ಗೂಗಲ್ ಕ್ರೋಮ್ ಬ್ರೌಸರ್ ಅನ್ನು ಕಡ್ಡಾಯವಾಗಿ ಅಪ್‌ಡೇಟ್‌ ಮಾಡಿ; ಯಾಕೆ ಗೊತ್ತಾ!?

|

ಟೆಕ್‌ ದೈತ್ಯ ಗೂಗಲ್ ಹಲವಾರು ಸೇವೆಗಳ ಜೊತೆಗೆ ಆಪ್‌ಗಳು ಹಾಗೂ ಡಿವೈಸ್‌ ಪರಿಚಯಿಸುವ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ. ಹಾಗೆಯೇ ಗೂಗಲ್‌ನ ಕ್ರೋಮ್‌ ತನ್ನದೇ ಆದ ರೀತಿಯಲ್ಲಿ ಸೇವೆ ನೀಡುತ್ತಿದ್ದು, ಯಾವುದೇ ಮಾಹಿತಿ ಬೇಕೆಂದರೂ ಬಹುಪಾಲು ಮಂದಿ ಕ್ರೋಮ್‌ಗೆ ಭೇಟಿ ನೀಡುತ್ತಾರೆ. ಅದರಲ್ಲೂ ಜಗತ್ತಿನಲ್ಲಿಯೇ ಅತೀ ಹೆಚ್ಚು ಬಳಕೆ ಮಾಡುವ ಬ್ರೌಸರ್‌ಗಳಲ್ಲಿ ಈ ಕ್ರೋಮ್‌ ಬ್ರೌಸರ್‌ ಸಹ ಪ್ರಮುಖವಾಗಿರುವು ವಿಶೇಷ.

CVE-2022-3723

ಹೌದು, ಗೂಗಲ್ ಕ್ರೋಮ್ ವಿಶ್ವಾದ್ಯಂತ ಹೆಚ್ಚು ಬಳಕೆ ಮಾಡುವ ಇಂಟರ್ನೆಟ್ ಬ್ರೌಸರ್‌ಗಳಲ್ಲಿ ಒಂದಾಗಿದ್ದು, ಕ್ರೋಮ್ ಬ್ರೌಸರ್ ಬಳಕೆದಾರರಿಗೆ ಹಲವಾರು ಉಪಯುಕ್ತ ಫೀಚರ್ಸ್‌ಗಳನ್ನು ನೀಡುತ್ತಾ ಬರುತ್ತಿದೆ. ಇದರ ನಡುವೆ ಈಗ ಗೂಗಲ್‌ ತನ್ನ ಕ್ರೋಮ್‌ ಬಳಕೆದಾರರನ್ನು ಎಚ್ಚರಿಸಿದೆ. ಸಂಭಾವ್ಯವಾಗಿ ಹಾನಿಯುಂಟುಮಾಡುವ ದೋಷದಿಂದ ಪಾರಾಗಲು ಮಾಹಿತಿ ನೀಡಿದ್ದು, CVE-2022-3723 ಬಗ್ಗೆ ತಿಳಿಸಿರುವ ಗೂಗಲ್‌, ಇದೊಂದು ಗೊಂದಲ ಸೃಷ್ಟಿ ಮಾಡುವ ಸಮಸ್ಯೆಯಾಗಿದೆ ಎಂದು ತಿಳಿಸಿದೆ. ಗೂಗಲ್ ಕ್ರೋಮ್‌ನ CVE-2022-3723 ದೋಷವನ್ನು ಅಕ್ಟೋಬರ್ 25, 2022 ರಂದು ಸೈಬರ್ ಸಂಸ್ಥೆಯಾದ ಅವಾಸ್ಟ್‌ನ ಸೈಬರ್ ಸೆಕ್ಯೂರಿಟಿ ಸಂಶೋಧಕರು ಪತ್ತೆ ಮಾಡಿದ್ದರು.

CVE-2022-3723 ಎಂದರೇನು?

CVE-2022-3723 ಎಂದರೇನು?

ಅವಾಸ್ಟ್‌ಸೆಕ್ಯೂರಿಟಿ ಸಂಶೋಧಕರು ಈ ಬಗ್ಗೆ ಮಾಹಿತಿ ನೀಡಿದ್ದು, CVE-2022-3723 ಎಂಬುದು ಕ್ರೋಮ್ ನ V8 ಜಾವಾಸ್ಕ್ರಿಪ್ಟ್ ಎಂಜಿನ್‌ನೊಂದಿಗಿನ ಗೊಂದಲ ಉಂಟು ಮಾಡುವ ಸಮಸ್ಯೆಯಾಗಿದೆ. ಬಳಕೆದಾರರ ಸಿಸ್ಟಮ್‌ಗೆ ಪ್ರವೇಶವನ್ನು ನೀಡುವ ಅನಿಯಂತ್ರಿತ ಕೋಡ್ ಅನ್ನು ಇದು ಕಾರ್ಯಗತಗೊಳಿಸುತ್ತದೆ. ಹಾಗೆಯೇ ಇದಕ್ಕೆ ಸಂಬಂಧಿಸಿದವರು ಇದರ ಸದುಪಯೋಗಪಡಿಸಿಕೊಂಡು ಡಿವೈಸ್ ಅನ್ನು ಹ್ಯಾಕ್‌ ಮಾಡಬಹುದಾಗಿದೆ.

ಹಾಗಿದ್ರೆ, ಕ್ರೋಮ್‌ ಬಳಕೆದಾರರು ಏನು ಮಾಡಬೇಕು?

ಹಾಗಿದ್ರೆ, ಕ್ರೋಮ್‌ ಬಳಕೆದಾರರು ಏನು ಮಾಡಬೇಕು?

ಗೂಗಲ್ ಈ ದೊಡ್ಡ ರಹಸ್ಯದ ಮಾಹಿತಿನ್ನು ಪಡೆದುಕೊಂಡಿದ್ದು ಬಳಕೆದಾರರ ರಕ್ಷಣೆ ಉದ್ದೇಶದಿಂದ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲು ಮುಂದಾಗಿದೆ. ಹ್ಯಾಕರ್‌ಗಳು ಗೂಗಲ್ ಕ್ರೋಮ್‌ನಲ್ಲಿನ ದೋಷದ ಲಾಭವನ್ನು ಪಡೆಯುವುದನ್ನು ತಪ್ಪಿಸಲು ಮ್ಯಾಕ್‌ ಮತ್ತು ಲಿನಕ್ಸ್ ಗಾಗಿ ಗೂಗಲ್‌ ಕ್ರೋಮ್‌ನ ಇತ್ತೀಚಿನ ಆವೃತ್ತಿ 107.0.5304.87 ಗೆ ಅಪ್‌ಗ್ರೇಡ್‌ ಮಾಡಬೇಕಿದೆ ಹಾಗೆಯೇ ವಿಂಡೋಸ್‌ ಗಾಗಿ 107.0.5304.87/.88 ಗೆ ಅಪ್‌ಗ್ರೇಡ್‌ ಮಾಡಬೇಕಿದೆ ಎಂದು ತಿಳಿಸಿದೆ. ಹಾಗೆಯೇ ಈ ಆವೃತ್ತಿಗಳನ್ನು ಆದಷ್ಟು ಬೇಗ ಹೊರತರಲಾಗುವುದು ಎಂದು ಗೂಗಲ್‌ ತಿಳಿಸಿದೆ.

ಭದ್ರತಾ ದೋಷ

ಭದ್ರತಾ ದೋಷಗಳು ಸ್ಥಿರವಾದ ಚಾನಲ್ ಅನ್ನು ತಲುಪದಂತೆ ತಡೆಯಲು ಈ ಅಭಿವೃದ್ಧಿ ಕಾರ್ಯದಲ್ಲಿ ನಮ್ಮೊಂದಿಗೆ ಕೆಲಸ ಮಾಡಿದ ಎಲ್ಲಾ ಭದ್ರತಾ ಸಂಶೋಧಕರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ ಎಂದು ಗೂಗಲ್ ಬ್ಲಾಗ್‌ನಲ್ಲಿ ಬರೆದುಕೊಂಡಿದೆ. ಇನ್ನು ಗೂಗಲ್‌ ಕ್ರೋಮ್ ಅನ್ನು ನವೀಕರಿಸುವುದು ಹೇಗೆ? ಎಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ.

ಹಂತ 1

ಹಂತ 1

ಮೊದಲು ನಿಮ್ಮ ಕಂಪ್ಯೂಟರ್‌ನಲ್ಲಿ ಗೂಗಲ್‌ ಕ್ರೋಮ್ ತೆರೆಯಿರಿ, ನಂತರ ಡಿಸ್‌ಪ್ಲೇ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ಮೆನು ಪಟ್ಟಿಯಿಂದ 'ಹೆಲ್ಪ್' ಆಯ್ಕೆಯನ್ನು ಗಮನಿಸಿ.

ಹಂತ 2

ಹಂತ 2

'ಹೆಲ್ಪ್' ವಿಭಾಗದಲ್ಲಿ 'ಅಬೌಟ್‌ ಗೂಗಲ್‌ ಕ್ರೋಮ್‌' ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿದರೆ ಪ್ರಸ್ತುತ ಚಾಲನೆಯಲ್ಲಿರುವ ಕ್ರೋಮ್‌ ಆವೃತ್ತಿ ವಿವರ ನಿಮಗೆ ಬೇರೊಂದು ವೆಬ್‌ಪುಟದಲ್ಲಿ ಕಾಣಿಸಿಕೊಳ್ಳುತ್ತದೆ ಅದನ್ನು ಗಮನಿಸಿ.

ಹಂತ 3

ಹಂತ 3

ಇದಾದ ಬಳಿಕ ಕ್ರೋಮ್‌ ಅವೃತ್ತಿ ಹಳೆಯದಿದ್ದರೆ ನೀವು ಇತ್ತೀಚಿನ ಕ್ರೋಮ್‌ ಆವೃತ್ತಿ ಪಡೆಯಲು 'ಅಪ್‌ಡೇಟ್‌ ಗೂಗಲ್‌ ಕ್ರೋಮ್‌ 'ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಅಕಸ್ಮಾತ್‌ ಈ 'ಅಪ್‌ಡೇಟ್‌ ಗೂಗಲ್‌ ಕ್ರೋಮ್‌' ಆಯ್ಕೆ ಕಾಣಿಸಲಿಲ್ಲ ಎಂದರೆ ಈಗಾಗಲೇ ನೀವು ಹೊಸ ಆವೃತ್ತಿ ಬಳಕೆ ಮಾಡುತ್ತಿದ್ದೀರಿ ಎಂದರ್ಥ. ಇದಾದ ನಂತರ 'ರಿಲಾಂಚ್‌' ಆಯ್ಕೆ ಮೇಲೆ ಕ್ಲಿಕ್‌ ಮಾಡಿದರೆ ನಿಮ್ಮ ಬ್ರೌಸರ್‌ ಅಪ್‌ಡೇಟ್‌ ಆಗುತ್ತದೆ.

Best Mobiles in India

English summary
Tech giant Google has gained popularity by introducing several services as well as apps and devices. Now Google has detected an error in the Chrome browser and suggested that it should be update.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X