ಯೂಟ್ಯೂಬ್‌ನ ಈ ನಡೆ ನಿಮಗೆ ಬೇಸರ ತರಿಸೋದು ಖಂಡಿತ!

|

ಗೂಗಲ್‌ ಮಾಲಿಕತ್ವದ ಯೂಟ್ಯೂಬ್‌ ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್‌ ತಾಣ ಎನಿಸಿಕೊಂಡಿದೆ. ಯುಟ್ಯೂಬ್‌ ವೀಡಿಯೋ ಮತ್ತು ಮ್ಯೂಸಿಕ್‌ ಎರಡನ್ನು ನೀಡುವುದರಿಂದ ಸಾಕಷ್ಟು ಜನಪ್ರಿಯತೆಯನ್ನು ಸಾಧಿಸಿದೆ. ಅಲ್ಲದೆ ಯಾವುದೇ ವಿಷಯದ ಬಗ್ಗೆ ಕೂಡ ಮಾಹಿತಿಯ ವೀಡಿಯೋಗಳನ್ನು ಇದರಲ್ಲಿ ವೀಕ್ಷಿಸುವುದಕ್ಕೆ ಅವಕಾಶವಿದೆ. ಇದಕ್ಕೆ ತಕ್ಕಂತೆ ಯೂಟ್ಯೂಬ್‌ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಆದರೆ ಇದೀಗ ಯೂಟ್ಯೂಬ್‌ ತೆಗೆದುಕೊಂಡಿರುವ ಹೊಸ ನಿರ್ಧಾರ ಯೂಟ್ಯೂಬ್‌ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ಸ್ಕಿಪ್‌ ಮಾಡಲು ಸಾಧ್ಯವಿಲ್ಲದ ಐದು ಜಾಹಿರಾತುಗಳನ್ನು ವೀಡಿಯೋದಲ್ಲಿ ಇರಿಸುವುದಕ್ಕೆ ಪ್ಲಾನ್‌ ಮಾಡಿದೆ. ವೀಡಿಯೋ ವೀಕ್ಷಣೆ ಮಾಡುವಾಗ ಈ ಜಾಹಿರಾತುಗಳ ಪ್ಲೇ ಆಗಲಿದ್ದು, ಸ್ಕಿಪ್‌ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಈ ಹೊಸ ಪ್ಲಾನ್‌ ಇದೀಗ ಯೂಟ್ಯೂಬ್‌ ವೀಡಿಯೋ ವೀಕ್ಷಣೆ ಮಾಡುವವರಿಗೆ ಕಿರಿಕಿರಿ ಎನಿಸಿದರೂ ಅಚ್ಚರಿಯಿಲ್ಲ. ಸದ್ಯ ಯೂಟ್ಯೂಬ್‌ ಇದನ್ನು ಜಾರಿಗೆ ತರಲು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಹಾಗಾದ್ರೆ ಯೂಟ್ಯೂಬ್‌ನ ಹೊಸ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯುಟ್ಯೂಬ್‌

ಯುಟ್ಯೂಬ್‌ನಲ್ಲಿ ವೀಡಿಯೋಗಳನ್ನು ವೀಕ್ಷಿಸುವಾಗ ಸಾಮಾನ್ಯವಾಗಿ ಜಾಹಿರಾತು ಪ್ರದರ್ಶನವಾಗಲಿದೆ. ಆದರೆ ಈ ಜಾಹಿರಾತುಗಳನ್ನು ಪೂರ್ತಿ ನೋಡುವುದಕ್ಕೆ ಬಯಸದ ವೀಕ್ಷಕರು ಅದನ್ನು ಸ್ಕಿಪ್‌ ಮಾಡುವುದಕ್ಕೆ ಅವಕಾಶವಿದೆ. ಪ್ರಸ್ತುತ ಯೂಟ್ಯೂಬ್‌ನಲ್ಲಿ ಎರಡು ಜಾಹಿರಾತುಗಳನ್ನು ಮಾತ್ರ ಸ್ಕಿಪ್‌ ಮಾಡಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಯೂಟ್ಯೂಬ್‌ ಸ್ಕಿಪ್‌ ಮಾಡಲು ಸಾಧ್ಯವಾಗದ ಐದು ಜಾಹಿರಾತುಗಳನ್ನು ವೀಡಿಯೊ ವೀಕ್ಷಣೆ ಮಾಡುವ ಸಮಯದಲ್ಲಿ ಇರಿಸುವುದಕ್ಕೆ ಪ್ಲಾನ್‌ ಮಾಡಿದೆ. ಒಂದು ವೇಳೆ ಇದು ಜಾರಿಗೆ ಬಂದರೆ ಹೆಚ್ಚಿನ ಸಮಯ ಜಾಹಿರಾತುಗಳನ್ನು ನೋಡಬೇಕಾಗುತ್ತದೆ ಎಂದು ಬಳಕೆದಾರರ ಟ್ವಿಟರ್‌ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಕೆದಾರರು

ಯೂಟ್ಯೂಬ್‌ನ ಈ ಹೊಸ ಪ್ಲಾನ್‌ ವಿರುದ್ದ ಯೂಟ್ಯೂಬ್‌ ಬಳಕೆದಾರರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಯೂಟ್ಯೂಬ್‌ ಕೂಡ ಟ್ವೀಟ್‌ ಮಾಡಿದ್ದು ಈ ಐದು ಜಾಹಿರಾತುಗಳು ಎಲ್ಲಾ ವೀಡಿಯೊಗಳಲ್ಲಿ ಬರುವುದಿಲ್ಲ, ಅಲ್ಲದೆ ಈ ಜಾಹಿರಾತುಗಳು ಹೆಚ್ಚಿನ ಸಮಯ ಹೊಂದಿರುವುದಿಲ್ಲ ಎಂದು ಹೇಳಿದೆ. ಜೊತೆಗೆ ಪ್ರತಿ ಜಾಹೀರಾತು 6 ಸೆಕೆಂಡುಗಳು ಮತ್ತು ಅದಕ್ಕಿಂತ ಹೆಚ್ಚಿಲ್ಲ ಎಂದು ಖಚಿತಪಡಿಸಿದೆ.

ಯೂಟ್ಯೂಬ್‌

ಅಂದರೆ ಯೂಟ್ಯೂಬ್‌ ಸ್ಕಿಪ್‌ ಮಾಡಲಾಗದ ಐದು ಜಾಹೀರಾತುಗಳನ್ನು ಜಾರಿಗೆ ತಂದರೆ ವೀಡಿಯೊವನ್ನು ವೀಕ್ಷಿಸುವುದನ್ನು ಮುಂದುವರಿಸಲು ಸುಮಾರು 30 ಸೆಕೆಂಡುಗಳವರೆಗೆ ಕಾಯಬೇಕಾಗುತ್ತದೆ. ಒಂದು ಜಾಹಿರಾತು ಆರು ಸೆಕೆಂಡುಗಳಿರುವುದರಿಂದ ಒಟ್ಟು ಮೂವತ್ತು ನಿಮಿಷಗಳ ಬಂಪರ್‌ ಜಾಹಿರಾತುಗಳನ್ನು ನೋಡಬೇಕಾಗುತ್ತದೆ. ಒಂದು ವೇಳೆ ಯೂಟ್ಯೂಬ್‌ನ ಈ ಪ್ಲಾನ್‌ ಬಗ್ಗೆ ಫಿಡ್‌ಬ್ಯಾಕ್‌ ಕಳುಹಿಸಲು ಬಯಸಿದರೆ, ಯುಟ್ಯೂಬ್‌ ಫಿಡ್‌ಬ್ಯಾಕ್‌ ಟೂಲ್‌ ಮೂಲಕ ಕಳುಹಿಸುವುದಕ್ಕೆ ಅವಕಾಶವಿದೆ ಎಂದು ಯೂಟ್ಯೂಬ್‌ ಟ್ವಿಟರ್‌ನಲ್ಲಿ ಹೇಳಿದೆ.

ಯೂಟ್ಯೂಬ್‌ ಜಾಹೀರಾತುಗಳನ್ನು ಸ್ಕಿಪ್ ಮಾಡುವುದು ಹೇಗೆ?

ಯೂಟ್ಯೂಬ್‌ ಜಾಹೀರಾತುಗಳನ್ನು ಸ್ಕಿಪ್ ಮಾಡುವುದು ಹೇಗೆ?

ಹಾಗಾದ್ರೆ ಯೂಟ್ಯೂಬ್‌ಲ್ಲಿ ಜಾಹೀರಾತುಗಳಿಲ್ಲದೆ ನೀವು ಯೂಟ್ಯೂಬ್‌ ವೀಡಿಯೊಗಳನ್ನು ವೀಕ್ಷಿಸುವುದಕ್ಕೆ ಅವಕಾಶವಿಲ್ಲವೆ? ಖಂಡಿತ ಅವಕಾಶವಿದೆ. ಇದಕ್ಕಾಗಿ ನೀವು ಎರಡು ಮಾರ್ಗಗಳನ್ನು ಅನುಸರಿಸಬಹುದು. ಮೊದಲನೇಯದಾಗಿ ವೀಡಿಯೊಗಳನ್ನು ವೀಕ್ಷಿಸುವಾಗ ಜಾಹೀರಾತುಗಳನ್ನು ತಪ್ಪಿಸಲು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ನೀವು ಕ್ರೋಮ್‌ನ ಆಡ್‌ ಬ್ಲಾಕರ್ ಎಕ್ಸ್‌ಟೆನ್ಶನ್‌ ಅನ್ನು ಬಳಸಬಹುದಾಗಿದೆ. ಎರಡನೇಯ ಮಾರ್ಗವೆಂದರೆ ನೀವು ಯೂಟ್ಯೂಬ್‌ ಪ್ರೀಮಿಯಂ ಚಂದಾದಾರಿಕೆಯನ್ನು ಖರೀದಿಸಬೇಕಾಗುತ್ತದೆ. ಯೂಟ್ಯೂಬ್‌ ಪ್ರೀಮಿಯಂ ಚಂದಾದಾರಿಕೆಯು ತಿಂಗಳಿಗೆ 129ರೂ. ಬೆಲೆಯನ್ನು ಬರಲಿದೆ.

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ನಲ್ಲಿ YouTube ವೀಡಿಯೊ ವೀಕ್ಷಿಸುವುದು ಹೇಗೆ?

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ನಲ್ಲಿ YouTube ವೀಡಿಯೊ ವೀಕ್ಷಿಸುವುದು ಹೇಗೆ?

ನೀವು ಬ್ರೌಸ್ ಮಾಡುವ ಇತರ ಟ್ಯಾಬ್‌ಗಳ ಮೇಲೆ ಸಣ್ಣ ವಿಂಡೋದಲ್ಲಿ ಒಂದು ಟ್ಯಾಬ್‌ನಿಂದ ವೀಡಿಯೊವನ್ನು ಪ್ಲೇ ಮಾಡಬಹುದು. ಅದನ್ನು ಮಾಡಲು, ನಿಮ್ಮ ಬ್ರೌಸರ್‌ನಲ್ಲಿ ಈ ಸರಳ ಹಂತಗಳನ್ನು ಅನುಸರಿಸಿ.
ಹಂತ 1: ನೀವು ಸಾಮಾನ್ಯವಾಗಿ ಯೂಟ್ಯೂಬ್ ನೋಡುವ ಬ್ರೌಸರ್ ಅನ್ನು ಪ್ರಾರಂಭಿಸಿ
ಹಂತ 2: ಟ್ಯಾಬ್‌ನಲ್ಲಿ, ನೀವು ತೆರೆದಿರುವ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಪ್ಲೇ ಮಾಡಿ.
ಹಂತ 3: ಇತರ ಟ್ಯಾಬ್‌ಗಳಲ್ಲಿ ಬ್ರೌಸ್ ಮಾಡುವಾಗ ವೀಡಿಯೊವನ್ನು ವೀಕ್ಷಿಸಲು, ಪಿಕ್ಚರ್-ಇನ್-ಪಿಕ್ಚರ್ ಬಟನ್ ಕ್ಲಿಕ್ ಮಾಡಿ.
ಹಂತ 4: ಈಗ ನೀವು ಇತರ ಟ್ಯಾಬ್‌ಗಳನ್ನು ಬ್ರೌಸ್ ಮಾಡುವಾಗ ವೀಡಿಯೊವನ್ನು ವೀಕ್ಷಿಸಬಹುದು.

Best Mobiles in India

Read more about:
English summary
Youtube is currently testing five unskippable ads

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X