ಸದ್ಯದಲ್ಲೇ ಗೂಗಲ್ ಮೆಸೇಜಸ್‌ನಿಂದ ಲಾಂಚ್‌ ಆಗಲಿದೆ ಕುತೂಹಲಕಾರಿ ಫೀಚರ್ಸ್‌!

|

ಗೂಗಲ್ ಮೆಸೇಜಸ್‌ ಆಪ್‌ ನಲ್ಲಿ ಎಸ್‌ಎಂಎಸ್‌ ಗಳನ್ನ ವಿಭಿನ್ನ ವರ್ಗಗಳಾಗಿ ವಿಂಗಡಿಸಲು ಬಳಕೆದಾರರಿಗೆ ಅನುಮತಿಸುವ ಹೊಸ ಫೀಚರ್ಸ್‌ ಸದ್ಯದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ. ಈಗಾಗಲೇ ಅತ್ಯಂತ ಜನಪ್ರಿಯ SMS ಅಪ್ಲಿಕೇಶನ್ ನಲ್ಲಿ ಗೂಗಲ್‌ ಮೆಸೇಜಸ್‌ ಆಪ್‌ ಕೂಡ ಒಂದಾಗಿದ್ದು, ಬಹಳಷ್ಟು ಜನ ಬಳಸುತ್ತಿದ್ದಾರೆ. ಸದ್ಯ ಗೂಗಲ್‌ ಮೆಸೇಜಸ್‌ ಹೊರತರುತ್ತಿರವ ಹೊಸ ಫೀಚರ್ಸ್‌ ನಿಂದಾಗಿ ವಿವಿದ ಮಾದರಿಯ ಎಸ್‌ಎಂಎಸ್‌ಗಳನ್ನ ವಿಭಿನ್ನ ಫೊಲ್ಡರ್‌ಗಳಲ್ಲಿ ವಿಂಗಡಿಸಬಹುದಾಗಿದೆ.

ಗೂಗಲ್‌

ಹೌದು ಗೂಗಲ್‌ ಮೆಸೇಜಸ್‌ನ ಎಸ್‌ಎಂಎಸ್‌ ಗಳನ್ನ ವರ್ಗಗಳಾಗಿ ವಿಂಗಡಿಸುವ ಫೀಚರ್ಸ್‌ ಕೆಲವು ಬಳಕೆದಾರರಿಗೆ ಈಗಾಗಲೇ ಲಭ್ಯವಾಗಿದೆ ಎನ್ನಲಾಗಿದೆ. ಈ ಫೀಚರ್ಸ್‌ ಜನರಿಗೆ ಒಟಿಪಿ ಸಂದೇಶಗಳು, ವೈಯುಕ್ತಿಕ ಸಂದೇಶಗಳು, ಆಫರ್‌ ಸಂದೇಶಗಳು, ಮತ್ತು ಇತರೆ ಸಂದೇಶಗಳು ಹೀಗೆ ಎಲ್ಲಾ ವಿಧದ ಸಂದೇಶಗಳು ಒಂದೇ ಕಡೆ ಇದ್ದರೆ ಕೆಲವೊಮ್ಮೆ ಕಿರಿಕಿರಿ ಎನಿಸಬಹುದು. ಇದೇ ಕಾರಣಕ್ಕೆ ಸಂದೇಶಗಳನ್ನ ಅವುಗಳ ವರ್ಗಕ್ಕೆ ಅನುಗುಣವಾಗಿ ವಿಂಗಡಿಸುವ ಫೀಚರ್ಸ್‌ ಬಳಕೆದಾರರಿಗೆ ಅನುಕೂಲವಾಗಲಿದೆ. ಹಾಗಾದ್ರೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸಂದೇಶ

ಜನರು ಸ್ವೀಕರಿಸುವ ಬಹಳಷ್ಟು ಸಂದೇಶಗಳಲ್ಲಿ, ವೈಯುಕ್ತಿಕ ವಿಚಾರಗಳು, ಒಟಿಪಿ ಸಂದೇಶಗಳು, ವ್ಯಾಪಾರ, ವಹಿವಾಟಿಗೆ ಸಂಬಂಧಪಟ್ಟಿರುತ್ತವೆ. ಈ ಎಲ್ಲಾ ಸಂದೇಶಗಳು ಮೆಸೇಜ್‌ ಇನ್‌ಬಾಕ್ಸ್‌ನಲ್ಲಿ ಒಂದೇ ಕಡೆ ಇದ್ದಾಗ ಯಾವ ಸಂದೇಶ ಮುಖ್ಯವಾದುದ್ದು, ಯಾವುದು ಬೇಡ ಎನ್ನುವ ಗೊಂದಲ ಇರುತ್ತದೆ. ಅಲ್ಲದೆ ಎಲ್ಲಾ ಸಂದಶಗಳು ಒಂದೇ ಕಡೆ ಇದ್ದಾಗ ಕಿರಿಕಿರಿ ಎನಿಸುವುದು ಕೂಡ ಸಹಜ. ಆದರೆ ಇದೀಗ ಗೋಗಲ್‌ ಮೆಸೇಜಸ್‌ನಲ್ಲಿ ಎಸ್‌ಎಂಎಸ್‌ಳನ್ನ ವಿಂಗಡಣೆ ಮಾಡಲು ಅವಕಾಶವಿದೆ. ಇದರಿಂದ ಬಳಕೆದಾರರು ನಿರ್ದಿಷ್ಟ ವ್ಯವಹಾರದಿಂದ ಸ್ವೀಕರಿಸಿದ ಸಂದೇಶಕ್ಕೆ ಗಮನ ಕೊಡಬೇಕೇ ಅಥವಾ ಬೇಡವೇ ಎಂಬುದನ್ನು ಗುರುತಿಸಲು ಸಾಧ್ಯವಾಗಲಿದೆ.

Google

ಸದ್ಯ ಲಭ್ಯ ಮಾಹಿತಿಯ ಪ್ರಕಾರ ಸಂದೇಶಗಳನ್ನು ವಿಭಿನ್ನ ವರ್ಗಗಳಾಗಿ ವಿಂಗಡಿಸಲು ಬಳಕೆದಾರರಿಗೆ ಅನುಮತಿಸುವ ಫೀಚರ್ಸ್‌ ಅನ್ನು Google ಮೆಸೇಜಸ್‌ ಹೊರತರಲು ಪ್ರಾರಂಭಿಸಿದೆ. ಈಗಾಗಲೇ ಈ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದ್ದು, ಹೆಚ್ಚಿನ ಬಳಕೆದಾರರು ಈಗ ಈ ವೈಶಿಷ್ಟ್ಯವನ್ನು ಹೊಂದಿದ್ದಾರೆಂದು ಹೇಳಲಾಗ್ತಿದೆ. ಇನ್ನು ಈ ಫೀಚರ್ಸ್‌ ಮೂಲಕ ಬಳಕೆದಾರರು ವೈಯಕ್ತಿಕ, ವಹಿವಾಟುಗಳು, ಒಟಿಪಿ ಸಂದೇಶಗಳು, ಕೊಡುಗೆಗಳು ಮತ್ತು ಇತ್ಯಾದಿ ಸಂದೇಶಗಳನ್ನ ಪ್ರತ್ಯೇಕವಾಗಿ ಪೋಲ್ಡರ್‌ನಲ್ಲಿ ಸಂಗ್ರಹಿಸಬಹುದಾಗಿದೆ.

Google ಮೆಸೇಜಸ್

Google ಮೆಸೇಜಸ್‌ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಟಾಗಲ್ ಸ್ವಿಚ್ ಮೂಲಕ ಫೀಚರ್ಸ್‌ ಅನ್ನು ಒಮ್ಮೆ ರೋಲ್‌ ಮಾಡಿದರೆ ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು ಎನ್ನಲಾಗಿದೆ. ಒಮ್ಮೆನೀವು ಆಕ್ಟಿವ್‌ ಮಾಡಿದರೆ ನಿಮಗೆ ಬರುವ ಎಲ್ಲಾ ವರ್ಗದ ಸಂದೇಶಗಳು ತಮ್ಮ ವರ್ಗಕ್ಕೆ ಅನುಗುಣವಾಗಿ ಪೋಲ್ಡ್‌ರನಲ್ಲಿ ಉಳಿಸಯಲಿದೆ. ಇದರಿಂದ ನೀವು ಸಂದೇಶಗಳನ್ನ ವೀಕ್ಷಿಸುವಾಗ ನಿಮಗೆ ಬೇಕೆನಿಸಿದ ವಿಭಾಗದಲ್ಲಿ ನಿಮ್ಮ ಸಂದೇಶಗಳನ್ನ ನೀವು ನೋಡಬಹುದಾಗಿದೆ. ಈ ಮೂಲಕ ಬಳಕೆದಾರರು ತಮ್ಮ ಇನ್‌ಬಾಕ್ಸ್‌ಗಳಲ್ಲಿನ ಗೊಂದಲವನ್ನು ಕಡಿಮೆ ಮಾಡಲು ಈ ಫೀಚರ್ಸ್‌ ಸಹಾಯ ಮಾಡಲಿದೆ.

Best Mobiles in India

Read more about:
English summary
Google Messages has started rolling out a feature that lets users sort out messages into different categories.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X