಖಾತೆ ತೆರೆದಿದ್ದ ಯಾಹೂ ಈಗ ಬಳಕೆದಾರರಿಲ್ಲದೆ ಕೊರಗಿದೆ.

ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣಗಳಾಗಿದ್ದ ಯಾಹೂವಿನ ಚಾಟ್ ರೂಮ್ ಮತ್ತು ಯಾಹೂ ಮೆಸೆಂಜರ್ ಸಹ ನೆಲ ಕಚ್ಚಿವೆ. ಇಂಟರ್‌ನೆಟ್‌ನ ಜಗತ್ತಿನ ಪ್ರವೇಶ ದ್ವಾರವಾಗಿದ್ದ ಯಾಹೂ ಈಗ ವಿಫಲವಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಬಹು ಯಶಸ್ವಿ ಕಂಪೆನಿಯೊಂದು ಹೇಗೆಲ್ಲಾ ನೆಲಕಚ್ಚಿತು ಎಂಬುದರ ಕರುಣಾಜನಕ ಕಥೆ ನೀಡಲಾಗಿದೆ.!

1994ರಲ್ಲಿ ಹುಟ್ಟಿದ್ದು ಯಾಹೂ
ಆಗಿನ್ನು ಇಂಟರ್‌ನೆಟ್ ಆರಂಭದ ಕಾಲದಲ್ಲಿ ಡೇವಿಡ್ ಫಿಲೋ ಮತ್ತು ಜರ್ರಿ ಯಾಂಗರಿಂದ 1994ರಲ್ಲಿ ಸ್ಥಾಪಿತವಾದ ಯಾಹೂ, ಕೆಲವೇ ವರ್ಷಗಳಲ್ಲಿ ಅಂತರ್ಜಾಲ ಲೋಕದ ಅತ್ಯಂತ ದೈತ್ಯ ಕಂಪೆನಿಯಾಗಿ ಬೆಳೆದಿತ್ತು. ಆಗ ಅಂತರ್ಜಾಲ ಬಳಕೆದಾರರ ಹೋಮ್ಪೇಜ್ ಕೂಡ ಯಾಹೂವಿನದೇ ಆಗಿರುತ್ತಿತ್ತು. ಅಂದರೆ, ಇಂಟರ್‌ನೆಟ್‌ನ ಜಗತ್ತಿನ ಪ್ರವೇಶ ದ್ವಾರ ಯಾಹೂ ಆಗಿತ್ತು.

ಪ್ರಥಮ ಇ-ಮೇಲ್ ಖಾತೆ?
90ರ ದಶಕದ ಅಂತ್ಯದಲ್ಲಿ ಮತ್ತು 2000ರ ಪ್ರಾರಂಭದಲ್ಲಿ ಇ-ಮೇಲ್ ಉಪಯೋಗಿಸಲಾರಂಭಿಸಿದ ಬಹು ತೇಕರು ತಮ್ಮ ಪ್ರಥಮ ಇ-ಮೇಲ್ ಖಾತೆ ತೆರೆದಿದ್ದರು. 90 ರ ದಶಕದಲ್ಲಿ ಭಾರತದಲ್ಲಿ ಯಾಹುವಿನ ಬೆಳವಣಿಗೆ ಯಾವಪರಿ ಇತ್ತು ಎಂದರೆ, ಭಾರತದ ಇಂಟರ್‌ನೆಟ್ ಬಳಕೆದಾರರ ಇಂಟರ್‌ನೆಟ್ ಎಂದರೆ ಯಾಹು ಎಂದುಕೊಂಡಿರುತ್ತಿದ್ದನಂತೆ.

33 ಸಾವಿರ ಕೊಟಿಗೆ ಯಾಹೂ ಮಾರಾಟ!
2017 ರಲ್ಲಿ ಕೇವಲ 33 ಸಾವಿರ ಕೊಟಿಗೆ ವೇರಿಜೋನ್ ಕೋಟಿಗೆ ಮಾರಾಟವಾದ 'ಯಾಹೂ'ವಿನ ಮಾರುಕಟ್ಟೆ ಬೆಲೆ 2000ನೇ ಇಸವಿಯಲ್ಲಿ ಸರಿಸುಮಾರು 8 ಲಕ್ಷ 30 ಸಾವಿರ ಕೋಟಿ ರೂಪಾಯಿಯಾಗಿತ್ತು! 2002ರಲ್ಲಿ ಗೂಗಲ್ ಅನ್ನು ಖರೀದಿಸಲು ಪ್ರಯತ್ನಿಸಿದಾಗ, ಗೂಗಲ್ ಕೇಳಿದ ಬೆಲೆಗೂ ಮತ್ತು ಯಾಹೂ ಇಂದು ಮಾರಾಟವಾದ ಬೆಲೆಗೂ ವ್ಯತ್ಯಾಸವೇ ಇಲ್ಲ.!

ಗೂಗಲ್ ಬೆಲೆಯನ್ನು ತಿಳಿಯಲಿಲ್ಲ!
ಗೂಗಲ್ ಕೇಳಿದ ಬೆಲೆಗೂ ಮತ್ತು ಯಾಹೂ ಇಂದು ಮಾರಾಟವಾದ ಬೆಲೆಗೂ ವ್ಯತ್ಯಾಸವೇ ಇಲ್ಲ ಎಂದು ಹೇಳಿದ್ದು ನಿಮಗೆ ಆಶ್ಚರ್ಯವಾಗಿರಬಹುದು. 2002ರಲ್ಲಿ ಗೂಗಲ್ ಅನ್ನು ಖರೀದಿಸಲು ಪ್ರಯತ್ನಿಸಿದಾಗ, ಯಾಹೂ 20ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾಪನೆ ಇಟ್ಟಿತ್ತು. ಆದರೆ ಗೂಗಲ್ 33ಸಾವಿರ ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿತ್ತು!

ಫೇಸ್‌ಬುಕ್ ಖರೀದಿಸದೆ ಮಣ್ಣುಮುಕ್ಕಿತು!
ದೂರದೃಷ್ಟಿಯ ಕೊರತೆಯಿಂದ ಯಾಹೂ ಗೂಗಲ್ ಅನ್ನು ಖರೀದಿಸಲು ಸಾಧ್ಯವಾಗಿದ್ದು ಸರಿ. ಆದರೆ, 2006ರಲ್ಲಿ ಯಾಹೂಗೆ ಫೇಸ್‌ಬುಕ್ ಅನ್ನು ಖರೀದಿಸುವ ಸುವರ್ಣಾವಕಾಶವಿತ್ತು. ಆದರೆ ಯಾಹೂ ಫೇಸ್‌ಬುಕ್‌ನ ಮೌಲ್ಯವನ್ನು ಗುರುತಿಸುವಲ್ಲಿ ಮತ್ತೆ ಮುಗ್ಗರಿಸಿತ್ತು. ಕೇವಲ ಒಂದು ಬಿಲಿಯನ್ ಡಾಲರ್‌ಗಳಿಗೆ ಅಂದು ಫೇಸ್‌ಬುಕ್ ಅನ್ನು ಖರೀದಿಸುವ ಪ್ರಸ್ತಾವನೆ ಇಟ್ಟಿತ್ತು.

ಮೈಕ್ರೋಸಾಫ್ಟ್ ಆಫರ್ ಸಹ ತಳ್ಳಿಹಾಕಿತು!
2008ರ ವರೆಗೂ ಇತರೆ ಕಂಪೆನಿಗಳನ್ನು ಖರೀದಿಸುವ ಹಂತದಲ್ಲಿದ್ದ ಯಾಹೂವಿಗೆ 2008ರಲ್ಲಿ ಮೊದಲ ಬಾರಿಗೆ ಮತ್ತೊಂದು ಏಟು ಬಿತ್ತು. 2008 ಐ.ಟಿ. ದಿಗ್ಗಜ ಮೈಕ್ರೋಸಾಫ್ಟ್ ಯಾಹೂವನ್ನು 2.95 ಲಕ್ಷ ಕೋಟಿ ರೂಪಾಯಿಗೆ ಕೊಂಡುಕೊಳ್ಳುವ ಪ್ರಸ್ತಾವ ಇಟ್ಟಿತ್ತು. ಆದರೆ ಯಾಹೂ ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಆದರೆ, 2017ರಲ್ಲಿ 2008ಕಿಂತಲೂ 9ಪಟ್ಟು ಕಡಿಮೆ ಬೆಲೆಗೆ ಮಾರಾಟವಾಯಿತು!

ಯಾಹೂವಿನ ಪತನ!
ಫೋರ್ಬ್ಸ್ ಉಲ್ಲೇಖಿಸಿದಂತೆ ಇವತ್ತಿನ ಗೂಗಲ್ನ ಬ್ರ್ಯಾಂಡ್ ವ್ಯಾಲ್ಯು ಯಾಹೂನ ಸುಮಾರು 18 ಪಟ್ಟಿದೆ.! ಸಮಯಕ್ಕನುಗುಣವಾಗಿ ಬದಲಾಗದಿರುವುದೇ ಯಾಹೂವಿನ ಪತನಕ್ಕೆ ಮುಖ್ಯ ಕಾರಣವಾಗಿದೆ. ಇಂಟರ್‌ನೆಟ್ ಜಗತ್ತಿನಲ್ಲಾದ ಬದಲಾವಣೆಯ ವೇಗಕ್ಕೆ ಯಾಹೂ ಹೊಂದಿಕೊಳ್ಳದೆ ನೆಲಕಚ್ಚಿದೆ. ಪುರಾತನ ಶೈಲಿಯ ಕಾರ್ಯನಿರ್ವಹಣೆಗೆ ಇಂದು ಬೆಲೆತೆತ್ತಿದೆ.

ಒನ್‌ಪ್ಲಸ್' ಇತಿಹಾಸ!..ಸೋಲನ್ನೇ ಕಾಣದ ಒಂದು ಮೊಬೈಲ್ ಕಂಪೆನಿ ಕಥೆ ಗೊತ್ತಾ?
ಚೀನಾದಲ್ಲಿ ಹುಟ್ಟಿದ್ದ ಕಂಪೆನಿಯೊಂದು ಗುಣಮಟ್ಟದ ಸ್ಮಾರ್ಟ್‌ಪೋನ್‌ಗಳನ್ನು ತಯಾರಿಸಲು ಮುಂದಾಗಿದೆ ಎಂದಾಗ ಇಡೀ ವಿಶ್ವವೇ ನಕ್ಕಿತ್ತು. ಚೀನಾದ ಉತ್ಪನ್ನಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಎಲೆಕ್ಟ್ರಾನಿಕ್ ಉತ್ಪನ್ನಗಳನ್ನಂತೂ ಕಳಪೆ ಎಂದೇ ತಿಳಿಯಲಾಗಿತ್ತು. ಆದರೆ, ಅಂತಹ ಸಮಯದಲ್ಲಿಯೂ ಆ ಯುವಕರಿಗೆ ಆತ್ಮವಿಶ್ವಾಸವಿತ್ತು.
ಹೌದು, ನೀವಂದುಕೊಂಡಂತೆ ಇದು ಚೀನಾದ ಇಬ್ಬರು ಯಶಸ್ವಿ ಯುವಕರ ಕಥೆ. ಆಪಲ್ ಐಫೋನ್‌ಗಳನ್ನು ಖರೀದಿಸಲು ಕ್ಯೂ ನಿಲ್ಲುತ್ತಿದ್ದ ಕಾಲದಲ್ಲಿ ಗುಣಮಟ್ಟದ ಮೊಬೈಲ್ ಕಂಪೆನಿಯೊಂದನ್ನು ಹುಟ್ಟಿಹಾಕಿದ್ದ ಯುವಕರ ಸಾಹಸಗಾಥೆ. ಇಂದು ಯಾವ ಆಂಡ್ರಾಯ್ಡ್ ಫೋನ್ ಖರೀದಿಸಲು ಇಡೀ ವಿಶ್ವದ ಜನರು ಮುಗಿಬೀಳುತ್ತಿದ್ದಾರೋ ಆ ಕಂಪೆನಿ ಮಾಲಿಕರ ಕಥೆ.
ನಾವು ಇಷ್ಟು ಹೇಳಿದ ನಂತರ ನಿಮಗೆ ಅವರು ಯಾರು? ಆ ಕಂಪೆನಿ ಯಾವುದು ಎಂದು ತಿಳಿದಿರಬಹುದು. ತಿಳಿಯದೇ ಇದ್ದರೆ ತಿಳಿದುಕೊಳ್ಳಿ ಅದು "ಒನ್‌ಪ್ಲಸ್" ಮೊಬೈಲ್ ಕಂಪೆನಿ. ಇಂದು ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಹೈ ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ತಯಾರಕ ಕಂಪೆನಿ. ಚೀನಾ ಮತ್ತು ಭಾರತೀಯರ ನೆಚ್ಚಿನ ಮೊಬೈಲ್ ಕಂಪೆನಿ.!

ಒನ್‌ಪ್ಲಸ್ ಮೊಬೈಲ್ ಕಂಪೆನಿ!!
ಮೊದಲೇ ಹೇಳಿದಂತೆ ಗುಣಮಟ್ಟದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಒನ್‌ಪ್ಲಸ್ ಮೊಬೈಲ್ ಕಂಪೆನಿ ಇಡೀ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಸ್ಮಾರ್ಟ್‌ಫೋನುಗಳ ಯುಗ ಪ್ರಾರಂಭವಾಗಿ ಪ್ರವರ್ಧಮಾನಕ್ಕೆ ಬಂದಿದ್ದ ಹೊತ್ತಿನಲ್ಲಿ ಹುಟ್ಟಿದ ಒನ್‌ಪ್ಲಸ್ ಇಂದು ವಿಶ್ವದಲ್ಲಿಯೇ ಟ್ರೆಂಡ್ ಸೃಷ್ಟಿಸಿರುವ ಮೊಬೈಲ್ ಕಂಪೆನಿ!

ಒನ್‌ಪ್ಲಸ್ ಕಂಪೆನಿ ಹುಟ್ಟಿದ್ದು ಹೇಗೆ?
ಆಪಲ್‌ನ ಗುಣಮಟ್ಟ ಇರುವ ಫೋನ್ ಮತ್ತು ಅದರಲ್ಲಿ ಆಂಡ್ರಾಯ್ಡ್ ತಂತ್ರಾಂಶ ಎರಡೂ ಬೇಕಿರುವ ಗ್ರಾಹಕನನ್ನು ಹುಡುಕಿ ಹೊರಟಿದ್ದು ಒನ್‌ಪ್ಲಸ್ ಕಂಪೆನಿ ಹುಟ್ಟಿಹಾಕಿದ್ದು ಇಬ್ಬರು ಯುವಕರು. ಎಂಪಿ3ಗಳನ್ನು ಅಂತರ್ಜಾಲದಲ್ಲಿ ಮಾರಿ ದುಡ್ಡು ಮಾಡುತ್ತಿದ್ದ ಕಾರ್ಲ್ ಮತ್ತು ಓಪೋ ಮೊಬೈಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೀಟ್ ಲೌ ಕಂಪೆನಿಗೆ ಅಡಿಪಾಯ ಹಾಕಿದರು.

ಒನ್‌ಪ್ಲಸ್ ಕಂಪೆನಿ ಹುಟ್ಟಿದ್ದು ಯಾವಾಗ?
ಕಾರ್ಲ್ ಮತ್ತು ಪೀಟ್ ಲೌ ಸೇರಿ 2013ರ ಡಿಸೆಂಬರ್ 17ರಂದು ಮೊಬೈಲ್ ಕಂಪೆನಿಯೊಂದನ್ನು ಪ್ರಾರಂಭಿಸಿ ಒನ್‌ಪ್ಲಸ್ ಎಂಬ ಹೆಸರು ಕೊಟ್ಟರು. ನೀವು ಏನು ಮಾಡುತ್ತೀರಿ ಎಂದು ಕೇಳಿದವರಿಗೆ ಜಗತ್ತಿನಲ್ಲೇ ಅತ್ಯುತ್ತಮ ಸ್ಮಾರ್ಟ್‌ಫೋನ್ ಮಾಡಿಕೊಡುತ್ತೇವೆ ಎಂದರು. ಆದರೆ ಅವರು ತಯಾರಿಸಲಿದ್ದ ಫೋನಿನ ಶೇಕಡಾ 1 ಭಾಗವೂ ಕಾರ್ಯರೂಪಕ್ಕೆ ಬಂದಿರಲಿಲ್ಲ!

ಕಾರ್ಲ್ ಮತ್ತು ಪೀಟ್‌ಗೆ ಭಯ!
ಕಂಪೆನಿ ಹುಟ್ಟಿಹಾಕಿದ ನಂತರ ಕಾರ್ಲ್ ಮತ್ತು ಪೀಟ್‌ಗೆ ಆಪಲ್ ಮೀರಿಸುವಂತಹ ಫೋನ್ ತಯಾರಿಸುವುದಕ್ಕೆ ಸಾಧ್ಯವಾ ಎಂಬ ಹೆದರಿಕೆ ಉಂಟಾಯಿತು. ಅಸಲಿಗೆ ಈ ದಾರಿಯಲ್ಲಿ ಒಂದು ಹೆಜ್ಜೆಯನ್ನಾದರೂ ಇಡುವುದಕ್ಕೆ ಆಗಬಹುದಾ ಎಂಬ ಯೋಚನೆ, ಭಯ ಶುರುವಾದವು. ಆದರೇನಂತೆ, ನಿಶ್ಚಯ ಮಾಡಿಯಾಗಿತ್ತು. ಯಾತ್ರೆ ಪ್ರಾರಂಭಿಸಿದ್ದರು.

ಗ್ರಾಹಕರಿಂದಲೇ ಸಲಹೆ ಪಡೆದರು!
ಕಾರ್ಲ್ ಮತ್ತು ಪೀಟ್ ಅವರು ಸೇರಿ ಅಂತರ್ಜಾಲದಲ್ಲಿ ಒಂದು ಕಮ್ಯುನಿಟಿ ತೆರೆದರು. ಅದನ್ನು ಸೇರಿಕೊಳ್ಳಲು ಜನರಿಗೆ ಮುಕ್ತ ಆಹ್ವಾನ ಕೊಟ್ಟರು. ನಿಮಗೆ ಯಾವ ಬಗೆಯ ಫೋನು ಬೇಕು? ಅತ್ಯುತ್ತಮ ಫೋನಿಗೆ ನೀವು ಎಷ್ಟು ಬೆಲೆ ತೆರಬಲ್ಲಿರಿ? ಅದರಲ್ಲಿ ಏನಿರಬೇಕು, ಏನಿರಬಾರದು? ಎಂದೆಲ್ಲ ಕಮ್ಯುನಿಟಿಯಲ್ಲಿಯೇ ಕೇಳುತ್ತಿದ್ದರು. ಹೀಗೆ ತಮ್ಮ ಕನಸಿನ ಫೋನಿನ ಕಲ್ಪನೆ ಹಂಚಿಕೊಳ್ಳುವ ಗ್ರಾಹಕರಿಂದಲೇ ಸಲಹೆ ಪಡೆದರು.

2014ರ ಏಪ್ರಿಲ್ ತಿಂಗಳಲ್ಲಿ ಮೊದಲ ಫೋನ್!
2013 ರಲ್ಲಿ ಹುಟ್ಟಿದ ಒನ್‌ಪ್ಲಸ್ ಮೊಬೈಲ್ ಕಂಪೆನಿ 2014ರ ಏಪ್ರಿಲ್ ತಿಂಗಳಲ್ಲಿ ತನ್ನ ಕನಸಿನ ಮೊಬೈಲ್ ಫೋನು ಅನ್ನು ಬಿಡುಗಡೆ ಮಾಡಿತು. ಒನ್‌ಪ್ಲಸ್ 1 ಎಂದು ಅದಕ್ಕೆ ಹೆಸರಿಡಲಾಯಿತು. ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲದಂತೆ ಕಾರ್ಲ್ ಮತ್ತು ಪೀಟ್‌ರ ತಂಡ ಹಗಲಿರುಳು ಶ್ರಮಿಸಿ ಮೊಬೈಲ್ ಅನ್ನು ರೂಪಿಸಿತ್ತು.

ಮೊದಲ ಪ್ರಯತ್ನಲ್ಲಿಯೇ ಯಶಸ್ವಿ!!
ಕಾರ್ಲ್ ಮತ್ತು ಪೀಟ್ ಅವರ ನಿರೀಕ್ಷೆಗೂ ಮೀರಿ ಒನ್‌ಪ್ಲಸ್ 1 ಸ್ಮಾರ್ಟ್‌ಫೋನ್ ಮಾರಾಟವಾಗಲು ಶುರುವಾಯಿತು. ಫ್ಯಾಕ್ಟರಿಯಲ್ಲಿ ತಯಾರಿಸಿಟ್ಟಿದ್ದ ಸಾವಿರ ಮೊಬೈಲುಗಳು ಕೆಲವೇ ಗಂಟೆಗಳಲ್ಲಿ ಬುಕ್ ಆಗಿಬಿಟ್ಟವು. ನೋಡನೋಡುತ್ತಿದ್ದಂತೆಯೇ ಮೊದಲ ದಿನವೇ 30 ಸಾವಿರ ಮೊಬೈಲುಗಳು ಮಾರಾಟವಾದವು. ಅವರು ಹುಟ್ಟಿಹಾಕಿದ್ದ ಕಮ್ಯುನಿಟಿಯಲ್ಲಿ ಜಾಹಿರಾತಾಗಿ ಆರು ತಿಂಗಳು ಕಳೆವಷ್ಟರಲ್ಲಿ ಬರೋಬ್ಬರಿ 15 ಲಕ್ಷ ಫೋನುಗಳು ಮಾರಾಟವಾಗಿದ್ದವು.

ಮುಂದಿನದ್ದು ಇತಿಹಾಸ!
ಒನ್‌ಪ್ಲಸ್ 1 ನಂತರ 2015ರಲ್ಲಿ ಒನ್‌ಪ್ಲಸ್ 2, 2016ರಲ್ಲಿ ಒನ್‌ಪ್ಲಸ್ 3, 3ಟಿ, 2017ರಲ್ಲಿ ಒನ್‌ಪ್ಲಸ್ 5, 5ಟಿ, ಈಗ ಒನ್‌ಪ್ಲಸ್ 6 ಅನ್ನು ಬಿಡುಗಡೆ ಮಾಡಿರುವ ಒನ್‌ಪ್ಲಸ್ ಕಂಪೆನಿ ಅವುಗಳಲ್ಲಿ ಹೆಚ್ಚು ಹೆಚ್ಚು ಗುಣವಿಶೇಷಗಳನ್ನು ಸೇರಿಸಿ ವಿಶ್ವದಾಧ್ಯಂತ ಯಶಸ್ವಿಯಾಗಿದೆ. ನಾಲ್ಕು ವರ್ಷದ ಹಿಂದೆ 15-20 ಸಾವಿರ ರೂಪಾಯಿಗೆ ಸಿಗುತ್ತಿದ್ದ ಫೋನುಗಳ ಬೆಲೆ ಇಂದು40 ಸಾವಿರದ ಹತ್ತಿರ ಬಂದಿದೆ!

ವರ್ಷಕ್ಕೊಂದೇ ಮೊಬೈಲ್!
ವರ್ಷಕ್ಕೊಂದೇ ಮೊಬೈಲ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಪ್ರದಾಯವನ್ನು ಒನ್‌ಪ್ಲಸ್ ಕಂಪೆನಿ ಶುರುಮಾಡಿದೆ. ಮೊಬೈಲುಗಳ ಹೊಸ ಹೊಸ ಪೀಳಿಗೆಗಳನ್ನು ಮಾರಕಟ್ಟೆಗೆ ಬಿಡುತ್ತ, ಅವುಗಳಲ್ಲಿ ಹೆಚ್ಚು ಹೆಚ್ಚು ಗುಣವಿಶೇಷಗಳನ್ನು ಸೇರಿಸುತ್ತಿದೆ. ನೇರಮಾರಾಟದ ತಂತ್ರ ಮತ್ತು ಶೂನ್ಯ ಜಾಹೀರಾತು ವೆಚ್ಚದಿಂದ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ನೀಡಿ ಒನ್‌ಪ್ಲಸ್ ಕಂಪೆನಿ ಮುನ್ನುಗ್ಗುತ್ತಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470